ಕಾಲೇಜು ಶೈಕ್ಷಣಿಕ ಚಟುವಟಿಕೆಗಳು ಆರಂಭ? ಸರ್ಕಾರ ಆದೇಶದ ಅಚ್ಚರಿ

ಬೆಂಗಳೂರು: ಕೊರೋನಾ ಕಾರಣಕ್ಕಾಗಿ ಎಲ್ಲೆಲ್ಲೂ ಲಾಕ್’ಡೌನ್ ಜಾರಿಯಲ್ಲಿದೆ. ಲಾಕ್’ಡೌನ್-2.0 ಅವಧಿ ಭಾನುವಾರ ಪೂರ್ಣಗೊಂಡು ಇದೀಗ ಮೂರನೇ ಅವಧಿ ಪ್ರಾರಂಭವಾಗಿದೆ. ಈ ಅವಧಿಯಲ್ಲೂ ಶಿಕ್ಷಣ ಸಂಸ್ಥೆಗಳು ಕಾರ್ಯಾಚರಿಸುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಆದರೆ ರಾಜ್ಯದ ಕಾಲೇಜುಗಳಲ್ಲಿ ಚಟುವಟಿಕೆ ಆರಂಭಗೊಂಡಂತಿದೆ. . ಕಾಲೇಜುಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗಬೇಕೆಂದು ಸರ್ಕಾರ ಸೂಚನೆ ಸೂಚಿಸಿರುವ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ಚಟುವಟಿಕೆಗಳಿಗೆ ಮುನ್ನುಡಿ ಬರೆಯಲಾಗಿದೆ.

ಇದನ್ನೂ ಓದಿ.. ಕೊರೋನಾ ಸಂಕಟವೇ..? ಕವಿತೆಗಳ ಸಾಲುಗಳೇ ಇಲ್ಲಿ ಚೈತನ್ಯ.. ಸಂಗೀತದ ನಿನಾದವೇ ಔಷಧ

ವಿದ್ಯಾರ್ಥಿಗಳು ಬರಲು ನಿರ್ಬಂಧ ಮುಂದುವರೆದಿದ್ದರೂ ಕೂಡಾ ಕಾಲೇಜು ಶಿಕ್ಷಣ ಇಲಾಖಾ ಸೂಚನೆಯಂತೆ ಇಲಾಖಾ ವ್ಯಾಪ್ತಿಯ ಎಲ್ಲಾ ಸರ್ಕಾರಿ ಕಚೇರಿಗಳು, ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಕಾಲೇಜುಗಳ ಗ್ರೂಪ್‌ ‘ಎ’ ಮತ್ತು ‘ಬಿ’ ಗ್ರೂಪಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕಡ್ಡಾಯವಾಗಿ ಹಾಜರಾಗಬೇಕಿದೆ. ರೆಡ್ ಝೋನ್ ಹೊರತುಪಡಿಸಿ ಇತರ ಜಿಲ್ಲೆಗಳ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಕಾಲೇಜುಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಜರಾಗುವಂತೆ ಈ ಆದೇಶದಲ್ಲಿ ಸೂಚಿಸಲಾಗಿದೆ.

ವಿಟಿಯು ಕೂಡಾ ಇಂತದ್ದೇ ನಿರ್ಧಾರವನ್ನು ಕೈಗೊಂಡಿದೆ. ಈವರೆಗೂ ಬಹುತೇಕ ಇಂಜಿನೀಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಶಿಕ್ಷಕರು ಮನೆಯಿಂದಲೇ ಆನ್ಲೈನ್ ಟೀಚಿಂಗ್ ಮಾಡುತ್ತಿದ್ದರು. ಆದರೆ ಈ ರೀತಿಯ ಬೋಧನಾ ಕ್ರಮ ಪರಿಣಾಮಕಾರಿಯಾಗದು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ವಿಟಿಯು ಶಿಕ್ಷಕರು ಕಾಲೇಜುಗಳಿಂದಲೇ ಆನ್ಲೈನ್ ಟೀಚ್ ಮಾಡಲಿ ಎಂದು ಸೂಚಿಸಿದೆ ಎನ್ನಲಾಗಿದೆ.

ಇದನ್ನೂ ಓದಿ.. ಆಕ್ರೋಶಕ್ಕೆ ಬೆಚ್ಚಿದ ಸರ್ಕಾರ; ಉಚಿತ ಬಸ್ ಸೇವೆ ಘೋಷಣೆ 

 

Related posts