ಅಕ್ಷರಶ: ಸ್ಮಾಶಾನದಂತಾದ ಅಮೆರಿಕಾ; ಕೊರೋನಾ ಸೋಂಕಿಗೆ 20 ಸಾವಿರಕ್ಕೂ ಹೆಚ್ಚು ಮಂದಿ ಬಲಿ

ಕೊರೋನಾ ವೈರಸ್ ಅಮೆರಿಕಾವನ್ನೇ ಟಾರ್ಗೆಟ್ ಮಾಡಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಅಮೆರಿಕಾದಲ್ಲಿ 20 ಸಾವಿರಕ್ಕೂ ಹೆಚ್ಚು ಮಂದಿ ಕೋವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ. ಜಗತ್ತಿನಾದ್ಯಂತ ಸುಮಾರು 1.8 ಲಕ್ಷ ಜನ ಬಲಿಯಾಗಿದ್ದಾರೆ.

ವಾಷಿಂಗ್ಟನ್: ಕೊರೋನಾ ರೌದ್ರಾವತಾರಕ್ಕೆ ಅಮೆರಿಕಾ ಸಂಪೂರ್ಣ ತತ್ತರಿಸಿದೆ. ಕೊರೋನಾದಿಂದಾಗಿ ಮರಣ ಪ್ರಮಾಣ ಹೆಚ್ಚುತ್ತಲೇ ಇದ್ದು ಅಮೆರಿಕಾ ಈಗ ಸಾವಿನ ಮನೆಯಾಗಿ ಪರಿವರ್ತನೆಯಾಗಿದೆ.

ಕೊರೋನಾ ಸೋಂಕು ಇಡೀ ಜಗತ್ತನ್ನೇ ಆವರಿಸಿದ್ದರೂ ಅಮೆರಿಕಾ ರಾಷ್ಟ್ರದಲ್ಲೇ ಅತೀ ಹೆಚ್ಚು ಮಂದಿಯನ್ನು ಈ ವೈರಾಣು ಬಲಿ ತೆಗೆದುಕೊಂಡಿದೆ. ಒಂದು ವರದಿಯ ಪ್ರಕಾರ ಕೋವಿಡ್-19 ಮಹಾಮಾರಿಗೆ ಅಮೆರಿಕಾದಲ್ಲಿ ಬಲಿಯಾದವರ ಸಂಖ್ಯೆ 20 ಸಾವಿರದ ದಾಟಿದೆ.

ಚೀನಾದಲ್ಲಿ ಸೃಷ್ಟಿಯಾಗಿದೆ ಎನ್ನಲಾಗುತ್ತಿರುವ ಕೋವಿಡ್-19 ವೈರಾಣು ಐರೋಪ್ಯ ರಾಷ್ಟ್ರಗಳು, ಅರಬ್ ರಾಷ್ಟ್ರಗಳಲ್ಲೂ ತಾಂಡವವಾಡುತ್ತಿದ್ದು ಇಟಲಿ ದೇಶದಲ್ಲಿ ನಿರಂತರ ಸಾವಿನ ಸರಣಿಗೆ ಕಾರಣವಾಗಿತ್ತು. ಇದೀಗ ಸುಮಾರು 18,800 ಮಂದಿಯನ್ನು ಕಳೆದುಕೊಂಡಿರುವ ಇಟಲಿಯನ್ನು ಮೀರುವ ರೀತಿಯಲ್ಲಿ ಸಾವಿನ ಸರಣಿಗೆ ಅಮೆರಿಕಾ ಸಾಕ್ಷಿಯಾಗಿದೆ.

ಅಮೆರಿಕಾದಲ್ಲಿ ಸುಮಾರು 5.3ಲಕ್ಷ ಮಂದಿ ಸೋಂಕಿತರಿದ್ದು ಶನಿವಾರದವರೆಗೆ 20,500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆಂದು ಹೇಳಿರುವ ಜಾನ್ಸ್ ಹಾಫ್ ಕಿನ್ಸ್ ವಿಶ್ವವಿದ್ಯಾನಿಲಯದ ಪ್ರಮುಖರು, ನ್ಯೂಯಾರ್ಕ್ ನಗರ ಅತ್ಯಂತ ಅಪಾಯದಲ್ಲಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಈ ನಡುವೆ ವಿಶ್ವಾದ್ಯಂತ  17 ಲಕ್ಷಕ್ಕೂ ಹೆಚ್ಚು ಜನರು ಈ ಸೋಂಕಿಗೊಳಗಾಗಿದ್ದು 1 ಲಕ್ಷದ 8 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

Related posts