‘ಪೂವರಿ’ ಸಾರಥ್ಯದಲ್ಲಿ ‘ತುಡರ ಪರ್ಬೊದ ಪೊಲಬು’ ವಿಶಿಷ್ಠ ಕಾರ್ಯಕ್ರಮ

ತುಳು ಅಪ್ಪೆ ಕೂಟ ಮತ್ತು ಪೂವರಿ ಪತ್ರಿಕೆಯಿಂದ ತುಡರ ಪರ್ಬದ ಪೊಲಬು, ತುಳು ತಾಳಮದ್ದಳೆ ಕಾರ್ಯಕ್ರಮ.. ಕೃಷಿ ಸಂಸ್ಕೃತಿ ನಶಿಸುತ್ತಿದ್ದಂತೆ ಹಬ್ಬಗಳ ಸೊಗಡು ಮರೆಯಾಯಿತು ಎಂದ ಗಣ್ಯರು.. ಸಮಾರಂಭಕ್ಕೆ ಆಕರ್ಷಣೆ ತುಂಬಿದ ತಾಳಮದ್ದಳೆ ವೈಭವ.. ಮಂಗಳೂರು: ತುಳು ಪರಂಪರೆ, ಸಂಸ್ಕೃತಿ ವಿಚಾರದಲ್ಲಿ ನಿರಂತರ ಕಾರ್ಯಕ್ರಮಗಳ ಮೂಲಕ ತುಳುನಾಡಿನ ಸೊಗಡಿಗೆ ಶ್ರೀಮಂತಿಕೆ ತುಂಬುತ್ತಿರುವ ಏಕೈಕ ತುಳು ಮಾಸಿಕ ‘ಪೂವರಿ’ ಆಯೋಜಿಸಿದ ‘ತುಳು ಪರ್ಬೋ’ (ತುಳು ಹಬ್ಬ) ಗಮನಸೆಳೆಯಿತು. ಕಾರ್ಯಕ್ರಮದಲ್ಲಿ ಭಾಗಿಯಾದ ಗಣ್ಯರು ನಾಡು-ನುಡಿ-ವೈಭವ ಕುರಿತು ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸಿ ಕುತೂಹಲದ ಕೇಂದ್ರಬಿಂದುವಾದರು. ತುಳುನಾಡಿನಲ್ಲಿ ಕೃಷಿ ಸಂಸ್ಕೃತಿಯ ಪ್ರತಿಫಲನ ಹಬ್ಬಗಳ ಆಚರಣೆಯಲ್ಲಿ ಪ್ರತಿಫಲಿಸುತ್ತಿತ್ತು. ಆದರೆ ಇಂದು ಕೃಷಿ ನಾಶವಾಗಿ ಸಿಮೆಂಟ್ ನೆಲದಲ್ಲಿ ಹಣತೆ ಹಚ್ಚುವ ಅನಿವಾರ್ಯತೆ ನಮ್ಮದಾಗಿದೆ. ಆದರೂ ಮುಂದಿನ ತಲೆಮಾರಿಗೆ ನಮ್ಮ ಆಚರಣೆಗಳನ್ನು ತಿಳಿಸಲು ಇದು ಅನಿವಾರ್ಯ ಎಂದು ವಕೀಲ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ…

72ನೇ ಮಿಸ್‌ ಯೂನಿವರ್ಸ್‌ ಆಗಿ ನಿಕರಾಗುವಾದ ‘ಶೆಯ್ನಿಸ್ ಪಲಾಸಿಯೋಸ್’

ಎಲ್‌. ಸಾಲ್ವಡಾರ್‌ನಲ್ಲಿ ನಡೆದ 72ನೇ ಮಿಸ್‌ ಯೂನಿವರ್ಸ್‌ ಸ್ಪರ್ಧೆಯಲ್ಲಿ ನಿಕರಾಗುವಾದ ಸುಂದರಿ ಶೆಯ್ನಿಸ್ ಪಲಾಸಿಯೋಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 90 ಕ್ಕೂ ಹೆಚ್ಚು ದೇಶಗಳಿಂದ ಸ್ಪರ್ಧಿಗಳ ಪೈಕಿ  ವಿಶ್ವ ಸುಂದರಿ ಪಟ್ಟವನ್ನು ಶೆಯ್ನಿಸ್ ಪಲಾಸಿಯೋಸ್ ಪಡೆದುಕೊಂಡಿದ್ದಾರೆ‌  ಭಾರತೀಯ ಕಾಲಮಾನ ಭಾನುವಾರ ಬೆಳಿಗ್ಗೆ 6:30 ಕ್ಕೆ ಮಿಸ್ ಯೂನಿವರ್ಸ್ ವಿಜೇತರ ಹೆಸರನ್ನು ಘೋಷಿಸಲಾಯಿತು. 23 ವರ್ಷದ ಶೆಯ್ನಿಸ್ ಅಲೋಂಡ್ರಾ ಪಲಾಸಿಯೊಸ್ ಕಾರ್ನೆಜೊ ಅವರು ಕಳೆದ ವರ್ಷದ ವಿಜೇತ ಆರ್’ಬೊನಿ ಗೇಬ್ರಿಯಲ್ ಅವರಿಂದ 2023 ರ ವಿಶ್ವ ಸುಂದರಿ ಕಿರೀಟವನ್ನು ಹಸ್ತಾಂತರಿಸಿದರು. ಇದೇ ವೇಳೆ, ಥಾಯ್ಲೆಂಡ್‌ನ ಆಂಟೋನಿಯಾ ಪೋರ್ಸಿಲ್ಡ್ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡರು. ಆಸ್ಟ್ರೇಲಿಯಾದ ಮೊರಾಯಾ ವಿಲ್ಸನ್ ಎರಡನೇ ರನ್ನರ್ ಅಪ್ ಸ್ಥಾನಕ್ಕೆ ಗುರುತಾದರು. ಭಾರತದ ಸುಂದರಿ 23 ವರ್ಷದ ಶ್ವೇತಾ ಶಾರ್ದಾ ಅವರು ಸೆಮಿಫೈನಲ್‌‌ವರಗೆ ತಲುಪಿದ್ದರು. ಅಗ್ರ 20 ಫೈನಲಿಸ್ಟ್‌ಗಳಲ್ಲಿ ಅವರು ಸ್ಥಾನ ಪಡೆಕೊಂಡಿದ್ದಾರೆ. MISS UNIVERSE 2023…

ತುಳುನಾಡಿನ ‘ಸರೋವರ ಕ್ಷೇತ್ರ’ದಲ್ಲಿ ಮತ್ತೊಂದು ಪವಾಡ..! ಅನಂತಪುರ ಕ್ಷೇತ್ರದಲ್ಲಿ ಹೊಸ ಮೊಸಳೆ ಪ್ರತ್ಯಕ್ಷ

ಮಂಗಳೂರು: ಕರುನಾಡ ಕರಾವಳಿಯ ದೇವಾಲಯಗಳು ಒಂದಿಲ್ಲೊಂದು ಪವಾಡದಿಂದ ಗಮನಸೆಳೆಯುತ್ತ ಇರುತ್ತದೆ. ಗಡಿಜಿಲ್ಲೆ ಕಾಸರಗೋಡು ಸಮೀಪದ ಅನಂತಪುರದ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಕೆಲ ಸಮಯದ ಹಿಂದಷ್ಟೇ ದೇವರ ಮೊಸಳೆ ‘ಬಬಿಯಾ’ ಸಾವನ್ನಪ್ಪಿತ್ತು. ದೇವಾಲಯದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ‘ಬಬಿಯಾ’ ಸಾವಿನ ನಂತರ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಲ್ಲಿ ಬೇಸರ ಕಂಡುಬರುತ್ತಿತ್ತು. ಇದೀಗ ಅನಂತಪುರದ ಅನಂತಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಮತ್ತೊಂದು ಮೊಸಳೆ ಪ್ರತ್ಯಕ್ಷವಾಗಿದೆ. ಈ ಹೊಸ ಮೊಸಳೆ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಸುಮಾರು ಒಂದು ವಾರದ ಹಿಂದೆ ದೇಗುಲಕ್ಕೆ ಭೇಟಿ ನೀಡಿದ್ದ ಭಕ್ತರೊಬ್ಬರು ಕಲ್ಯಾಣಿಯಲ್ಲಿ ‘ಮೊಸಳೆ ಕಂಡಂತೆ ಆಯಿತು’ ಎಂದು ಹೇಳಿಕೊಂಡಿದ್ದರು. ಆದರೆ ಯಾರೂ ಇದನ್ನು ಒಪ್ಪಿಕೊಂಡಿರಲಿಲ್ಲ. ಇದೀಗ ಮೊಸಳೆ ಇರುವುದನ್ನು ದೇಗುಲದ ಆಡಳಿತ ಮಂಡಳಿಯೇ ಖಚಿತಪಡಿಸಿದೆ. ದೇವರ ಪ್ರತಿಬಿಂಬ ಎಂದೇ ಹೇಳಲ್ಪಡುತ್ತಿರುವ ಮೊಸಳೆ ಈಗ ಕಾಣಿಸಿರುವುದು ಭಕ್ತಾದಿಗಳಲ್ಲಿ ಖುಷಿ ತಂದಿದೆ. ಈ ಕುರಿತು ಸಂತಸ ಹಂಚಿಕೊಂಡಿರುವ ಮಾಜಿ ಸಚಿವ ಸಿ.ಟಿ.ರವಿ, ‘ಸರೋವರ…

ಕತಾರ್‌ನಲ್ಲಿ ‘ಕನ್ನಡ ರಾಜ್ಯೋತ್ಸವ’; ಹೀಗೊಂದು‌ ಆಕರ್ಷಣೆ.. ‘ಪ್ರೇಮಲೋಕ-2’ ಸುಳಿವು

ಕತಾರ್: ಕರ್ನಾಟಕ ಸಂಘ ಕತಾರ್, ೬೮ ನೇ ಕನ್ನಡ ರಾಜ್ಯೋತ್ಸವನ್ನು  ಅದ್ದೂರಿಯಾಗಿ ಆಚರಿಸಿತು. ದೋಹಾದ ಡಿ.ಪಿಎಸ್ ಶಾಲೆಯ 1500ಕ್ಕೂ ಹೆಚ್ಚು ಕನ್ನಡ ಅಭಿಮಾನಿಗಳಿಂದ ತುಂಬಿದ ಸಭಾಂಗಣದಲ್ಲಿ ಆಡಳಿತ ಮಂಡಳಿಯಿಂದ ಕನ್ನಡದ ದೀಪ ಹಚ್ಚುವ ಹಾಗೂ ಕೆ.ಎಸ್.ನಿಸಾರ್ ಅಹ್ಮದ್ ರಚಿತ ಜೋಗದ ಸಿರಿ ಬೆಳುಕಿನಲ್ಲಿ ಗಾನ ಮತ್ತು ಸಂಘದ ಅಧ್ಯಕ್ಷರಾದ ಮಹೇಶ್ ಗೌಡ ಅವರ ಸ್ವಾಗತ ಭಾಷಣದಿಂದ ಪ್ರಾರಂಭವಾದ ಕಾರ್ಯಕ್ರಮವು ಕರ್ನಾಟಕ ಸಂಘ ಹಾಗೂ ಅದರ ಸೋದರ ಸಂಸ್ಥೆಗಳಾದ ಬಂಟ್ಸ್ ಕತಾರ್, ಮಂಗಳೂರ ಕಲ್ಚರಲ್ ಅಸೋಸಿಯೇಷನ್ ಮಂಗಳೂರು ಕ್ರಿಕೆಟ್ ಕ್ಲಬ್ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಕರ್ಷಣೆ ಪಡೆಯಿತು. ಸಭೆಯನ್ನು ಸ್ವಾಗತ ಮಾಡುತ್ತ ಮಹೇಶ್ ಗೌಡ ಅವರು ಹಿಂದಿನ ಹಾಗೂ ಈಗಿನ ಆಡಳಿತ ಮಂಡಳಿಗೆ ಧನ್ಯವಾದ ತಿಳಿಸಿದರು. ಮುಂದಿನ ವರ್ಷ ಕರ್ನಾಟಕ ಸಂಘಕ್ಕೆ ರಜತ ಮಹೋತ್ಸವದ ಸಂಭ್ರಮ, ಈ ಸಂಭ್ರಮವನ್ನು ವಿಜರುಮಬನೆಯಿಂದ ನಡೆಸಿಕೊಡುವುದಾಗಿ ಸಭೆಗೆ ತಿಳಿಸಿದರು. ಕತಾರ್ ನಲ್ಲಿನ…

ಬಡಪಾಯಿ ಮಹಿಳೆ ಬದುಕಲ್ಲಿ ‘ಸಂತೋಷ’ ಮೂಡಿಸಿದ ಸಚಿವ.. ಲಾಡ್ ನಡೆಗೆ ‘Hats Off’ ಎಂದ ಜನ

ಧಾರವಾಡ: ಸಚಿವ ಸಂತೋಷ್ ಲಾಡ್ ಒಂದಿಲ್ಲೊಂದು ವಿಚಾರಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಗಣಿ ಧಣಿಯಾಗಿ ಸಾವಿರಾರು ಮಂದಿಯ ಪಾಲಿಗೆ ಉದ್ಯೋಗದಾತನಾಗಿ ಗಮನಸೆಳೆದಿರುವ ಸಂತೋಷ್ ಲಾಡ್, ಜನಾನುರಾಗಿ ಶಾಸಕರಾಗಿ ಉತ್ತರ ಕರ್ನಾಟಕದಲ್ಲಿ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ. ಇದೀಗ ಅವರು, ತಮ್ಮ ವಿಶೇಷ ನಡೆಯಿಂದಾಗಿ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಲಾಡ್ ಅವರು ‘ನೊಂದವರ ಪಾಲಿಗೆ ಆಶಾಕಿರಣ’ ಎಂಬುದು ಅವರ ಕ್ಷೇತ್ರದ ಜನರ ಅಂಬೋಣ. ಇದೀಗ ಭಿಕ್ಷೆ ಬೇಡುತ್ತಿದ್ದ ಮಹಿಳೆಯ ಬದುಕಿಗೆ ಮಾರ್ಗದರ್ಶಿಯಾದ ಪರಿ ಶಹಬ್ಬಾಸ್‌ಗಿರಿ ಗಿಟ್ಟಿಸುವಂತೆ ಮಾಡಿದೆ. ಧಾರವಾಡ ಜಿಲ್ಲಾ ಪ್ರವಾಸ ಸಂದರ್ಭದಲ್ಲಿ ಸಚಿವ ಲಾಡ್ ಅವರಿಗೆ ಶನಿವಾರ ಅಚ್ಚರಿಯ ಸನ್ನಿವೇಶವೊಂದು ಎದುರಾಗಿತ್ತು. ಪುಟ್ಟ ಮಗುವನ್ನು ಹಿಡಿದುಕೊಂಡು ಮಹಿಳೆಯೊಬ್ಬರು ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡುತ್ತಿದ್ದ ಸ್ಥಿತಿಯನ್ನು ಕಂಡು ಅವರು ಮಮ್ಮಲ ಮರುಗಿದರು. ಮಹಿಳೆಯ ಬಳಿ ತೆರಳಿ ಕಷ್ಯಸುಖ ಆಲಿಸಿದರು. ಆಕೆಯ ಹಸಿವು ನೀಗಿಸಲು ಒಂದಷ್ಟು ಮೊತ್ತವನ್ನು ನೀಡಿದ ಲಾಡ್, ಆಕೆಗೆ ಸ್ವಾವಲಂಬಿ ಪಾಠ ಹೇಳಿದರು.…

ಖಾಸಗಿ ಹೈಟೆಕ್ ಸ್ಕೂಲ್’ಗಳನ್ನೂ ನಾಚಿಸುವಂತಿದೆ BTM ಲೇಔಟ್’ನ ಸರ್ಕಾರಿ ಶಾಲೆಗಳು..ಈ ಬಗ್ಗೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಮಂಜುನಾಥ್ ಅವರ ಮನದಾಳದ ಮಾತು ಹೀಗಿದೆ…

ಜನಪ್ರತಿನಿಧಿಗಳಿಗೆ ಜನಸಾಮಾನ್ಯರ ಬಗ್ಗೆ ಇಚ್ಚಾಶಕ್ತಿ ಇದ್ದರೆ ಅಭಿವೃದ್ಧಿಶೀಲ ಕ್ಷೇತ್ರ ನಿರ್ಮಾಣ ಅಸಾಧ್ಯವಲ್ಲ ಎಂಬುದಕ್ಕೆ ಈ ಸರ್ಕಾರಿ ಶಾಲೆಗಳು ಉದಾಹರಣೆಯಂತಿದೆ. ಖಾಸಗಿ‌ ಹೈಟೆಕ್ ಶಾಲೆಗಳನ್ನು ನಾಚಿಸುವಂತಿರುವ BTM ಲೇಔಟ್‌ನ ಸರ್ಕಾರಿ ಶಾಲೆಗಳು.. ಈ ಬಗ್ಗೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ.ಮಂಜುನಾಥ್ ಅವರ ಮನದಾಳದ ಮಾತು ಹೀಗಿದೆ… ರಾಜಧಾನಿ ಬೆಂಗಳೂರು ಸೆರಗಿನಲ್ಲಿರುವ BTM ಲೇಔಟ್’ನಲ್ಲಿರುವ ಸರ್ಕಾರಿ ಶಾಲೆಗಳು ಖಾಸಗಿ ಕಾರ್ಪೊರೇಟ್ ಹೈಟೆಕ್ ಶಾಲೆಗಳನ್ನು ನಾಚಿಸುವ ರೀತಿಯಲ್ಲಿ ಅಭಿವೃದ್ಧಿ ಕಂಡಿವೆ. ಪದಪುಂಜಗಳ ಆಕರ್ಷಣೆಗೆ ಸಾಕ್ಷಿಯಾಗುವ ‘ಶಿಕ್ಷಣ ಕಾಶಿ’ ಎಂದರೇನು? ಅದು ಎಲ್ಲಿದೆ ಎಂದು ಹೂಡುತ್ತಾ ಸಾಗಿದವರಿಗೆ ಈ ಶಾಲೆಗಳು ಸಿಗುತ್ತವೆ. ಇವು ‘ಕಾಶಿಗಿಂತಲೂ’ ಮೇಲ್ಪಂಕ್ತಿಯಲ್ಲಿದೆ ಎಂದು ಗೊತ್ತಾಗುತ್ತದೆ. ತಾವರೆಕೆರೆ, ಕುವೆಂಪುನಗರ ಸುತ್ತಮುತ್ತಲ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದರೆ ಸಾಕು, ಹೊಸ ಪ್ರಪಂಚ ತೆರೆದುಕೊಂಡಂತೆ ಭಾಸವಾಗುತ್ತದೆ. ಆಕರ್ಷಕ ಕಟ್ಟಡ.. ಅದರೊಳಗೆ ವ್ಯವಸ್ಥಿತ ತರಗತಿಗಳು. ಶಿಸ್ತುಬದ್ಧ ವಿದ್ಯಾರ್ಥಿ ಸಮೂಹಕ್ಕೆ ಎಲ್ಲಿಲ್ಲದ ಪಾಠ-ಪ್ರವಚನ. ಯಾವುದೇ…

68ನೇ ಕನ್ನಡ ರಾಜ್ಯೋತ್ಸವ; ಗರಿಗೆದರಿದ ಭುವನೇಶ್ವರಿ ಮಹಾವೈಭವ

ಬೆಂಗಳೂರು: ನಾಡಿನೆಲ್ಲೆಡೆ 68ನೇ ಕನ್ನಡ ರಾಜ್ಯೋತ್ಸವದ ರಂಗು ಆವರಿಸಿದೆ. ವಿವಿಧ ಸಂಘಟನೆಗಳು ಕನ್ನಡ ರಾಜ್ಯೋತ್ಸವ ಆಚರಣೆ ಮೂಲಕ ಸಂಭ್ರಮಿಸುತ್ತಿದೆ. ರಾಜ್ಯ ಸರ್ಕಾರದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ, ತಾಯಿ ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಿ ಸಾಂಸ್ಕೃತಿಕ ಮಹಾವೈಭವಕ್ಕೆ ಮುನ್ನುಡಿ ಬರೆಯಲಾಯಿತು. ಕನ್ನಡ ನಾಡಿನ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸಮಾರಂಭಕ್ಕೆ ಆಕರ್ಷಣೆ ತುಂಬಿದವು. ವಿವಿಧ ಶಾಲೆಗಳ ಮಕ್ಕಳು ನೃತ್ಯ ರೂಪಕ ಮೂಲಕ ಗಮನ ಸೆಳೆದರು. ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್, ಸಚಿವರಾದ ಮಧು ಬಂಗಾರಪ್ಪ, ಎನ್.ಚಲುವರಾಯಸ್ವಾಮಿ, ಹಾಗೂ ರಿಜ್ವಾನ್ ಅರ್ಷದ್ ಸೇರಿದಂತೆ ಶಾಸಕರು, ಗಣ್ಯಾತಿಗಣ್ಯರು ಸಮಾರಂಭದಲ್ಲಿ ಭಾಗವಹಿಸಿದರು. ಕನ್ನಡದಲ್ಲಿ ಕಲಿತರೆ ಉದ್ಯೋಗ ಸಿಗುವುದಿಲ್ಲ, ಜ್ಞಾನ ಸಂಪಾದನೆ ಸಾಧ್ಯವಿಲ್ಲ ಎನ್ನುವ ತಪ್ಪು ಕಲ್ಪನೆಯಿಂದ ಇಂಗ್ಲಿಷ್ ಕಾನ್ವೆಂಟ್ ವ್ಯಾಮೋಹ…

ಕೈಯಲ್ಲಿ ಲಾಠಿಯಲ್ಲ, ಖಡ್ಗ.. ಮಹಾರಾಣಿ ‘ರೂಪ’ದಲ್ಲಿ ಐಪಿಎಸ್ ಅಧಿಕಾರಿ..!

ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ಈ ಅವತಾರವನ್ನು ನವರಾತ್ರಿ ಸಿಂಗಾರ ಎಂದಾದರೂ ಅನ್ನಿ, ಅಥವಾ ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಅವರ ಅವತಾರ ರೂಪಿಣಿ ಎಂದೂ ಅನ್ನಿ. ಆದರೆ ಈಕೆಯ ಈ ಸೊಗಸು-ಸೊಬಗಿನ ಅವತಾರ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ನವರಾತ್ರಿ ಸಡಗರ ಎಲ್ಲೆಲ್ಲೂ ಆವರಿಸಿದೆ. ದಸರಾ ಸಂಭ್ರಮ ಇನ್ನೂ ಮನೆಮಾಡಿದೆ.. ಈ ಹಬ್ಬ ಸಂಭ್ರಮದ ಸಂದರ್ಭದಲ್ಲಿ ಹೊಸ ಸಿನಿಮಾಗಳ ಬಿಡುಗಡೆಗೆ ಸಜ್ಜಾಗುವ ರೀತಿಯಲ್ಲೇ ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ಈ ಸೊಬಗು-ಸೊಗಸಿನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಖಡಕ್ ಪೊಲೀಸ್ ಅಧಿಕಾರಿ ಎಂದೇ ಗುರುತಾಗಿರುವ ಡಿ.ರೂಪಾ, ಪೊಲೀಸ್ ಇಲಾಖೆಯ ಕಾಯಕಕ್ಕಷ್ಟೇ ಸೀಮಿತಗೊಳಿಸಿಲ್ಲ. ಬಣ್ಣದ ಲೋಕಕ್ಕೂ ಸೈ ಎಣಿಸಕೊಳ್ಳುವ ರೀತಿಯ ಪ್ರತಿಭೆ ಅವರದ್ದು. ಕಾಲೇಜು ಜೀವನದಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಅವರದ್ದು. ಕಲಾವಿದೆಯಾಗಿಯೂ ಗಮನಸೆಳೆಯುತ್ತಿರುವ ಡಿ.ರೂಪಾ, ಆಗಾಗ್ಗೆ ಉಪನ್ಯಾಸ ನೀಡುತ್ತಾ ಯುವಜನರ ಪಾಲಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ.…

ಮೈಸೂರು ದಸರಾ: ಜಂಬೂಸವಾರಿ ಮೆರವಣಿಗೆ

ಮೈಸೂರು: ನಾಡಿನೆಲ್ಲೆಡೆ ನವರಾತ್ರಿ ಸಂಭ್ರಮ ಮನೆಮಾಡಿದೆ. ನವರಾತ್ರಿಯ 9ನೇ ದಿನವಾದ ಇಂದು ಎಲ್ಲೆಲ್ಲೂ ಆಯುಧ ಪೂಜೆಯ ಸಡಗರ ಗರಿಗೆದರಿದೆ. ಶಸ್ತ್ರಗಳಿಗೆ ಪೂಜೆಯಷ್ಟೇ ಅಲ್ಲ, ಯಂತ್ರಗಳಿಗೆ, ವಾಹನಗಳಿಗೂ ಪೂಜೆ ಸಲ್ಲಿಸಲಾಗುತ್ತಿದೆ. ದಸರಾ ಖ್ಯಾತಿಯ ಮೈಸೂರಿನಲ್ಲೂ ಆಯುಧ ಪೂಜೆ ಕೈಂಕರ್ಯ ಗಮನಸೆಳೆದಿದೆ. ಮೈಸೂರು ಅರಮನೆಯಲ್ಲಿ ಅರಸರ ಕಾಲದ ಆಯುಧಗಳಿಗೆ ಪೂಜೆ ನೆರವೇರುವುವುದು ಇಲ್ಲಿಯದೇ ಆದ ವಿಶೇಷ. ಯಧುವಂಶದ ಕುವರ ಯಧುವೀರ್ ಒಡೆಯರ್ ಉಪಸ್ಥಿತಿ ಕೂಡಾ ಗಮನಾರ್ಹ. ಇದೇ ವೇಳೆ ಮೈಸೂರು ದಸರಾದಲ್ಲಿ ಜಗತ್ತಿನ ಗಮನ ಕೇಂದ್ರೀಕರಿಸುವ ಜಂಬೂಸವಾರಿ ಮೆರವಣಿಗೆಗೂ ಸಕಲ ತಯಾರಿ ನಡೆದಿದೆ. ವಿಜಯದಶಮಿ ಮೆರವಣಿಗೆಯು ಮಂಗಳವಾರ (ಅಕ್ಟೊಬರ್ 24) ನಡೆಯಲಿದ್ದು, ಅಂತಿಮ ಹಂತದ ತಯಾರಿ ನಡೆದಿವೆ.. ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಪ್ರದರ್ಶಿಸುವ ಸ್ತಬ್ಧಚಿತ್ರಗಳು ಜೊತೆಯಲ್ಲೇ ಗಜಪಡೆಗಳು ನಾಡಿನ ಅಧಿದೇವತೆ ಚಾಮುಂಡಿಯ ಮೂರ್ತಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ‘ರಾಜಪಥ’ದಲ್ಲಿ ಸಾಗಲಿವೆ. ಜಂಬೂಸವಾರಿ ಮೆರವಣಿಗೆ ತಯಾರಿ ಹೀಗಿದೆ: ಮೈಸೂರು ಅರಮನೆಯ…

ಅಸಹಾಯಕರ ಪಾಲಿಗೆ ‘ವೀರಕೇಸರಿ’ ಯುವಕರೇ ಶಕ್ತಿ

ಬೆಳ್ತಂಗಡಿ ‘ವೀರಕೇಸರಿ’ ಯುವಕರ ಸಾಧನೆ.. 175ನೇ ಯೋಜನೆಯ 7ನೇ ಆಸರೆ ಮನೆ ನಿರ್ಮಾಣ.. ಅಸಹಾಯಕರ ಪಾಲಿಗೆ ಈ ಯುವಕರೇ ಶಕ್ತಿ.. ಮಂಗಳೂರು: ಸಾಮಾಜಿಕ ಕಳಕಳಿ ಮೂಲಕ ಸೇವಾ ಕೈಂಕರ್ಯ ನಡೆಸುತ್ತಿರುವ ಬೆಳ್ತಂಗಡಿಯ ‘ವೀರಕೇಸರಿ’ ತಂಡ ಇದೀಗ ಮತ್ತೊಂದು ಕೆಲಸದ ಮೂಲಕ ನಾಡಿನ ಗಮನಸೆಳೆದಿದೆ. ಬೆಳ್ತಂಗಡಿ ಸಮೀಪದ ಶಿರ್ತಾಡಿ ವಿದ್ಯಾನಗರ ಮಕ್ಕಿಯಲ್ಲಿ ಅಸಹಾಯಕ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಕಾರ್ಯಕ್ಕೆ ಮುನ್ನುಡಿ ಬರೆದಿದೆ. ತಾಯಿ ಮಗ. ಇಬ್ಬರೇ ಇರುವ ಹರೀಶ್ ಎಂಬವರ ಕುಟುಂಬಕ್ಕೆ 15.10.2023 ಭಾನುವಾರ ಈ ಮನೆ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿರುವ ವೀರ ಕೇಸರಿ ಹುಡುಗರು, ತಮ್ಮ ಸಂಘಟನೆಯ 175ನೇ ಯೋಜನೆಯ 7ನೇ ಆಸರೆ ಮನೆ ನಿರ್ಮಿಸಿಕೊಡುವ ಸಾಧನೆಯ ಹುಮ್ಮಸ್ಸಿನಲ್ಲಿದ್ದಾರೆ. ಭಾನುವಾರ ಬೆಳಿಗ್ಗೆ ನೆರವೇರಿದ ಈ ಸಮಾರಂಭದಲ್ಲಿ ಶಾಸಕರಾದ ಪ್ರತಾಪ್ ಸಿಂಹ ನಾಯಕ್, ಭಾರತೀಯ ಜನತಾ ಪಕ್ಷ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಮಾಜಿ ಸೈನಿಕರಾದ…