ರುಚಿ, ಆರೋಗ್ಯಕರ ‘ಬಾಳೆಹಣ್ಣು ಒರೆಯೋ ಕೇಕ್’

ಬಾಳೆಹಣ್ಣು ಒರೆಯೋ ಕೇಕ್ ಬಗ್ಗೆ ಕೇಳಿರಬಹುದು. ಆದರೆ ಮಾಡುವ ವಿಧಾನ ಗೊತ್ತಾ? ಇಲ್ಲಿದೆ ನೋಡಿ ಈ ವಿಶಿಷ್ಟ ಕೇಕ್ ತಯಾರಿಸುವ ಮಾರ್ಗದರ್ಶಿ ಸೂತ್ರ.. ಬೇಕಾದ ಸಾಮಗ್ರಿ ಬಾಳೆಹಣ್ಣು 8 ಗೋಧಿ ಹುಡಿ 2 ಕಪ್ ತೆಂಗಿನಕಾಯಿ ಹುಡಿ ಅರ್ಧ ಕಪ್ ಒರೆಯೋ ಕೇಕ್ 1 ಕಪ್ ಜೇನುತುಪ್ಪ 4 ಚಮಚ ಎಣ್ಣೆ ಅರ್ಧ ಕಪ್ ಬೆಲ್ಲ ಅರ್ಧ ಕಪ್ ಬೇಕಿಂಗ್ ಸೋಡಾ ಅರ್ಧ ಚಮಚ ಹಾಲು 2.5 ಕಪ್ ಮಾಡುವ ವಿಧಾನ ಮೊದಲಿಗೆ ಬಾಳೆಹಣ್ಣನ್ನು ಸಿಪ್ಪೆ ತೆಗದು ಒಂದು ಮಿಕ್ಸಿ ಜಾರಿನಲ್ಲಿ ಹಾಕಿ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಬಾಳೆಹಣ್ಣನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಬೆಲ್ಲ ,ಜೇನುತುಪ್ಪ, ಎಣ್ಣೆ, ಸ್ವಲ್ಪ ಹಾಲು ಹಾಕಿ ಕಲಸಬೇಕು. ಗೋಧಿಹುಡಿ, ತೆಂಗಿನಕಾಯಿಹುಡಿ, ಬೇಕಿಂಗ್ ಸೋಡಾ, ಹಾಲು ಹಾಕಿ ಚೆನ್ನಾಗಿ ಇನ್ನೊಂದ್ ಸಲ ಕಲಸಬೇಕು. ನಂತರ ಒರಿಯೋ ಹಾಕಿ ಚೆನ್ನಾಗಿ ಕಲಸಿ ಒಂದು ಕಾಡಾಯಿ…

ತರಾತುರಿಯಲ್ಲಿ ಶಾಲೆ ಆರಂಭವಿಲ್ಲ; ಜನರ ಸಂಶಯ ನಿವಾರಿಸಿದ ಸಚಿವ ಸುರೇಶ ಕುಮಾರ್

ಬೆಂಗಳೂರು: ಯಾವುದೇ ಕಾರಣಕ್ಕೂ ತರಾತುರಿಯಲ್ಲಿ ಶಾಲೆಗಳನ್ನು ಆರಂಭಿಸಲು ಸರ್ಕಾರ ಆದೇಶಿಸಿಲ್ಲ, ಈ ರೀತಿ ಆದೇಶಿಸುವುದೂ ಇಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಶಾಲೆ ಆರಂಭ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಕುರಿತಂತೆ ಫೇಸ್ಬುಕ್’ನಲ್ಲಿ ವೀಡಿಯೋ ಹರಿಯಬಿಟ್ಟಿರುವ ಅವರು ಸರ್ಕಾರದ ತೀರ್ಮಾನಗಳ ಕುರಿತು ವಿವರ ಒದಗಿಸಿದ್ದಾರೆ. ಅವರು ಈ ವೀಡಿಯೋ ಮೂಲಕ ಜನರಲ್ಲಿನ ಸಂಶಯ ನಿವಾರಣೆಗೂ ಪ್ರಯತ್ನ ಮಾಡಿದ್ದಾರೆ. ಸದ್ಯಕ್ಕೆ ಶಾಲೆ ಆರಂಭವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಚಿವ ಸುರೇಶ ಕುಮಾರ್ ಅವರ ಹೇಳಿಕೆಯ ವೀಡಿಯೋ ಹೀಗಿದೆ ನೋಡಿ https://www.facebook.com/nimmasuresh/videos/3521999407827379/ ಇದನ್ನೂ ಓದಿ.. ಗರ್ಭಿಣಿ ಆನೆ ಹತ್ಯೆ ಪ್ರಕರಣ; ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ವ್ಯಂಗ್ಯಚಿತ್ರಗಳು   

ಗರ್ಭಿಣಿ ಆನೆ ಹತ್ಯೆ ಪ್ರಕರಣ; ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ವ್ಯಂಗ್ಯಚಿತ್ರ

ಮಲಪ್ಪುರಂ: ಹಣ್ಣಿನಲ್ಲಿ ಪಟಾಕಿ ಇಟ್ಟು ಗರ್ಭಿಣಿ ಆನೆಯ ಸಾವಿಗೆ ಕಾರಣರಾದ ದುರುಳರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಮಾನವೀಯತೆ ಮರೆತ ಕಿಡಿಗೇಡಿಗಳ ಈ ಕೃತ್ಯದ ಬಗ್ಗೆ ಇಡೀ ಮನುಕುಲವೇ ಆಕ್ರೋಶ ವ್ಯಕ್ತಪಡಿಸುತ್ತಿವೆ. ಈ ಕುರಿತಂತೆ ಮಾರ್ಮಿಕವಾಗಿ ವ್ಯಂಗ್ಯ ಚಿತ್ರಗಳು ಪರಿಸ್ಥಿತಿಯನ್ನು ವರ್ಣಿಸುತ್ತಿದ್ದು, ಆನೆಯ ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕೆಂಬ ಆಗ್ರಹ ಕೇಳಿಬರುತ್ತಿವೆ. ಈ ಬಗ್ಗೆ ಖ್ಯಾತ ಉದ್ಯಮಿ ರತನ್ ಟಾಟಾ, ಸಿನಿಮಾ ತಾರೆ ಮಾಜಿ ಸಂಸದೆ ರಮ್ಯಾ ಸೇರಿದಂತೆ ಅನೇಕರು ಅಸಮಾಧಾನ ಹೊರಹಾಕಿದ್ದರು. pic.twitter.com/sFwcDyxcgA — Ratan N. Tata (@RNTata2000) June 3, 2020 ಈ ನಡುವೆ ಗರ್ಭಿಣಿ ಆನೆಯ ಬಾಯಿಯಲ್ಲಿ ಪಟಾಕಿ ಸ್ಪೋಟಿಸಿ ಕೊಂದವರನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೀಡಿದ್ದಾರೆ. https://www.facebook.com/ramyaactressofficial/posts/10158030092855196 ಏನಿದು ಪ್ರಕರಣ? ಕೆಲ ದಿನಗಳ ಹಿಂದೆ ಆಹಾರ ಹುಡುಕುತ್ತಾ ಹೊಲಕ್ಕೆ ಬಂದಿದ್ದ ಆನೆ…

ರೈತರ ಇಚ್ಛೆಯಂತೆ ಸರಕು ರಫ್ತು; ಕೇಂದ್ರ ಸರ್ಕಾರ ಒಪ್ಪಿಗೆ

ದೆಹಲಿ: ರೈತರು ಈಗ ಸರಕುಗಳನ್ನು ತಮ್ಮ ಇಚ್ಛೆಯಂತೆ ರಫ್ತು ಮಾಡಬಹುದು ಅಥವಾ ಸಂಗ್ರಹಿಸಬಹುದು. ಈ ವ್ಯವಸ್ಥೆಗೆ ಅನುಕೂಲವಾಗುವ ರೀತಿ ನಿಯಮ ಪರಿವರ್ತನೆಗೆ ಕೇಂದ್ರ ಸರ್ಕಾರ ಒಪ್ಪಿದೆ. ಅವಶ್ಯಕ ವಸ್ತುಗಳ ಕಾಯ್ದೆಗೆ ಐತಿಹಾಸಿಕ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು ಇದರಿಂದ ರೈತರಿಗೆ ಅನುಕೂಲವಾಗಲಿದೆ.  ಈ ಕುರಿತಂತೆ ವಿವರ ನೀಡಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್, ಈ ಕಾಯ್ದೆ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆ ಕ್ಷೇತ್ರದ ಪ್ರಭಾವಿಗಳ ಹಿಡಿತದಿಂದ ರೈತರು ಮುಕ್ತರಾಗಿದ್ದಾರೆ ಎಂದು ಜಾವಡೇಕರ್ ಹೇಳಿದ್ದಾರೆ.

ಮರಣ ಶಾಸನ ಬರೆಯುತ್ತಿರುವ ಕೊರೋನಾ; ವಿಶ್ವಾದ್ಯಂತ 62 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು

ದೆಹಲಿ: ಜಗತ್ತಿನಾದ್ಯಂತ ಕೊರೋನಾ ವೈರಸ್ ಮರಣ ಶಾಸನ ಬರೆಯುತ್ತಿದ್ದು ಸೋಂಕಿತರ ಸಂಖ್ಯೆ 6,287,771 ಲಕ್ಷ ಕ್ಕೇರಿದೆ. ಈಗಾಗಲೇ 3.79ಲಕ್ಷ ಮಂದಿಯನ್ನು ಬಳಿ ತೆಗೆದುಕೊಂಡಿರುವ ಹೆಮ್ಮಾರಿ ವೈರಾಣು ಇನ್ನೆಷ್ಟು ಜನರನ್ನು ಬಲಿತೆಗೆದುಕೊಳ್ಳುತ್ತೋ ಎಂಬ ಆತಂಕ ಎಲ್ಲರಲ್ಲೂ ಕಾಡತೊಡಗಿದೆ. ಈ ನಡುವೆ ನಿನ್ನೆ ಒಂದೇ ದಿನ ಬರೋಬ್ಬರಿ 93,000 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಅಮೆರಿಕಾದಲ್ಲಿ ಸೋಂಕಿತರ ಸಂಖ್ಯೆ 30 ಲಕ್ಷಕ್ಕೆ ಸಮೀಪವಿದೆ. ಅಲ್ಲಿ ಈಗಾಗಲೇ 165,311 ಮಂದಿ ಈ ಸೋಂಕಿಗೆ ಬಲಿಯಾಗಿದ್ದಾರೆ.

ಕರುನಾಡಲ್ಲಿ ಕೊರೋನಾ ಸವಾರಿ; ಮತ್ತೆ 267 ಮಂದಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸವಾರಿ ಆತಂಕಕಾರಿ ರೀತಿಯಲ್ಲಿ ಮುಂದುವರಿದಿದ್ದು, ಇಂದು ಮತ್ತೆ 267 ಹೊಸ ಪ್ರಕರಣಗಳು ಪತ್ತೆಯಾಗಿವೆ. ಮಂಗಳವಾರ ಸಂಜೆಯಿಂದ ಇಂದು ಸಂಜೆವರೆಗಿನ ಕೊರೋನಾ ಕುರಿತ ಬೆಳವಣಿಗೆಗಳತ್ತ ಬೆಳಕು ಚೆಲ್ಲಿರುವ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 267 ಹೊಸ ಸೋಂಕಿನ ಪ್ರಕರಣಗಳು ದೃಢಪಟ್ಟಿರುವುದನ್ನು ವರದಿ ಮಾಡಿದೆ. ಕಲಬುರಗಿಯಲ್ಲಿ 105 ಪಾಸಿಟಿವ್ ಕೇಸ್’ಗಳು ಪತ್ತೆಯಾಗಿದ್ದರೆ, ಉಡುಪಿ ಜಿಲ್ಲೆಯಲ್ಲಿ 62 ಕೇಸ್’ಗಳು ವರದಿಯಾಗಿವೆ. ಕಲಬುರಗಿ : 105 ಹೊಸ ಕೇಸ್ ಉಡುಪಿ : 62 ಹೊಸ ಕೇಸ್ ರಾಯಚೂರು : 35 ಹೊಸ ಕೇಸ್ ಬೆಂಗಳೂರು ನಗರ : 20 ಹೊಸ ಕೇಸ್ ಮಂಡ್ಯ : 13 ಹೊಸ ಕೇಸ್ ಯಾದಗಿರಿ : 9 ಹೊಸ ಕೇಸ್ ವಿಜಯಪುರ : 6 ಹೊಸ ಕೇಸ್ ದಾವಣಗೆರೆ : 3 ಹೊಸ ಕೇಸ್ ದಕ್ಷಿಣಕನ್ನಡ : 2…

ತರಾತುರಿಯಲ್ಲಿ ಶಾಲೆಗಳ ಆರಂಭ ಇಲ್ಲ; ಶಿಕ್ಷಣ ಸಚಿವರ ಸ್ಪಷ್ಟನೆ

ಬೆಂಗಳೂರು: ಕೊರೋನಾ ವೈರಾಣು ಸೋಂಕಿನ ಭೀತಿ ಇನ್ನೂ ದೂರ ಸರಿದಿಲ್ಲ. ಅದಾಗಲೇ ಶಾಲಾ ಕಾಲೇಜು ಪುನರಾರಂಭಕ್ಕೆ ಪ್ರಕ್ರಿಯೆ ಆರಂಭಿಸಲು ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸರ್ಕಾರದ ಈ ನಡೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಈಗಿನ್ನೂ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚತ್ತಲೇ ಇವೆ. ಹೀಗಿರುವಾಗ ತರಾತುರಿಯಲ್ಲಿ ಶಾಲೆಗಳ ಆರಂಭ ಬೇಡ ಎಂದು ಪೋಷಕರು ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಇದೇ ವೇಳೆ ಶಿಕ್ಷಣಕ್ಕಿಂತ ಮಕ್ಕಳ ಆರೋಗ್ಯ ಮುಖ್ಯ ಎಂಬ ಅಭಿಯಾನ ಸಾಗಿದ್ದು ಸರ್ಕಾರದ ವಿರುದ್ಧ ಅಭಿಪ್ರಾಯಾಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ನಡುವೆ, ಶಾಲೆಗಳ ಆರಂಭ ಕುರಿತು ಸರ್ಕಾರ ತರಾತುರಿಯ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಫೇಸ್ ಬುಕ್’ನಲ್ಲಿ ಸಂದೇಶ ಪೋಸ್ಟ್ ಮಾಡಿರುವ ಅವರು ಎಲ್ಲಾ ರೀತಿಯ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಆ ಅಭಿಪ್ರಾಯಗಳ…

ಇನ್ನೂ ಎರಡು ತಿಂಗಳು ಶಾಲೆ ಆರಂಭ ಬೇಡ; ಸರ್ಕಾರಕ್ಕೆ ಪ್ರತಿಪಕ್ಷ ಸಲಹೆ

ಬೆಂಗಳೂರು: ಕೊರೋನಾ ಹಾವಳಿ ನಡುವೆ ಶಾಲೆಗಳ ಆರಂಭಕ್ಕೆ ಸರ್ಕಾರ ಸಿದ್ಧತೆ ನಡೆಸುತ್ತಿರುವ ಬಗ್ಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿವೆ. ರಾಜ್ಯ ಸರ್ಕಾರದ ನಡೆ ಬಗ್ಗೆ ಪ್ರತಿ ಪಕ್ಷಗಳು ಕೂಡಾ ಅಸಮಾಧಾನ ಹೊರ ಹಾಕಿವೆ. ಈ ಕುರಿತಂತೆ ಕೊಪ್ಪಳದಲ್ಲಿ ಪ್ರತಿಕ್ರಿಯಿಸಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಇನ್ನೂ ಎರಡು ತಿಂಗಳು ಶಾಲೆಗಳನ್ನು ಆರಂಭಿಸುವುದು ಬೇಡ ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ. ಮಕ್ಕಳಿಂದ ಕೊರೋನಾ ಹರಡತ್ತಿದೆ. ಶಾಲೆ ಆರಂಭಿಸಲು ಶಿಕ್ಷಣ ಸಚಿವರು ಆಸಕ್ತಿ ತೋರುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇನ್ನೂ ಎರಡು ತಿಂಗಳು ಶಾಲೆಗಳನ್ನು ಆರಂಭಿಸಬಾರದು. ಬಳಿಕ ಪೂರ್ವಸಿದ್ಧತೆ ಮಾಡಿಕೊಂಡು, ಮಕ್ಕಳಿಗೆಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಸಂವಿಧಾನಿಕ ಮುಖ್ಯಮಂತ್ರಿಯಾಗಿ ವಿಜಯೇಂದ್ರ ಕೆಲಸ; ಸಿದ್ದರಾಮಯ್ಯ ಆರೋಪ

ಕೊಪ್ಪಳ: ಮುಖ್ಯಮಂತ್ರಿ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದು ಯಡಿಯೂರಪ್ಪ ಜೊತೆ ಅಸಂವಿಧಾನಿಕ ಮುಖ್ಯಮಂತ್ರಿಯಾಗಿ ವಿಜಯೇಂದ್ರ ಕೆಲಸ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ವಿಜಯೇಂದ್ರ ಕಾರ್ಯವೈಖರಿಯಿಂದಾಗಿಯೇ ಆಡಳಿತ ಪಕ್ಷದಲ್ಲಿ ಭಿನ್ನಮತ ಉಂಟಾಗಿದೆ ಎಂದು ವಿಶ್ಲೇಷಣೆ ಮಾಡಿದರು. ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಹಾಗಾಗೇ ಶಾಸಕರು ಬಂಡಾಯ ಹೇಳುತ್ತಿದ್ದಾರೆ ಎಂದು ದೂರಿದರು. ಒಂದು ವೇಳೆ ಭಿನ್ನಮತದಿಂದಾಗಿ ಬಿಜೆಪಿ ಸರ್ಕಾರ ಬಿದ್ದರೇ ಅದಕ್ಕೆ ಬಿಜೆಪಿಯವರೇ ಹೊಣೆ ಎಂದರು. ಸಿದ್ದರಾಮಯ್ಯ ಬೊಕ್ಕಸ ಖಾಲಿ ಮಾಡಿದ್ದಾರೆ ಎಂಬ ಸಚಿವ ಸಿ.ಟಿ. ರವಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಹಣಕಾಸಿನ ಬಗ್ಗೆ ಅಜ್ಞಾನದಿಂದ ಅವರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆಂದು ತರಾಟೆಗೆ ತೆಗೆದುಕೊಂಡರು.

‘ನಿಸರ್ಗ’ ಪ್ರಭಾವ; ರಾಜ್ಯ ಕರಾವಳಿಯಲ್ಲೂ ಮಳೆ

ಮಂಗಳೂರು: ಪಶ್ಚಿಮ ಕರಾವಳಿಯಲ್ಲಿ ನಿಸರ್ಗ ಚಂಡಮಾರುತ ಭೀತಿಯ ಅಲೆಯನ್ನೇ ಸೃಷ್ಟಿಸಿದೆ. ಅರಬ್ಬೀ ಸಮುದ್ರದಲ್ಲಿ ದೈತ್ಯ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ನಿಸರ್ಗ ಚಂಡಮಾರುತದ ಮುನ್ಸೂಚನೆ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂದು ಬೆಳಿಗ್ಗೆಯಿಂದಲೇ ತುಂತುರು ಮಳೆಯಾಗುತ್ತಿದೆ. ಕಾರವಾರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಇದೇ ವೇಳೆ ಚಂಡಮಾರುತ ಹಿನ್ನೆಲೆಯಲ್ಲಿ ಕಡಲ ತೀರದ ಪ್ರದೇಶಗಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಉಡುಪಿ ಜಿಲ್ಲೆಯಲ್ಲೂ ಜಿಲ್ಲಾಡಳಿತ ಇದೇ ರೀತಿ ಮುಂಜಾಗ್ರತಾ ಕ್ರಮ ಕೈಗೊಂಡಿದೆ.