SIR ನಿರ್ಧಾರಗಳು ಸರ್ವಾನುಮತ: ಚುನಾವಣಾ ಆಯೋಗದಲ್ಲಿ ಆಂತರಿಕ ಚರ್ಚೆಗಳು ಸಾಮಾನ್ಯ

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಸೇರಿದಂತೆ ಕಳೆದ ಅವಧಿಯಲ್ಲಿ ಕೈಗೊಂಡ ಎಲ್ಲ ಪ್ರಮುಖ ನಿರ್ಧಾರಗಳು ಪೂರ್ಣ ಚುನಾವಣಾ ಆಯೋಗದ ಸರ್ವಾನುಮತದ ನಿರ್ಧಾರಗಳಾಗಿವೆ ಎಂದು ಭಾರತೀಯ ಚುನಾವಣಾ ಆಯೋಗ (ECI) ಸ್ಪಷ್ಟಪಡಿಸಿದೆ. ಮತದಾರರ ಪಟ್ಟಿ ನಿರ್ವಹಣೆ, SIR, ಮತದಾರರ ನೋಂದಣಿ ಹಾಗೂ ತಾಂತ್ರಿಕ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಆಂತರಿಕವಾಗಿ ಹಲವು ಆಕ್ಷೇಪಣೆಗಳನ್ನು ದಾಖಲಿಸಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಆಯೋಗ ಈ ಸ್ಪಷ್ಟನೆ ನೀಡಿದೆ. ವರದಿಗಳಲ್ಲಿ ಕಳೆದ 10 ತಿಂಗಳಲ್ಲಿ 14 ಆಕ್ಷೇಪಣೆಗಳನ್ನು ದಾಖಲಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಸಂವಿಧಾನದ 324ನೇ ವಿಧಿ, ಶಾಸನಬದ್ಧ ನಿಯಮಗಳು ಹಾಗೂ ಸ್ಥಾಪಿತ ಸಾಂಸ್ಥಿಕ ಸಂಪ್ರದಾಯಗಳ ಅನ್ವಯ ECI ಬಹುಸದಸ್ಯ ಸಾಂವಿಧಾನಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಆಯೋಗ ತಿಳಿಸಿದೆ. ಲಿಖಿತ ಟಿಪ್ಪಣಿಗಳು, ಅವಲೋಕನಗಳು, ತಾಂತ್ರಿಕ ಸಲಹೆಗಳು ಹಾಗೂ ಆಂತರಿಕ ಪರಿಶೀಲನೆಗಳು…

WTO ಮೀನುಗಾರಿಕೆ ಸಬ್ಸಿಡಿ ಒಪ್ಪಂದ: ಅನುಷ್ಠಾನ ಸವಾಲುಗಳ ಕುರಿತು ತಜ್ಞರ ಚರ್ಚೆ

ನವದೆಹಲಿ: WTO ಮೀನುಗಾರಿಕೆ ಸಬ್ಸಿಡಿ ಒಪ್ಪಂದದ (AFS) ಪರಿಣಾಮಕಾರಿ ಅನುಷ್ಠಾನಕ್ಕೆ ಎದುರಾಗಬಹುದಾದ ಸವಾಲುಗಳು ಹಾಗೂ ಭಾರತದ ದೇಶೀಯ ಸಿದ್ಧತೆ ಕುರಿತು ಅಂತರರಾಷ್ಟ್ರೀಯ ವ್ಯಾಪಾರ ಕಾನೂನು, ಮೀನುಗಾರಿಕೆ ಮತ್ತು ನೀತಿ ಕ್ಷೇತ್ರದ ತಜ್ಞರು ಚರ್ಚೆ ನಡೆಸಿದರು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫಾರಿನ್ ಟ್ರೇಡ್‌ನ ಸೆಂಟರ್ ಫಾರ್ ಟ್ರೇಡ್ ಅಂಡ್ ಇನ್ವೆಸ್ಟ್‌ಮೆಂಟ್ ಲಾ (CTIL) ಸೆ.21ರಂದು ಆಯೋಜಿಸಿದ್ದ ವೆಬಿನಾರ್‌ನಲ್ಲಿ ಈ ಕುರಿತು ಚರ್ಚೆ ನಡೆಯಿತು. ಭಾರತವು ಜುಲೈ 20, 2026ರಂದು WTO ಮೀನುಗಾರಿಕೆ ಸಬ್ಸಿಡಿ ಒಪ್ಪಂದವನ್ನು ಅನುಮೋದಿಸಿದ ಹಿನ್ನೆಲೆಯಲ್ಲಿ ಈ ಚರ್ಚೆ ಮಹತ್ವ ಪಡೆದುಕೊಂಡಿದೆ. ಒಪ್ಪಂದ ಜಾರಿಗೆ ವಿಶ್ವಾಸಾರ್ಹ ಮೀನುಗಾರಿಕೆ ದತ್ತಾಂಶ, ಪರಿಣಾಮಕಾರಿ ಮೇಲ್ವಿಚಾರಣೆ ಮತ್ತು ವರದಿ ವ್ಯವಸ್ಥೆ, ಸರ್ಕಾರಿ ಸಂಸ್ಥೆಗಳ ನಡುವಿನ ಸಮನ್ವಯ ಹಾಗೂ ತಾಂತ್ರಿಕ ಸಾಮರ್ಥ್ಯ ಅಗತ್ಯ ಎಂದು ತಜ್ಞರು ಒತ್ತಿ ಹೇಳಿದರು. ಅಭಿವೃದ್ಧಿಶೀಲ ಹಾಗೂ ಅತ್ಯಂತ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಿಗೆ ನಿರಂತರ ಸಾಮರ್ಥ್ಯವರ್ಧನೆ ಮತ್ತು…

ಕಾಂಚಿ ಆಚಾರ್ಯರ ಭೇಟಿ ಮಾಡಿದ ಮೋಹನ್ ಭಾಗವತ್; ವೈದಿಕ ವಿಧಿವಿಧಾನಗಳಲ್ಲಿ ಭಾಗಿ

ಕಾಂಚೀಪುರಂ: ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಬುಧವಾರ ಒರಿಕ್ಕೈಯಲ್ಲಿರುವ ಕಾಂಚಿ ಕಾಮಕೋಟಿ ಪೀಠದ ಆಚಾರ್ಯರನ್ನು ಭೇಟಿ ಮಾಡಿ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಶ್ರೀ ಕಂಚಿ ಕಾಮಕೋಟಿ ಪೀಠದ ಜಗದ್ಗುರು ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿ ನೆರವೇರಿಸಿದ ಶ್ರೀ ಚಂದ್ರಮೌಳೀಶ್ವರ ಸ್ವಾಮಿಯ ಅಭಿಷೇಕದ ದರ್ಶನವನ್ನು ಭಾಗವತ್ ಪಡೆದರು. ಬಳಿಕ ವೈದಿಕ ವಿದ್ವಾಂಸರೊಂದಿಗೆ ಜಪ, ವೇದಘೋಷ ಹಾಗೂ ಸಮಾಜ, ದೇಶ ಮತ್ತು ವಿಶ್ವದ ಒಳಿತಿಗಾಗಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಜಗದ್ಗುರು ಆದಿ ಶಂಕರಾಚಾರ್ಯರ ದಿವ್ಯ ಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ತೋಟಕಾಷ್ಟಕ ಪಠಣ ನಡೆಯಿತು. ಭಾಗವತ್ ಅವರಿಗೆ ಸಾಂಪ್ರದಾಯಿಕ ಶಿರೋವಸ್ತ್ರ ನೀಡಿ ಗೌರವಿಸಲಾಯಿತು. ಶ್ರೀ ಕಾಮಾಕ್ಷಿ ಅಂಬಾಳ್ ದೇವಾಲಯದ ಪ್ರಸಾದವನ್ನು ನೀಡಲಾಯಿತು. ಮಹಾಮಹೋಪಾಧ್ಯಾಯ ಶ್ರೀ ಕೃಷ್ಣಮೂರ್ತಿ ಶಾಸ್ತ್ರಿಗಳ ನೇತೃತ್ವದಲ್ಲಿ ಹಿರಿಯ ವೈದಿಕ ವಿದ್ವಾಂಸರು ವೇದಘೋಷ ನಡೆಸಿದರು. 60…

ವೋಟ್ ಚೋರಿ’ ಸಂವಿಧಾನದ ಮೇಲಿನ ನೇರ ದಾಳಿ: ರಾಹುಲ್ ಗಾಂಧಿ

ನವದೆಹಲಿ: ‘ವೋಟ್ ಚೋರಿ’ (ಮತಗಳ ಕಳ್ಳತನ) ಭಾರತೀಯ ಜನರ ವಿರುದ್ಧದ ಅಪರಾಧ. ಇದು ಸಂವಿಧಾನದ ಮೇಲಿನ ನೇರ ದಾಳಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಬುಧವಾರ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಮತಗಳ ಕಳ್ಳತನದ ಹಿಂದೆ ಬಿಜೆಪಿ, ಆರ್‌ಎಸ್‌ಎಸ್ ಮತ್ತು ಚುನಾವಣಾ ಆಯೋಗ ಭಾಗಿಯಾಗಿವೆ ಎಂದು ಆರೋಪಿಸಿದ್ದಾರೆ. ‘ವೋಟ್ ಚೋರಿ ಭಾರತೀಯ ಜನರ ವಿರುದ್ಧದ ಅಪರಾಧ. ನಮ್ಮ ಸಂವಿಧಾನದ ಮೇಲಿನ ನೇರ ದಾಳಿ. ಇದನ್ನು ಸಂಘಟಿಸಿದ ಬಿಜೆಪಿ, ಆರ್‌ಎಸ್‌ಎಸ್ ಮತ್ತು ಚುನಾವಣಾ ಆಯೋಗ ದೇಶದ್ರೋಹದ ಕೃತ್ಯ ಎಸಗಿವೆ. ಆದರೆ ಇವೆಲ್ಲದಕ್ಕೂ ನ್ಯಾಯ ಸಿಗಲಿದೆ’ ಎಂದು ಅವರು ಹೇಳಿದ್ದಾರೆ. SIR ಬಗ್ಗೆ ಆಕ್ಷೇಪ? ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಆಯೋಗದೊಳಗೇ ಭಿನ್ನಾಭಿಪ್ರಾಯಗಳಿವೆ ಎಂಬ ವರದಿಗಳ ಬೆನ್ನಲ್ಲೇ ರಾಹುಲ್ ಗಾಂಧಿ ಈ ಆರೋಪ ಮಾಡಿದ್ದಾರೆ. ವರದಿಗಳ ಪ್ರಕಾರ, ಚುನಾವಣಾ ಆಯುಕ್ತರಾದ…

‘ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಿ’: ಸಂಜಯ್ ರಾವತ್ ಆಗ್ರಹ

ಮುಂಬೈ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಇಬ್ಬರು ಚುನಾವಣಾ ಆಯುಕ್ತರು ವ್ಯಕ್ತಪಡಿಸಿದ್ದ ಆಕ್ಷೇಪಣೆಗಳನ್ನು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನಿರ್ಲಕ್ಷಿಸಿದ್ದಾರೆ ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ. ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸುವುದರ ಜತೆಗೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾವತ್ ಆಗ್ರಹಿಸಿದ್ದಾರೆ. SIR ಪ್ರಕ್ರಿಯೆ ನಡೆಯುತ್ತಿದ್ದ ಅವಧಿಯಲ್ಲಿ ಚುನಾವಣಾ ಆಯೋಗದ ಕ್ರಮಗಳ ಕುರಿತು ಇಬ್ಬರು ಚುನಾವಣಾ ಆಯುಕ್ತರು 10 ತಿಂಗಳಲ್ಲಿ 14 ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ವರದಿಯನ್ನು ಉಲ್ಲೇಖಿಸಿದ ರಾವತ್, ಈ ಆಕ್ಷೇಪಣೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ದೂರಿದ್ದಾರೆ. ‘ಜ್ಞಾನೇಶ್ ಕುಮಾರ್ ಜೈಲಿಗೆ ಹೋಗುತ್ತಾರೆ. ಅವರು ಜೈಲಿಗೆ ಹೋಗಲೇಬೇಕು. ಅವರ ಬಾಸ್ ದೇಶ ಬಿಟ್ಟು ಓಡಿಹೋಗುತ್ತಾರೆ’ ಎಂದು ರಾವತ್ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ. ‘CEC ವಿರುದ್ಧ ಕ್ರಮ ಕೈಗೊಳ್ಳಿ’ ಪ್ರಜಾಪ್ರಭುತ್ವವನ್ನು ರಕ್ಷಿಸುವ…

ಮೊಬೈಲ್ ಸೇವೆಯಲ್ಲಿ ದಿಢೀರ್ ಬದಲಾವಣೆ: ಡೇಟಾ ಬೇಡದವರಿಗೆ ಅಗ್ಗದ ಕರೆ–ಎಸ್‌ಎಂಎಸ್‌ ರೀಚಾರ್ಜ್ ಆಯ್ಕೆ ವ್ಯವಸ್ಥೆಗೆ TRAI ಆದೇಶ

ನವದೆಹಲಿ: ಟೆಲಿಕಾಂ ಗ್ರಾಹಕರಿಗೆ ವಾಯ್ಸ್‌ ಮತ್ತು ಎಸ್‌ಎಂಎಸ್‌ ಸೇವೆಗಳಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸುವ ಉದ್ದೇಶದಿಂದ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ‘ಟೆಲಿಕಾಂ ಗ್ರಾಹಕ ಸಂರಕ್ಷಣಾ (13ನೇ ತಿದ್ದುಪಡಿ) ನಿಯಮಾವಳಿ, 2026’ ಅನ್ನು ಪ್ರಕಟಿಸಿದೆ. ಹೊಸ ನಿಯಮದಡಿ ಡೇಟಾ ಸೇವೆ ಅಗತ್ಯವಿಲ್ಲದ ಗ್ರಾಹಕರಿಗಾಗಿ ವಾಯ್ಸ್‌ ಮತ್ತು ಎಸ್‌ಎಂಎಸ್‌ ಮಾತ್ರ ಒಳಗೊಂಡಿರುವ ವಿಶೇಷ ಟ್ಯಾರಿಫ್ ವೋಚರ್‌ಗಳನ್ನು (STV) ಟೆಲಿಕಾಂ ಕಂಪನಿಗಳು ಸೂಕ್ತ ದರ ಕಡಿತದೊಂದಿಗೆ ನೀಡುವುದು ಕಡ್ಡಾಯವಾಗಲಿದೆ. 30 ದಿನಕ್ಕಿಂತ ಕಡಿಮೆ ಅವಧಿಗೂ STV 2024ರ 12ನೇ ತಿದ್ದುಪಡಿ ನಿಯಮಾವಳಿ ಜಾರಿಯಾದ ಬಳಿಕ, ವಾಯ್ಸ್‌ ಮತ್ತು ಎಸ್‌ಎಂಎಸ್‌ ಮಾತ್ರ ಒಳಗೊಂಡ STVಗಳ ಸಂಖ್ಯೆ ಸೀಮಿತವಾಗಿದ್ದು, ಬಹುತೇಕ ದೀರ್ಘಾವಧಿಯ ಪ್ಲ್ಯಾನ್‌ಗಳೇ ಲಭ್ಯವಿದ್ದವು ಎಂದು TRAI ಗಮನಿಸಿತ್ತು. ಇದರಿಂದ ಕಡಿಮೆ ಆದಾಯದ ಗ್ರಾಹಕರಿಗೆ ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಕಡಿಮೆ ಅವಧಿಯ ರೀಚಾರ್ಜ್ ಆಯ್ಕೆ ಸಿಗುತ್ತಿರಲಿಲ್ಲ. ಈ ಸಮಸ್ಯೆ ಪರಿಹರಿಸುವ ಉದ್ದೇಶದಿಂದ…

2029ರೊಳಗೆ ನಶಾಮುಕ್ತ ಭಾರತ: ಅಮಿತ್ ಶಾ ಮಾರ್ಗಸೂಚಿ

ನವದೆಹಲಿ: 2029ರೊಳಗೆ ದೇಶವನ್ನು ಮಾದಕವಸ್ತು ಮುಕ್ತಗೊಳಿಸುವ ಗುರಿಯೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಮನ್ವಯದೊಂದಿಗೆ ಕಾರ್ಯಾಚರಣೆ ನಡೆಸುವಂತೆ ಕರೆ ನೀಡಿದ್ದಾರೆ. ನವದೆಹಲಿಯಲ್ಲಿ ಮಂಗಳವಾರ ನಡೆದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಾದಕವಸ್ತು ವಿರೋಧಿ ಕಾರ್ಯಪಡೆ (ANTF) ಮುಖ್ಯಸ್ಥರ ಮೂರನೇ ರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾದಕವಸ್ತುಗಳ ವಶಪಡಿಸಿಕೊಳ್ಳುವಿಕೆಗೆ ಮಾತ್ರ ಸೀಮಿತವಾಗದೆ ಸಂಪೂರ್ಣ ಕಳ್ಳಸಾಗಣೆ ಜಾಲಗಳನ್ನು ಪತ್ತೆಹಚ್ಚಿ ನಿರ್ಮೂಲನೆ ಮಾಡುವತ್ತ ಗಮನಹರಿಸಬೇಕು ಎಂದು ಹೇಳಿದರು. 2026–29ರ ವಿಷನ್ ಡಾಕ್ಯುಮೆಂಟ್ ಮಾದಕವಸ್ತು ನಿಯಂತ್ರಣಕ್ಕಾಗಿ ರೂಪಿಸಿರುವ ‘ವಿಷನ್ ಡಾಕ್ಯುಮೆಂಟ್–2026–2029’ ಮುಂದಿನ ಮೂರು ವರ್ಷಗಳ ಕಾರ್ಯತಂತ್ರಕ್ಕೆ ಮಾರ್ಗಸೂಚಿಯಾಗಲಿದೆ. ಜಾರಿ ಮತ್ತು ಗುಪ್ತಚರ ಕಾರ್ಯಾಚರಣೆಗಳು, ಪೂರ್ವಗಾಮಿ ರಾಸಾಯನಿಕಗಳು ಮತ್ತು ಸಂಶ್ಲೇಷಿತ ಮಾದಕವಸ್ತುಗಳ ನಿಯಂತ್ರಣ, ಬೇಡಿಕೆ ಹಾಗೂ ಹಾನಿ ಕಡಿತ, ಸಾಮರ್ಥ್ಯ ವೃದ್ಧಿ ಮತ್ತು ಸಮನ್ವಯ ಎಂಬ ನಾಲ್ಕು ಪ್ರಮುಖ ಸ್ತಂಭಗಳ ಮೇಲೆ ಯೋಜನೆ ರೂಪಿಸಲಾಗಿದೆ.…

ಪೇಜಾವರ ಶ್ರೀ ಭೇಟಿಯಾದ ಪ್ರಧಾನಿ ಮೋದಿ; ಶತಮಾನೋತ್ಸವ ಲಾಂಛನ ಅನಾವರಣ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಇತರ ಗಣ್ಯರನ್ನು ಭೇಟಿಯಾದರು. ಇದೇ ವೇಳೆ ಪೇಜಾವರ ಮಠದ ಮಾಜಿ ಪೀಠಾಧಿಪತಿ, ಪದ್ಮವಿಭೂಷಣ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವದ ಲಾಂಛನವನ್ನು ಅನಾವರಣಗೊಳಿಸಿದರು. ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಭಕ್ತಿ, ಪಾಂಡಿತ್ಯ ಹಾಗೂ ಸಮಾಜ ಸೇವೆಯ ಜೀವನ ದೇಶದ ಜನರಿಗೆ ನಿರಂತರ ಪ್ರೇರಣೆ ನೀಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ‘ಆದರ್ಶ–ಪರಂಪರೆ ಮುಂದುವರಿಯಲಿ’ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗುವ ವಿವಿಧ ಕಾರ್ಯಕ್ರಮಗಳು ಮತ್ತು ಉಪಕ್ರಮಗಳು ಅವರ ಆದರ್ಶಗಳು ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಹಕಾರಿಯಾಗಲಿವೆ ಎಂದು ಪ್ರಧಾನಿ ಹೇಳಿದರು. ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಮೋದಿ, ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಇತರ ಗಣ್ಯರನ್ನು ಭೇಟಿಯಾಗಲು ಸಂತೋಷವಾಗಿದೆ ಎಂದು…

ಇವಿ, ಹಸಿರು ಉಕ್ಕು: ಭಾರತ–EU ಸಹಕಾರಕ್ಕೆ ಕುಮಾರಸ್ವಾಮಿ ಒತ್ತು

ನವದೆಹಲಿ: ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಮಂಗಳವಾರ ಯುರೋಪಿಯನ್ ಪಾರ್ಲಿಮೆಂಟ್‌ನ ಕೈಗಾರಿಕೆ, ಸಂಶೋಧನೆ ಮತ್ತು ಇಂಧನ ಸಮಿತಿ (ITRE) ನಿಯೋಗದೊಂದಿಗೆ ಮಾತುಕತೆ ನಡೆಸಿದರು. ವಿದ್ಯುತ್ ವಾಹನಗಳ (EV) ಚಲನಶೀಲತೆ, ಬ್ಯಾಟರಿ ತಂತ್ರಜ್ಞಾನ, ಶುದ್ಧ ಇಂಧನ ಹಾಗೂ ಕೈಗಾರಿಕಾ ಡಿಕಾರ್ಬೊನೈಸೇಶನ್ ಕ್ಷೇತ್ರಗಳಲ್ಲಿ ಭಾರತ–ಯುರೋಪಿಯನ್ ಒಕ್ಕೂಟ (EU) ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಜನವರಿಯಲ್ಲಿ ನಡೆದ 16ನೇ ಭಾರತ–EU ಶೃಂಗಸಭೆಯ ಬಳಿಕ ಈ ಮಾತುಕತೆ ನಡೆದಿದ್ದು, ಭಾರತ–EU ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ಪೂರ್ಣಗೊಂಡಿರುವುದು ಮತ್ತು ಜಂಟಿ ಸಮಗ್ರ ಕಾರ್ಯತಂತ್ರದ ಕಾರ್ಯಸೂಚಿ ಅಂಗೀಕರಿಸಿರುವುದನ್ನು ಸಚಿವರು ಉಲ್ಲೇಖಿಸಿದರು. ಭಾರೀ ಕೈಗಾರಿಕೆಗಳ ಸಚಿವಾಲಯದ ಪ್ರಮುಖ ಯೋಜನೆಗಳಾದ PM E-DRIVE, ಆಟೋಮೊಬೈಲ್‌ಗಳು ಮತ್ತು ಆಟೋ ಘಟಕಗಳ ಉತ್ಪಾದನೆಗೆ ಸಂಬಂಧಿಸಿದ PLI ಯೋಜನೆಗಳು ಹಾಗೂ ಅಡ್ವಾನ್ಸ್ಡ್ ಕೆಮಿಸ್ಟ್ರಿ ಸೆಲ್‌ಗಳಂತಹ ಉಪಕ್ರಮಗಳ ಕುರಿತು ಕುಮಾರಸ್ವಾಮಿ ಮಾಹಿತಿ…

ತಮಿಳುನಾಡಿನಲ್ಲಿ ‘ಕಾಮರಾಜರ್ ಉಪಾಹಾರ ಯೋಜನೆ’ ವಿಸ್ತರಣೆ: 15.30 ಲಕ್ಷ ಮಕ್ಕಳಿಗೆ ಲಾಭ

ಚೆನ್ನೈ, ಸೆ.22: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಸರ್ಕಾರವು ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ‘ಮುಖ್ಯಮಂತ್ರಿಗಳ ಉಪಾಹಾರ ಯೋಜನೆ’ಯನ್ನು ರದ್ದುಗೊಳಿಸುವ ಬದಲು ಮತ್ತಷ್ಟು ವಿಸ್ತರಿಸಿದೆ. ಇದೇ ವೇಳೆ ಯೋಜನೆಗೆ ಮಾಜಿ ಮುಖ್ಯಮಂತ್ರಿ ಕೆ. ಕಾಮರಾಜ್ ಅವರ ಹೆಸರಿಟ್ಟು ‘ಪೆರುಂತಲೈವರ್ ಕಾಮರಾಜರ್ ಉಪಾಹಾರ ಯೋಜನೆ’ ಎಂದು ಮರುನಾಮಕರಣ ಮಾಡಲಾಗಿದೆ. ಈವರೆಗೆ 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಸೀಮಿತವಾಗಿದ್ದ ಯೋಜನೆಯನ್ನು ಇದೀಗ 6ರಿಂದ 8ನೇ ತರಗತಿಯ ಮಕ್ಕಳಿಗೂ ವಿಸ್ತರಿಸಲಾಗಿದೆ. ರಾಜ್ಯದ 15,454 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಸುಮಾರು 15.30 ಲಕ್ಷ ವಿದ್ಯಾರ್ಥಿಗಳಿಗೆ ಪ್ರತಿದಿನ ಉಚಿತ ಹಾಗೂ ಪೌಷ್ಟಿಕ ಉಪಾಹಾರ ದೊರೆಯಲಿದೆ. ಯೋಜನೆ ವಿಸ್ತರಣೆಗೆ ಸರ್ಕಾರ ₹217.63 ಕೋಟಿ ಹೆಚ್ಚುವರಿ ಅನುದಾನ ನೀಡಿದ್ದು, ಇದರೊಂದಿಗೆ ಯೋಜನೆಯ ವಾರ್ಷಿಕ ವೆಚ್ಚ ₹724 ಕೋಟಿಗೆ ಏರಿಕೆಯಾಗಿದೆ. ಹೆಸರಿನ ಬದಲಾವಣೆಗೆ ರಾಜಕೀಯ ಚರ್ಚೆ ಯೋಜನೆಗೆ ಕಾಮರಾಜ್ ಹೆಸರು ನೀಡಿರುವುದು ಆಡಳಿತಾರೂಢ ಟಿವಿಕೆ…