ರಾಜ್ಯದಲ್ಲಿ ಒಂದೇ ದಿನ 30 ಕೊರೋನಾ ಕೇಸ್; ಸೋಂಕಿತರ ಸಂಖ್ಯೆ 565 ಕ್ಕೆ ಏರಿಕೆ

ಬೆಂಗಳೂರು: ಕರುನಾಡಲ್ಲೂ ಕೊರೋನಾ ತಲ್ಲಣದ ತರಂಗ ಎಬ್ಬಿಸಿದೆ.. ರಾಜ್ಯದ ವಿವಿಧ ಜಿಲ್ಲೆಗಳಿಂದ ಕರುಣಾಜನಕ ಸುದ್ದಿ ಕೇಳಿಬರುತ್ತಿದೆ.

ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಾಣು ಹಾವಳಿ ಮಿತಿ ಮೀರುತ್ತಿದ್ದು ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ. ಗುರುವಾರ   ಒಂದೇ ದಿನ ರಾಜ್ಯದಲ್ಲಿ 30 ಮಂದಿಯಲ್ಲಿ ಕೋವಿಡ್-19 ವೈರಾಣು ಸೋಂಕಿರುವುದು ದೃಢಪಟ್ಟಿದೆ.

ರಾಜ್ಯ ಸರ್ಕಾರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಹೆಲ್ತ್ ಬುಲೆಟಿನ್ ಆತಂಕಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಸಂಜೆಯವರೆಗಿನ ಆಂಕಿಅಂಶಗಳನ್ನು ಪಟ್ಟಿ ಮಾಡಿರುವ ಹೆಲ್ತ್ ಬುಲೆಟಿನ್, ಬೆಳಗಾವಿಯಲ್ಲಿ 14, ಹಾಗೂ  ಬೆಂಗಳೂರು ನಗರದಲ್ಲಿ 10 ಪ್ರಕರಣಗಳು ಪತ್ತೆಯಾಗಿರುವುದನ್ನು ಬಹಿರಂಗಪಡಿಸಿದೆ.

  • ಬೆಳಗಾವಿಯಲ್ಲಿ – 14
  • ಬೆಂಗಳೂರು ನಗರದಲ್ಲಿ – 10
  • ದಕ್ಷಿಣ ಕನ್ನಡದಲ್ಲಿ – 1
  • ತುಮಕೂರಿನಲ್ಲಿ – 1
  • ದಾವಣಗೆರೆಯಲ್ಲಿ – 1
  • ಕಲಬುರ್ಗಿಯಲ್ಲಿ – 1
  • ವಿಜಯಪುರದಲ್ಲಿ – 1

ಇದೀಗ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 565 ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ 21 ಜನರು ಮೃತಪಟ್ಟಿದ್ದು, 229 ಮಂದಿ ಗುಣಮುಖರಾಗಿದ್ದಾರೆ.

Related posts