ಕರಾವಳಿಯಲ್ಲೇ ಏಕೆ ಇಷ್ಟೊಂದು ಕೊರೋನಾ ಕೇಸ್?

ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ನಿನ್ನೆ ರಾಜ್ಯದಲ್ಲಿ 515 ಪ್ರಕರಣಗಳು ದಾಖಲೆ ಎಂಬಂತೆ ವರದಿಯಾಗಿದೆ.

ಉಡುಪಿ ಜಿಲ್ಲೆಯಲ್ಲಿ204 ಪಾಸಿಟಿವ್ ಪ್ರಕರಣಗಳು ಪತ್ತೆಯಾಡಿದೆ. ಯಾದಗಿರಿ 74 ಮಂದಿಯಲ್ಲಿ ಸೋಂಕು ದೃಢಪಟ್ಟರೆ, ವಿಜಯಪುರದಲ್ಲಿ 53 ಕೇಸ್’ಗಳು ಪತ್ತೆಯಾಗಿವೆ. ಕಲಬುರಗಿಯಲ್ಲಿ 42, ಬೀದರ್’ನಲ್ಲಿ 39, ಬೆಳಗಾವಿಯಲ್ಲಿ 36 ಮಂದಿಯ ಪರೀಕ್ಷಾ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಮಂಡ್ಯದಲ್ಲಿ 13, ಬೆಂಗಳೂರು ನಗರದಲ್ಲಿ 10, ಬೆಂಗಳೂರು ಗ್ರಾಮಾಂತರದಲ್ಲಿ 12, ದಕ್ಷಿಣ ಕನ್ನಡದಲ್ಲಿ 8, ಉತ್ತರ ಕನ್ನಡದಲ್ಲಿ 7, ಧಾರವಾಡ, ಹಾಸನ, ಚಿಕ್ಕಬಳ್ಳಾಪುರಜಿಲ್ಲೆಗಳಲ್ಲಿ ತಲಾ 3, ರಾಮನಗರ, ದಾವಣಗೆರೆ, ಬಾಗಲಕೋಟೆ, ಬಳ್ಳಾರಿ ಜಿಲ್ಲೆಗಳಲ್ಲಿ ತಲಾ ಒಂದು ಕೇಸ್ ಪತ್ತೆಯಾಗಿದೆ.

ಈ ಸೋಂಕಿತರ ಪೈಕಿ 482 ಮಂದಿ ಅಂತರ್ ರಾಜ್ಯ ಟ್ರಾವೆಲ್ ಹಿಸ್ಟರಿಯುಳ್ಳವರು. ಆದರೆ ಉಡುಪಿ ಜಿಲ್ಲೆಯಲ್ಲೇ ಇಷ್ಟೊಂದು ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿರುವುದು ಅಚ್ಚರಿಯ ಸಂಗತಿ

ಇದನ್ನೂ ಓದಿ.. ನಟ-ನಟಿಯರ ಫಿಟ್ನೆಸ್ ಸೀಕ್ರೆಟ್; ಅಪ್ಪು ಸಕತ್ ವರ್ಕೌಟ್ 

 

Related posts