ಹಬ್ಬಗಳು ಸಾಲು ಸಾಲಾಗಿ ಬರುತ್ತಿವೆ. ಖಾದ್ಯಗಳ ಪಟ್ಟಿಯೂ ಬೆಳೆಯುತ್ತಿವೆ. ಆ ಆ ಪಟ್ಟಿಗೆ ಮಾವಿನ ದೋಸೆ ಸೇರ್ಪಡೆಯಾಗಿದೆ. ಮಾವು ಯಾರಿಗೆ ತಾನೇ ಇಷ್ಟವಿಲ್ಲ? ಅದರ ಖಾದ್ಯಗಳೂ ಅಷ್ಟೇ ರುಚಿ. ಅದರಲ್ಲೂ ಮಾವಿನ ದೋಸೆಯ ಸವಿ.. ಆಹಾ.. ಇದನ್ನು ಮಾಡುವ ವಿಧಾನವೂ ಬಲು ಸುಲಭ ಬೇಕಾದ ಸಾಮಾಗ್ರಿ ದೋಸೆ ಅಕ್ಕಿ 2 ಕಪ್ ಮಾವಿನಹಣ್ಣು 1 ಕಪ್ ಉಪ್ಪು ರುಚಿಗೆ ತಕ್ಕಷ್ಟು ಮಾಡುವ ವಿಧಾನ ದೋಸೆ ಅಕ್ಕಿಯನ್ನು 4 ಗಂಟೆ ಅಥವಾ ರಾತ್ರಿ ಇಡಿ ನೆನೆ ಹಾಕಿ. ನಂತರ ಒಂದು ಜಾರಿನಲ್ಲಿ ನೆನೆ ಹಾಕಿದ ಅಕ್ಕಿ, ತುಂಡು ಮಾಡಿಕೊಂಡ ಮಾವಿನಹಣ್ಣು, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಕಾದಲ್ಲಿ ನೀರು ಹಾಕಿ ಹಿಟ್ಟಿನ ಹದ ಮಾಡಿಕೊಳ್ಳಬೇಕು. ಬಿಸಿ ಬಿಸಿ ಕಾವಲಿಗೆ ಹಿಟ್ಟನ್ನು ಹಾಕಿ ದೋಸೆ ಎರೆದು ಬೇಯಿಸಿ. ಬೇಯಿಸುವಾಗ ತುಪ್ಪ ಅಥವಾ…
Category: ವೈವಿದ್ಯ
ಅರಿಶಿನ ಎಲೆ ಗಟ್ಟಿ; ಹಬ್ಬಕ್ಕೆ ಸ್ವಾದಿಷ್ಟದ ಮೆರಗು
ಹಬ್ಬಗಳು ಸಾಲು ಸಾಲಾಗಿ ಬರುತ್ತಿವೆ. ಪ್ರತೀ ಹಬ್ಬಗಳನ್ನೂ ಒಂದೊಂದು ಖಾದ್ಯದ ವಿಶೇಶದೊಂದಿಗೆ ಗುರುತಿಸಲಾಗುತ್ತಿದೆ. ಅದರಲ್ಲೂ ನಾಗರ ಪಂಚಮಿ ಹಾಗೂ ಶ್ರಾವಣ ಮಾಸದ ಹಬ್ಬಗಳಲ್ಲಿ ಅರಿಶಿನ ಎಲೆ ಗಟ್ಟಿ ಅಥವಾ ಕಡುಬು ಗಮನಸೆಳೆಯುತ್ತವೆ. .ಅರಿಶಿನ ಔಷಧಿಯುಕ್ತ ಸಸ್ಯ. ಅದರ ಎಲೆ ಪರಿಮಳ ಕೂಡಾ. ಅದರ ಎಳೆಯಲ್ಲಿ ಮಾಡಿದ ಗಟ್ಟಿ ಅಥವಾ ಕಡುಬು ಸ್ವಾದಿಷ್ಟ ಖಾದ್ಯ. ಇದನ್ನು ಮಾಡುವ ವಿಧಾನ ಕೂಡಾ ಬಲು ಸುಲಭ.
‘ಮ್ಯಾಂಗೋ ಫ್ರೂಟಿ’ ಮಾಡೋ ವಿಧಾನ ಬಲು ಸುಲಭ;
ಮಾವಿನ ಹಣ್ಣು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.. ಸಿಹಿಯಾದ ರುಚಿಯಾದ ಮಾವಿನ ಹಣ್ಣಿನಿಂದ ಜ್ಯುಸ್ ಅಷ್ಟೇ ಅಲ್ಲ, ಹಲವಾರು ಖಾದ್ಯಗಳನ್ನೂ ತಯಾರಿಸಬಹುದು. ಅದರಲ್ಲೂ ‘ಮ್ಯಾಂಗೋ ಫ್ರೂಟಿ’ ಅಂದ್ರೆ ಎಲ್ಲರ ಬಾಯಲ್ಲೂ ನೀರೂರಿಸುತ್ತೆ. ಈ ‘ಮ್ಯಾಂಗೋ ಫ್ರೂಟಿ’ ಮಾಡೋ ವಿಧಾನವೂ ಬಲು ಸುಲಭ. ಒಂದಿಷ್ಟು ಸಮಯ ಹೊಂದಿಸಿಕೊಂಡು ಮನೆಯಲ್ಲೇ ‘ಮ್ಯಾಂಗೋ ಫ್ರೂಟಿ’ ತಯಾರಿಸಿ ರುಚಿ ಸವಿಯಿರಿ.. ಇದನ್ನೂ ಮಾಡಿ ರುಚಿ ನೋಡಿ.. ನೈಸರ್ಗಿಕ ಸೊಪ್ಪಿನ ‘ಪತ್ರೊಡೆ..’ ರುಚಿಯಷ್ಟೇ ಅಲ್ಲ ಆರೋಗ್ಯಪೂರ್ಣ ಖಾದ್ಯ
ಮನೆಗಾಗಿ ಪೂಜಿಸಿದ್ದು ದೇವರನ್ನು, ವರ ನೀಡಿದ್ದು ಪೂಜಾರಿ; ಬಡಪಾಯಿಗೆ ಮನೆ ನಿರ್ಮಿಸಿಕೊಟ್ಟ ಉದ್ಯಮಿ
ಉಡುಪಿ: ಬದುಕಿನಲ್ಲಿದ್ದಾಗ ಮದುವೆ ಮಾಡಿಕೊಳ್ಳಬೇಕು, ಮನೆ ಕಟ್ಟಿಕೊಳ್ಳಬೇಕು ಎಂಬುದು ನಾಣ್ಣುಡಿ. ಆದರೆ ಬಹಳಷ್ಟು ಮಂದಿಯ ಪಾಲಿಗೆ ಈ ಹೆಗ್ಗುರಿ ಕನಸಾಗಿಯೇ ಉಳಿಯುತ್ತದೆ. ಈ ಕನಸು ನನಸಾಗಲು ಅವೆಷ್ಟೋ ಬಡಪಾಯಿಗಳು ನಿತ್ಯ ದೇವರ ಜಪ, ಪೂಜೆ ಮಾಡ್ತಾರೆ. ಅಂತಹಾ ಅಸಹಾಯಕ ಕುಟುಂಬವೊಂದು ದೇವರ ಪ್ರಾರ್ಥನೆಯಲ್ಲಿದ್ದಾಗ ದೇವರಂತೆ ಮುಂದೆ ಬಂದು ನಿಂತವರು ಜನಾನುರಾಗಿ ಉದ್ಯಮಿ. ಹೌದು, ಊರಿಗೆಲ್ಲಾ ಊಟೋಪಚಾರ ನೀಡುವ ಕಾಯಕದಲ್ಲಿ ತೊಡಗಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿಯವರು ಉಡುಪಿ ಜಿಲ್ಲೆ ಉಪ್ಪುಂದದ ಬಾಯಂಹಿತ್ಲುವಿನಲ್ಲಿ ಬಡ ಕುಟುಂಬವೊಂದಕ್ಕೆ ಸುಂದರವಾದ ಮನೆ ನಿರ್ಮಿಸಿ ಕೊಟ್ಟು ಮಾದರಿಯಾಗಿದ್ದಾರೆ. ಬೈಂದೂರಿನ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್’ನ ಮುಖ್ಯಸ್ಥರೂ ಆಗಿರುವ ಗೋವಿಂದ ಬಾಬು ಪೂಜಾರಿ ಬೆಂಗಳೂರು, ಮುಂಬೈ, ಹೈದರಾಬಾದ್ ಸೇರಿದಂತೆ ದೇಶದ ಹಲವಾರು ನಗರಗಳಲ್ಲಿ ಪರ್ಯಟನೆ ನಿರತರಾಗಿರುವವರು. ಮಾರ್ಚ್-ಏಪ್ರಿಲ್ ವೇಳೆ ಕೊರೋನಾ ಸಂದರ್ಭದಲ್ಲಿ ಕುಂದಾಪುರಕ್ಕೆ ಭೇಟಿ ನೀಡಿದ್ದ ಅವರು ಲಾಕ್’ಡೌನ್ ಜಾರಿಯಾದ ಕಾರಣ ಅಲ್ಲೇ ಕೆಲ…
ನೈಸರ್ಗಿಕ ಸೊಪ್ಪಿನ ‘ಪತ್ರೊಡೆ..’ ರುಚಿಯಷ್ಟೇ ಅಲ್ಲ ಆರೋಗ್ಯಪೂರ್ಣ ಖಾದ್ಯ
ಕರಾವಳಿಯ ವಿಶಿಷ್ಟ ತಿಂಡಿಗಳಲ್ಲಿ ಪತ್ರೊಡೆ ಕೂಡಾ ಒಂದು. ಮಳೆಗಾಲದ ತಿಂಡಿ ಎಂದೇ ಅದನ್ನು ಹೇಳಲಾಗುತ್ತಿದೆ. ಮಳೆಗಾಲದ ಸಂದರ್ಭದಲ್ಲಿ ಸಿಗುವ ಹಲಸು, ಕೇಸು, ಅಣಬೆ ಹಾಗೂ ಇನ್ನಿತರೇ ಸೊಪ್ಪುಗಳಿಂದ ಬಗೆ ಬಗೆಯ ಖಾದ್ಯಗಳನ್ನು ತಯಾರಿಸುವ ಕರಾವಳಿ ಪಾಕ ಪ್ರವೀಣರು, ನೈಸರ್ಗಿಕವಾಗಿ ಬೆಳೆಯುವ ಕೆಸುವಿನಿಂದ ಪತ್ರೊಡೆ ತಯಾರಿಸುತ್ತಾರೆ. ಪತ್ರೊಡೆ ರುಚಿಯಷ್ಟೇ ಅಲ್ಲ ಆರೋಗ್ಯಪೂರ್ಣ ಖಾದ್ಯವೂ ಹೌದು. ಇದನ್ನು ತಯಾರಿಸುವ ವಿಧಾನವೂ ಬಲು ಸುಲಭ. ಇದನ್ನೂ ಮಾಡಿ ರುಚಿ ನೋಡಿ.. ‘ಬಾಳೆ ಹಣ್ಣಿನ ದೋಸೆ’.. ಶಕ್ತಿ-ಚೈತನ್ಯಕ್ಕೆ ಸೂಕ್ತ ಈ ಖಾದ್ಯ
ರುಚಿಯಾದ ಪಪ್ಪಾಯ ಲಡ್ಡು ತಯಾರಿ ಬಲು ಸುಲಭ
ಪಪ್ಪಾಯ ಕೇವಲ ಹಣ್ಣಷ್ಟೆ ಅಲ್ಲ. ಅದು ಔಷಧಿ ಕೂಡಾ ಹೌದು. ಜ್ಯುಸ್ ಅಥವಾ ಸಲಾಡ್’ಗೆ ಉಪಯುಕ್ತ ಅಂದುಕೊಂಡಿರುವ ಪಪ್ಪಾಯದಿಂದ ಸಿಹಿತಿಂಡಿ ಮಾಡಲೂ ಸಾಧ್ಯವಿದೆ. ಅದರಲ್ಲೂ ಪಪ್ಪಾಯ ಲಡ್ಡು ತಯಾರಿ ಬಲು ಸುಲಭ.. ಬೇಕಾದ ಸಾಮಾಗ್ರಿ ಪಪ್ಪಾಯ ರಸ 2 ಕಪ್ ಉಪ್ಪು ಒಂದು ಚಿಟಿಕೆ ತೆಂಗಿನಕಾಯಿ ಹುಡಿ 1 ವರೆ ಕಪ್ ತುಪ್ಪ 5 ಚಮಚ ಏಲಕ್ಕಿ ಪುಡಿ 1 ಚಮಚ ಕಾರ್ನ್ ಹುಡಿ 1 ಚಮಚ ಮಾಡುವ ವಿಧಾನ ಮೊದಲಿಗೆ ಪಪ್ಪಾಯ ಸಿಪ್ಪೆ ಮತ್ತು ಬೀಜ ತೆಗೆದು ತುಂಡು ಮಾಡಿಕೊಳ್ಳಬೇಕು. ಒಂದು ಜಾರಿನಲ್ಲಿ ತುಂಡು ಮಾಡಿಕೊಂಡ ಪಪ್ಪಾಯ ಹಾಕಿ ನುಣ್ಣಗೆ ರುಬ್ಬಿಕೊಂಡಾಗ ರಸ ಸಿದ್ಧವಾಗುತ್ತದೆ. ನಂತರ ಒಂದು ಕಾಡಾಯಿ ಅಥವಾ ಬಾಣಲೆಯಲ್ಲಿ ಪಪ್ಪಾಯ ರಸ ಹಾಕಿ 5 ರಿಂದ 10 ನಿಮಿಷಗಳ ಕಾಲ ಇಡಬೇಕು. ಅದಕ್ಕೆ ಒಂದು ಚಿಟಿಕೆ ಉಪ್ಪು, ತೆಂಗಿನ ಹುಡಿ ಹಾಕಿ ಚೆನ್ನಾಗಿ…
ಬದನೆ ಸುಟ್ಟು ಗೊಜ್ಜು ಮಾಡುವ ವಿಧಾನ
ಹಳ್ಳಿ ಸೊಗಡಿನ ಊಟ ಅಂದ್ರೆ ಅದು ಭರ್ಜರಿ ಭೋಜನ. ಬಗೆ ಬಗೆಯ ಖಾದ್ಯಗಳನ್ನು ಊಹಿಸಿದರೆ ಸಾಕು, ಮತ್ತೆ ಹಳ್ಳಿಗೆ ಹೋಗಬೇಕೆನಿಸುತ್ತದೆ. ಈ ಹಳ್ಳಿ ತಿಂಡಿ ತಯಾರಿ ವಿಧಾನವೂ ಸುಲಭ. ಬದನೆ ಸುಟ್ಟು ಗೊಜ್ಜು ಮಾಡುವ ವಿಧಾನ ಇಲ್ಲಿದೆ. ಬದನೆ ಸುಟ್ಟು ಗೊಜ್ಜು ಬೇಕಾದ ಸಾಮಗ್ರಿ ಬದನೆ 2 ಕಾಯಿಮೆಣಸು 1 ಬೆಲ್ಲ 5 ಚಮಚ ನೀರು 1 ಗ್ಲಾಸ್ ಹುಳಿ 1 ನಿಂಬೆ ಗ್ರಾತ್ರದಷ್ಟು ಉಪ್ಪು ರುಚಿಗೆ ತಕ್ಕಷ್ಟು ಎಣ್ಣೆ 4 ಚಮಚ ಬೆಳ್ಳುಳ್ಳಿ 5-6 ಸಾಸಿವೆ 1 ಚಮಚ ಕರಿಬೇವು ಮಾಡುವ ವಿಧಾನ ಬದನೆಕಾಯಿಯನ್ನು ತೊಳೆದು ಅದನ್ನು ಬೆಂಕಿಯಲ್ಲಿ ಸುಟ್ಟು ಹಾಕಬೇಕು. ಬದನೆ ಬೇಯುವ ವರೆಗೂ ಸುಡಬೇಕು. ಹೊರಗಿನ ಸಿಪ್ಪೆ ತೆಗೆದು ಚೆನ್ನಾಗಿ ಕಿವುಚಬೇಕು. ನಂತರ ಅದಕ್ಕೆ ಹುಳಿ, ಬೆಲ್ಲ, ಕಾಯಿಮೆಣಸು, ಎಷ್ಟು ಬೇಕೋ ಅಷ್ಟು ನೀರು, ಉಪ್ಪು ಸೇರಿಸಬೇಕು. ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ,…
ಬಾಳೆಕಾಯಿ ಹೂವಿನ ದೋಸೆ ಆರೋಗ್ಯಪೂರ್ಣವೂ ಹೌದು
ಬಾಳೆ ಬಹೂಪಯೋಗಿ. ಬಾಳೆಯಲ್ಲಿ ಬಿಸಾಡುವ ಅಂಶಗಳೇ ಇಲ್ಲ. ಬಾಳೆ ಹೂವಿನಿಂದ ಹಿಡಿದು ಹಣ್ಣಿನವರೆಗೆ, ದಿಂಡಿನಿಂದ ಹಿಡಿದು ಎಲೆಯವರೆಗೆ ಎಲ್ಲವೂ ಉಪಯುಕ್ತ. ಬಾಳೆಯ ದಿಂಡು, ಕುಂಡಿಗೆ, ಕಾಯಿ, ಹಣ್ಣು, ಎಲೆ ಹೀಗೆ ಸರ್ವ ಭಾಗಗಳೂ ಆರೋಗ್ಯಕಾರಕ. ಅದರಲ್ಲಿನ ಇರುವ ಆರೋಗ್ಯಕರ ಅಂಶಗಳು ನಮ್ಮ ದೇಹವನ್ನು ಸೇರುತ್ತವೆ. ಅದರಲ್ಲೂ ಬಾಳೆಕಾಯಿ ಹೂವಿನ ದೋಸೆ ರುಚಿಯೂ ಹೌದು, ಆರೋಗ್ಯಪೂರ್ಣವೂ ಹೌದು. ಇದನ್ನು ಮಾಡುವ ವಿಧಾನವೂ ಬಲು ಸುಲಭ. ಬೇಕಾದ ಸಾಮಗ್ರಿ ಬಾಳೆಕಾಯಿ ಹೂ 1 ಕಪ್ ದೋಸೆ ಅಕ್ಕಿ 2 ಕಪ್ ಉದ್ದು ಅರ್ಧ ಕಪ್ ಉಪ್ಪು ರುಚಿಗೆ ತಕ್ಕಸ್ಟು ಮಾಡುವ ವಿಧಾನ ದೋಸೆಅಕ್ಕಿ, ಉದ್ದು 3 ರಿಂದ 4 ಗಂಟೆಗಳ ಕಾಲ ನೆನಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಬಾಳೆಕಾಯಿ ಹೂವನ್ನು ಸಣ್ಣ ಸಣ್ಣಗೆ ಹೆಚ್ಚಿ ಅದನ್ನು ರುಬ್ಬಿಕೊಳ್ಳಬೇಕು. ರುಬ್ಬಿಕೊಂಡದ್ದನ್ನು ಎಲ್ಲವನ್ನು ಚೆನ್ನಾಗಿ ಕಲಸಿ ಬೇಕಾದಷ್ಟು ಉಪ್ಪು ಸೇರಿಸಿ 8 ಗಂಟೆಗಳ ಕಾಲ…
‘ಗೋಳಿ ಬಜೆ’ ಮಾಡುವ ವಿಧಾನ ಬಲು ಸುಲಭ.
ಕರಾವಳಿಯ ತಿಂಡಿ ತಿನಿಸುಗಳ ಪೈಕಿ ‘ಗೋಳಿ ಬಜೆ’ ಭಾರೀ ಫೇಮಸ್ಸು. ಮಂಗಳೂರು ಬಜ್ಜಿ ಎಂದೂ ಇದನ್ನು ಕರೆಯಲಾಗುತ್ತದೆ. ಇದೀಗ ಇದು ಕರಾವಳಿಯಲ್ಲಷ್ಟೇ ಅಲ್ಲ ಜಗತ್ತಿನಾದ್ಯಂತ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಇದನ್ನು ತಯಾರಿಸಲು ಅಪ್ರತಿಮ ಪಾಕ ಪ್ರವೀಣರಾಗಬೇಕಿಲ್ಲ. ಮಾಡುವ ವಿಧಾನ ಬಲು ಸುಲಭ.. ಇದನ್ನೂ ಓದಿ.. ‘ಬಾಳೆ ಹಣ್ಣಿನ ದೋಸೆ’.. ಶಕ್ತಿ-ಚೈತನ್ಯಕ್ಕೆ ಸೂಕ್ತ ಈ ಖಾದ್ಯ
ಬರಲಿದೆ ‘ಫಿಶ್ ವೇಪರ್ಸ್’; ಕರಾವಳಿ ಮೂಲದ ಉದ್ಯಮಿ ಸಾಧನೆಗೆ ಸಿಎಂ ಫುಲ್ ಖುಷ್
ಬೆಂಗಳೂರು: ಕರ್ನಾಟಕ ಸರ್ಕಾರದ ಮೀನುಗಾರಿಕೆ ಇಲಾಖೆಯ ಕಾರ್ಯವೈಖರಿಗೆ ಹೊಸ ಆಯಾಮ ಸಿಕ್ಕಿದೆ. ಸಾಮಾಜಿಕ ಕಾರ್ಯಕರ್ತರೂ ಆದ ಉದ್ಯಮಿ ಗೋವಿಂದ ಬಾಬು ಪೂಜಾರಿ ಮೀನುಗಾರರ ಪಾಲಿಗೆ ಆಶಾವಾದಿಯಾಗಿದ್ದಾರೆ. ಮತ್ಯೋದ್ಯಮ ಉತ್ತೇಜನ ಉದ್ದೇಶದಿಂದ ವಿನೂತನ ಉದ್ದಿಮೆಗೆ ಮುನ್ನುಡಿ ಬರೆದಿದ್ದಾರೆ. ಮೀನಿನಿಂದ ಚಿಪ್ಸ್ ತಯಾರಿಸುವ ಸುಧಾರಿತ ಅವಿಷ್ಕಾರ ಈ ಉದ್ಯಮಿಯ ಗರಡಿಯಲ್ಲಿ ಸಾಧ್ಯವಾಗಿದ್ದು, ಇದೀಗ ಎಲ್ಲರ ಕುತೂಹಲ ಈ ಚಿಪ್ಸ್‌ನತ್ತ ನೆಟ್ಟಿದೆ. ಏನಿದು ಫಿಷ್ ವೇಪರ್ಸ್? ಮೀನುಗಾರಿಕೆ ಕರಾವಳಿಯ ಸಾಂಪ್ರದಾಯಿಕ ಕಸುಬುಗಳಲ್ಲೊಂದು. ಇತ್ತೀಚಿನ ದಿನಗಳಲ್ಲಿ ಆಹಾರ ಕ್ಷೇತ್ರಕ್ಕಷ್ಟೇ ಅಲ್ಲ, ಫಿಷ್ ಆಯಿಲ್ ಸಹಿತ ವಿವಿಧ ಉತ್ಪನ್ನಗಳಿಗಾಗಿ ರಫ್ತಾಗುತ್ತವೆ. ಆದರೂ ಮತ್ಯೋದ್ಯಮ ಕ್ಷೇತ್ರ ಆರ್ಥಿಕವಾಗಿ ಬಡವಾಗಿದ್ದು ಮೀನಿಗೆ ಬೇಡಿಕೆ ಸೃಷ್ಟಿಸಿ ಮೀನುಗಾರ ಕುಟುಂಬಕ್ಕೆ ವರದಾನವಾಗುವ ರೀತಿ ಉದ್ದಿಮೆ ಸ್ಥಾಪಿಸುವಲ್ಲಿ ದೇಶದ ಪ್ರತಿಷ್ಟಿತ ಆಹಾರೋದ್ಯಮ ಸಂಸ್ಥೆ ‘ಶೆಫ್ ಟಾಕ್’ ಸಂಸ್ಥೆಯ ಮುಖ್ಯಸ್ಥ ಗೋವಿಂದ ಬಾಬು ಪೂಜಾರಿಯವರು ‘ಮತ್ಸ್ಯ ಬಂಧನ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.…
