ಪೇಜಾವರ ಶ್ರೀ ಭೇಟಿಯಾದ ಪ್ರಧಾನಿ ಮೋದಿ; ಶತಮಾನೋತ್ಸವ ಲಾಂಛನ ಅನಾವರಣ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಇತರ ಗಣ್ಯರನ್ನು ಭೇಟಿಯಾದರು. ಇದೇ ವೇಳೆ ಪೇಜಾವರ ಮಠದ ಮಾಜಿ ಪೀಠಾಧಿಪತಿ, ಪದ್ಮವಿಭೂಷಣ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವದ ಲಾಂಛನವನ್ನು ಅನಾವರಣಗೊಳಿಸಿದರು. ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಭಕ್ತಿ, ಪಾಂಡಿತ್ಯ ಹಾಗೂ ಸಮಾಜ ಸೇವೆಯ ಜೀವನ ದೇಶದ ಜನರಿಗೆ ನಿರಂತರ ಪ್ರೇರಣೆ ನೀಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ‘ಆದರ್ಶ–ಪರಂಪರೆ ಮುಂದುವರಿಯಲಿ’ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗುವ ವಿವಿಧ ಕಾರ್ಯಕ್ರಮಗಳು ಮತ್ತು ಉಪಕ್ರಮಗಳು ಅವರ ಆದರ್ಶಗಳು ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಹಕಾರಿಯಾಗಲಿವೆ ಎಂದು ಪ್ರಧಾನಿ ಹೇಳಿದರು. ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಮೋದಿ, ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಇತರ ಗಣ್ಯರನ್ನು ಭೇಟಿಯಾಗಲು ಸಂತೋಷವಾಗಿದೆ ಎಂದು…

ಇವಿ, ಹಸಿರು ಉಕ್ಕು: ಭಾರತ–EU ಸಹಕಾರಕ್ಕೆ ಕುಮಾರಸ್ವಾಮಿ ಒತ್ತು

ನವದೆಹಲಿ: ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಮಂಗಳವಾರ ಯುರೋಪಿಯನ್ ಪಾರ್ಲಿಮೆಂಟ್‌ನ ಕೈಗಾರಿಕೆ, ಸಂಶೋಧನೆ ಮತ್ತು ಇಂಧನ ಸಮಿತಿ (ITRE) ನಿಯೋಗದೊಂದಿಗೆ ಮಾತುಕತೆ ನಡೆಸಿದರು. ವಿದ್ಯುತ್ ವಾಹನಗಳ (EV) ಚಲನಶೀಲತೆ, ಬ್ಯಾಟರಿ ತಂತ್ರಜ್ಞಾನ, ಶುದ್ಧ ಇಂಧನ ಹಾಗೂ ಕೈಗಾರಿಕಾ ಡಿಕಾರ್ಬೊನೈಸೇಶನ್ ಕ್ಷೇತ್ರಗಳಲ್ಲಿ ಭಾರತ–ಯುರೋಪಿಯನ್ ಒಕ್ಕೂಟ (EU) ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಜನವರಿಯಲ್ಲಿ ನಡೆದ 16ನೇ ಭಾರತ–EU ಶೃಂಗಸಭೆಯ ಬಳಿಕ ಈ ಮಾತುಕತೆ ನಡೆದಿದ್ದು, ಭಾರತ–EU ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ಪೂರ್ಣಗೊಂಡಿರುವುದು ಮತ್ತು ಜಂಟಿ ಸಮಗ್ರ ಕಾರ್ಯತಂತ್ರದ ಕಾರ್ಯಸೂಚಿ ಅಂಗೀಕರಿಸಿರುವುದನ್ನು ಸಚಿವರು ಉಲ್ಲೇಖಿಸಿದರು. ಭಾರೀ ಕೈಗಾರಿಕೆಗಳ ಸಚಿವಾಲಯದ ಪ್ರಮುಖ ಯೋಜನೆಗಳಾದ PM E-DRIVE, ಆಟೋಮೊಬೈಲ್‌ಗಳು ಮತ್ತು ಆಟೋ ಘಟಕಗಳ ಉತ್ಪಾದನೆಗೆ ಸಂಬಂಧಿಸಿದ PLI ಯೋಜನೆಗಳು ಹಾಗೂ ಅಡ್ವಾನ್ಸ್ಡ್ ಕೆಮಿಸ್ಟ್ರಿ ಸೆಲ್‌ಗಳಂತಹ ಉಪಕ್ರಮಗಳ ಕುರಿತು ಕುಮಾರಸ್ವಾಮಿ ಮಾಹಿತಿ…

ತಮಿಳುನಾಡಿನಲ್ಲಿ ‘ಕಾಮರಾಜರ್ ಉಪಾಹಾರ ಯೋಜನೆ’ ವಿಸ್ತರಣೆ: 15.30 ಲಕ್ಷ ಮಕ್ಕಳಿಗೆ ಲಾಭ

ಚೆನ್ನೈ, ಸೆ.22: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಸರ್ಕಾರವು ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ‘ಮುಖ್ಯಮಂತ್ರಿಗಳ ಉಪಾಹಾರ ಯೋಜನೆ’ಯನ್ನು ರದ್ದುಗೊಳಿಸುವ ಬದಲು ಮತ್ತಷ್ಟು ವಿಸ್ತರಿಸಿದೆ. ಇದೇ ವೇಳೆ ಯೋಜನೆಗೆ ಮಾಜಿ ಮುಖ್ಯಮಂತ್ರಿ ಕೆ. ಕಾಮರಾಜ್ ಅವರ ಹೆಸರಿಟ್ಟು ‘ಪೆರುಂತಲೈವರ್ ಕಾಮರಾಜರ್ ಉಪಾಹಾರ ಯೋಜನೆ’ ಎಂದು ಮರುನಾಮಕರಣ ಮಾಡಲಾಗಿದೆ. ಈವರೆಗೆ 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಸೀಮಿತವಾಗಿದ್ದ ಯೋಜನೆಯನ್ನು ಇದೀಗ 6ರಿಂದ 8ನೇ ತರಗತಿಯ ಮಕ್ಕಳಿಗೂ ವಿಸ್ತರಿಸಲಾಗಿದೆ. ರಾಜ್ಯದ 15,454 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಸುಮಾರು 15.30 ಲಕ್ಷ ವಿದ್ಯಾರ್ಥಿಗಳಿಗೆ ಪ್ರತಿದಿನ ಉಚಿತ ಹಾಗೂ ಪೌಷ್ಟಿಕ ಉಪಾಹಾರ ದೊರೆಯಲಿದೆ. ಯೋಜನೆ ವಿಸ್ತರಣೆಗೆ ಸರ್ಕಾರ ₹217.63 ಕೋಟಿ ಹೆಚ್ಚುವರಿ ಅನುದಾನ ನೀಡಿದ್ದು, ಇದರೊಂದಿಗೆ ಯೋಜನೆಯ ವಾರ್ಷಿಕ ವೆಚ್ಚ ₹724 ಕೋಟಿಗೆ ಏರಿಕೆಯಾಗಿದೆ. ಹೆಸರಿನ ಬದಲಾವಣೆಗೆ ರಾಜಕೀಯ ಚರ್ಚೆ ಯೋಜನೆಗೆ ಕಾಮರಾಜ್ ಹೆಸರು ನೀಡಿರುವುದು ಆಡಳಿತಾರೂಢ ಟಿವಿಕೆ…

ರಾಮಮಂದಿರ ದೇಣಿಗೆ ದುರುಪಯೋಗ ಪ್ರಕರಣ: ಎಸ್‌ಐಟಿ ತನಿಖೆ ಬಹುತೇಕ ಪೂರ್ಣ

ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭಕ್ತರು ಸಮರ್ಪಿಸಿದ ಕಾಣಿಕೆ ಹಣದ ದುರುಪಯೋಗದ ಆರೋಪಕ್ಕೆ ಸಂಬಂಧಿಸಿದ ವಿಶೇಷ ತನಿಖಾ ತಂಡ (SIT) ತನಿಖೆಯನ್ನು ಬಹುತೇಕ ಪೂರ್ಣಗೊಳಿಸಿದ್ದು, ಸೆಪ್ಟೆಂಬರ್ 25ರೊಳಗೆ ಆರೋಪಪಟ್ಟಿ ಸಲ್ಲಿಸಲು ಉತ್ತರ ಪ್ರದೇಶ ಸರ್ಕಾರ ಸಿದ್ಧತೆ ನಡೆಸಿದೆ. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಎಸ್‌ಐಟಿ ಸ್ಥಿತಿಗತಿ ವರದಿಯಲ್ಲಿ ತನಿಖೆಯ ಹಲವು ಪ್ರಮುಖ ಅಂಶಗಳನ್ನು ದಾಖಲಿಸಲಾಗಿದೆ. ಮೊದಲ ಬಂಧನದ ಬಳಿಕದ 90 ದಿನಗಳ ಅವಧಿ ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ, ಆರೋಪಿಗಳಿಗೆ ಶಾಸನಬದ್ಧ ಜಾಮೀನು ಸಿಗದಂತೆ ಚಾರ್ಜ್‌ಶೀಟ್ ಸಲ್ಲಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಗಳಲ್ಲಿ ಕಳವು ಆರೋಪ ರಾಮಮಂದಿರದ ಕಾಣಿಕೆ ಹಣ ಎಣಿಕೆ ಪ್ರಕ್ರಿಯೆ ಹಾಗೂ ಸಿಸಿಟಿವಿ ವ್ಯವಸ್ಥೆಯ ಕುರಿತು ಎಸ್‌ಐಟಿ ತನಿಖೆ ನಡೆಸಿದೆ. ಈ ಹಿಂದೆ ನಡೆಸಿದ ತನಿಖೆಯಲ್ಲಿ ಕಾಣಿಕೆ ಹಣ ಎಣಿಕೆ ವೇಳೆ ಅಕ್ರಮ ನಡೆದಿದೆ ಎಂಬ ಆರೋಪಗಳಿಗೆ ಪುರಾವೆಗಳು ದೊರೆತಿದ್ದವು.…

ಅ.16ಕ್ಕೆ ರಾಜ್ಯಸಭೆ ಚುನಾವಣೆ: ಯುಪಿಯಲ್ಲಿ 10, ಉತ್ತರಾಖಂಡದಲ್ಲಿ 1 ಸ್ಥಾನಕ್ಕೆ ಮತದಾನ

ನವದೆಹಲಿ, ಸೆ.22: ಉತ್ತರ ಪ್ರದೇಶದ 10 ಹಾಗೂ ಉತ್ತರಾಖಂಡದ ಒಂದು ರಾಜ್ಯಸಭಾ ಸ್ಥಾನ ಸೇರಿದಂತೆ ಒಟ್ಟು 11 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಸಲು ಚುನಾವಣಾ ಆಯೋಗ ಮಂಗಳವಾರ ವೇಳಾಪಟ್ಟಿ ಪ್ರಕಟಿಸಿದೆ. ಇದರ ಜೊತೆಗೆ ಪಶ್ಚಿಮ ಬಂಗಾಳದಲ್ಲಿ ತೆರವಾಗಿರುವ ಒಂದು ರಾಜ್ಯಸಭಾ ಸ್ಥಾನಕ್ಕೂ ಉಪಚುನಾವಣೆ ನಡೆಯಲಿದೆ. ಎಲ್ಲ 12 ಸ್ಥಾನಗಳಿಗೂ ಅಕ್ಟೋಬರ್ 16ರಂದು ಮತದಾನ ನಡೆಯಲಿದ್ದು, ಅದೇ ದಿನ ಸಂಜೆ 5 ಗಂಟೆಯಿಂದ ಮತ ಎಣಿಕೆ ನಡೆಯಲಿದೆ. ಚುನಾವಣಾ ಅಧಿಸೂಚನೆ ಸೆಪ್ಟೆಂಬರ್ 29ರಂದು ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 6 ಕೊನೆಯ ದಿನವಾಗಿದ್ದು, ಅಕ್ಟೋಬರ್ 7ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅಭ್ಯರ್ಥಿಗಳು ಅಕ್ಟೋಬರ್ 9ರವರೆಗೆ ನಾಮಪತ್ರ ಹಿಂಪಡೆಯಬಹುದು. ಪ್ರಮುಖ ನಾಯಕರ ಅವಧಿ ಅಂತ್ಯ ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಸಮಾಜವಾದಿ ಪಕ್ಷದ ಹಿರಿಯ ನಾಯಕ ರಾಮ್ ಗೋಪಾಲ್ ಯಾದವ್, ಮಾಜಿ ಉಪಮುಖ್ಯಮಂತ್ರಿ…

ಸೆ 28ರಿಂದ 30ರವರೆಗೆ ಮುಷ್ಕರಕ್ಕೆ ಬ್ಯಾಂಕ್ ಸಂಘಟನೆಗಳ ಕರೆ; ಸತತ ಐದು ದಿನ ಸೇವೆಗೆ ಅಡ್ಡಿ ಸಾಧ್ಯತೆ

ನವದೆಹಲಿ: ಸೆಪ್ಟೆಂಬರ್ 28ರಿಂದ 30ರವರೆಗೆ ಮೂರು ದಿನಗಳ ಮುಷ್ಕರಕ್ಕೆ ಬ್ಯಾಂಕ್ ಸಂಘಟನೆಗಳು ಕರೆ ನೀಡಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕ ವಲಯದ ಬ್ಯಾಂಕುಗಳು (PSB) ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (RRB) ಉದ್ಯೋಗಿಗಳು ಮುಷ್ಕರದಿಂದ ದೂರವಿದ್ದು, ಬ್ಯಾಂಕಿಂಗ್ ಸೇವೆಗಳಿಗೆ ಅಡಚಣೆಯಾಗದಂತೆ ಸಹಕರಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ. ಬ್ಯಾಂಕ್ ಸಂಘಟನೆಗಳು ಅಕ್ಟೋಬರ್ 26ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಪ್ರಸ್ತಾವನೆಯನ್ನೂ ಮುಂದಿಟ್ಟಿವೆ. ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿ ಹಾಗೂ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕ (PLI) ಯೋಜನೆ ಹಿಂಪಡೆಯುವುದು ಪ್ರಮುಖ ಬೇಡಿಕೆಗಳಾಗಿವೆ. ಉದ್ಯೋಗಿಗಳ ಪ್ರತಿನಿಧಿಗಳೊಂದಿಗೆ ನಡೆದ ಮಾತುಕತೆ ಬಳಿಕ PLI ಯೋಜನೆಯನ್ನು ಸದ್ಯಕ್ಕೆ ತಡೆಹಿಡಿಯಲು ನಿರ್ಧರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಹೀಗಾಗಿ ಸಂಘಟನೆಗಳ ಎರಡು ಪ್ರಮುಖ ಬೇಡಿಕೆಗಳಲ್ಲಿ ಒಂದನ್ನು ಈಡೇರಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಐದು ದಿನಗಳ ಕೆಲಸದ ಬೇಡಿಕೆ ಕುರಿತು ಹಲವು ಸುತ್ತಿನ ಮಾತುಕತೆಗಳನ್ನು ನಡೆಸಲಾಗಿದ್ದು, ಬಾಕಿ ಇರುವ…

ಪ್ರವೇಶ ನಿಯಂತ್ರಿತ ರಾಷ್ಟ್ರೀಯ ಹೆದ್ದಾರಿಗಳಿಗೆ ಏಕರೂಪ ವಿನ್ಯಾಸ ಮಾರ್ಗಸೂಚಿ

ನವದೆಹಲಿ: ತಾಂತ್ರಿಕ ಮಾನದಂಡಗಳಲ್ಲಿ ಏಕರೂಪತೆ, ರಸ್ತೆ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಒತ್ತು ನೀಡುವ ಉದ್ದೇಶದಿಂದ, ಎಕ್ಸ್‌ಪ್ರೆಸ್‌ವೇಗಳನ್ನು ಹೊರತುಪಡಿಸಿ ಪ್ರವೇಶ-ನಿಯಂತ್ರಿತ ಅತಿ ವೇಗದ ರಾಷ್ಟ್ರೀಯ ಹೆದ್ದಾರಿಗಳ ಯೋಜನೆ ಮತ್ತು ವಿನ್ಯಾಸಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸಮಗ್ರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಮುಂಬರುವ ನಾಲ್ಕು ಮತ್ತು ಆರು ಪಥದ ಗ್ರೀನ್‌ಫೀಲ್ಡ್ ಹಾಗೂ ಬ್ರೌನ್‌ಫೀಲ್ಡ್ ಪ್ರವೇಶ-ನಿಯಂತ್ರಿತ ರಾಷ್ಟ್ರೀಯ ಹೆದ್ದಾರಿಗಳಿಗೆ ಈ ಮಾರ್ಗಸೂಚಿಗಳು ಅನ್ವಯಿಸಲಿವೆ. ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸುವಾಗ ಏಕರೂಪದ ತಾಂತ್ರಿಕ ಮಾನದಂಡಗಳನ್ನು ಅನುಸರಿಸುವುದು ಇದರ ಉದ್ದೇಶವಾಗಿದೆ. ಸಂಚಾರ ದಟ್ಟಣೆಗೆ ಅನುಗುಣವಾಗಿ ಪಥ ವಿನ್ಯಾಸ ಹೊಸ ಚೌಕಟ್ಟಿನಲ್ಲಿ ನಿರೀಕ್ಷಿತ ಸಂಚಾರ ಪ್ರಮಾಣದ ಆಧಾರದ ಮೇಲೆ ಪಥಗಳ ಸಂಖ್ಯೆ ಮತ್ತು ಕಾರಿಡಾರ್ ಅಗಲವನ್ನು ನಿಗದಿಪಡಿಸಲಾಗಿದೆ. 15,000 ವಾಹನಗಳವರೆಗೆ: 4 ಪಥದ ಹೆದ್ದಾರಿ, 4 ಪಥದ ರಚನೆಗಳು ಮತ್ತು 60 ಮೀಟರ್ ಕಾರಿಡಾರ್ ಅಗಲ. 15,000–25,000 ವಾಹನಗಳು: 4 ಪಥದ…

ಪಿಥೋರಗಢದಲ್ಲಿ ಭಾರತ–ಮಂಗೋಲಿಯಾ ಜಂಟಿ ಸೇನಾ ಕವಾಯತು ಆರಂಭ

ಪಿಥೋರಗಢ: ಉತ್ತರಾಖಂಡದ ಪಿಥೋರಗಢದಲ್ಲಿರುವ ವಿದೇಶಿ ತರಬೇತಿ ನೋಡ್‌ನಲ್ಲಿ ಭಾರತ–ಮಂಗೋಲಿಯಾ ಜಂಟಿ ಸೇನಾ ವ್ಯಾಯಾಮ ‘ನೊಮಾಡಿಕ್ ಎಲಿಫೆಂಟ್‌’ನ 18ನೇ ಆವೃತ್ತಿ ಸೋಮವಾರ ಆರಂಭಗೊಂಡಿದೆ. ಸೆಪ್ಟೆಂಬರ್ 21ರಿಂದ ಅಕ್ಟೋಬರ್ 3ರವರೆಗೆ ನಡೆಯಲಿರುವ ಕವಾಯತಿನಲ್ಲಿ ಉಭಯ ದೇಶಗಳ ತಲಾ 45 ಯೋಧರು ಭಾಗವಹಿಸುತ್ತಿದ್ದಾರೆ. ವಾರ್ಷಿಕ ಪ್ಲಟೂನ್ ಮಟ್ಟದ ಈ ಸೇನಾ ವ್ಯಾಯಾಮವನ್ನು ಭಾರತ ಮತ್ತು ಮಂಗೋಲಿಯಾ ಪರ್ಯಾಯವಾಗಿ ಆಯೋಜಿಸುತ್ತಿವೆ. ಇದರ ಹಿಂದಿನ ಆವೃತ್ತಿ 2025ರ ಮೇ–ಜೂನ್‌ನಲ್ಲಿ ಮಂಗೋಲಿಯಾದ ಉಲಾನ್‌ಬಾತರ್‌ನಲ್ಲಿ ನಡೆದಿತ್ತು. ವಿಶ್ವಸಂಸ್ಥೆಯ ಆದೇಶದಡಿ ಅರೆ-ನಗರ ಮತ್ತು ಪರ್ವತ ಪ್ರದೇಶಗಳಲ್ಲಿ ಬಂಡಾಯ ನಿಗ್ರಹ ಕಾರ್ಯಾಚರಣೆ ನಡೆಸುವ ಎರಡೂ ಸೇನೆಗಳ ಸಾಮರ್ಥ್ಯ ಹೆಚ್ಚಿಸುವುದು ಕವಾಯತಿಯ ಪ್ರಮುಖ ಉದ್ದೇಶವಾಗಿದೆ. ತರಬೇತಿಯಲ್ಲಿ ಯುದ್ಧತಂತ್ರದ ಮಟ್ಟದ ಕಾರ್ಯಾಚರಣೆಗಳು, ಉತ್ತಮ ಕಾರ್ಯವಿಧಾನಗಳ ಹಂಚಿಕೆ, ಕಾರ್ಯಾಚರಣಾ ಕವಾಯತುಗಳ ಪರಿಷ್ಕರಣೆ ಹಾಗೂ ಎರಡೂ ಸೇನೆಗಳ ನಡುವಿನ ಪರಸ್ಪರ ಕಾರ್ಯಸಾಧ್ಯತೆ ಹೆಚ್ಚಿಸುವುದಕ್ಕೆ ಆದ್ಯತೆ ನೀಡಲಾಗುತ್ತದೆ. ಕಾರ್ಡನ್‌ ಮತ್ತು ಶೋಧ ಕಾರ್ಯಾಚರಣೆ, ಕೊಠಡಿ ಪ್ರವೇಶ ಕವಾಯತು…

ಶಾಲಾ ಮಕ್ಕಳ ಕಣ್ಣೆದುರೇ ಗುಂಡಿಕ್ಕಿ ಶಿಕ್ಷಕಿಗೆಯ ಹತ್ಯೆ; ಬಳಿಕ ಆರೋಪಿಯೂ ಆತ್ಮಹತ್ಯೆ

ಲಖಿಂಪುರ ಖೇರಿ (ಉತ್ತರ ಪ್ರದೇಶ): ಶಾಲಾ ಮಕ್ಕಳ ಕಣ್ಣೆದುರೇ ಶಿಕ್ಷಕಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ವ್ಯಕ್ತಿಯೊಬ್ಬ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಸೋಮವಾರ ನಡೆದಿದೆ. ಮೃತ ಶಿಕ್ಷಕಿಯನ್ನು ನಿಷಾತ್ ಫಾತಿಮಾ (26) ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಮೊಹಮ್ಮದ್ ಸೌದ್ ಅನ್ಸಾರಿ (28) ಎಂದು ಗುರುತಿಸಲಾಗಿದೆ. ಶಾಹ್‌ಪುರ ಕೋಠಿ ರಸ್ತೆಯಲ್ಲಿರುವ ಚಿಲ್ಡ್ರನ್ಸ್ ಅಕಾಡೆಮಿ ಶಾಲೆಯಲ್ಲಿ ಬೆಳಗ್ಗೆ 11.30ರ ಸುಮಾರಿಗೆ ಘಟನೆ ನಡೆದಿದೆ. ಜಿಲ್ಲಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾರ, ಸೌದ್ ಫಾತಿಮಾಳನ್ನು ಭೇಟಿಯಾಗಲು ಶಾಲೆಗೆ ಬಂದಿದ್ದ. ಮೊದಲು ನೆಲ ಮಹಡಿಯಲ್ಲಿ ಭೇಟಿಯಾದ ಬಳಿಕ ಇಬ್ಬರೂ ಮೊದಲ ಮಹಡಿಗೆ ತೆರಳಿದ್ದರು. ಹಿರಿಯ ಕೆಜಿ ತರಗತಿ ಕೊಠಡಿಯ ಹೊರಗಿನ ಕಾರಿಡಾರ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಸೌದ್ ಚೀಲದಲ್ಲಿದ್ದ ದೇಶೀಯ ಪಿಸ್ತೂಲ್ ಹೊರತೆಗೆದು ಫಾತಿಮಾ ಮೇಲೆ ಗುಂಡು ಹಾರಿಸಿದ್ದಾನೆ. ಬಳಿಕ ತಾನೂ ಗುಂಡು ಹಾರಿಸಿಕೊಂಡಿದ್ದಾನೆ.…

ಅನಧಿಕೃತ ಸಿಮ್ ವಿತರಣೆ, IMEI ತಿರುಚಿದರೆ 3 ವರ್ಷ ಜೈಲು: DoT ಎಚ್ಚರಿಕೆ

ನವದೆಹಲಿ: ವಂಚನೆಯ ರೀತಿಯಲ್ಲಿ ಸಿಮ್ ಕಾರ್ಡ್ ವಿತರಣೆ, ಟೆಲಿಕಾಂ ಐಡೆಂಟಿಫೈಯರ್‌ಗಳ ದುರುಪಯೋಗ ಹಾಗೂ ಮೊಬೈಲ್‌ಗಳ IMEI ಸಂಖ್ಯೆ ತಿರುಚುವುದರ ವಿರುದ್ಧ ದೂರಸಂಪರ್ಕ ಇಲಾಖೆ (DoT) ನಾಗರಿಕರಿಗೆ ಎಚ್ಚರಿಕೆ ನೀಡಿದೆ. ಇಂತಹ ಉಲ್ಲಂಘನೆಗಳಿಗೆ ದೂರಸಂಪರ್ಕ ಕಾಯ್ದೆ, 2023ರ ಅಡಿಯಲ್ಲಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹50 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ. ಛತ್ತೀಸ್‌ಗಢದಲ್ಲಿ ಪಾಯಿಂಟ್ ಆಫ್ ಸೇಲ್ (PoS) ಏಜೆಂಟ್‌ವೊಬ್ಬರು ನಾಗರಿಕರ ಗುರುತಿನ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು, ಅವರ ಅರಿವು ಅಥವಾ ಒಪ್ಪಿಗೆಯಿಲ್ಲದೆ 25 ಸಿಮ್‌ಗಳನ್ನು ಸಕ್ರಿಯಗೊಳಿಸಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ DoT ಈ ಸಲಹೆ ನೀಡಿದೆ. ಪ್ರಕರಣದ ಬಳಿಕ DoT ಮತ್ತು ಟೆಲಿಕಾಂ ಸೇವಾ ಪೂರೈಕೆದಾರರು ಸಂಬಂಧಪಟ್ಟ PoS ಏಜೆಂಟ್‌ರನ್ನು ಕಪ್ಪುಪಟ್ಟಿಗೆ ಸೇರಿಸಿದ್ದು, 25 ಸಂಪರ್ಕಗಳನ್ನು ಪರಿಶೀಲನೆಗೆ ಒಳಪಡಿಸಲಾಯಿತು. ಮರುಪರಿಶೀಲನೆಯಲ್ಲಿ ವಿಫಲವಾದ ಸಂಪರ್ಕಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಸಿಮ್ ಹಂಚಿಕೆ ಮಾಡದಂತೆ ಸಲಹೆ ತಮ್ಮ ಹೆಸರಿನಲ್ಲಿ ನೋಂದಾಯಿಸಿರುವ ಸಿಮ್‌ಗಳನ್ನು ಇತರರಿಗೆ ಮಾರಾಟ, ಬಾಡಿಗೆ,…