ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಂ. ಮಲ್ಲೇಶ್ ಬಾಬು ಅವರು ತಮ್ಮ ಕ್ಷೇತ್ರದ ರೈಲು ಸಂಬಂಧಿತ ಪ್ರಮುಖ ಸಮಸ್ಯೆಗಳ ಬಗ್ಗೆ ಗಮನಸೆಳೆದರು. ಕೋಲಾರದ ಕೆ.ಜಿ.ಎಫ್, ಬಂಗಾರಪೇಟೆ ಮತ್ತು ಮಾಲೂರು ತಾಲ್ಲೂಕುಗಳಿಂದ ಪ್ರತಿದಿನ 25 ರಿಂದ 30 ಸಾವಿರ ಜನರು ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಪ್ರಯಾಣಿಸುತ್ತಿರುವುದನ್ನು ಉಲ್ಲೇಖಿಸಿದ ಅವರು, ಈ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಸ್ತುತ 12 ಬೋಗಿಗಳಿರುವ ರೈಲುಗಳ ಸಂಖ್ಯೆಯನ್ನು 18ಕ್ಕೆ ಹೆಚ್ಚಿಸಲು ರೈಲ್ವೆ ಸಚಿವಾಲಯ ಕ್ರಮವಹಿಸಬೇಕೆಂದು ಒತ್ತಾಯಿಸಿದರು. ಕೋಲಾರ–ವೈಟ್‌ಫೀಲ್ಡ್ ನಡುವೆ ನರಸಾಪುರ ಮತ್ತು ಹೊಸಕೋಟೆ ಮೂಲಕ 52.9 ಕಿಮೀ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ನಡೆದಿರುವ ಸಮೀಕ್ಷೆ ಪೂರ್ಣಗೊಂಡಿರುವುದನ್ನೂ ಅವರು ಗಮನಕ್ಕೆ ತಂದರು. ಸಾರ್ವಜನಿಕರಿಗೆ ಬಹಳ ಉಪಕಾರಿಯಾಗುವ ಈ ಯೋಜನೆಗೆ ಶೀಘ್ರದಲ್ಲೇ ಅನುಮೋದನೆ ನೀಡಬೇಕೆಂದು ಸಂಸದರು ಕೇಂದ್ರ ರೈಲ್ವೆ ಸಚಿವರಲ್ಲಿ ಮನವಿ ಮಾಡಿದರು. <blockquote class=”twitter-tweet” data-media-max-width=”560″><p lang=”kn” dir=”ltr”>ಸಂಸತ್ತಿನ ಚಳಿಗಾಲದ…
Category: ದೇಶ
ಪುಟಿನ್‌ಗೆ ಪ್ರಧಾನಿ ಮೋದಿ ಸ್ವಾಗತ; ಒಪ್ಪಂದಗಳಿಗೆ ಸಹಿ ನಿರೀಕ್ಷೆ
ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎರಡು ದಿನಗಳ ಅಧಿಕೃತ ಭಾರತ ಭೇಟಿಗೆ ಗುರುವಾರ ರಾತ್ರಿ ನವದೆಹಲಿಗೆ ಆಗಮಿಸಿದರು. ಪ್ರಧಾನಿ ನರೇಂದ್ರ ಮೋದಿ ಸ್ವತಃ ವಿಮಾನ ನಿಲ್ದಾಣಕ್ಕೆ ತೆರಳಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. In a notable departure from usual practice, Prime Minister Shri @narendramodi personally welcomed Russian President Vladimir Putin upon his arrival at the Delhi airport. President Putin is undertaking a two-day State visit to India, during which he will participate in the 23rd… pic.twitter.com/n89gV1S6XX — BJP (@BJP4India) December 4, 2025 ವಿಮಾನದಿಂದ ಇಳಿದ ಬಳಿಕ ಇಬ್ಬರು ನಾಯಕರು ಪರಸ್ಪರ ಅಪ್ಪಿಕೊಂಡು ಮಾತನಾಡಿದರು. ಬಳಿಕ ಅಲ್ಪಕಾಲದ ಸಾಂಸ್ಕೃತಿಕ ಸ್ವಾಗತ ಕಾರ್ಯಕ್ರಮವನ್ನು ವೀಕ್ಷಿಸಿದರು. ವಿಮಾನ ನಿಲ್ದಾಣದಿಂದ ಇಬ್ಬರೂ…
ಆಶಾ–ಅಂಗನವಾಡಿ ನೌಕರರ ಬೇಡಿಕೆಗಳಿಗೆ ಕೇಂದ್ರದಿಂದ ಹಸಿರು ನಿಶಾನೆ
ನವದೆಹಲಿ: ಆರೋಗ್ಯ ಹಾಗೂ ಮಕ್ಕಳ ಪೋಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ, ಅಂಗನವಾಡಿ ಮತ್ತು ಅಕ್ಷರ ದಾಸೋಹಿ ನೌಕರರ ಬಹುಕಾಲದ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂಧಿಸಿದೆ. ಕೇಂದ್ರ ಸಚಿವರಾದ ಅನ್ನಪೂರ್ಣಾ ದೇವಿ ಮತ್ತು ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಬುಧವಾರ ಮಹತ್ವದ ಮಾತುಕತೆ ನಡೆಸಿದರು. ಹೋರಾಟ ನಿರತ ನೌಕರರನ್ನು ನವದೆಹಲಿಗೆ ಕರೆಸಿಕೊಂಡ ಕುಮಾರಸ್ವಾಮಿ, ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಶಾಸ್ತ್ರಿ ಭವನ ಕಚೇರಿಗೆ ಕರೆದುಕೊಂಡು ಹೋಗಿ, ಸಚಿವೆ ಅನ್ನಪೂರ್ಣಾ ದೇವಿ ಅವರನ್ನು ಭೇಟಿ ಮಾಡಿಸಿದರು. ಕರ್ನಾಟಕದ 12 ಮಂದಿ ನೌಕರರ ನಿಯೋಗ ಹಾಗೂ ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಮುಖ್ಯ ಬೇಡಿಕೆಗಳ ಚರ್ಚೆ: ಚರ್ಚೆಯಲ್ಲಿ ಎಫ್‌ಆರ್‌ಎಸ್ ನೀತಿ ಪರಿಷ್ಕರಣೆ, ಆಶಾ, ಅಂಗನವಾಡಿ ಕಾರ್ಯಕರ್ತೆಯರ ಚುನಾವಣಾ ಕರ್ತವ್ಯದಿಂದ ವಿನಾಯಿತಿ, ವಿಮಾ ಸೌಲಭ್ಯ, ವೇತನ ಹೆಚ್ಚಳ—ಇತ್ಯಾದಿ…
ಕರ್ನಾಟಕದಲ್ಲಿ BSNL ಮೊಬೈಲ್ ನೆಟ್ವರ್ಕ್ ಸಮಸ್ಯೆ; ಕೇಂದ್ರ ಸರ್ಕಾರದ ಗಮನಸೆಳೆದ ಕಾಂಗ್ರೆಸ್ ಸಂಸದೆ
ನವದೆಹಲಿ: ದಾವಣಗೆರೆ ಸೇರಿದಂತೆ ಕರ್ನಾಟಕದಲ್ಲಿ ಪ್ರತಿಷ್ಠಿತ BSNL ಮೊಬೈಲ್ ನೆಟ್ವರ್ಕ್ ಸಮಸ್ಯೆ ಬಗ್ಗೆ ಸಂಸದೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಕೇಂದ್ರದ ಗಮನಸೆಳೆದಿದ್ದಾರೆ. ತಮ್ಮ ಕ್ಷೇತ್ರದಲ್ಲಿನ ಮೊಬೈಲ್ ಸಂಪರ್ಕ ಸಮಸ್ಯೆ ಹಾಗೂ ಅದರಿಂದ ರೈತರು, ವಿದ್ಯಾರ್ಥಿಗಳು ಸೇರಿದಂತೆ ಜನರು ಸಮಸ್ಯೆಗಳನ್ನು ಎದುರಿಸುತ್ತಿ ದ್ದಾರೆ. ಈ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. I would like to raise a matter related to the installation of BSNL mobile tower in my constituency, Davanagere. Bridging the digital divide and ensuring last-mile connectivity are core pillars of the Digital India Mission. Yet, people in many villages in my Davanagere… pic.twitter.com/dwz20InyvR — Congress (@INCIndia) December 3, 2025
ಕದ್ದ, ಕಳೆದುಹೋದ 42 ಲಕ್ಷಕ್ಕೂ ಹೆಚ್ಚು ಮೊಬೈಲ್‌ಗಳು ಬ್ಲಾಕ್ ಮಾಡಿದ ‘ಸಂಚಾರ್ ಸಾಥಿ’
ನವದೆಹಲಿ: ಈ ವರ್ಷದ ಜನವರಿ 17ರಂದು ಬಿಡುಗಡೆಗೊಂಡ ನಂತರದಿಂದ ಸಂಚಾರ್ ಸಾಥಿ ಮೊಬೈಲ್ ಅಪ್ಲಿಕೇಶನ್ 1.4 ಕೋಟಿಗೂ ಹೆಚ್ಚು ಡೌನ್‌ಲೋಡ್‌ಗಳನ್ನು ದಾಖಲಿಸಿದ್ದು, 42 ಲಕ್ಷಕ್ಕೂ ಹೆಚ್ಚು ಕದ್ದ ಅಥವಾ ಕಳೆದುಹೋದ ಮೊಬೈಲ್ ಸಾಧನಗಳನ್ನು ನಿರ್ಬಂಧಿಸಲು ಯಶಸ್ವಿಯಾಗಿದೆ ಎಂದು ಮಂಗಳವಾರ ಹೊರಬಿದ್ದ ಅಧಿಕೃತ ದತ್ತಾಂಶಗಳು ತಿಳಿಸಿವೆ. ಇಲ್ಲಿಯವರೆಗೆ 26 ಲಕ್ಷ ಕಳೆದುಹೋದ/ಕಳುವಾದ ಫೋನ್‌ಗಳನ್ನು ಪತ್ತೆಹಚ್ಚಲಾಗಿದ್ದು, ಅವುಗಳಲ್ಲಿ 7.23 ಲಕ್ಷ ಸಾಧನಗಳನ್ನು ಸಂಚಾರ್ ಸಾಥಿಯ ಮೂಲಕ ಹಿಂತಿರುಗಿಸಲಾಗಿದೆ. ಸಂಪೂರ್ಣವಾಗಿ ಸ್ವಯಂಪ್ರೇರಿತ ಮತ್ತು ಬಳಕೆದಾರರ ಒಪ್ಪಿಗೆಯಿಂದ ಮಾತ್ರ ಕಾರ್ಯನಿರ್ವಹಿಸುವ ಈ ವೇದಿಕೆ ಗೌಪ್ಯತೆ-ಪ್ರಥಮ ನೀತಿಯನ್ನು ಅನುಸರಿಸುತ್ತದೆ. ಅಪ್ಲಿಕೇಶನ್ ಸೇವೆಗಳನ್ನು ಬಳಕೆದಾರರು ನೋಂದಾಯಿಸಿದ ಬಳಿಕ ಮಾತ್ರ ಸಕ್ರಿಯಗೊಳ್ಳುತ್ತದೆ. ಯಾವುದೇ ಸಮಯದಲ್ಲಿಯೂ ಅದನ್ನು ಬಳಕೆದಾರರು ಸಕ್ರಿಯಗೊಳಿಸಬಹುದು, ನಿಷ್ಕ್ರಿಯಗೊಳಿಸಬಹುದು ಅಥವಾ ಅಳಿಸಬಹುದು. ಗೌಪ್ಯತೆ ಕದಲಾಗದಂತೆ ಭಾರತದೆಲ್ಲೆಡೆ ಸೈಬರ್ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಅಪ್ಲಿಕೇಶನ್ ವಿನ್ಯಾಸಗೊಳಿಸಲಾಗಿದೆ. ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೊಬೈಲ್ ಬಳಕೆದಾರರ ಸುರಕ್ಷತೆ ರಾಷ್ಟ್ರದ…
ಡಿಸೆಂಬರ್ 5ಕ್ಕೆ ಆರ್‌ಬಿಐ ರೆಪೊ ದರ 25 ಬಿಪಿಎಸ್ ಕಡಿತ ಸಾಧ್ಯತೆ ಎಂದ ಎಚ್‌ಎಸ್‌ಬಿಸಿ
ನವದೆಹಲಿ: ಹಣದುಬ್ಬರ ಗುರಿಗಿಂತ ಕೆಳಮಟ್ಟದಲ್ಲೇ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ, ಡಿಸೆಂಬರ್ 5ರಂದು ನಡೆಯಲಿರುವ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನೀತಿ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿ 5.25% ಕ್ಕೆ ತರುವ ಸಾಧ್ಯತೆ ಇದೆ ಎಂದು ಎಚ್‌ಎಸ್‌ಬಿಸಿ ಗ್ಲೋಬಲ್ ಇನ್ವೆಸ್ಟ್‌ಮೆಂಟ್ ರಿಸರ್ಚ್ ತನ್ನ ನವೀಕೃತ ವಿಶ್ಲೇಷಣೆಯಲ್ಲಿ ತಿಳಿಸಿದೆ. ಇಲ್ಲಿಯವರೆಗೆ ದೇಶದ ಆರ್ಥಿಕ ಚಟುವಟಿಕೆ ಸದೃಢವಾಗಿದ್ದು, ಸರ್ಕಾರಿ ವೆಚ್ಚದ ಮುಂಚೂಣಿ ಲೋಡಿಂಗ್ ಮತ್ತು ಜಿಎಸ್‌ಟಿ ಕಡಿತದ ನಂತರ ಚಿಲ್ಲರೆ ಖರ್ಚು ಹೆಚ್ಚಿರುವುದು ಬೆಳವಣಿಗೆಗೆ ಪೂರಕವಾಗಿದೆ. ಆದರೆ, ನವೆಂಬರ್ ತಿಂಗಳ ಫ್ಲ್ಯಾಶ್ ಉತ್ಪಾದನಾ ಪಿಎಂಐ 56.6 ಕ್ಕೆ ಇಳಿದಿರುವುದು, ಹೊಸ ಆದೇಶಗಳು ನಿಧಾನಗೊಂಡಿರುವ ಸೂಚನೆಯಾಗಿದೆ. ಜಿಎಸ್‌ಟಿ ಉತ್ತೇಜನದ ಪರಿಣಾಮಗಳು ಈಗ ಗರಿಷ್ಠ ಮಟ್ಟಕ್ಕೆ ತಲುಪಿದ್ದೇನೋ ಎಂಬ ಶಂಕೆಯನ್ನು ವರದಿ ವ್ಯಕ್ತಪಡಿಸಿದೆ. “ಪ್ರಸ್ತುತ ಬೆಳವಣಿಗೆ ಬಲವಾದರೂ, 2026ರ ಮಾರ್ಚ್ ತ್ರೈಮಾಸಿಕಕ್ಕೆ ಹಣಕಾಸು ಪ್ರಚೋದನೆ…
ಶಿವಗಂಗಾ ಜಿಲ್ಲೆಯ ಕುಮ್ಮಂಗುಡಿ ಬಳಿ 2 ಬಸ್ಸುಗಳ ಡಿಕ್ಕಿ; 11 ಮಂದಿ ಸಾವು
ಚೆನ್ನೈ: ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕುಮ್ಮಂಗುಡಿ ಬಳಿ ಎರಡು ತಮಿಳುನಾಡು ಸರ್ಕಾರಿ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ ಪಯಿಸಿದ ಭೀಕರ ಅಪಘಾತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಪಿಳ್ಳೈಯಾರ್ಪಟ್ಟಿಸಮೀಪದ ತಿರುಪತ್ತೂರು ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬಸ್ಸುಗಳ ಮುಖಭಾಗ ನುಜ್ಜುಗುಜ್ಜಾಗಿದೆ. ಬಸ್ಸುಗಳಲ್ಲಿದ್ದ ಸುಮಾರು 20 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
‘ಜೈಲರ್ 2’; ರಜನೀಕಾಂತ್ ಮೋಹಲ್ ನಾಲ್..
ಚೆನ್ನೈ: ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಚಿತ್ರೀಕರಣ ಡಿಸೆಂಬರ್‌ನಲ್ಲಿ ಮಹತ್ತರ ಹಂತ ಪ್ರವೇಶಿಸಲಿದೆ. ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಚಿತ್ರ ತಂಡಕ್ಕೆ ಸೇರಲಿದ್ದಾರೆ ಎಂಬ ಸುದ್ದಿ ಉದ್ಯಮ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ. ಮೂಲಗಳ ಪ್ರಕಾರ, ಡಿಸೆಂಬರ್ 2ರ ಸುಮ್ಮಾರಿಗೆ ಮೋಹನ್ ಲಾಲ್ ಕೆಲ ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಅವರು ಮಲಯಾಳಂ ಚಿತ್ರಗಳ ಚಿತ್ರೀಕರಣಕ್ಕಾಗಿ ಮರಳಿದ್ದು, ಡಿಸೆಂಬರ್ 21 ರಿಂದ 24ರ ನಡುವೆ ಮತ್ತೆ ‘ಜೈಲರ್ 2’ ತಂಡಕ್ಕೆ ಸೇರುವ ಸಾಧ್ಯತೆ ಇದೆ. ದಿನಾಂಕ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಬಂದಿಲ್ಲ. ಈ ನಡುವೆ, ಗೋವಾದಲ್ಲಿ ವಿಜಯ್ ಸೇತುಪತಿ ಅವರ ಭಾಗಗಳ ಚಿತ್ರೀಕರಣ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಅವರ ತಾರಾಗಣ ಸೇರ್ಪಡೆ ಬಗ್ಗೆ ಅಧಿಕೃತ ದೃಢೀಕರಣವಿಲ್ಲ. ಇದೇ ವೇಳೆ, ಈ ವರ್ಷದ ಆರಂಭದಲ್ಲಿ ರಜನಿಕಾಂತ್ ಸ್ವತಃ ‘ಜೈಲರ್ 2’ ಕೆಲಸ…
‘ನಮ್ಮ ವೈಯಕ್ತಿಕ ಮತ್ತು ಪ್ರಜಾಪ್ರಭುತ್ವ ಹಕ್ಕುಗಳು ಯಾವ ಪರಿಸ್ಥಿತಿಯಲ್ಲೂ ರಕ್ಷಿತರಾಗಬೇಕು’: ರಾಷ್ಟ್ರಪತಿ ಮುರ್ಮು
ನವದೆಹಲಿ: ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನ ವೈಯಕ್ತಿಕ ಹಾಗೂ ಪ್ರಜಾಪ್ರಭುತ್ವ ಹಕ್ಕುಗಳನ್ನು ಶಾಶ್ವತವಾಗಿ ರಕ್ಷಿಸುವ ರಾಷ್ಟ್ರದ ಕನಸನ್ನು ಹೊತ್ತಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ಹೇಳಿದರು. 75ನೇ ಸಂವಿಧಾನ ದಿನದ ಅಂಗವಾಗಿ ಸಂಸತ್ತಿನ ಸಂವಿಧಾನ ಸದನದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮಕ್ಕೆ ಉಪಾಧ್ಯಕ್ಷ ಸಿ.ಪಿ. ರಾಧಾಕೃಷ್ಣನ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಪ್ರಧಾನಿ ನರೇಂದ್ರ ಮೋದಿ, ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ಸದಸ್ಯ ರಾಹುಲ್ ಗಾಂಧಿ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು. ಸಂವಿಧಾನ ರಚನೆಯ ಐತಿಹಾಸಿಕ ಕ್ಷಣವನ್ನು ನೆನಪಿಸಿಕೊಂಡ ರಾಷ್ಟ್ರಪತಿ ಮುರ್ಮು, “1949ರ ನವೆಂಬರ್ 26ರಂದು ಸಂವಿಧಾನ ಭವನದ ಸೆಂಟ್ರಲ್ ಹಾಲ್‌ನಲ್ಲಿ ಸಂವಿಧಾನ ಸಭೆ ಭಾರತದ ಸಂವಿಧಾನ ರಚನೆ ಕಾರ್ಯವನ್ನು ಪೂರ್ಣಗೊಳಿಸಿತು. ಇದೇ ದಿನ ದೇಶವು ನಮ್ಮ ಸಂವಿಧಾನವನ್ನು ಅಂಗೀಕರಿಸಿತು. ಸಂವಿಧಾನದ ಪ್ರಮುಖ ವಾಸ್ತುಶಿಲ್ಪಿಗಳಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಉಲ್ಲೇಖನೀಯ…
ಅಯೋಧ್ಯೆ ರಾಮ ಮಂದಿರದಲ್ಲಿ ವಿಶೇಷ ‘ಧರ್ಮಧ್ವಜ’;
ಅಯೋಧ್ಯೆ/ನವದೆಹಲಿ: ಐತಿಹಾಸಿಕ ರಾಮ ಜನ್ಮಭೂಮಿ ದೇವಾಲಯದಲ್ಲಿ ಮಂಗಳವಾರ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿಶೇಷವಾಗಿ ವಿನ್ಯಾಸಗೊಳಿಸಲಾದ ‘ಧರ್ಮಧ್ವಜ’ವನ್ನು ಹಾರಿಸಿದರು. ರಾಷ್ಟ್ರ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಈ ಸಂದರ್ಭದಲ್ಲಿ ಪ್ರಧಾನಿ ಜೊತೆಗಿದ್ದರು. “आज हम सबके लिए सार्थकता का दिन है। इसके लिए जितने लोगों ने प्राण न्योछावर किए, उनकी आत्मा तृप्त हुई होगी। आज मंदिर का ध्वजारोहण हो गया। मंदिर की शास्त्रीय प्रक्रिया पूर्ण हो गई। राम राज्य का ध्वज, जो कभी अयोध्या में फहराता था, जो पूरी दुनिया में अपने आलोक से समृद्धि प्रदान करता… pic.twitter.com/WqLQMJjM43 — RSS (@RSSorg) November 25, 2025 ಮಧ್ಯಾಹ್ನ 12 ಗಂಟೆಯ…
