ವಾಷಿಂಗ್ಟನ್: ಅಮೆರಿಕದ ಟೆನ್ನೆಸ್ಸೀಯಲ್ಲಿ ಭಾರೀ ಸುಂಟರಗಾಳಿ ತಲ್ಲಣ ಸೃಷ್ಟಿಸಿದೆ. ಅಮೆರಿಕಾ ಪಾಲಿಗೆ ಭೀಕರ ಪ್ರಕೃತಿ ವಿಕೋಪಕ್ಕೆ ಸಾಕ್ಷಿಯಾದ ಈ ಸುಂಟರ ಗಾಳಿ ಸಾವಿರಾರು ಮಂದಿಯಲ್ಲೂ ಬೀದಿಪಾಲು ಮಾಡಿದೆ.
ಅಮೆರಿಕದ ಟೆನ್ನೆಸ್ಸೀಯಲ್ಲಿ ಎದ್ದ ಭಾರೀ ಸುಂಟರಗಾಳಿಗೆ ಹಲವಾರು ಮನೆಗಳು, ಕಟ್ಟಡಗಳು ಧರೆಗುರುಳಿವೆ. ಸುಂಟರಗಾಳಿ ಸಂದರ್ಭದಲ್ಲಿ ಕಟ್ಟಡಗಳು ಧರಾಶಾಹಿಯಾಗುತ್ತಿದ್ದ ದೃಶ್ಯಗಳು ಮನಕಲಕುವಂತಿದೆ.
ಗಾಳಿಯ ರಭಸಕ್ಕೆ ವಿಮಾನಗಳು, ವಾಹನಗಳು ಪಲ್ಟಿ ಆಗುವ ವಿಡಿಯೋಗಳನ್ನು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದೆ. ಸುಂಟರಗಾಳಿ ಸಂಬಂಧದ ಸರಣಿ ಘಟನೆಗಳಲ್ಲಿ 25 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.