ಇಂದೋರ್: ಪಂಚ ರಾಜ್ಯಗಳ ಚುನಾವಣಾ ಸಮರ ಒಂದಿಲ್ಲೊಂದು ಕುತೂಹಲದ ಕೇಂದ್ರಬಿಂದುವಾಗುತ್ತಿದೆ. ಈ ನಡುವೆ ಮಧ್ಯಪ್ರದೇಶದಲ್ಲಿ ಕೈ ಪಾಳಯದ ಸನ್ನಿವೇಶವೊಂದು ಗಮನಸೆಳೆದಿದೆ.
ಮಧ್ಯಪ್ರದೇಶ ವಿಧಾನಸಭೆಯಲ್ಲಿ ಗೆದ್ದೇ ಗೆಲ್ಲಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ನಾಯಕರನ್ನು ಕರೆಸಿಕೊಂಡು ಭರ್ಜರಿ ಪ್ರಚಾರ ನಡೆಸುತ್ತಿದೆ. ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿ ಸಹಿತ ಘಟಾನುಘಟಿ ನಾಯಕರ ಆಗಮನವಾಗುತ್ತಿದ್ದು, ಅವರ ಆಗಮನ ಸಂದರ್ಭದಲ್ಲಿ ಸ್ವಾಗತಿಸಲು ನಾಯಕರು ಮುಗಿಬೀಳುತ್ತಿದ್ದಾರೆ. ಇದೇ ಸನ್ನಿವೇಶ ಎಡವಟ್ಟಿಗೂ ಸಾಕ್ಷಿಯಾಗಿದೆ.
ಮಧ್ಯಪ್ರದೇಶದ ಇಂದೋರ್‌ನಲ್ಲಿ ಭಾಗಿಯಾದ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕರೊಬ್ಬರು ಪ್ರಿಯಾಂಕಾ ಅವರನ್ನು ಅಭಿನಂದಿಸುವ ವೇಳೆ ನೀಡಿದ ಪುಷ್ಪಗುಚ್ಛದಲ್ಲಿ ಹೂವೇ ಇರಲಿಲ್ಲ. ಬೊಕ್ಕೆಯನ್ನು ಖರೀದಿಸಿದಾಗ ಕಲರ್‌ಫುಲ್ ಹೂಗಳಿದ್ದವು. ಆದರೆ, ಅದೇ ಬೊಕ್ಕೆ ವೇದಿಕೆಯನ್ನು ಏರಿದಾಗ ಅದರಲ್ಲಿ ಹೂವುಗಳು ಮಾಯವಾಗಿದ್ದವು. ಗೌರವ ಸ್ವೀಕರಿಸಿದ ಪ್ರಿಯಾಂಕಾ, ತನಗೆ ನೀಡಿದ ಬೊಕ್ಕೆಯನ್ನು ಕಂಡು ಗಲಿಬಿಲಿಗೊಂಡರು. ಇದೇನಿದು ಇದರಲ್ಲಿ ಹೂವೇ ಇಲ್ಲ ಎಂದು ಪ್ರಿಯಾಂಕಾ ಪ್ರಶ್ನಿಸಿದರು. ಈ ಪ್ರಿಯಾಂಕಾ ಪ್ರಶ್ನೆಯಿಂದ ವೇದಿಕೆಯಲ್ಲಿದ್ದ ನಾಯಕರು ಮುಜುಗರಕ್ಕೆ ಒಳಗಾದರು.
ಈ ಸನ್ನಿವೇಶದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ವೀಡಿಯೋವನ್ನು ಎದುರಾಳಿ ಪಕ್ಷ ಬಿಜೆಪಿ ಅಸ್ತ್ರವನ್ನಾಗಿ ಬಳಸಿಕೊಳ್ಳಿತ್ತಿದೆ. ಈ ಬಗ್ಗೆ ವಿಶ್ಲೇಷಿಸಿರುವ ಬಿಜೆಪಿ ನಾಯಕ ರಾಕೇಶ್ ತ್ರಿಪಾಠಿ, ‘ಇದು ಕಾಂಗ್ರೆಸ್ ನವರ “ಪುಷ್ಪಗುಚ್ಛ ಹಗರಣ” ಎಂದು ಗೇಲಿ ಮಾಡಿದ್ದಾರೆ.
गुलदस्ता घोटाला 😜
गुलदस्ते से गुल गायब हो गया.. दस्ता पकड़ा दिया 😂😂
मध्यप्रदेश के इंदौर में प्रियंका वाड्रा की रैली में एक कांग्रेसी गुलदस्ता देने पहुंचा लेकिन कांग्रेसी खेल हो गया।#MPElections2023 pic.twitter.com/y7Qmyldp94— Rakesh Tripathi (Modi Ka Parivar) (@rakeshbjpup) November 6, 2023