ಕಾಂಗ್ರೆಸ್ ವಿರುದ್ಧ ಜೆಡಿಎಸ್ ವಾಗ್ದಾಳಿ: ‘ಅಭಿವೃದ್ಧಿ ಅನಾಥ, ಒಳಜಗಳಕ್ಕೆ ಆದ್ಯತೆ’

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಒಳಜಗಳ ಮತ್ತು ಬ್ಲ್ಯಾಕ್‌ಮೇಲ್ ರಾಜಕಾರಣ ನಡೆಯುತ್ತಿದೆ ಎಂದು ಆರೋಪಿಸಿರುವ ಜೆಡಿಎಸ್, ವಿಧಾನಸೌಧದಲ್ಲಿ ಜನಸೇವೆ ಮಾಡುವ ಬದಲು ಪಕ್ಷದ ಆಂತರಿಕ ಕಿತ್ತಾಟಕ್ಕೆ ಕಾಂಗ್ರೆಸ್ ನಾಯಕರು ಆದ್ಯತೆ ನೀಡುತ್ತಿದ್ದಾರೆ ಎಂದು ಟೀಕಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗಳನ್ನು ಉಲ್ಲೇಖಿಸಿ, ಕಾಂಗ್ರೆಸ್‌ನ ಆಂತರಿಕ ಒಳಸಂಚು ಮತ್ತು ಬ್ಲ್ಯಾಕ್‌ಮೇಲ್ ತಂತ್ರಗಳ ಬಗ್ಗೆ ಅವರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪಿಸಿದೆ.

ಕಾಂಗ್ರೆಸ್‌ನ ಅಧಿಕಾರದ ಒಳಜಗಳದಿಂದ ರಾಜ್ಯದ ಅಭಿವೃದ್ಧಿ ಕಡೆಗಣನೆಗೆ ಒಳಗಾಗಿದೆ ಎಂದು ಜೆಡಿಎಸ್ ದೂರಿದೆ. ರೈತರಿಗೆ ನೆರವು ನೀಡಲು ಹಣವಿಲ್ಲ ಎನ್ನುವ ಸರ್ಕಾರದಲ್ಲಿ, ಸ್ವಪಕ್ಷದವರ ವಿರುದ್ಧ ಸಂಚು ರೂಪಿಸಲು ಮತ್ತು ಅವರನ್ನು ಗುರಿಯಾಗಿಸಲು ಮಾತ್ರ ಸಮಯ ಹಾಗೂ ತಂತ್ರಗಾರಿಕೆ ಇದೆ ಎಂದು ಟೀಕಿಸಿದೆ.

ಕಾಂಗ್ರೆಸ್‌ನ ಆಂತರಿಕ ಸಂಘರ್ಷದಿಂದ ಜನರ ಸಮಸ್ಯೆಗಳು ಹಿಂಬದಿಗೆ ಸರಿದಿವೆ ಎಂದು ಆರೋಪಿಸಿರುವ ಜೆಡಿಎಸ್, ರಾಜ್ಯದ ಅಭಿವೃದ್ಧಿ ಮತ್ತು ರೈತರ ಹಿತಾಸಕ್ತಿಗಳಿಗಿಂತ ಪಕ್ಷದೊಳಗಿನ ರಾಜಕೀಯಕ್ಕೆ ಕಾಂಗ್ರೆಸ್ ಆದ್ಯತೆ ನೀಡುತ್ತಿದೆ ಎಂದು ತನ್ನ ಪೋಸ್ಟ್‌ನಲ್ಲಿ ಟೀಕಿಸಿದೆ.

ವಿಧಾನಸೌಧದಲ್ಲಿ ಜನಸೇವೆ ಮಾಡುವ ಬದಲು ‘ಡರ್ಟಿ ಪಿಕ್ಚರ್’?

ಕಾಂಗ್ರೆಸ್ಸಿಗರು ವಿಧಾನಸೌಧದಲ್ಲಿ ಜನಸೇವೆ ಮಾಡುವ ಬದಲು ‘ಡರ್ಟಿ ಪಿಕ್ಚರ್’ ತೆಗೆಯುವ ಸ್ಟುಡಿಯೋ ತೆರೆದಂತಿದೆ! ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಯತೀಂದ್ರ ಅವರೇ ತಮ್ಮದೇ ಪಕ್ಷದವರ ಒಳಸಂಚು ಮತ್ತು ಬ್ಲ್ಯಾಕ್‌ಮೇಲ್ ತಂತ್ರಗಳ ಬಗ್ಗೆ ಕಣ್ಣೀರು ಹಾಕುತ್ತಿದ್ದಾರೆ ಎಂದು ದೂರಿದ್ದಾರೆ ಎಂದು ಜೆಡಿಎಸ್ ಉದಾಹರಿಸಿದೆ.

ರೈತರಿಗೆ ಕೊಡಲು ಹಣವಿಲ್ಲ, ಆದರೆ ಸ್ವಪಕ್ಷೀಯರನ್ನೇ ಮುಗಿಸಲು ಕ್ಯಾಮೆರಾ ಇಡಲು, ಷಡ್ಯಂತ್ರ ರೂಪಿಸಲು ಮಾತ್ರ ಇವರ ಬಳಿ ಭರಪೂರ ಸಮಯ ಮತ್ತು ತಂತ್ರಗಾರಿಕೆ ಇದೆ! ಇದುವೇ ಅಸಲಿ “ಕೈ” ಚಳಕ ಎಂದು ಜೆಡಿಎಸ್ ವ್ಯಂಗ್ಯವಾಡಿದೆ.

Related posts