ಮುಂಬೈ: ಪೂರ್ವ ಕರಾವಳಿಗೆ ಅಪ್ಪಳಿಸಿರುವ ನಿಸರ್ಗ ಚಂಡಮಾರುತದಿಂದ ಮಹಾರಾಷ್ಟ್ರ ಕರಾವಳಿಯಲ್ಲಿ ಭೀತಿ ಸೃಷ್ಟಿಯಾಗಿದೆ. ಮಹಾರಾಷ್ಟ್ರದ ಹಲವೆಡೆ ಬಿರುಗಾಳಿ ಸಹಿತ ಮಳೆ ಯಾಗುತ್ತಿದೆ. ಬಿರುಗಾಳಿಯ ರಭಸಕ್ಕೆ ಹಲವು ಮನೆಗಳ ಮೇಲ್ಚಾವಣಿಗಳು ಹಾರಿ ಹಾರಿ ಹೋಗಿವೆ. ಹಲವೆಡೆ ಮರಗಳು ರಸ್ತೆಗೆ ಉರುಳಿಬಿದ್ದಿದ್ದು ವಾಹನ ಸಂಚಾರ ಏರುಪೇರಾಗಿದೆ. ಗುಜರಾತ್ ಕರಾವಳಿ ತೀರ ಪ್ರದೇಶಗಳಲ್ಲಿಯೂ ಭಾರೀ ಮಳೆಯಾಗುತ್ತಿದೆ. ಚಂಡಮಾರುತದ ಅಪಾಯದ ಮುನ್ಸೂಚನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾವಿರಾರು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಇದೇ ವೇಳೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಸೂಚನೆ ನೀಡಲಾಗಿದೆ. ಇತ್ತ ಕರ್ನಾಟಕದ ಕರಾವಳಿ ತೀರದಲ್ಲೂ ಭಾರೀ ಮಳೆಯಾಗಿದೆ. ನಿಸರ್ಗ ಚಂಡಮಾರುತದ ಹಿನ್ನೆಲೆಯಲ್ಲಿ ಕರಾವಳಿ ತೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
Year: 2020
ಕಾಫಿ-ಟೀಗಿಂತ ಹಿತವಾದ ಅನುಭವ; ಶೀತ-ಕೆಮ್ಮು ಕಾಯಿಲೆಗೂ ರಾಮಬಾಣ ಈ ‘ಶುಂಠಿ ಜೀರಿಗೆ ಕಶಾಯ’
ಮಳೆಗಾಲ ಆರಂಭವಾಗುತ್ತಿದೆ. ಅಲ್ಲೋ ಇಲ್ಲೋ ಹೋಗಿ ತುಂತುರು ಮಳೆಗೆ ನೆಂದು ಶೀತಾ ಆಗಿಬಿಟ್ಟರೆ? ಹುಷಾರ್.. ಆದರೂ ಮನೆಯಲ್ಲಿ ಮನೆ ಮದ್ದು ಅಥವಾ ಶುಂಠಿ-ಜೀರಿಗೆ ಕಷಾಯ ಮಾಡಿಟ್ಟುಕೊಳ್ಳಿ. ಮಳೆಗಾಲ, ಛಳಿಗಾಲದಲ್ಲಿ ಮನೆಯಲ್ಲಿ ಬೆಚ್ಚಗೆ ಕುಳಿತು ಕಾಫಿ-ಟೀ ಕುಡಿಯುವ ಹಿತವಾದ ಅನುಭವ ಈ ಶುಂಠಿ-ಜೀರಿಗೆ ಕಷಾಯ ಕುಡಿಯುವುದರಲ್ಲೂ ಆಗುತ್ತದೆ. ಶೀತ, ಜ್ವರ, ನೆಗಡಿ, ಕಫ, ಗಂಟಲು ಕೆರತ ಉಂಟಾದರೆ ಅದಕ್ಕೆ ಈ ಕಷಾಯ ರಾಮಬಾಣ.. ಜೀರ್ಣಕ್ರಿಯೆಯೂ ಸುಲಭ.. ಸುಖಕರ ನಿದ್ರೆಗೂ ಅನುಕೂಲ.. ಈ ಕಷಾಯ ಪುಡಿ ತಯಾರಿಸುವ ವಿಧಾನವೂ ಸುಲಭ..
ಹಳ್ಳಿ ಸೊಗಡಿನ ತಿಂಡಿ ‘ಹಲಸಿನ ಹಣ್ಣಿನ ಮುಳ್ಕ’
ಬೇಸಿಗೆ ಸಂದರ್ಭದಲ್ಲಿ ಹಲಸಿನ ಹಣ್ಣು ಯಥೇಚ್ಛವಾಗಿ ಸಿಗುತ್ತವೆ. ನೂರಾರು ಖಾದ್ಯಗಳಿಗೆ ಬಳಸಲ್ಪಡುವ ಹಲಸಿನ ಹಣ್ಣು ನಳಪಾಕಕ್ಕೂ ಹೆಸರುವಾಸಿ. ಅದರಲ್ಲೂ ‘ಹಲಸಿನ ಹಣ್ಣಿನ ಮುಳ್ಕ’ ಹಳ್ಳಿ ಸೊಗಡಿನ ತಿಂಡಿಗಲ್ಲೊಂದು. ಅದನ್ನು ಮಾಡುವ ವಿಧಾನ ಗೊತ್ತಾ..? ಇದನ್ನೂ ಓದಿ.. ‘ಜಾಕ್ ಫ್ರೂಟು’ ಟೇಸ್ಟೂ ಹೌದು, ಸ್ವೀಟೂ ಹೌದು.. ಅದರ ದೋಸೆ? ಇಲ್ಲಿದೆ ನೋಡಿ ‘ಹಲಸಿನ ಹಣ್ಣಿನ ದೋಸೆ’
ಇಂಡಿಯಾ ಅಲ್ಲ’ಭಾರತ’ ಅಥವಾ ‘ಹಿಂದೂಸ್ಥಾನ’; ಬದಲಾಗುತ್ತಾ ಹೆಸರು?
ದೆಹಲಿ: ದಿಲ್ಲಿ ಬದಲಿಗೆ ‘ದೆಹಲಿ’ ಎಂದು ಖಾಯಂ ಆಗಿ ಅನೇಕ ವರ್ಷಗಳೇ ಸಂದಿವೆ. ಒರಿಸ್ಸಾ ಬದಲಿಗೆ ‘ಒಡಿಶಾ’ ಮರುನಾಮಕರಣವಾಗಿದ್ದರೆ, ಬಾಂಬೆ ಬದಲಿಗೆ ‘ಮುಂಬೈ’ ಹೆಸರು ಇದೀಗ ಜಗಜ್ಜಾಹೀರಾಗಿದೆ. ಇತ್ತ ಕರ್ನಾಟಕದಲ್ಲೂ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಕಲಬುರಗಿ, ಮೈಸೂರು ಸಹಿತ ಹಲವು ನಗರಗಳ ಹೆಸರುಗಳೂ ಮರುನಾಮಕರಣಗೊಂಡು ನಾಡಿನ ಸೊಗಡಿನ ಮೂಲ ಅರ್ಥವನ್ನೇ ಪ್ರತಿಬಿಂಸಿವೆ. ಇದೆ ರೀತಿ ದೇಶದ ಹೆಸರನ್ನೂ ಮರುನಾಮಕರಣ ಮಾಡಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಇಂಡಿಯಾ ಬದಲಿಗೆ ‘ಭಾರತ’ ಇಂಡಿಯಾ ಬದಲಿಗೆ ‘ಭಾರತ’ ಅಥವಾ ‘ಹಿಂದೂಸ್ಥಾನ’ ಎಂದು ಹೆಸರು ಬದಲಾಗಬೇಕು ಎಂಬ ಕೂಗು ಕೇಳಿಬರುತ್ತಿದೆ. ಈ ಬಗ್ಗೆ ದೆಹಲಿ ಮೂಲದ ‘ನಮಃ’ ಎಂಬ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಅರ್ಜಿಯ ವಿಚಾರಣೆ ಮುಂದೂಡಲ್ಪಟ್ಟಿದೆ ಭಾರತೀಯ ಸಂವಿಧಾನಕ್ಕೆ ತಿದ್ದುಪಡಿ ತಂದು ‘ಇಂಡಿಯಾ’ ಎಂಬ ಹೆಸರನ್ನು ‘ಭಾರತ’ ಅಥವಾ ‘ಹಿಂದೂಸ್ಥಾನ’ ಎಂದು ಬದಲಾಯಿಸುವಂತೆ ಈ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಹಿಂದೂಸ್ಥಾನವಾಗಿದ್ದ ನಮ್ಮ ದೇಶದ…
ಕರ್ನಾಟಕದಲ್ಲಿ ಒಂದೇ ದಿನ 388 ಕೊರೋನಾ ಕೇಸ್
ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ ಕೊರೋನಾ ಕುರಿತ ವರದಿ ಜನರನ್ನು ಬೆಚ್ಚಿ ಬೀಳಿಸಿದೆ. ಮಂಗಳವಾರ ಸಂಜೆ ನಂತರ ಇಂದು ಸಂಜೆಯವರೆಗೆ 388 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಕೊರೋನಾ ವಿದ್ಯಮಾನಗಳ ಬಗ್ಗೆ ನಿತ್ಯವೂ ಮಾಹಿತಿ ಬಹಿರಂಗ ಪಡಿಸುತ್ತಿರುವ ಹೆಲ್ತ್ ಬುಲೆಟಿನ್ ರಾಜ್ಯದಲ್ಲಿ ಒಂದೇ ದಿನ 388 ಪಾಸಿಟಿವ್ ಕೇಸ್’ಗಳು ಪತ್ತೆಯಾಗಿರುವುದನ್ನು ಬಹಿರಂಗಪಡಿಸಿದೆ. ಉಡುಪಿ ಜಿಲ್ಲೆಯೊಂದರಲ್ಲೇ 150 ಪ್ರಕರಣಗಳು ಪತ್ತೆಯಾಗಿದ್ದರೆ, ಕಲಬುರಗಿಯಲ್ಲಿ 100 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಉಡುಪಿ : 150 ಹೊಸ ಕೇಸ್ ಕಲಬುರಗಿ : 100 ಹೊಸ ಕೇಸ್ ಬೆಳಗಾವಿ : 51 ಹೊಸ ಕೇಸ್ ರಾಯಚೂರು : 16 ಹೊಸ ಕೇಸ್ ಬೆಂಗಳೂರು ನಗರ : 12 ಹೊಸ ಕೇಸ್ ಬೀದರ್ : 10 ಹೊಸ ಕೇಸ್ ಹಾಸನ : 9 ಹೊಸ ಕೇಸ್ ಬಾಗಲಕೋಟೆ : 9…
ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಯಶಸ್ವಿ; ಯಶೋಗಾಥೆ ಬರೆದ ವೈದ್ಯರಿಗೆ ಅಭಿನಂದನೆ
ಹುಬ್ಬಳ್ಳಿ: ಕೊರೋನಾ ವೈರಾಣು ಮರಣ ಮೃದಂಗವನ್ನೇ ಭಾರಸುತ್ತಿದ್ದು, ಈ ಕಿಲ್ಲರ್ ವರಸ್ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ರಾಮಬಾಣವೇ ಎಂಬ ಚರ್ಚೆ ಸಾಗಿದೆ. ಈ ಬಗ್ಗೆ ಅನೇಕರು ಅಪಸ್ವರ ಎತ್ತಿದ್ದರಿಂದ ಸರ್ಕಾರ ಕೂಡಾ ಹಿಂದೇಟು ಹಾಕುವ ಚಿಂತನೆ ನಡೆಸಿತು. ಆದರೆ ಇದೀಗ ಪ್ಲಾಸ್ಮಾ ಥೆರಪಿ ಚಿಕಿತ್ಸಾ ವಿಧಾನ ಮೂಲಕ ಹುಬ್ಬಳ್ಳಿಯ ವೈದ್ಯರು ಯಶೋಗಾಥೆ ಬರೆದಿದ್ದಾರೆ. ರಾಜ್ಯದದಲ್ಲಿ ಪ್ರಥಮ ಬಾರಿಗೆ ಕೊರೋನಾವರಸ್ ಸೋಂಕಿಗಾಗಿ ನಡೆಸಲಾದ ಪ್ಲಾಸ್ಮಾ ಥೆರಪಿ ಚಿಕಿತ್ಸಾ ವಿಧಾನ ಯಶಸ್ವಿಯಾಗಿದ್ದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 64 ವರ್ಷದ ಕೊರೊನಾ ಸೋಂಕಿತ ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಸಾಧನೆ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ, ಈ ಹಿಂದೆ ಚಿಕಿತ್ಸೆ ಪಡೆದು ಗುಣಮುಖರಾದ ಕೋವಿಡ್-19 ಸೋಂಕಿತ ವ್ಯಕ್ತಿಯಿಂದ ಪಾಸ್ಮಾ ಪಡೆದು ಮುಂಬೈನಿಂದ ಆಗಮಿಸಿದ್ದ 64 ವರ್ಷದ ವ್ಯಕ್ತಿಗೆ ಅಳವಡಿಸಿ ಚಿಕಿತ್ಸೆ ನೀಡಲಾಗಿದೆ. ಪ್ಲಾಸ್ಮಾ ಥೆರಪಿ ಚಿಕಿತ್ಸೆಗೊಳಗಾದ ವ್ಯಕ್ತಿ…
ಕರಾವಳಿ ಈಗ ಡೇಂಜರ್; ಕ್ವಾರಂಟೈನ್ ಮುಗಿಸಿ ಮನೆ ಸೇರಿದವರಲ್ಲೂ ಸೋಂಕು?
ಉಡುಪಿ: ರಾಜ್ಯದಲ್ಲಿ ಕೊರೋನಾ ವೈರಾಣು ಶರವೇಗದಲ್ಲಿ ಹರಡಿದ್ದು, ದೇವಳ ನಗರಿ ತಲ್ಲಣಗೊಂಡಿದೆ. ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ ದಾಖಲೆ ಎಂಬಂತೆ 200 ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂಬ ಸುದ್ದಿ ಹರಿದಾಡಿ ಆತಂಕ ಸೃಷ್ಟಿಯಾಗಿತ್ತು. ಆದರೆ ಸಂಜೆ ಬಿಡುಗಡೆಯಾದ ಹೆಲ್ತ್ ಬುಲೆಟಿನ್ ಉಡುಪಿ ಜಿಲ್ಲೆಯಲ್ಲಿ 150 ಹೊಸ ಪ್ರಕರಣ ದೃಢಪಟ್ಟಿರುವುದಾಗಿ ಸ್ಪಷ್ಟಪಡಿಸಿದೆ. ಲಾಕ್’ಡೌನ್ ನಂತರ ಮಹಾರಾಷ್ಟ್ರ ರಾಜ್ಯದಿಂದ ಸುಮಾರು 8 ಸಾವಿರ ಜನರು ಉಡುಪಿಗೆ ಆಗಮಿಸಿದ್ದಾರೆ. ಈ ಪೈಕಿ 5 ಸಾವಿರ ಜನರನ್ನು ಪರೀಕ್ಷೆಗೊಳಪಡಿಸಲಾಗಿದೆ. ಇವರಲ್ಲಿ ಅನೇಕರಲ್ಲಿ ಸೋಂಕು ಪತ್ತೆಯಾಗಿದ್ದು ಇಂದು ಒಂದೇ ದಿನ 150 ಮಂದಿಯ ಪರೀಕ್ಷಾ ವರದಿ ಪಾಸಿಟಿವ್ ಎಂದು ದೃಢಪಟ್ಟಿದೆ. ಈ ನಡುವೆ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿ ಮನೆಗಳಿಗೆ ಹೋಗಿದ್ದ ಅನೇಕರಲ್ಲಿ ಸೋಂಕು ದೃಢಪಟ್ಟಿದ್ದು ಅವರ ಮೂಲಕ ಮತ್ತಷ್ಟು ಮಂದಿಗೆ ಸೋಂಕು ಹರಡಿರಬಹುದೇ ಎಂಬ ಆತಂಕವೂ ಕಾಡತೊಡಗಿದೆ. ಈ ಹಿನ್ನೆಲೆಯಲ್ಲಿ…
ಕೊರೋನಾ ಭೀತಿ ಹಿನ್ನೆಲೆ ಮನೆಯಲ್ಲೇ ನಮಾಜ್ ಮಾಡಿ; ಖಾಝಿ ಕರೆ
ಮಂಗಳೂರು: ಕೊರೋನಾ ವೈರಾಣು ಸೋಂಕು ತಡೆಯಲು ಲಾಕ್’ಡೌನ್ ಜಾರಿಯಲ್ಲಿದ್ದುದರಿಂದಾಗಿ ಮಂದಿರ ಮಸೀದಿಗಳಲ್ಲೂ ಚಟುವಟಿಕೆಗಳು ಸ್ಥಬ್ಧವಾಗಿತ್ತು. ಇದೀಗ ಲಾಕ್’ಡೌನ್ ಸಡಿಲಿಕೆಯಾಗಿದ್ದು ಜೂನ್ 8 ರಿಂದ ದೇಗುಲ-ಮಸೀದಿ-ಚರ್ಚ್’ಗಳಲ್ಲಿ ನಿತ್ಯದ ಕೈಂಕರ್ಯಗಳು ಆರಂಭವಾಗಲಿದೆ. ಇದೇ ವೇಳೆ, ಸಮುದಾಯದ ಭಾವನೆಗಳಿಗೆ ಗೌರವ ಕೊಟ್ಟು ಮಸೀದಿಗಳನ್ನು ತೆರೆಯಲು ಅವಕಾಶ ನೀಡಿದ ಸರಕಾರದ ತೀರ್ಮಾನ ಶ್ಲಾಘನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿಯವರಾದ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹೇಳಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸರಕಾರ ನೀಡಿದ ಆದೇಶ ಪಾಲಿಸಲು ಸಾಧ್ಯವಿರುವ ಮಸೀದಿಗಳಲ್ಲಿ ಅವರವರ ಜಮಾತ್ ಗಳಲ್ಲಿ ತೀರ್ಮಾನಿಸಿ ಜುಮಾ ಮತ್ತು ಜಮಾತ್ ನಮಾಝ್ ಗಳನ್ನು ನಿರ್ವಹಿಸಿಬಹುದು ಎಂದು ಸಲಹೆ ನೀಡಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಾ ವಿಶ್ವವೇ ಭಯದ ವಾತಾವರಣದಲ್ಲಿದೆ. ಇಂತಹಾ ಭಯದ ಸನ್ನಿವೇಶದಲ್ಲಿ ಸಾಮಾಜಿಕ ಹಿತಾಸಕ್ತಿ ಬಗ್ಗೆಯೂ ಯೋಚಿಸಬೇಕಿದೆ. ನಮಾಝ್’ಗಳನ್ನು ಮನೆಯಲ್ಲಿ ನಿರ್ವಹಿಸಲು ಶರೀಅತ್…
ಸಂಶೋಧಕರ ಯಶೋಗಾಥೆ; ಕಿಲ್ಲರ್ ಕೊರೋನಾಗೆ ಔಷಧಿ ಸಿದ್ದ
ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕಿಲ್ಲರ್ ಕೊರೋನಾವನ್ನು ಮಣಿಸಲು ಔಷಧಿ ಸಿದ್ದವಾಗಿದೆ. ಈ ಔಷಧಿಗೆ ರಷ್ಯಾ ಸರ್ಕಾರ ಅನುಮೋದನೆ ನೀಡಿದ್ದು ಜೂನ್ 11ರಿಂದ ಬಳಕೆಗೆ ನಿರ್ಧರಿಸಲಾಗಿದೆ. ಕೊರೋನಾ ವೈರಾಣು ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡಿದ್ದು ವಿಶ್ವದ ಹಲವು ರಾಷ್ಟ್ರಗಳನ್ನು ಬಿಗಿ ಮುಷ್ಟಿಯಲ್ಲಿ ಇಟ್ಟುಕೊಂಡಿದೆ. ಲಸಿಕೆಯೇ ಇಲ್ಲದ ಈ ವೈರಾಣು ಹಾವಳಿ ಎದುರಿಸಲು ಎಲ್ಲಾ ರಾಷ್ಟ್ರಗಳು ವಿಫಲವಾಗಿವೆ. ಭೀಕರ ಮಾರಣ ಹೋಮವನ್ನೇ ನಡೆಸುತ್ತಿರುವ ಕೋವಿಡ್-19 ವೈರಸ್ ಸೋಂಕು ತಡೆಯಲು ಲಸಿಕೆ ತಯಾರಿ ನಡೆದಿತ್ತಾದರೂ ಅದ್ಯಾವುದೂ ಪರಿಣಾಮ ಬೀರಿಲ್ಲ. ಇದೀಗ ಈ ವಿಚಾರದಲ್ಲಿ ರಷ್ಯಾದ ಸಂಶೋಧಕರು ಯಶೋಗಾಥೆ ಬರೆದಿದ್ದಾರೆ. ‘ಅವಿಫಾವಿರ್’ ಹೆಸರಿನ ಔಷಧಿ ಕೋವಿಡ್-19 ವೈರಾಣು ನಿಗ್ರಹದಲ್ಲಿ ಮಹತ್ವಪೂರ್ಣ ಕೆಲಸ ಮಾಡಲಿದ್ದು, ಪ್ರತೀ ತಿಂಗಳು 60 ಸಾವಿರ ಮಂದಿಗೆ ಈ ಔಷಧಿ ಪೂರೈಸಲು ಔಷಧಿ ತಯಾರಿಕಾ ಕಂಪೆನಿ ಸಿದ್ಧತೆ ನಡೆಸಿದೆ. 1990ರಲ್ಲಿ ಜಪಾನ್ ಮೂಲದ ಕಂಪೆನಿ ‘ಪಾವಿಪಿರವಿರ್’ ಎಂಬ ಔಷಧಿಯನ್ನು ತಯಾರಿಸಿತ್ತು.…
2021ರ ಮಾರ್ಚ್ 31 ರೊಳಗೆ ದೇಶಾದ್ಯಂತ ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ಜಾರಿ
ದೆಹಲಿ: ಮಹತ್ವಾಕಾಂಕ್ಷೆಯ ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ಯೋಜನೆ ಮುಂದಿನ ವರ್ಷ ಮಾರ್ಚ್ 31ರೊಳಗೆ ದೇಶಾದ್ಯಂತ ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ಸಂಕಲ್ಪ ಮಾಡಿದೆ. ಒಡಿಶಾ, ಸಿಕ್ಕಿಂ ಮತ್ತು ಮಿಜೋರಾಂ ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ಯೋಜನೆಗೆ ಸೇರ್ಪಡೆಯಾದ ನಂತರ, ಇದೀಗ 20 ರಾಜ್ಯಗಳು ಐಎಂಪಿಡಿಎಸ್ ಗೆ ಸಂಪರ್ಕ ಹೊಂದಿವೆ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. . ಈ ಯೋಜನೆಯನ್ನು 2021ರ ಮಾರ್ಚ್ 31 ರೊಳಗೆ ದೇಶಾದ್ಯಂತ ಜಾರಿಗೆ ತರಲಾಗುವುದು. ಈ ನಿಟ್ಟಿನಲ್ಲಿ 2020ರ ಆಗಸ್ಟ್ 1 ರೊಳಗೆ ಉತ್ತರಾಖಂಡ್, ನಾಗಾಲ್ಯಾಂಡ್ ಮತ್ತು ಮಣಿಪುರವನ್ನು ಸಂಪರ್ಕಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. 31 मार्च 2021 तक #वन_नेशन_वन_राशनकार्ड योजना को पूरे देश…
