ದೆಹಲಿ: ಭಾರತದಲ್ಲೂ ಕೊರೋನಾ ರುದ್ರ ನರ್ತನ ಮುಂದುವರಿಯುತ್ತಲೇ ಇದೆ. ಮತ್ತಷ್ಟು ಕೊರೋನಾ ಸೋಂಕು ಪ್ರಕರಣಗಳು ದೃಢಪಡುತ್ತಲೇ ಇದ್ದು ಇದೀಗ ಆ ಸಂಖ್ಯೆ 250 ದಾಟಿದೆ.
ತೆಲಂಗಾಣ, ಮಧ್ಯಪ್ರದೇಶ ಹಾಗೂ ಹಿಮಾಚಲ ಪ್ರದೇಶದಲ್ಲಿ ಮತ್ತೆ ತಲಾ ಎರಡು ಕೊರೋನಾ ಸೋಂಕು ಪ್ರಕರಣ ದೃಢಪಟ್ಟಿದೆ. ತೆಲಂಗಾಣಕ್ಕೆ ಆಗಮಿಸಿದ್ದ ಇಬ್ಬರು ಇಂಡೊನೇಷ್ಯಾ ಪ್ರಜೆಗಳಲ್ಲಿ ಈ ಸೋಂಕು ದೃಢಪಟ್ಟಿದೆ.
ತೆಲಂಗಾಣದಲ್ಲಿ ಈ ವರೆಗೂ ೧೯ ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ ಈ ಸಂಖ್ಯೆ 50 ದಾಟಿದೆ. ಇದೀಗ ಭಾರತದ್ಲಲೂ ಕೊರೋನಾ ಪೀಡಿತರ ಸಂಖ್ಯೆ 250 ಕ್ಕೆ ದಾಟಿರುವ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ಮತ್ತಷ್ಟು ಎಚ್ಚರ ವಹಿಸಲಾಗಿದೆ.
ಈ ನಡುವೆ ಕೊರೋನಾ ಸೋಂಕು ನಿಯಂತ್ರಿಸುವ ಸಂಬಂಧ ಮುನ್ನೆಚ್ಚರಿಕಾ ಕ್ರಮವಾಗಿ ರೈಲ್ವೆ ಇಲಾಖೆ ಸುಮಾರು 245 ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಿದೆ.