ವನಿತೆಯರ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ : 2ನೇ ಲೀಗ್ ಪಂದ್ಯವನ್ನೂ ಗೆದ್ದ ಭಾರತದ ವೀರ ವನಿತೆಯರು

ಪರ್ತ್: ಭಾರತ ಮತ್ತು ಬಾಂಗ್ಲಾ ನಡುವಿನ ವನಿತೆಯರ ಕ್ರಿಕೆಟ್ ಐಸಿಸಿ ಟಿ20 ವಿಶ್ವಕಪ್ ಕೂಟದ ಲೀಗ್ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯಗಳಿಸಿದೆ. ಈ ಮೂಲಕ ಎರಡನೇ ಲೀಗ್ ಪಂದ್ಯವನ್ನೂ ಭಾರತದ ವೀರ ವನಿತೆಯರು ಗೆದ್ದುಕೊಂಡಿದ್ದಾರೆ.

ಭಾರತದ 143 ರನ್ ಗಳ ಗುರಿಯನ್ನು ಬೆನ್ನಟ್ಟಲು ಪರದಾಡಿದ ಬಾಂಗ್ಲಾ ವನಿತೆಯರು 18 ರನ್ ಗಳಿಂದ ಸೋಲೊಪ್ಪಿಕೊಂಡರು. ಆರಂಭದಲ್ಲಿ ಭಾರತದ ಪಾಲಿಗೆ ಇದು ನಿರಾಶಾದಾಯಕ ಮೊತ್ತ ಎಂದೇ ಭಾವಿಸಲಾಗಿತ್ತು. ಆದರೆ ಬಾಂಗ್ಲಾ ತಂಡದ ಪರದಾಟ ಗಮನಿಸಿದರೆ ಭಾರತೀಯರ ಮೇಲುಗೈ ಬಗ್ಗೆ ಆಶಾವಾದ ವ್ಯಕ್ತವಾಯಿತು. ಬಾಂಗ್ಲಾ ಮಹಿಳಾ ತಂಡಕ್ಕೆ ಆರಂಭಿಕ ಆಟಗಾರ್ತಿ ಮುರ್ಷಿದಾ ಖಟೂನ್ 30 ರನ್ ಗಳಿಸಿ ಕೊಟ್ಟರಾದರೂ ಅನಂತರದ ಆಟಗಾರರು ಅಷ್ಟೇನೂ ಪ್ರದರ್ಶನ ತೋರಲಿಲ್ಲ.

Related posts