ನವದೆಹಲಿ: ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಮಹಿಳೆಯರಿಗೆ ಅವರ ನ್ಯಾಯಸಮ್ಮತ ಹಕ್ಕು ದೊರಕಿಸಿಕೊಡಲು ಮಹಿಳಾ ಮೀಸಲಾತಿ ಜಾರಿಗೆ ಎದುರಾಗುವ ಎಲ್ಲ ಅಡೆತಡೆಗಳನ್ನು ನಿವಾರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಶನಿವಾರ ತಮ್ಮ ಎಕ್ಸ್ ಖಾತೆಯಲ್ಲಿ ಕಿರು ವಿಡಿಯೋ ಸಂದೇಶ ಹಂಚಿಕೊಂಡಿರುವ ಅವರು, ಮಹಿಳಾ ಮೀಸಲಾತಿಗಾಗಿ ದೇಶದಲ್ಲಿ ಹಲವು ದಶಕಗಳಿಂದ ಹೋರಾಟ ನಡೆಯುತ್ತಿದೆ. ಈ ಹೋರಾಟದಲ್ಲಿ ತಾವೂ ಹಲವು ವರ್ಷಗಳಿಂದ ಭಾಗಿಯಾಗಿರುವುದಾಗಿ ತಿಳಿಸಿದ್ದಾರೆ. ಮಹಿಳೆಯರು ಪತ್ರಗಳ ಮೂಲಕ ತಮ್ಮ ಬೇಡಿಕೆಗಳನ್ನು ನಿರಂತರವಾಗಿ ಸರ್ಕಾರದ ಗಮನಕ್ಕೆ ತರುತ್ತಿದ್ದಾರೆ. ದೇಶದ ನಾರಿಶಕ್ತಿಯ ಸಂಪೂರ್ಣ ಆಶೀರ್ವಾದ ಸರ್ಕಾರದೊಂದಿಗಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಮಹಿಳಾ ಮೀಸಲಾತಿಯ ಹಾದಿಯಲ್ಲಿರುವ ಪ್ರತಿಯೊಂದು ಅಡೆತಡೆಯನ್ನೂ ನಿವಾರಿಸುವ ಸಂಕಲ್ಪ ನಮ್ಮದಾಗಿದೆ. ನಮ್ಮ ಧೈರ್ಯ, ಮನೋಬಲ ಮತ್ತು ಸಂಕಲ್ಪ ಅಚಲವಾಗಿದೆ ಎಂದು ಮೋದಿ ಹೇಳಿದ್ದಾರೆ. ಮಹಿಳಾ ಮೀಸಲಾತಿಯನ್ನು ವಿರೋಧಿಸುವ…
Day: November 28, 2026
ಸುದೀಪ್ – ಪ್ರೇಮ್ ಕಾಂಬಿನೇಷನ್ನಲ್ಲಿ ‘DADA On Holiday’! ಕಿಚ್ಚನ ಸಿನಿಮಾದ ಕೋತೂಹಲ ಹೆಚ್ಚಿಸಿದ ಟೈಟಲ್ ಟೀಸರ್
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ, ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ ‘DADA On Holiday’ ಚಿತ್ರದ ಅಧಿಕೃತ ಟೈಟಲ್ ಟೀಸರ್ ಬಿಡುಗಡೆಯಾಗಿದೆ. ಚಿತ್ರದ ಟೀಸರ್ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಆರುದ್ರ ಸಿನಿಮಾಸ್ ಮತ್ತು ಪ್ರೇಮ್ ಫೀನಿಕ್ಸ್ ಬ್ಯಾನರ್ಗಳ ಅಡಿಯಲ್ಲಿ ರೂಪುಗೊಳ್ಳುತ್ತಿರುವ ಚಿತ್ರಕ್ಕೆ ರೂಪೇಶ್ ಕುಮಾರ್ ಜಿ., ಶಶಿಕಿರಣ್ ಆರ್. ಮತ್ತು ರಕ್ಷಿತಾ ಪ್ರೇಮ್ ನಿರ್ಮಾಪಕರಾಗಿದ್ದಾರೆ. ಪ್ರೇಮ್ ಕಥೆ, ನಿರ್ದೇಶನ ಹಾಗೂ ಸಾಹಿತ್ಯದ ಹೊಣೆ ಹೊತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ಶೇಖರ್ ಚಂದ್ರು ಛಾಯಾಗ್ರಹಣ, ಶಿವಕುಮಾರ್ ಜೆ. ಕಲಾ ನಿರ್ದೇಶನ ಮತ್ತು ಸಂಕೇತ್ ಆಚಾರ್ಯ ಸಂಕಲನ ನಿರ್ವಹಿಸಿದ್ದಾರೆ. ಚಿತ್ರದ ಸಂಭಾಷಣೆಯನ್ನು ಅಭಿಜಿತ್ ಮಹೇಶ್ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಮಿಕ್ಸಿಂಗ್ ಕಾರ್ಯ ನಿರ್ವಹಿಸಿದ್ದು, ಪ್ರೇಮ್ ಹಾಗೂ ಸಾಕ್ಷಿ ಕಲ್ಲೂರು ಗಾಯನ ನೀಡಿದ್ದಾರೆ. ಆನಂದ್ ಆಡಿಯೋ ವಿಡಿಯೋ ಸಂಸ್ಥೆಯ ಯೂಟ್ಯೂಬ್ ಚಾನೆಲ್ನಲ್ಲಿ…
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ಮೂವರು ಸಾವು!
ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಮಂಡ್ಯ ಜಿಲ್ಲೆಯ ಇಂಡುವಾಳು ಗ್ರಾಮದ ಬಳಿ ಜಲ್ಲಿ ತುಂಬಿದ್ದ ಟಿಪ್ಪರ್ಗೆ ಹಿಂದಿನಿಂದ ಥಾರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ಯುವತಿಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬನನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಕಿಲೋಮೀಟರ್ಗಟ್ಟಲೆ ವಾಹನ ದಟ್ಟಣೆ ಉಂಟಾಗಿತ್ತು. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಜಪಾನ್ನಿಂದ ಕರ್ನಾಟಕಕ್ಕೆ ₹800 ಕೋಟಿ ಹೂಡಿಕೆ ಒಪ್ಪಂದ! 10 ವರ್ಷಗಳಲ್ಲಿ 600 ಉದ್ಯೋಗ ಸೃಷ್ಟಿ; ಬೆಂಗಳೂರಿನಾಚೆಗೂ ಕೈಗಾರಿಕೆ ವಿಸ್ತರಣೆಗೆ ಆದ್ಯತೆ
ಬೆಂಗಳೂರು: ವಿದೇಶಿ ನೇರ ಹೂಡಿಕೆಯಲ್ಲಿ ಕರ್ನಾಟಕವನ್ನು ದೇಶದ ನಂ.1 ರಾಜ್ಯವನ್ನಾಗಿಸುವುದು ಹಾಗೂ ಬೆಂಗಳೂರಿನಾಚೆಗೂ ಕೈಗಾರಿಕೆಗಳನ್ನು ವಿಸ್ತರಿಸಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವುದು ಜಪಾನ್ ಪ್ರವಾಸದ ಪ್ರಮುಖ ಉದ್ದೇಶವಾಗಿತ್ತು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ನವೆಂಬರ್ 23ರಿಂದ 25ರವರೆಗೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹಾಗೂ ಹಿರಿಯ ಅಧಿಕಾರಿಗಳ ನಿಯೋಗದೊಂದಿಗೆ ಕೈಗೊಂಡಿದ್ದ ಮೂರು ದಿನಗಳ ಜಪಾನ್ ಪ್ರವಾಸದ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಪ್ರವಾಸದ ವೇಳೆ ಕವಾಸಕಿ-ವಿಪ್ರೋ ಕವಾಸಕಿ ಸಂಸ್ಥೆಯು ಹಾರೋಹಳ್ಳಿ ಘಟಕ ವಿಸ್ತರಣೆಗೆ ಮುಂದಿನ 10 ವರ್ಷಗಳಲ್ಲಿ ₹800 ಕೋಟಿ ಹೂಡಿಕೆ ಮಾಡುವ ಒಪ್ಪಂದ ಮಾಡಿಕೊಂಡಿದೆ. ಇದರಿಂದ 600 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದರು. ಟೊಯೊಟಾ, ಪ್ಯಾನಾಸೋನಿಕ್, ಜೆಎಫ್ಇ ಸ್ಟೀಲ್, ಜೆಎಕ್ಸ್ ಮೆಟಲ್ಸ್ ಮತ್ತು ಟಕೆಡಾ ಕಂಪನಿಗಳೊಂದಿಗೆ ಸ್ಥಳೀಕರಣ, ಹೈಬ್ರಿಡ್ ವಾಹನ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಹಾಗೂ ಉಕ್ಕು ಉತ್ಪಾದನೆ ಕುರಿತು ಚರ್ಚಿಸಲಾಗಿದೆ. ಸುಮಿಟೊಮೊ ಸಹಯೋಗದಲ್ಲಿ ಜಪಾನ್…
12ನೇ ದಿನವೂ ಆಶಾ ಕಾರ್ಯಕರ್ತೆಯರ ಹೋರಾಟ! ಬೇಡಿಕೆ ಈಡೇರಿಸುವಂತೆ ಸರ್ಕಾರದ ಮೇಲೆ ಹೆಚ್ಚಿದ ಒತ್ತಡ
ಬೆಂಗಳೂರು: ಎಐಯುಟಿಯುಸಿ (AIUTUC) ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟ 12ನೇ ದಿನವೂ ಮುಂದುವರಿದಿದೆ. ಶನಿವಾರವೂ ಹಲವು ಗಣ್ಯರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಕಾರ್ಯಕರ್ತೆಯರ ಬೇಡಿಕೆಗಳಿಗೆ ಬೆಂಬಲ ವ್ಯಕ್ತಪಡಿಸಿದರು. ಬರಹಗಾರ್ತಿ ಹಾಗೂ ಸ್ತ್ರೀವಾದಿ ಚಿಂತಕಿ ಆಶಾ ದೇವಿ ಮಾತನಾಡಿ, ಬಲಿಷ್ಠರಿಗೆ ಅನುದಾನ ನೀಡಲು ಸರ್ಕಾರದ ಬಳಿ ಹಣವಿದೆ; ಆದರೆ ದುಡಿಯುವ ಜನರ ಬೇಡಿಕೆ ಈಡೇರಿಸಲು ಹಣವಿಲ್ಲ ಎಂಬ ಧೋರಣೆ ಸರಿಯಲ್ಲ ಎಂದು ಟೀಕಿಸಿದರು. ಹಿಂದಿನ ಗಾರ್ಮೆಂಟ್ಸ್ ಕಾರ್ಮಿಕರ ಹೋರಾಟವನ್ನು ನೆನಪಿಸಿದ ಅವರು, ಆಶಾ ಕಾರ್ಯಕರ್ತೆಯರು ಹೋರಾಟ ಕೈಬಿಡದೆ ಮುಂದುವರಿಸಬೇಕು. ಅಂತಿಮವಾಗಿ ಜಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಟ ಚೇತನ್ ಅಹಿಂಸಾ ಮಾತನಾಡಿ, ಹಠ ಮಾಡುತ್ತಿರುವುದು ಸರ್ಕಾರವೇ ಹೊರತು ಕಾರ್ಮಿಕರಲ್ಲ. ಆಶಾ ಕಾರ್ಯಕರ್ತೆಯರ ಹೋರಾಟ ನ್ಯಾಯಯುತವಾಗಿದ್ದು, ಸರ್ಕಾರ ಕೇಂದ್ರದತ್ತ ಬೆರಳು ತೋರಿಸುವ ಬದಲು ತನ್ನ ಜವಾಬ್ದಾರಿ ನಿರ್ವಹಿಸಬೇಕು ಎಂದು ಆಗ್ರಹಿಸಿದರು. ದುಡಿಯುವ ಜನರಿಗೆ ಸೌಲಭ್ಯ ಕಲ್ಪಿಸಲು…
ಮಹಿಳಾ ಮೀಸಲಾತಿ ಮಸೂದೆಗೆ ಸರ್ವಪಕ್ಷಗಳ ಬೆಂಬಲ ಕೋರಿದ ಅಮಿತ್ ಶಾ! ಶಾಸನಸಭೆಗಳ ಸದಸ್ಯ ಬಲ ಹೆಚ್ಚಳಕ್ಕೂ ಪ್ರಸ್ತಾವನೆ
ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶಿತ 132ನೇ ಸಂವಿಧಾನ ತಿದ್ದುಪಡಿ ಮಸೂದೆಗೆ ಬೆಂಬಲ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಮಸೂದೆಗೆ ಅನುಮೋದನೆ ನೀಡಿದೆ. ಚುನಾಯಿತ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಕಲ್ಪಿಸುವ ದೀರ್ಘಕಾಲದ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದು ಅಮಿತ್ ಶಾ ಬಣ್ಣಿಸಿದರು. ‘ನಾರಿ ಶಕ್ತಿ ವಂದನ ಕಾಯಿದೆ’ಯಡಿ ಪ್ರಸ್ತಾಪಿಸಿರುವ ಮೀಸಲಾತಿಯಿಂದ ನೀತಿ ನಿರೂಪಣೆ, ಶಾಸನ ರಚನೆ ಹಾಗೂ ರಾಷ್ಟ್ರೀಯ ಆದ್ಯತೆಗಳ ನಿರ್ಧಾರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಲಿದೆ ಎಂದು ಹೇಳಿದರು. ಇದೇ ವೇಳೆ, ಸಂವಿಧಾನದ 170(1)ನೇ ವಿಧಿಗೆ ತಿದ್ದುಪಡಿ ತಂದು ರಾಜ್ಯ ವಿಧಾನಸಭೆಗಳ ಗರಿಷ್ಠ ಸದಸ್ಯ ಬಲವನ್ನು 500ರಿಂದ ಸುಮಾರು 650ಕ್ಕೆ…
ಕುವೈತ್ ಡ್ರೋನ್ ದಾಳಿ ಖಂಡಿಸಿದ ವಿಶ್ವಸಂಸ್ಥೆ; ಇರಾನ್ ನಡೆಗೆ ಆಕ್ಷೇಪ
ಕುವೈತ್: ಕುವೈತ್ನಲ್ಲಿ ನಡೆದ ಡ್ರೋನ್ ದಾಳಿಯನ್ನು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಖಂಡಿಸಿದ್ದಾರೆ. ದಾಳಿಯಲ್ಲಿ ಇಬ್ಬರು ಇಟಲಿ ಪ್ರಜೆಗಳು ಮೃತಪಟ್ಟಿದ್ದು, ಕುವೈತ್ ಮತ್ತು ಪಾಕಿಸ್ತಾನದ ತಲಾ ಒಬ್ಬರು ಗಾಯಗೊಂಡಿದ್ದಾರೆ. ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಗುಟೆರಸ್, ಸಂಯಮ ಕಾಯ್ದುಕೊಂಡು ಮಾತುಕತೆ ಮೂಲಕ ಶಾಂತಿ ಸ್ಥಾಪಿಸುವಂತೆ ಕರೆ ನೀಡಿದ್ದಾರೆ. ದಾಳಿಗೆ ಇರಾನ್ ಹೊಣೆ ಎಂದು ಆರೋಪಿಸಿರುವ ಕುವೈತ್, ಇರಾನ್ ರಾಯಭಾರಿ ಮೊಹಮ್ಮದ್ ತೊಟೊಂಚಿ ಅವರನ್ನು ಕರೆಸಿ ಅಧಿಕೃತ ಪ್ರತಿಭಟನಾ ಪತ್ರ ಸಲ್ಲಿಸಿದೆ. ಕುವೈತ್ ಸಾರ್ವಭೌಮತ್ವ ಉಲ್ಲಂಘನೆಯಾಗಿದ್ದು, ದೇಶದ ಭದ್ರತೆಗಾಗಿ ಸ್ವಯಂ ರಕ್ಷಣೆಯ ಹಕ್ಕು ಕಾಯ್ದಿರಿಸಿರುವುದಾಗಿ ಎಚ್ಚರಿಸಿದೆ. ಆದರೆ, ದಾಳಿಯಲ್ಲಿ ಇರಾನ್ ಪಾತ್ರವಿಲ್ಲ ಎಂದು ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಘ್ಚಿ ಸ್ಪಷ್ಟಪಡಿಸಿದ್ದಾರೆ. ದಾಳಿಯ ಮೂಲ ಪತ್ತೆಹಚ್ಚಲು ಜಂಟಿ ತನಿಖೆ ನಡೆಸಲು ಸಿದ್ಧವಿರುವುದಾಗಿಯೂ ತಿಳಿಸಿದ್ದಾರೆ.
ಪರ್ಯಾಯ ಇಂಧನ ಸಂಶೋಧನೆ ಜನರಿಗೆ ತಲುಪಲಿ: ಡಾ. ವಿ.ಕೆ. ಸರಸ್ವತ್
ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ‘ಐಸಿ ಎಂಜಿನ್, ಪ್ರೊಪಲ್ಷನ್ ಮತ್ತು ಕಂಬಶನ್ 2.0’ ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ; ಕೇಂದ್ರ ಸಚಿವರಾದ ಕುಮಾರಸ್ವಾಮಿ, ರಾಮಮೋಹನ್ ನಾಯ್ಡು ವಿಡಿಯೋ ಸಂದೇಶ ಬೆಂಗಳೂರು: ನವೀಕರಿಸಬಹುದಾದ ಮತ್ತು ಪರ್ಯಾಯ ಇಂಧನಗಳ ಕುರಿತ ಸಂಶೋಧನೆಗಳು ಪ್ರಯೋಗಾಲಯಗಳಿಗೆ ಸೀಮಿತವಾಗದೆ, ಪ್ರಾಯೋಗಿಕವಾಗಿ ಅನುಷ್ಠಾನಗೊಂಡು ಜನಸಾಮಾನ್ಯರು ಹಾಗೂ ಕೈಗಾರಿಕೆಗಳಿಗೆ ಪ್ರಯೋಜನವಾಗಬೇಕು ಎಂದು ನೀತಿ ಆಯೋಗದ ಮಾಜಿ ಸದಸ್ಯ ಡಾ. ವಿ.ಕೆ. ಸರಸ್ವತ್ ಹೇಳಿದರು. ಅಲಯನ್ಸ್ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ನಲ್ಲಿ ನವೆಂಬರ್ 27ರಿಂದ 29ರವರೆಗೆ ನಡೆಯಲಿರುವ ‘ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಆನ್ ಐಸಿ ಎಂಜಿನ್, ಪ್ರೊಪಲ್ಷನ್ ಅಂಡ್ ಕಂಬಶನ್ 2.0’ (ICICEPC 2.0) ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮುಖ್ಯ ಭಾಷಣ ಮಾಡಿದರು. ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು ಅವರು ವಿಡಿಯೋ ಸಂದೇಶಗಳ ಮೂಲಕ ಶುಭಾಶಯ ಕೋರಿದರು. ಭಾರತವು…
ವಿರಾಟ್ ಕರ್ಣ ಹೊಸ ಚಿತ್ರಕ್ಕೆ ‘ರುಸ್ತುಂ’ ಶೀರ್ಷಿಕೆ!
ಹೈದರಾಬಾದ್: ನಟ ವಿರಾಟ್ ಕರ್ಣ ಅಭಿನಯದ ಹೊಸ ಸಿನಿಮಾಗೆ ‘ರುಸ್ತುಂ’ ಎಂದು ಶೀರ್ಷಿಕೆ ಘೋಷಿಸಲಾಗಿದೆ. ನಟನ ಹುಟ್ಟುಹಬ್ಬದ ಪ್ರಯುಕ್ತ ನಿರ್ದೇಶಕ ಕನಿಷ್ಕ ಗಂಧಂ ಚಿತ್ರದ ಟೈಟಲ್ ಗ್ಲಿಂಪ್ಸ್ ಬಿಡುಗಡೆ ಮಾಡಿದ್ದಾರೆ. ಪ್ರೈಮ್ಶೋ ಎಂಟರ್ಟೈನ್ಮೆಂಟ್ ನಿರ್ಮಿಸುತ್ತಿರುವ ಚಿತ್ರಕ್ಕೆ ಕೆ. ನಿರಂಜನ್ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ಬಂಡವಾಳ ಹೂಡಿದ್ದಾರೆ. ಆ್ಯಕ್ಷನ್, ಡ್ರಾಮಾ ಮತ್ತು ಆಂತರಿಕ ಸಂಘರ್ಷದ ಕಥಾಹಂದರ ಚಿತ್ರದಲ್ಲಿದೆ. ಸ್ಟೈಲಿಶ್ ಅನಿಮೇಷನ್ ಹಾಗೂ ಹಿನ್ನೆಲೆ ಸಂಗೀತದ ಮೂಲಕ ಚಿತ್ರದ ಲೋಕ ಪರಿಚಯಿಸಲಾಗಿದೆ. ಗ್ಲಿಂಪ್ಸ್ ಕೊನೆಯಲ್ಲಿ ವಿರಾಟ್ ಕರ್ಣ ಹಿಂಬದಿಯಿಂದ ಕಾಣಿಸಿಕೊಂಡಿದ್ದು, ಅವರ ಗಂಭೀರ ಲುಕ್ ಕುತೂಹಲ ಮೂಡಿಸಿದೆ. ತನ್ನದೇ ಅಪರಾಧಪ್ರಜ್ಞೆಯ ವಿರುದ್ಧ ಹೋರಾಡುವ ವ್ಯಕ್ತಿಯ ಕಥೆ ಚಿತ್ರದ ಪ್ರಮುಖ ಆಕರ್ಷಣೆಯಾಗಿರಲಿದೆ ಎಂದು ಚಿತ್ರತಂಡ ತಿಳಿಸಿದೆ.
ಚಿತ್ರಮಂದಿರಗಳಿಗೆ ಕೈಗಾರಿಕಾ ವಲಯದ ಸ್ಥಾನಮಾನ ಕಲ್ಪಿಸಲು ಮನವಿ!
ಬೆಂಗಳೂರು: ರಾಜ್ಯದ ಚಿತ್ರಮಂದಿರಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸುವುದು, ಚಿತ್ರಮಂದಿರಗಳ ಅಭಿವೃದ್ಧಿ ಮತ್ತು ಆಧುನೀಕರಣ ಹಾಗೂ ಕೈಗಾರಿಕಾ ವಲಯದ ಸ್ಥಾನಮಾನ ಕಲ್ಪಿಸುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ವಿಧಾನಸೌಧದ ಕಚೇರಿಯಲ್ಲಿ ಸಭಾಪತಿ ಅವರನ್ನು ಭೇಟಿ ಮಾಡಿದ ಮಂಡಳಿ ಪ್ರತಿನಿಧಿಗಳು, ಚಿತ್ರಮಂದಿರಗಳ ಉಳಿವು ಮತ್ತು ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಂ.ಎನ್. ಅನುಚೇತ್, ಮಾಜಿ ಅಧ್ಯಕ್ಷರಾದ ಬಾ.ಮಾ. ಹರೀಶ್, ಸಾರಾ ಗೋವಿಂದು, ಕೆ.ವಿ. ಚಂದ್ರಶೇಖರ್, ಥಾಮಸ್ ಡಿಸೋಜ, ಎನ್.ಎಂ. ಸುರೇಶ್, ನರಸಿಂಹಲು ಸೇರಿದಂತೆ ಪದಾಧಿಕಾರಿಗಳಾದ ಸುಂದರ್ ರಾಜ್, ಜಯಸಿಂಹ ಮುಸುರಿ, ಕೆ. ಮಂಜು ಮತ್ತಿತರರು ಉಪಸ್ಥಿತರಿದ್ದರು.
