ಗರ್ಭಿಣಿ ಆನೆ ಹತ್ಯೆ ಪ್ರಕರಣ; ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ವ್ಯಂಗ್ಯಚಿತ್ರ

ಮಲಪ್ಪುರಂ: ಹಣ್ಣಿನಲ್ಲಿ ಪಟಾಕಿ ಇಟ್ಟು ಗರ್ಭಿಣಿ ಆನೆಯ ಸಾವಿಗೆ ಕಾರಣರಾದ ದುರುಳರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಮಾನವೀಯತೆ ಮರೆತ ಕಿಡಿಗೇಡಿಗಳ ಈ ಕೃತ್ಯದ ಬಗ್ಗೆ ಇಡೀ ಮನುಕುಲವೇ ಆಕ್ರೋಶ ವ್ಯಕ್ತಪಡಿಸುತ್ತಿವೆ.


ಈ ಕುರಿತಂತೆ ಮಾರ್ಮಿಕವಾಗಿ ವ್ಯಂಗ್ಯ ಚಿತ್ರಗಳು ಪರಿಸ್ಥಿತಿಯನ್ನು ವರ್ಣಿಸುತ್ತಿದ್ದು, ಆನೆಯ ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕೆಂಬ ಆಗ್ರಹ ಕೇಳಿಬರುತ್ತಿವೆ.

ಈ ಬಗ್ಗೆ ಖ್ಯಾತ ಉದ್ಯಮಿ ರತನ್ ಟಾಟಾ, ಸಿನಿಮಾ ತಾರೆ ಮಾಜಿ ಸಂಸದೆ ರಮ್ಯಾ ಸೇರಿದಂತೆ ಅನೇಕರು ಅಸಮಾಧಾನ ಹೊರಹಾಕಿದ್ದರು.

ಈ ನಡುವೆ ಗರ್ಭಿಣಿ ಆನೆಯ ಬಾಯಿಯಲ್ಲಿ ಪಟಾಕಿ ಸ್ಪೋಟಿಸಿ ಕೊಂದವರನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೀಡಿದ್ದಾರೆ.

ಏನಿದು ಪ್ರಕರಣ?

ಕೆಲ ದಿನಗಳ ಹಿಂದೆ ಆಹಾರ ಹುಡುಕುತ್ತಾ ಹೊಲಕ್ಕೆ ಬಂದಿದ್ದ ಆನೆ ಅನಾನಸ್ ತಿಂದಿದೆ. ಆ ಅನಾನಸ್’ನಲ್ಲಿ ದುರುಳರು ಪಟಾಕಿ ಇಟ್ಟಿದ್ದರು. ಆನೆ ಈ ಹಣ್ಣನ್ನು ತಿನ್ನುತ್ತಿದ್ದಂತೆ ದೇಹದೊಳಗೆ ಪಟಾಕಿ ಸಿಡಿದಿದೆ. ನೋವು ತಾಳಲಾರದೆ ಚೀರುತ್ತಾ ಆ ಆನೆ ಸಮೀಪದ ನದಿಗೆ ಧುಮುಕಿದೆ. ಅಲ್ಲೇ ಅದು ಸಾವನ್ನಪ್ಪಿದೆ. ಪರಿಶೀಲನೆ ನಡೆಸಿದಾಗ ಆ ಆನೆ ಗರ್ಭಿಣಿ ಎಂಬ ಸಂಗತಿ ಬೆಳಕಿಗೆ ಬಂತು.

ಇದನ್ನೂ ಓದಿ.. ಮರಣ ಶಾಸನ ಬರೆಯುತ್ತಿರುವ ಕೊರೋನಾ 

 

Related posts