72ನೇ ಮಿಸ್‌ ಯೂನಿವರ್ಸ್‌ ಆಗಿ ನಿಕರಾಗುವಾದ ‘ಶೆಯ್ನಿಸ್ ಪಲಾಸಿಯೋಸ್’

ಎಲ್‌. ಸಾಲ್ವಡಾರ್‌ನಲ್ಲಿ ನಡೆದ 72ನೇ ಮಿಸ್‌ ಯೂನಿವರ್ಸ್‌ ಸ್ಪರ್ಧೆಯಲ್ಲಿ ನಿಕರಾಗುವಾದ ಸುಂದರಿ ಶೆಯ್ನಿಸ್ ಪಲಾಸಿಯೋಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

90 ಕ್ಕೂ ಹೆಚ್ಚು ದೇಶಗಳಿಂದ ಸ್ಪರ್ಧಿಗಳ ಪೈಕಿ  ವಿಶ್ವ ಸುಂದರಿ ಪಟ್ಟವನ್ನು ಶೆಯ್ನಿಸ್ ಪಲಾಸಿಯೋಸ್ ಪಡೆದುಕೊಂಡಿದ್ದಾರೆ‌  ಭಾರತೀಯ ಕಾಲಮಾನ ಭಾನುವಾರ ಬೆಳಿಗ್ಗೆ 6:30 ಕ್ಕೆ ಮಿಸ್ ಯೂನಿವರ್ಸ್ ವಿಜೇತರ ಹೆಸರನ್ನು ಘೋಷಿಸಲಾಯಿತು.

23 ವರ್ಷದ ಶೆಯ್ನಿಸ್ ಅಲೋಂಡ್ರಾ ಪಲಾಸಿಯೊಸ್ ಕಾರ್ನೆಜೊ ಅವರು ಕಳೆದ ವರ್ಷದ ವಿಜೇತ ಆರ್’ಬೊನಿ ಗೇಬ್ರಿಯಲ್ ಅವರಿಂದ 2023 ರ ವಿಶ್ವ ಸುಂದರಿ ಕಿರೀಟವನ್ನು ಹಸ್ತಾಂತರಿಸಿದರು.

ಇದೇ ವೇಳೆ, ಥಾಯ್ಲೆಂಡ್‌ನ ಆಂಟೋನಿಯಾ ಪೋರ್ಸಿಲ್ಡ್ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡರು. ಆಸ್ಟ್ರೇಲಿಯಾದ ಮೊರಾಯಾ ವಿಲ್ಸನ್ ಎರಡನೇ ರನ್ನರ್ ಅಪ್ ಸ್ಥಾನಕ್ಕೆ ಗುರುತಾದರು. ಭಾರತದ ಸುಂದರಿ 23 ವರ್ಷದ ಶ್ವೇತಾ ಶಾರ್ದಾ ಅವರು ಸೆಮಿಫೈನಲ್‌‌ವರಗೆ ತಲುಪಿದ್ದರು. ಅಗ್ರ 20 ಫೈನಲಿಸ್ಟ್‌ಗಳಲ್ಲಿ ಅವರು ಸ್ಥಾನ ಪಡೆಕೊಂಡಿದ್ದಾರೆ.

Related posts