KSRTCಗೆ ಗೋವಾ ನಾಯಕತ್ವ ‘Best Employer Brand’ ಪ್ರಶಸ್ತಿ

ಪಣಜಿ: ಉತ್ಕೃಷ್ಟ ಸೇವೆಗೆ ಹೆಸರಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಇದೀಗ ನೆರೆ ರಾಜ್ಯಗಳಲ್ಲೂ ಕಮಾಲ್ ಪ್ರದರ್ಶಿಸುತ್ತಿದೆ.  ಸಾಲು ಸಾಲು ಪ್ರಶಸ್ತಿಗಳನ್ನು ಪಡೆಯುತ್ತಿರುವ KSRTC ಇದೀಗ ಪ್ರತಿಷ್ಠಿತ ಗೋವಾ ನಾಯಕತ್ವ Best Employer Brand ಪ್ರಶಸ್ತಿ ಪಡೆದಿದೆ.

ಪ್ರತಿಷ್ಠಿತ ಗೋವಾ ನಾಯಕತ್ವ Best Employer Brand ಪ್ರಶಸ್ತಿ ವಿಶ್ವ ಉತ್ಪಾದನಾ ಕಾಂಗ್ರೆಸ್ ಪ್ರತಿಷ್ಠಾಪಿಸಿರುವ ಗೋವಾ ಲೀಡರ್ ಶಿಪ್ ಪ್ರಶಸ್ತಿ-2023ರಡಿ, KSRTC ನಿಗಮಕ್ಕೆ ಮಾನವ ಸಂಪನ್ಮೂಲ ವರ್ಗದಲ್ಲಿ ವಿನೂತನ ಉಪಕ್ರಮಗಾಗಿ ಪ್ರಶಸ್ತಿಯು ಲಭಿಸಿದೆ.

ಗೋವಾದ ತಾಜ್ ವಿವಾಂತದಲ್ಲಿ ವಿಶ್ವ ಉತ್ಪಾದನಾ ಕಾಂಗ್ರೆಸ್ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೀನಾ ಬೇರಟೋ ಶಂಕರ್ (Personal & Business Brand Strategist, ಸಂಸ್ಥಾಪಕರು Cheree Tree Concepts) ಹಾಗೂ  ರಫೀನ ಶೇಕ್ (ಸಿಯಾ), (ಸಂಸ್ಥಾಪಕರು ಹಾಗೂ ನಿರ್ದೇಶಕರು ಗೌಮಾನಿಯಾ ಎಲ್.ಎಲ್.ಪಿ) ಮಾನವ ಸಂಪನ್ಮೂಲ ವರ್ಗದಲ್ಲಿ ವಿನೂತನ ಉಪಕ್ರಮಕ್ಕಾಗಿ KSRTCಗೆ ಪ್ರಶಸ್ತಿ‌ ಪ್ರದಾನ‌ ಮಾಡಿದರು.

KSRTC  ಅಧಿಕಾರಿಗಳಾದ ಶಿವಾನಂದ ಕವಳಿಕಾಯಿ (ಉಗ್ರಾಣ ಮತ್ತು ಖರೀದಿ ನಿಯಂತ್ರಣಾಧಿಕಾರಿಗಳು ಹಾಗೂ ಸಿದೇಶ್ವರ ಹೆಬ್ಬಾಳ್, ವಿಭಾಗೀಯ ನಿಯಂತ್ರಣಾಧಿಕಾರಿ ಚಿತ್ರದುರ್ಗ) ಅವರು ನಿಗಮದ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.

Related posts