ಬೆಂಗಳೂರು: ಈವರೆಗೂ ‘ಶಕ್ತಿ’ ಮೂಲಕ ಗಮನಸೆಳೆದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಇದೀಗ ತನ್ನ ಪ್ರಯಾಣಿಕರಿಗೆ ಮತ್ತೊಂದು ಯೋಜನೆಯನ್ನು ಪ್ರಕಟಿಸಿದೆ. ಬೆಂಗಳೂರು ಟು ಜೋಗಾ, ಬೆಂಗಳೂರು ಟು ಸೋಮನಾಥಪುರ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಪ್ಯಾಕೇಜ್ ಟೂರ್ ಆರಂಭಿಸಲಾಗಿದೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ “ಬೆಂಗಳೂರು-ಸೋಮನಾಥಪುರ-ತಲಕಾಡು–ಭರಚುಕ್ಕಿ-ಗಗನಚುಕ್ಕಿ” ಮಾರ್ಗದಲ್ಲಿ ವಾರಾಂತ್ಯದ ದಿನಗಳಲ್ಲಿ (ಶನಿವಾರ & ಭಾನುವಾರ) ಪ್ಯಾಕೇಜ್ ಟೂರನ್ನು ರೂಪಿಸಿದೆ. 12/08/2023 ರಿಂದ ಈ ಪ್ಯಾಕೇಜ್ ಟೂರ್ ಆರಂಭವಾಗಲಿದ್ದು (ಪ್ರವೇಶ ಶುಲ್ಕ, ಉಪಹಾರ, ಮಧ್ಯಾಹ್ನದ/ರಾತ್ರಿ ಊಟವನ್ನು ಹೊರತುಪಡಿಸಿ) ಸಾಧಾರಣ ದರವನ್ನು ನಿಗದಿಪಡಿಸಲಾಗಿದೆ.
- ಟಿಕೆಟ್ ದರ ಹೀಗಿದೆ: ಬೆಂಗಳೂರಿನಿಂದ ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿ ಟೂರ್ ಪ್ಯಾಕೇಜ್ ಗೆ ವಯಸ್ಕರಿಗೆ 450 ರೂಪಾಯಿ. 6 ರಿಂದ 12 ವರ್ಷದ ಮಕ್ಕಳಿಗೆ 300 ರೂಪಾಯಿ ದರ ನಿಗದಿಪಡಿಸಲಾಗಿದೆ.
ಬೆಂಗಳೂರು-ಜೋಗ ಜಲಪಾತ ಟೂರ್ ಪ್ಯಾಕೇಜ್;
ಶಿವಮೊಗ್ಗ, ಸಾಗರ ಮಾರ್ಗವಾಗಿ ‘ಬೆಂಗಳೂರು-ಜೋಗ ಜಲಪಾತ’ ಟೂರ್ ಪ್ಯಾಕೇಜ್ 12.08.2023 ರಿಂದ ಪ್ರಾರಂಭವಾಗಲಿದೆ. ನಾನ್ ಎಸಿ ಸ್ಲೀಪರ್ ವಾಹನದೊಂದಿಗೆ ವಾರಾಂತ್ಯದ ದಿನಗಳಲ್ಲಿ (ಶುಕ್ರವಾರ ಮತ್ತು ಶನಿವಾರ) ಪ್ಯಾಕೇಜ್ ಟೂರ್ ಅವಕಾಶ ಸಿಗಲಿದೆ.
- ಟಿಕೆಟ್ ದರ ಹೀಗಿದೆ: ‘ಬೆಂಗಳೂರು ಟು ಜೋಗ ಜಲಪಾತ’ ಪ್ರಾಕೇಜ್ ಟೂರ್ ಟಿಕೆಟ್ ದರವನ್ನು ವಯಸ್ಕರಿಗೆ 2,500 ರೂಪಾಯಿ ಹಾಗೂ 6 ರಿಂದ 12 ವರ್ಷದ ಮಕ್ಕಳಿಗೆ 2,300 ರೂಪಾಯಿ ನಿಗದಿಪಡಿಸಲಾಗಿದೆ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 7760990287, 7760990988ಗೆ ಸಂಪರ್ಕಿಸಬಹುದು ಎಂದು ಎಂದು KSRTC ಪ್ರಕಟಣೆ ತಿಳಿಸಿದೆ,