ಲಾಕ್’ಡೌನ್ ಅವಾಂತರ; ಮೋದಿಗೆ ಸೆಡ್ಡು ಹೊಡೆದ್ರಾ ನಾರಾಯಣ ಮೂರ್ತಿ

ಬೆಂಗಳೂರು: ಕೊರೋನಾ ಆರ್ಭಟಕ್ಕೆ ಇಡೀ ಜಗತ್ತೇ ತತ್ತರಿಸಿಹೋಗಿದೆ. ಕೊರೋನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಲಾಕ್’ಡೌನ್ ಘೋಷಿಸಿದ್ದಾರೆ. ಅಷ್ಟೇ ಅಲ್ಲ ಮೇ ೩ ರ ವರೆಗೆ ಎರಡನೇ ಅವಧಿಗೂ ಲಾಕ್ ಡೌನ್ ವಿಸ್ತರಿಸಲಾಗಿದೆ. ಜಾಗತಿಕ ಸಮುದಾಯವು ಮೋದಿಯವರ ಈ ನಡೆಯನ್ನು ಕೊಂಡಾಡಿದ್ದು, ಈ ನಿರ್ಧಾರದಿಂದಾಗಿಯೇ ಲಕ್ಷಾಂತರ ಜೀವ ಉಳಿದಿದೆ ಎಂದು ಹಲವು ಅಭಿಪ್ರಾಯ ಪಟ್ಟಿವೆ.

ಇನ್ನೊಂದೆಡೆ ಈ ಲಾಕ್ ಡೌನ್ ನಿಂದಾಗಿ ಜನ ಹಸಿವಿನಿಂದ ಸಾಯಬಹುದು ಎಂದು ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ವ್ಯಕ್ತಪಡಿಸಿರುವ ಅಭಿಪ್ರಾಯ ತೀವ್ರ ಚರ್ಚೆಗೆ ಗ್ರಾಸವಾಗಿದೆ.  ಸುಧೀರ್ಘ ಲಾಕ್’ಡೌನ್ ನಿಂದಾಗಿ ದೇಶದಲ್ಲಿ ಕೊರೋನಾ ವೈರಸ್ ಗಿಂತ ಹಸಿವಿಗೆ ಹೆಚ್ಚಿನ ಜನ ಸಾಯುತ್ತಾರೆ ಎಂದು ನಾರಾಯಣ ಮೂರ್ತಿ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ.. ‘ದಿ ಬೆಸ್ಟ್ ಸಿಎಂ’: ಯಡಿಯೂರಪ್ಪ ಸಾಧನೆಗೆ ಬ್ರಿಟನ್ ಸರ್ಕಾರದಿಂದ ಕಿರೀಟ

ಖಾಸಗಿ ಸುದ್ದಿ ಸಂಸ್ಥೆ ಜೊತೆ ಅಭಿಪ್ರಾಯ ಹಂಚಿಕೊಂಡಿರುವ ಅವರು ದೇಶದಲ್ಲಿ ಲಾಕ್ ಡೌನ್ ವಿಸ್ತರಣೆಯಾಗುತ್ತಾ ಹೋದರೆ ಕೊರೋನಕ್ಕಿಂತಲೂ ಹೆಚ್ಚು ಜನರು ಹಸಿವಿನಿಂದಲೇ ಸಾಯಬಹುದು. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರಯಾಗಲಿದೆ ಎಂದು ಹೇಳಿದ್ದಾರೆ.

ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾವಿನ ಪ್ರಮಾಣ ಶೇ.0.25ರಿಂದ 0.5 ರಷ್ಟು ಮಾತ್ರ. ಸೋಂಕು ಪ್ರಕರಣಗಳೂ ಬಹಳಷ್ಟು ಕಡಿಮೆ ಇದೆ. ಸುಮಾರು ಒಂದು ಸಾವಿರ ಜನ ಸಾವನ್ನಪ್ಪಿದ್ದರೂ ಈ ಸಾವಿನ ಪ್ರಮಾಣ ಆತಂಕಾರಿಯಾಗಿಲ್ಲ ಎಂದವರು ವಿಶ್ಲೇಷಿಸಿದ್ದಾರೆ. ದೇಶದಲ್ಲಿ 1.9 ಕೋಟಿಯಷ್ಟು ಕಾರ್ಮಿಕರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಮಂದಿ ಲಾಕ್‌ಡೌನ್’ನಿಂದಾಗಿ ಸಂಕಷ್ಟದಲ್ಲಿದ್ದಾರೆ. ಈ ಲಾಕ್’ಡೌನ್ ಮತ್ತಷ್ಟು ದಿನ ಮುಂದುವರಿದರೆ ಒಪ್ಪೊತ್ತಿನ ಊಟಕ್ಕೂ ಜನ ಪರದಾಡಬೇಕಾಗುತ್ತದೆ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.

ಇದನ್ನೂ ಓದಿ.. ಆಗಸ್ಟ್-ಸೆಪ್ಟೆಂಬರ್’ನಲ್ಲಿ ಕಾಲೇಜ್ ಆರಂಭ ; ವೇಳಾಪಟ್ಟಿ ಹೀಗಿದೆ

Related posts