ಮಂಗಳೂರಿನಲ್ಲಿ ಕಾಶಿ ಮಠಾಧೀಶರ ಚಾತುರ್ಮಾಸ ವ್ರತ

ಮಂಗಳೂರು : ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಶಾರ್ವರಿ ನಾಮ ಸಂವತ್ಸರದ ಚಾತುರ್ಮಾಸ ವ್ರತವು ಈ ಬಾರಿ ಮಂಗಳೂರು ನಗರದ ಕೊಂಚಾಡಿ ಕ್ಷೇತ್ರದಲ್ಲಿ ನೆರವೇರಲಿದೆ.

ಶ್ರೀ ಸಂಸ್ಥಾನದ ಶಾಖಾ ಮಠದಲ್ಲಿ ನೂತನವಾಗಿ ನಿರ್ಮಿಸಲಾದ ವನಿತಾ ಅಚ್ಚುತ್ ಪೈ ಸಂಭಾಗಣದ ಮೇಲಿನ ಅಂತಸ್ಥಿನಲ್ಲಿರುವ ಶ್ರೀ ಸಂಯಮಿಂದ್ರ ಸಭಾ ಭವನದಲ್ಲಿ ಈ ಕೈಂಕರ್ಯ ನೆರವೇರಲಿದ್ದು, ಚಾತುರ್ಮಾಸ ವ್ರತದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಗಿದೆ. ಕೋಟ ಕಾಶಿ ಮಠದಲ್ಲಿ ಶ್ರೀಗಳು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಕೊಂಚಾಡಿ ಕಾಶಿ ಮಠದ ವ್ಯವಸ್ಥಾಪಕ ಸಮಿತಿಯ ಶ್ರೀ ವೆಂಕಟರಮಣ ದೇವಳದ ಅಧ್ಯಕ್ಷ ಡಿ.ವಾಸುದೇವ ಕಾಮತ್, ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಕಸ್ತುರಿ ಸದಾಶಿವ ಪೈ , ಜಿ.ರತ್ನಾಕರ್ ಕಾಮತ್, ಶಶಿಧರ್ ಪೈ ಮಾರೂರ್ , ಪ್ರಶಾಂತ್ ಪೈ , ದೀಪಕ್ ಕುಡ್ವ ಮೊದಲಾದ ಗಣ್ಯರು ಈ ವೇಳೆ ಉಪಸ್ಥಿತರಿದ್ದು, ಶ್ರೀಗಳ ಲೋಕಕಲ್ಯಾಣ ಕೈಂಕರ್ಯವನ್ನು ಯಶಸ್ವಿಗೊಳಿಸುವ ಸಂಕಲ್ಪ ಮಾಡಿದರು.

Related posts