ಕೋರ್ಟ್ ವಿಚಾರಣೆ, ಭ್ರಷ್ಟಾಚಾರ ಮತ್ತು ವಕೀಲರ ಸಂಘರ್ಷದ ಸುತ್ತ ‘ಸತ್ಯವಾನ್ ಸಾವಿತ್ರಿ’

ಚೆನ್ನೈ: ನಟಿ ಕೀರ್ತಿ ಸುರೇಶ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಕೋರ್ಟ್‌ರೂಂ ಡ್ರಾಮಾ ‘ಸತ್ಯವಾನ್ ಸಾವಿತ್ರಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪ್ರವೀಣ್ ಎಸ್. ವಿಜಯ್ ನಿರ್ದೇಶನದ ಈ ಚಿತ್ರವು 2026ರ ನವೆಂಬರ್ 20ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಮೊದಲು ಜುಲೈ 24ರಂದು ಬಿಡುಗಡೆಯಾಗಬೇಕಿದ್ದ ಚಿತ್ರವನ್ನು ಅನಿವಾರ್ಯ ಕಾರಣಗಳಿಂದ ನವೆಂಬರ್ 20ಕ್ಕೆ ಮುಂದೂಡಲಾಗಿದೆ. ನ್ಯಾಯಾಲಯದ ವಿಚಾರಣೆಗಳು, ಭ್ರಷ್ಟಾಚಾರ ಮತ್ತು ವಕೀಲರ ನಡುವಿನ ಸಂಘರ್ಷವನ್ನು ಕೇಂದ್ರವಾಗಿಟ್ಟುಕೊಂಡು ಕಥೆ ಹೆಣೆಯಲಾಗಿದೆ.

ಚಿತ್ರದಲ್ಲಿ ಕೀರ್ತಿ ಸುರೇಶ್ ಯುವ ವಕೀಲೆಯ ಪಾತ್ರದಲ್ಲಿ ಕಾಣಿಸಿಕೊಂಡರೆ, ನಿರ್ದೇಶಕ ಮೈಸ್ಕಿನ್ ಹಿರಿಯ ವಕೀಲನ ಪಾತ್ರ ನಿರ್ವಹಿಸಿದ್ದಾರೆ. ಟೀಸರ್‌ನಲ್ಲಿ ನ್ಯಾಯಾಲಯದ ಸನ್ನಿವೇಶಗಳು ಮತ್ತು ವಕೀಲರ ನಡುವಿನ ವಾದ-ಪ್ರತಿವಾದಗಳು ಕಥೆಯ ಬಗ್ಗೆ ಕುತೂಹಲ ಮೂಡಿಸಿವೆ.

ನಟ ಬಾಲಸರವಣನ್ ಮತ್ತು ಕೀರ್ತಿ ಸುರೇಶ್ ನಡುವಿನ ಹಾಸ್ಯಮಯ ಸಂಭಾಷಣೆಗಳು ಟೀಸರ್‌ನ ಪ್ರಮುಖ ಆಕರ್ಷಣೆಯಾಗಿವೆ. ಹಾಸ್ಯ ಮತ್ತು ಗಂಭೀರ ನ್ಯಾಯಾಂಗ ಸಂಘರ್ಷವನ್ನು ಒಟ್ಟಿಗೆ ಕಟ್ಟಿಕೊಡುವ ಪ್ರಯತ್ನ ಚಿತ್ರದಲ್ಲಿದೆ ಎಂಬ ಸುಳಿವನ್ನು ಟೀಸರ್ ನೀಡಿದೆ.

ಝೀ ಸ್ಟುಡಿಯೋಸ್ ಮತ್ತು ಡ್ರಮ್‌ಸ್ಟಿಕ್ಸ್ ಪ್ರೊಡಕ್ಷನ್ಸ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸಿವೆ. ಹಾರ್ಟ್‌ಬೀಟ್ ಚಾರುಕೇಶ್, ಮಧುಸೂಧನನ್ ಮತ್ತು ಶಿಲ್ಪಾ ಮಂಜುನಾಥ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸ್ಯಾಮ್ ಸಿ.ಎಸ್. ಸಂಗೀತ ಸಂಯೋಜಿಸಿದ್ದಾರೆ.

Related posts