ಸ್ವಾದಿಷ್ಟಕ್ಕೆ ಮತ್ತೊಂದು ಹೆಸರೇ ‘ಮಾವಿನಕಾಯಿ ತೊಕ್ಕು’

ಒಂದೆಡೆ ಲಾಕ್’ಡೌನ್ ಪರಿಸ್ಥಿತಿ.. ಇನ್ನೊಂದೆಡೆ ಬಿರು ಬಿಸಿಲ ಧಗೆ.. ಈ ಕಾರಣದಿಂದಾಗಿಯೇ ಮನೆಯೊಳಗೇ ಕುಟುಂಬ ಸದಸ್ಯರ ನಡುವೆ ಬಂಧುತ್ವದ ಬೆಸುಗೆಯಾಗಿದೆ. ಕುಟುಂಬ ಸದಸ್ಯರೆಲ್ಲರೂ ಒಂದಿಲ್ಲೊಂದು ಪಾಕ ವೈವಿಧ್ಯತೆಯಲ್ಲಿ ತಲ್ಲೀನರಾಗಿದ್ದಾರೆ. ಅವರಿಗಾಗಿ ಇಲ್ಲಿದೆ ಮತ್ತೊಂದು ಪಾಕ ಸೂತ್ರ.

ಮಾವಿನ ಕಾಯಿ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಿಂದ ಬಗೆಬಗೆಯ ತಿಂಡಿ ಮಾಡಬಹುದು. ಆ ಪೈಕಿ ಮಾವಿನಕಾಯಿ ತೊಕ್ಕು ಕೂಡಾ ಒಂದು.

ಅದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ..

4 ಮಾವಿನಕಾಯಿಯನ್ನು ತುರಿದು ಇಟ್ಟುಕೊಳ್ಳಬೇಕು. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ. ಎಣ್ಣೆ ಬಿಸಿ ಆದ ನಂತ್ರ ಅದಕ್ಕೆ ಕೆಂಪು ಮೆಣಸು ಸಾಸಿವೆ ಹಾಕಿ ಸಿಡಿಸಿ. ಸಿಡಿದ ಮೇಲೆ ಕರಿಬೇವುನ್ನು ಹಾಕಬೇಕು. ಮತ್ತೆ ತುರಿದಿಟ್ಟ ಮವಿನಕಾಯಿಯನ್ನು ಹಾಕಿ 5 ನಿಮಿಷಗಳ ಕಾಲ ಹಾಗೆ ಇಡೀ. ಮತ್ತೆ ಅದಕ್ಕೆ ಮೆಣಸಿನ ಹುಡಿ,ಅರಿಶಿನ ಹುಡಿ, ಬೆಲ್ಲ ,ಉಪ್ಪು ಹಾಕಿ 10 ನಿಮಿಷಗಳ ಕಾಲ ಸಣ್ಣ ಹುರಿಯಲ್ಲಿ ಇಡಬೇಕು. ಮತ್ತೆ ಪುಡಿ ಮಾಡಿ ಇಟ್ಟ ಮೆಂತೆಯನ್ನು ಹಾಕಿ ಕಲಸಿ 5 ನಿಮಿಷ ಇಡಿ. ರುಚಿಯಾದ ಮಾವಿನಕಾಯಿ ತೊಕ್ಕು ಸಿದ್ದ. ಇದನ್ನು ಊಟ, ದೋಸೆಗೆ ಹಾಕಿ ತಿನ್ನಬಹುದು.

ಇದನ್ನೂ ಓದಿ.. ಎಣ್ಣೆ ಪ್ರಿಯರ ಆತುರ.. ಆಲಿಂಗನ.. ಕಿಸ್.. ಪರಿಸ್ಥಿತಿ ನಿಯಂತ್ರಿಸುವಷ್ಟರಲ್ಲಿ ಪೊಲೀಸರು ಸುಸ್ತು 

 

Related posts