ಅಡಿಕೆ ಬೆಲೆ ಭಾರೀ ಏರಿಕೆ; ಶಿವಮೊಗ್ಗದಲ್ಲಿ 94 ಸಾವಿರ ಗಡಿ ದಾಟಿದ ಸರಕು ಅಡಿಕೆ

ಶಿವಮೊಗ್ಗ: ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಬುಧವಾರ ಅಡಿಕೆ ಧಾರಣೆಯಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಬೆಳೆಗಾರರಲ್ಲಿ ಸಂತಸ ಮೂಡಿಸಿದೆ. ವಿಶೇಷವಾಗಿ ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆಯ ಗರಿಷ್ಠ ಬೆಲೆ 94 ಸಾವಿರ ರೂ. ಗಡಿ ದಾಟಿರುವುದು ವ್ಯಾಪಾರ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆಯ ಗರಿಷ್ಠ ದರ 94,000 ರೂ. ದಾಖಲಾಗಿದ್ದು, ಮಾದರಿ ಬೆಲೆ 83,000 ರೂ. ಆಗಿದೆ. ಬೆಟ್ಟೆ ಅಡಿಕೆ 65,300 ರೂ., ರಾಶಿ ಅಡಿಕೆ 54,309 ರೂ. ಹಾಗೂ ಗೊರಬಲು 43,111 ರೂ. ದರ ಕಂಡಿದೆ. ಇವುಗಳ ಮಾದರಿ ಬೆಲೆಗಳು ಕ್ರಮವಾಗಿ 63,600 ರೂ., 52,500 ರೂ. ಮತ್ತು 39,300 ರೂ. ಆಗಿವೆ. ಇನ್ನೊಂದೆಡೆ, ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲೂ ಉತ್ತಮ ವಹಿವಾಟು ಕಂಡುಬಂದಿದೆ. ಇಲ್ಲಿ ರಾಶಿ ಅಡಿಕೆಯ ಗರಿಷ್ಠ ದರ 53,099 ರೂ. ಆಗಿದ್ದು, ಮಾದರಿ ಬೆಲೆ 48,599 ರೂ. ದಾಖಲಾಗಿದೆ.…

ಭಾರತ್ ಇನ್ನೋವೇಟ್ಸ್ 2026ಕ್ಕೂ ಮುನ್ನ ಬೆಂಗಳೂರಿನಲ್ಲಿ ಹೂಡಿಕೆದಾರರ ಪ್ರದರ್ಶನ

ಬೆಂಗಳೂರು: ಫ್ರಾನ್ಸ್‌ನ ನೈಸ್ ನಗರದಲ್ಲಿ ಜೂನ್ 14ರಿಂದ 16ರವರೆಗೆ ನಡೆಯಲಿರುವ “ಭಾರತ್ ಇನ್ನೋವೇಟ್ಸ್ 2026” ಕಾರ್ಯಕ್ರಮದ ಪೂರ್ವಭಾವಿಯಾಗಿ ಶಿಕ್ಷಣ ಸಚಿವಾಲಯವು ಇಂಡಿಯನ್ ವೆಂಚರ್ ಅಂಡ್ ಆಲ್ಟರ್ನೇಟ್ ಕ್ಯಾಪಿಟಲ್ ಅಸೋಸಿಯೇಷನ್ (IVCA) ಸಹಯೋಗದಲ್ಲಿ ಬೆಂಗಳೂರಿನಲ್ಲಿ “ಭಾರತ್ ಇನ್ನೋವೇಟ್ಸ್ ಹೂಡಿಕೆದಾರರ ಪ್ರದರ್ಶನ” ಆಯೋಜಿಸಿತು. ಈ ಪ್ರದರ್ಶನದಲ್ಲಿ ಆಯ್ಕೆಯಾದ 24 ಭಾರತೀಯ ಡೀಪ್-ಟೆಕ್ ಸ್ಟಾರ್ಟ್‌ಅಪ್‌ಗಳು ಹಾಗೂ ಭಾರತ ಮತ್ತು ವಿದೇಶಗಳ 90ಕ್ಕೂ ಹೆಚ್ಚು ಪ್ರಮುಖ ಹೂಡಿಕೆದಾರರು ಭಾಗವಹಿಸಿದ್ದರು. ಭಾಗವಹಿಸಿದ ಹೂಡಿಕೆ ಸಂಸ್ಥೆಗಳ ಒಟ್ಟು ಆಸ್ತಿ ಮೌಲ್ಯವು 85 ಬಿಲಿಯನ್ ಅಮೆರಿಕನ್ ಡಾಲರ್‌ಗಿಂತ ಅಧಿಕವಾಗಿದೆ ಎಂದು ತಿಳಿಸಲಾಗಿದೆ. ಪೀಕ್ XV ಪಾರ್ಟ್‌ನರ್ಸ್, ಆಕ್ಸೆಲ್, ಬೆಸ್ಸೆಮರ್ ವೆಂಚರ್ ಪಾರ್ಟ್‌ನರ್ಸ್, ಅವನಾ ಕ್ಯಾಪಿಟಲ್, ಬ್ಲೂಮ್ ವೆಂಚರ್ಸ್, ಕಲಾರಿ ಕ್ಯಾಪಿಟಲ್, ಚಿರಾಟೇ ವೆಂಚರ್ಸ್, ಅವೆಂಡಸ್ ಕ್ಯಾಪಿಟಲ್ ಮತ್ತು ಓಮ್ನಿವೋರ್ ಸೇರಿದಂತೆ ಪ್ರಮುಖ ಹೂಡಿಕೆ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವು. ಉನ್ನತ ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿ ಸೌಮ್ಯ ಗುಪ್ತಾ…