ಕೊರೋನಾ ವಾರ್ಡಿನಲ್ಲಿ ಸೋಂಕಿತೆ ಮೇಲೆ ರೇಪ್; ಯುವತಿ ಸಾವು

ಕೊರೋನಾ ಶಂಕಿತ ಯುವತಿ ಮೇಲೆ ಡಾಕ್ಟರ್ ರೇಪ್.. ಪ್ರತ್ಯೇಕ ವಾರ್ಡ್’ನಲ್ಲಿ ಖಾಸಗಿಯಾಗಿ ಕಳೆಯಲು ಒತ್ತಡ ಹೇರಿ ದುರುಳರು ದೌರ್ಜನ್ಯ ನಡೆಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಆಕೆ ಮೃತಪಟ್ಟಿದ್ದಾಳೆ..

ಪಾಟ್ನಾ : ಜಗತ್ತು ಕೊರೋನಾ ಹಾವಳಿಯಿಂದ ನಲುಗಿದೆ. ಇಂತಹಾ ಸಂದರ್ಭದಲ್ಲಿ ಕೀಚಕರ ಹಾವಳಿ ಕೂಡಾ ಸವಾಲಾಗಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ. ಕೋವಿಡ್-19 ವೈರಾಣು ಸೋಂಕಿನ ಶಂಕೆ ಹಿನ್ನೆಲೆಯಲ್ಲಿ ಗಯಾದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆ ಮೇಲೆ ಡಾಕ್ಟರ್ ಎಂದು ಹೇಳಿಕೊಂಡು ಅತ್ಯಾಚಾರ ಮಾಡಲಾಗಿದೆ.

25ರ ಹರೆಯದ ಮಹಿಳೆ ಪಂಜಾಬಿನ ಲೂಧಿಯಾನದಿಂದ ತನ್ನ ಪತಿ ಜೊತೆ ಗಯಾಕ್ಕೆ ಆಗಮಿಸಿದ್ದ ವಲಸೆ ಕಾರ್ಮಿಕ ಮಹಿಳೆಯನ್ನು ಕೊರೋನಾ ಶಂಕಿತಳೆಂಬ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಿಸಿ, ಪ್ರತ್ಯೇಕ ವಾರ್ಡಿನಲ್ಲಿರಿಲಾಗಿತ್ತು. ಸುಮಾರು ಎರಡು ತಿಂಗಳ ಹಿಂದೆ ಗರ್ಭಪಾತವಾಗಿದ್ದ ಕಾರಣದಿಂದಾಗಿ ಈಕೆ ಆರೋಗ್ಯದಲ್ಲೂ ಬಳಲಿದ್ದಳು.

ಇದನ್ನೂ ಓದಿ.. ಕೊರೋನಾ ಸೋಂಕು.. ವಾಟ್ಸಪ್ ಶಾಕ್.. ಇನ್ನು ಮೆಸೇಜ್ ಫಾರ್ವಾರ್ಡ್’ಗೆ ನಿರ್ಬಂಧ

ಆಸ್ಪತ್ರೆಯಿಂದ ಡಿಸ್ಚಾರ್ಜ್ ನಂತರ ನಿರಂತರ ರಕ್ತಸ್ರಾವವಾಗುತ್ತಿತ್ತಲ್ಲದೆ, ಖಿನ್ನಳಾಗಿದ್ದ ಆಕೆಯನ್ನು ಮನೆಯವರು ಒತ್ತಾಯದಿಂದ ಕೇಳಿದಾಗ ಆಸ್ಪತ್ರೆಯಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಅಳಲು ತೋಡಿಕೊಂಡಿದ್ದಾಳೆ. ಎರಡು ರಾತ್ರಿ ತನ್ನ ಮೇಲೆ ದೌರ್ಜನ್ಯ ನಡೆದಿದೆ ಎಂಬುದನ್ನು ಆಕೆ ಬಹಿರಂಗ ಪಡಿಸಿದ್ದಾಳೆ. ರಕ್ತಸ್ರಾವದಿಂದ ತೀವ್ರ ಬಳಲಿದ ಆಕೆ ಕೊನೆಯುಸಿರೆಳೆದಿದ್ದಾಳೆ.

ಈ ಬಗ್ಗೆ ದೂರು ದಾಖಲಿಸಿ ತನಿಖೆ ಕೈಗೊಂಡಿರುವ ಪೊಲೀಸರು ಪಾತ್ರೆಯಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ.. ಕೊರೋನಾ ಸಾವಿನ ಸರಣಿ; ಮತ್ತೊಬ್ಬರ ಬಲಿ.. ರಾಜ್ಯದಲ್ಲಿ ಸಾವಿನ ಸಂಖ್ಯೆ 6

Related posts