‘ಪೇರಳೆ ಚಿಗುರು ತಂಬುಳಿ’ ರುಚಿ ಮಾತ್ರವಲ್ಲ ಆರೋಗ್ಯಪೂರ್ಣವೂ ಹೌದು

ಪೇರಳೆ ರುಚಿ ಮಾತ್ರ ಅಲ್ಲ ಆರೋಗ್ಯ ವೃದ್ಧಿ ಕೂಡಾ ಹೌದು. ಔಷಧಿ ಮಾದರಿಯ ವಸ್ತುಗಳ ತಯಾರಿಯಲ್ಲೂ ಈ‌ ಸೀಬೆಹಣ್ಣು ಮಹತ್ವದ ಪಾತ್ರ ವಹಿಸುತ್ತದೆ. ಎಲ್ಲಾ ಕಾಲದಲ್ಲೂ ಸಿಗುವ ಸೀಬೆಯ ಬೇರೆ ಭಾಗಗಳು ಕೂಡ ತುಂಬಾ ಉಪಯುಕ್ತ. ಅದರ ಚಿಗುರೆಲೆಯ ‘ತಂಬುಳಿ’ ಹಳ್ಳಿ ಸೊಗಡಿನ ಖಾದ್ಯಗಳಲ್ಲೊಂದು. ಅದನ್ನು ತಯಾರಿಸುವ ವಿಧಾನವೂ ಸುಲಭ. ಬೇಕಾದ ಸಾಮಾಗ್ರಿ: ತೆಂಗಿನತುರಿ 1 ಕಪ್ ಜೀರ 1 ಚಮಚ ಕಾಯಿಮೆಣಸು 1 ಪೇರಳೆ ಚಿಗುರು 2 ಕಪ್ ಮಜ್ಜಿಗೆ ಅಥವಾ ಮೊಸರು 1 ಕಪ್ ಎಣ್ಣೆ 2 ಚಮಚ ಬೆಳ್ಳುಳ್ಳಿ 4 ( ಬೇಕಾದಲ್ಲಿ) ಕೆಂಪು ಮೆಣಸು 1 ಸಾಸಿವೆ 1 s ಕರಿಬೇವು ಉಪ್ಪು ರುಚಿಗೆ ತಕ್ಕಷ್ಟು ಮಾಡುವ ವಿಧಾನ: ಮೊದಲಿಗೆ ಪೇರಳೆ ಚಿಗುರನ್ನು ಚೆನ್ನಾಗಿ ಶುಚಿ ಮಾಡಿ, ತೊಳೆದು, ಅದನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪ ನೀರು ಹಾಕಿ ಬೇಯಿಸಿ, ತಣ್ಣಗಾಗಲು…

‘ಬಾಳೆ ಹಣ್ಣಿನ ದೋಸೆ’.. ಶಕ್ತಿ-ಚೈತನ್ಯಕ್ಕೆ ಸೂಕ್ತ ಈ ಖಾದ್ಯ

ಬಾಳೆ ಹಣ್ಣಿನ ಪ್ರಯೋಜನ ನಿಮಗೆ ಗೊತ್ತಾ? ಈ ಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳು ಇವೆ. ಈ ಹಣ್ಣಿನ ಸೇವನೆಯಿಂದ ದೇಹಕ್ಕೆ ಮತ್ತಷ್ಟು ಬಲ, ಚೈತನ್ಯ ಹೆಚ್ಚುವುದು. ಹಾಗಾಗಿ ಯಾವುದಾದರೊಂದು ಖಾದ್ಯದ ರೂಪದಲ್ಲಿ ಬಾಳೆಹಣ್ಣನ್ನು ಸೇವಿಸುವವರು ಹಲವಾರು. ಈ ಪೈಕಿ ‘ಬಾಳೆ ಹಣ್ಣಿನ ದೋಸೆ’ ಕೂಡಾ ಒಂದು. ಆದರೆ ಇದನ್ನು ಮಾಡುವ ವಿಧಾನ ಬಹಳಷ್ಟು ಮಂದಿಗೆ ತಿಳಿದಿರಲ್ಲ. ಇದರ ತಯಾರಿ ಬಲು ಸುಲಭ. ಇಲ್ಲಿದೆ ನೋಡಿ ‘ಬಾಳೆ ಹಣ್ಣಿನ ದೋಸೆ’ ಮಾಡುವ ವಿಧಾನ.. ಇದನ್ನೂ ಮಾಡಿ ನೋಡಿ.. ಕಾಫಿ-ಟೀಗಿಂತ ಹಿತವಾದ ಅನುಭವ; ಶೀತ-ಕೆಮ್ಮು ಕಾಯಿಲೆಗೂ ರಾಮಬಾಣ ಈ ‘ಶುಂಠಿ ಜೀರಿಗೆ ಕಶಾಯ’  

ಕರಾವಳಿ ಶೈಲಿಯ ‘ಕೋರಿ ಪುಳಿಮುಂಚಿ’

ನಾಟಿ ಕೋಳಿ ಖಾದ್ಯ ಮಾಂಸಾಹಾರಿ ಪ್ರಿಯರ ಬಾಯಲ್ಲಿ ನೀರೂರಿಸುವುದಂತೂ ಸತ್ಯ. ಅದರಲ್ಲೂ ಕರಾವಳಿ ಶೈಲಿಯ ‘ಕೋರಿ ಪುಳಿಮುಂಚಿ’ ಅಂದರೆ ಇನ್ನೂ ಅಚ್ಚುಮೆಚ್ಚು. ಈ ‘ಕೋರಿ ಪುಳಿಮುಂಚಿ’ ತಯಾರಿ ವಿಧಾನ ಗೊತ್ತಾ? ಇಲ್ಲಿದೆ ನೋಡಿ.. ಇದನ್ನೂ ಓದಿ.. ಕಾಫಿ-ಟೀಗಿಂತ ಹಿತವಾದ ಅನುಭವ; ಶೀತ-ಕೆಮ್ಮು ಕಾಯಿಲೆಗೂ ರಾಮಬಾಣ ಈ ‘ಶುಂಠಿ ಜೀರಿಗೆ ಕಶಾಯ’   

ಮಾವಿನ ಹಣ್ಣು ಕ್ಯಾಂಡಿ; ಸವಿರುಚಿ ಅನುಭವಿಸಲು ಇದು ಸಕಾಲ

ಮಾವಿನ ಹಣ್ಣಿನಲ್ಲಿ ಬಗೆಬಗೆಯ ಖಾದ್ಯ ತಯಾರಿಸಬಹುದು. ಅದೇ ಹಣ್ಣಿನಲ್ಲಿ ಐಸ್ ಕ್ರೀಮ್ ಕೂಡಾ ತಯಾರಿಸುತ್ತಾರೆ. ಅದರ ಕ್ಯಾನದಿ ಕೂಡಾ ಸಕತ್ ರುಚಿ. ನೀವೂ ಮಾವಿನಹಣ್ಣು ಕ್ಯಾಂಡಿ ಕಂಡಿದ್ದೀರಾ? ಸವಿರುಚಿ ಅನುಭವಿಸಿದ್ದೀರಾ? ಮನೆಯಲ್ಲೇ ಕ್ಯಾಂಡಿ ತಯಾರಿಸಿ ಸವಿರುಚಿ ಅನುಭವಿಸಲು ಇದು ಸಕಾಲ. ಬೇಕಾದ ಸಾಮಗ್ರಿ: ಮಾವಿನಹಣ್ಣು 3 ಸಕ್ಕರೆ 13 ತೆಂಗಿನ ಹಾಲು 2 ಕಪ್ ಏಲಕ್ಕಿ ಹುಡಿ 1 ಚಮಚ ಮಾಡುವ ವಿಧಾನ ಮೊದಲಿಗೆ ಮಾವಿನಹಣ್ಣಿನ ಸಿಪ್ಪೆ ತೆಗದು ಒಂದು ಮಿಕ್ಸಿ ಜಾರಿನಲ್ಲಿ ಹಾಕಿ ನುಣ್ಣಗೆ ರುಬ್ಬಬೇಕು. ನಂತರ ಅದಕ್ಕೆ ಸಕ್ಕರೆ, ಏಲಕ್ಕಿ ಹುಡಿ ಹಾಕಿ ಇನ್ನೊಂದು ಸಲ ರುಬ್ಬಿಕೊಳ್ಳಬೇಕು. ನಂತರ ಸ್ವಲ್ಪ ಕಾಯಿಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಗ್ಲಾಸ್ ಅಥವಾ ಕ್ಯಾಂಡಿ ಮೇಕರ್’ಗೆ ಹಾಕಿ 7-8 ಗಂಟೆಗಳ ಕಾಲ deep fridge ನಲ್ಲಿ ಇಟ್ಟರೆ ರುಚಿಯಾದ ಮಾವಿನಹಣ್ಣು ಕ್ಯಾಂಡಿ ಸವಿಯಲು ಸಿದ್ಧ. ಇದನ್ನೂ ಮಾಡಿ…

ರುಚಿ, ಆರೋಗ್ಯಕರ ‘ಬಾಳೆಹಣ್ಣು ಒರೆಯೋ ಕೇಕ್’

ಬಾಳೆಹಣ್ಣು ಒರೆಯೋ ಕೇಕ್ ಬಗ್ಗೆ ಕೇಳಿರಬಹುದು. ಆದರೆ ಮಾಡುವ ವಿಧಾನ ಗೊತ್ತಾ? ಇಲ್ಲಿದೆ ನೋಡಿ ಈ ವಿಶಿಷ್ಟ ಕೇಕ್ ತಯಾರಿಸುವ ಮಾರ್ಗದರ್ಶಿ ಸೂತ್ರ.. ಬೇಕಾದ ಸಾಮಗ್ರಿ ಬಾಳೆಹಣ್ಣು 8 ಗೋಧಿ ಹುಡಿ 2 ಕಪ್ ತೆಂಗಿನಕಾಯಿ ಹುಡಿ ಅರ್ಧ ಕಪ್ ಒರೆಯೋ ಕೇಕ್ 1 ಕಪ್ ಜೇನುತುಪ್ಪ 4 ಚಮಚ ಎಣ್ಣೆ ಅರ್ಧ ಕಪ್ ಬೆಲ್ಲ ಅರ್ಧ ಕಪ್ ಬೇಕಿಂಗ್ ಸೋಡಾ ಅರ್ಧ ಚಮಚ ಹಾಲು 2.5 ಕಪ್ ಮಾಡುವ ವಿಧಾನ ಮೊದಲಿಗೆ ಬಾಳೆಹಣ್ಣನ್ನು ಸಿಪ್ಪೆ ತೆಗದು ಒಂದು ಮಿಕ್ಸಿ ಜಾರಿನಲ್ಲಿ ಹಾಕಿ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಬಾಳೆಹಣ್ಣನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಬೆಲ್ಲ ,ಜೇನುತುಪ್ಪ, ಎಣ್ಣೆ, ಸ್ವಲ್ಪ ಹಾಲು ಹಾಕಿ ಕಲಸಬೇಕು. ಗೋಧಿಹುಡಿ, ತೆಂಗಿನಕಾಯಿಹುಡಿ, ಬೇಕಿಂಗ್ ಸೋಡಾ, ಹಾಲು ಹಾಕಿ ಚೆನ್ನಾಗಿ ಇನ್ನೊಂದ್ ಸಲ ಕಲಸಬೇಕು. ನಂತರ ಒರಿಯೋ ಹಾಕಿ ಚೆನ್ನಾಗಿ ಕಲಸಿ ಒಂದು ಕಾಡಾಯಿ…

ಕಾಫಿ-ಟೀಗಿಂತ ಹಿತವಾದ ಅನುಭವ; ಶೀತ-ಕೆಮ್ಮು ಕಾಯಿಲೆಗೂ ರಾಮಬಾಣ ಈ ‘ಶುಂಠಿ ಜೀರಿಗೆ ಕಶಾಯ’

ಮಳೆಗಾಲ ಆರಂಭವಾಗುತ್ತಿದೆ. ಅಲ್ಲೋ ಇಲ್ಲೋ ಹೋಗಿ ತುಂತುರು ಮಳೆಗೆ ನೆಂದು ಶೀತಾ ಆಗಿಬಿಟ್ಟರೆ? ಹುಷಾರ್.. ಆದರೂ ಮನೆಯಲ್ಲಿ ಮನೆ ಮದ್ದು ಅಥವಾ ಶುಂಠಿ-ಜೀರಿಗೆ ಕಷಾಯ ಮಾಡಿಟ್ಟುಕೊಳ್ಳಿ. ಮಳೆಗಾಲ, ಛಳಿಗಾಲದಲ್ಲಿ ಮನೆಯಲ್ಲಿ ಬೆಚ್ಚಗೆ ಕುಳಿತು ಕಾಫಿ-ಟೀ ಕುಡಿಯುವ ಹಿತವಾದ ಅನುಭವ ಈ ಶುಂಠಿ-ಜೀರಿಗೆ ಕಷಾಯ ಕುಡಿಯುವುದರಲ್ಲೂ ಆಗುತ್ತದೆ. ಶೀತ, ಜ್ವರ, ನೆಗಡಿ, ಕಫ, ಗಂಟಲು ಕೆರತ ಉಂಟಾದರೆ ಅದಕ್ಕೆ ಈ ಕಷಾಯ ರಾಮಬಾಣ.. ಜೀರ್ಣಕ್ರಿಯೆಯೂ ಸುಲಭ.. ಸುಖಕರ ನಿದ್ರೆಗೂ ಅನುಕೂಲ.. ಈ ಕಷಾಯ ಪುಡಿ ತಯಾರಿಸುವ ವಿಧಾನವೂ ಸುಲಭ..

ಹಳ್ಳಿ ಸೊಗಡಿನ ತಿಂಡಿ ‘ಹಲಸಿನ ಹಣ್ಣಿನ ಮುಳ್ಕ’

ಬೇಸಿಗೆ ಸಂದರ್ಭದಲ್ಲಿ ಹಲಸಿನ ಹಣ್ಣು ಯಥೇಚ್ಛವಾಗಿ ಸಿಗುತ್ತವೆ. ನೂರಾರು ಖಾದ್ಯಗಳಿಗೆ ಬಳಸಲ್ಪಡುವ ಹಲಸಿನ ಹಣ್ಣು ನಳಪಾಕಕ್ಕೂ ಹೆಸರುವಾಸಿ. ಅದರಲ್ಲೂ ‘ಹಲಸಿನ ಹಣ್ಣಿನ ಮುಳ್ಕ’ ಹಳ್ಳಿ ಸೊಗಡಿನ ತಿಂಡಿಗಲ್ಲೊಂದು. ಅದನ್ನು ಮಾಡುವ ವಿಧಾನ ಗೊತ್ತಾ..? ಇದನ್ನೂ ಓದಿ.. ‘ಜಾಕ್ ಫ್ರೂಟು’ ಟೇಸ್ಟೂ ಹೌದು, ಸ್ವೀಟೂ ಹೌದು.. ಅದರ ದೋಸೆ? ಇಲ್ಲಿದೆ ನೋಡಿ ‘ಹಲಸಿನ ಹಣ್ಣಿನ ದೋಸೆ’   

ಸಂಶೋಧಕರ ಯಶೋಗಾಥೆ; ಕಿಲ್ಲರ್ ಕೊರೋನಾಗೆ ಔಷಧಿ ಸಿದ್ದ

ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕಿಲ್ಲರ್ ಕೊರೋನಾವನ್ನು ಮಣಿಸಲು ಔಷಧಿ ಸಿದ್ದವಾಗಿದೆ. ಈ ಔಷಧಿಗೆ ರಷ್ಯಾ ಸರ್ಕಾರ ಅನುಮೋದನೆ ನೀಡಿದ್ದು ಜೂನ್ 11ರಿಂದ ಬಳಕೆಗೆ ನಿರ್ಧರಿಸಲಾಗಿದೆ. ಕೊರೋನಾ ವೈರಾಣು ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡಿದ್ದು ವಿಶ್ವದ ಹಲವು ರಾಷ್ಟ್ರಗಳನ್ನು ಬಿಗಿ ಮುಷ್ಟಿಯಲ್ಲಿ ಇಟ್ಟುಕೊಂಡಿದೆ. ಲಸಿಕೆಯೇ ಇಲ್ಲದ ಈ ವೈರಾಣು ಹಾವಳಿ ಎದುರಿಸಲು ಎಲ್ಲಾ ರಾಷ್ಟ್ರಗಳು ವಿಫಲವಾಗಿವೆ. ಭೀಕರ ಮಾರಣ ಹೋಮವನ್ನೇ ನಡೆಸುತ್ತಿರುವ ಕೋವಿಡ್-19 ವೈರಸ್ ಸೋಂಕು ತಡೆಯಲು ಲಸಿಕೆ ತಯಾರಿ ನಡೆದಿತ್ತಾದರೂ ಅದ್ಯಾವುದೂ ಪರಿಣಾಮ ಬೀರಿಲ್ಲ. ಇದೀಗ ಈ ವಿಚಾರದಲ್ಲಿ ರಷ್ಯಾದ ಸಂಶೋಧಕರು ಯಶೋಗಾಥೆ ಬರೆದಿದ್ದಾರೆ. ‘ಅವಿಫಾವಿರ್’ ಹೆಸರಿನ ಔಷಧಿ ಕೋವಿಡ್-19 ವೈರಾಣು ನಿಗ್ರಹದಲ್ಲಿ ಮಹತ್ವಪೂರ್ಣ ಕೆಲಸ ಮಾಡಲಿದ್ದು, ಪ್ರತೀ ತಿಂಗಳು 60 ಸಾವಿರ ಮಂದಿಗೆ ಈ ಔಷಧಿ ಪೂರೈಸಲು ಔಷಧಿ ತಯಾರಿಕಾ ಕಂಪೆನಿ ಸಿದ್ಧತೆ ನಡೆಸಿದೆ. 1990ರಲ್ಲಿ ಜಪಾನ್ ಮೂಲದ ಕಂಪೆನಿ ‘ಪಾವಿಪಿರವಿರ್’ ಎಂಬ ಔಷಧಿಯನ್ನು ತಯಾರಿಸಿತ್ತು.…

ಕೇಪುಳ ಹೂವಿನ ತಂಬುಳಿ ಬಗ್ಗೆ ನಿಮಗೆ ಗೊತ್ತಾ?

ಕೇಪುಳ ಹೂವಿನ ತಂಬುಳಿ ಬಗ್ಗೆ ನಿಮಗೆ ಗೊತ್ತಾ? ಅದನ್ನು ಮಾಡುವ ವಿಧಾನ (TrendyAngel Kitchen) ಗೊತ್ತಾ? ಈ ತಂಬುಳಿ ತನ್ನದೇ ಆದ ವಿಶಿಷ್ಟ ರುಚಿ ಹೊಂದಿದ್ದು ಆರೋಗ್ಯಕ್ಕೆ ಪೂರಕವಾದ ಅಂಶಗಳನ್ನೊಳಗೊಂಡಿದೆ. ಇವುಗಳ ಸೇವನೆಯಿಂದ ಬಿಸಿಲ ಬೇಗೆಗೆ ದೇಹ ತಂಪಾಗುವ ಜೊತೆಗೆ ಜೀರ್ಣಶಕ್ತಿಯೂ ಹೆಚ್ಚುತ್ತದೆ. ಬೇಕಾದ ಸಾಮಾಗ್ರಿ ತೆಂಗಿನತುರಿ 1 ಕಪ್ ಜೀರ 1 ಚಮಚ ಹಸಿಮೆಣಸು 1 ಕೇಪುಳ ಹೂ 2 ಕಪ್ ಮಜ್ಜಿಗೆ ಅಥವಾ ಮೊಸರು 1 ಕಪ್ ಎಣ್ಣೆ 2 ಚಮಚ ಬೆಳ್ಳುಳ್ಳಿ 4 (ಬೇಕಾದಲ್ಲಿ) ಕೆಂಪು ಮೆಣಸು 1 ಸಾಸಿವೆ 1 s ಕರಿಬೇವು ಉಪ್ಪು ರುಚಿಗೆ ತಕ್ಕಸ್ಟು ಮಾಡುವ ವಿಧಾನ ಮೊದಲಿಗೆ ಕೇಪುಳ ಹೂವುವನ್ನು ಚೆನ್ನಾಗಿ ಶುಚಿ ಮಾಡಿ, ತೊಳೆದು, ಅದನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪ ನೀರು ಹಾಕಿ ಬೇಯಿಸಿ, ತಣ್ಣಗಾಗಲು ಬಿಡಿ. ಒಂದು ಮಿಕ್ಸಿ ಜಾರಿನಲ್ಲಿ ಕಾಯಿತುರಿ, ಜೀರಿಗೆ,…

‘ಕಲ್ಲಂಗಡಿ ತೊಗಟೆಯ ಹಲ್ವ’ ಸ್ವಾದಿಷ್ಟ ತಿಂಡಿ

ನಾಲ್ಪಕ್ಕೆ ಪ್ರವೀಣ ವಾಯುದರಲ್ಲೂ ಸ್ವಾದಿಷ್ಟ ಖಾದ್ಯ ಮಾಡಬಲ್ಲ. ಕಲ್ಲಂಗಡಿಯಲ್ಲೂ ಅವೆಷ್ಟೋ ತಿಂಡಿಗಳನ್ನು ಮಾಡಬಹುದು. ಅವುಗಳ ಪೈಕಿ ಕಲ್ಲಂಗಡಿಯ ತೊಗಟೆಯ ಹಲ್ವ ಕೂಡಾ ಒಂದು.. ಬೇಕಾದ ಸಾಮಗ್ರಿ ಕಲ್ಲಂಗಡಿ ತೊಗಟೆ 8 ಕಪ್ ಸಕ್ಕರೆ 3 ಕಪ್ ಉಪ್ಪು ಕಾಲ್ ಚಮಚ ಹಾಲು ಅರ್ಧ ಕಪ್ ಗೇರುಬೀಜ 10 ಒಣ ದ್ರಾಕ್ಷಿ 10 ತುಪ್ಪ ಕಾಲ್ ಕಪ್ ಮಾಡುವ ವಿಧಾನ ಕಲ್ಲಂಗಡಿಯನ್ನು ತುಂಡು ಮಾಡಿ ಬಿಳಿಯ ಭಾಗವನ್ನು ತೆಗದು, ನಂತರ ಅದರ ಸಿಪ್ಪೆಯನ್ನು ತೆಗೆದು ಬಿಳಿ ಭಾಗವನ್ನು ಮಾತ್ರ ತುರಿದು ಇಟ್ಟುಕೊಳ್ಳಬೇಕು. ಒಂದು ಚಿಕ್ಕ ಬಾಣಲೆಯಲ್ಲಿ ತುಪ್ಪ,ಗೋಡಂಬಿ, ದ್ರಾಕ್ಷಿಯನ್ನು ಹುರಿದು ತೆಗೆದಿಡಿ. ಒಂದು ದೊಡ್ಡ ಬಾಣಲೆಯಲ್ಲಿ ತುರಿದ ಕಲ್ಲಂಗಡಿ ತೊಗಟೆಯನ್ನು ಹಾಕಿ ಬೇಯಿಸಬೇಕು. ಬೆಂದ ನಂತರ ಒಂದು ಚಿಟಿಕಿ ಉಪ್ಪು , ಸಕ್ಕರೆ ಹಾಕಿ ಚೆನ್ನಾಗಿ 5 ನಿಮಿಷಗಳ ಕಾಲ ಕಲಸುತ್ತ ಇರಿ. ಅದಕ್ಕೆ ಹಾಲು ಹಾಕಿ ಚೆನ್ನಾಗಿ…