ಎಣ್ಣೆ ಪ್ರಿಯರ ಆತುರ.. ಆಲಿಂಗನ.. ಕಿಸ್.. ಪರಿಸ್ಥಿತಿ ನಿಯಂತ್ರಿಸುವಷ್ಟರಲ್ಲಿ ಪೊಲೀಸರು ಸುಸ್ತು..

ಬೆಂಗಳೂರು: ಕೊರೋನಾ ಸಂಕಟದ ಕಾರಣಕ್ಕಾಗಿ ಲಾಕ್’ಡೌನ್ ಜಾರಿಯಲ್ಲಿದೆ. ಈ ಪರಿಸ್ಥಿತಿ ನಡುವೆ ಸಿಲುಕಿದ್ದ ಜನ ಇದೀಗ ಭಾಗಶಃ ಬಂಧಮುಕ್ತರಾಗಿದ್ದಾರೆ. ಸ್ವಚ್ಚಂದ ವಿಹಾರಕ್ಕೆ ಅವಕಾಶ ಇಲ್ಲದಿದ್ದರೂ ಸ್ವಲ್ಪ ನಿರಾಳರಾಗಿದ್ದಾರೆ.

ಲಾಕ್’ಡೌನ್ ಸಡಿಲಿಕೆಯಿಂದಾಗಿ ಪಾನ ಪ್ರೀಯರು ಫುಲ್ ಖುಷ್. ಮದ್ಯದಂಗಡಿಗಳು ತೆರೆದಿದ್ದು ಬಹುತೇಕ ಕಡೆ ಬೆಳ್ಳಂಬೆಳಿಗ್ಗೆಯೇ ಮದಿರೆಗಾಗಿ ಜನ ಜಮಾಯಿಸಿದ್ದ ದೃಶ್ಯ ಎಲ್ಲೆಲ್ಲೂ ಕಂಡುಬರುತ್ತಿತ್ತು.

ಲಾಕ್’ಡೌನ್ ಜಾರಿಯಾಗಿ ಸುಮಾರು 40 ದಿನಗಳ ನಂತರ ಜನರಿಗೆ ಎಣ್ಣೆ ಸೇವನೆಯ ಅವಕಾಶ ಸಿಕ್ಕಿರೋದು. ಕಂಟೈನ್ಮೆಂಟ್ ವಲಯ ಹೊರತುಪಡಿಸಿ ಇನ್ನುಳಿದೆಡೆ ಮದ್ಯ ಮರಾಟ ಆರಂಭವಾಗಿದ್ದು, ವೈನ್ ಶಾಪ್ ಬಳಿ ಮದ್ಯ ಖರೀದಿಗಾಗಿ ಜನ ಕಿಲೋಮೀಟರ್ ಗಟ್ಟಲೆ ನಿಂತಿದ್ದ ದೃಶ್ಯ ಹಲವೆಡೆ ಕಂಡುಬಂದಿದೆ.

ಇದನ್ನೂ ಓದಿ.. ಕಾಲೇಜು ಶೈಕ್ಷಣಿಕ ಚಟುವಟಿಕೆಗಳು ಆರಂಭ? ಕರ್ತವ್ಯಕ್ಕೆ ಹಾಜರಾಗಲು ಸಿಬ್ಬಂದಿಗೆ ಆದೇಶ

ಎಣ್ಣೆ ಪ್ರೀಯರು ಹ್ಯಾಪಿ; ಪೊಲೀಸರು ಸುಸ್ತೋ ಸುಸ್ತು

ವೈ ಶಾಪ್ ಓಪನ್ ಆಗಿದ್ದೇ ತಡ, ಎಣ್ಣೆ ಪ್ರಿಯರ ಖುಷಿಗೆ ಪಾರವೇ ಇರಲಿಲ್ಲ. ಬಾಟಲಿ ಕೈಗೆ ಸಿಕ್ಕಿದ್ದೇ ತಡ ಆಲಿಂಗನ, ಕಿಸ್ ಸನ್ನಿವೇಶಕ್ಕೆ ಸಾಕ್ಷಿಯಾದವರೂ ಅನೇಕರು.

ಜನರ ಒತ್ತಡದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮದ್ಯದ ಅಂಗಡಿ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಜನ ಸುರಕ್ಷತಾ ಕಾರಣಕ್ಕಾಗಿ ಹಲವಾರು ಷರತ್ತುಗಳನ್ನೂ ಸರ್ಕಾರ ವಿಧಿಸಿದೆ. ಮದ್ಯದ ಅಂಗಡಿಗಳ ಬಳಿ ಗ್ರಾಹಕರು ತಲಾ ೬ ಅಡಿ ಅಂತರ ಕಾಯ್ದುಕೊಳ್ಳಬೇಕು, ಏಕಕಾಲದಲ್ಲಿ ಐವರು ಗ್ರಾಹಕರಷ್ಟೇ ಅಂಗಡಿ ಬಳಿ ಇರಬೇಕು. ಗ್ರಾಹಕರು ಮಾಸ್ಕ್ ಧರಿಸಲೇ ಬೇಕು. ಆದರೆ ಈ ನಿಯಮ ಬಹುತೇಕ ಕಡೆ ಪಾಲನೆಯಾದಂತಿಲ್ಲ.

ಎಂಎಂಐಎಲ್, ಎಂಆರ್’ಪಿ ಮತ್ತು ಮದ್ಯದ ಅಂಗಡಿಗಳಲ್ಲಿ ಮಾರ್ಗಸೂಚಿ ನಿಯಮದ ಪ್ರಕಾರ ಮದ್ಯ ಮಾರಾಟ ಮಾಡಬೇಕಿದ್ದು, ಅಲ್ಲೆಲ್ಲಾ ಪರಿಸ್ಥಿತಿ ನಿಯಂತ್ರಿಸುವುದು ಪೊಲೀಸರಿಗೂ ಪ್ರಯಾಸದ ಕೆಲಸದಂತಾಗಿದೆ. ಈ ಮದ್ಯ ಮಾರಾಟ ಅವಕಾಶದಿಂದಾಗಿ ಬಂದೋಬಸ್ತ್ ನಿರತ ಪೊಲೀಸರಂತೂ ಸುಸ್ತೋ ಸುಸ್ತು.

ಇದನ್ನೂ ಓದಿ.. ಆಕ್ರೋಶಕ್ಕೆ ಬೆಚ್ಚಿದ ಸರ್ಕಾರ; ಉಚಿತ ಬಸ್ ಸೇವೆ ಘೋಷಣೆ 

 

Related posts