ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್ ಪ್ರಮಾಣ ವಚನ

ನವದೆಹಲಿ: ದೇಶದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅವರಿಗೆ ಪ್ರಮಾಣವಚನ ಬೋಧಿಸಿದರು. ಸೂರ್ಯಕಾಂತ್ ಅವರು ಹಿಂದಿಯಲ್ಲಿ ದೇವರ ಹೆಸರಿನಿಂದ ಪ್ರಮಾಣವಚನ ಪಠಿಸಿದರು. ಸಮಾರಂಭದಲ್ಲಿಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಚಿವರು, ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹಾಗೂ ಭೂತಾನ್, ಕೀನ್ಯಾ, ಮಲೇಷ್ಯಾ, ಬ್ರೆಜಿಲ್, ಮಾರಿಷಸ್, ನೇಪಾಳ ಮತ್ತು ಶ್ರೀಲಂಕಾದ ಮುಖ್ಯ ನ್ಯಾಯಮೂರ್ತಿಗಳು ಹಾಜರಿದ್ದರು. ಹರಿಯಾಣ ಮುಖ್ಯಮಂತ್ರಿ ನೈಬ್ ಸಿಂಗ್ ಸೈನಿ ಕೂಡ ಸಮಾರಂಭಕ್ಕೆ ಹಾಜರಾಗಿದ್ದರು. ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಅಧಿಕಾರಾವಧಿ ಸುಮಾರು 14 ತಿಂಗಳು. ಅವರು ಫೆಬ್ರವರಿ 9, 2027 ರಂದು ನಿವೃತ್ತಿಗೊಳ್ಳಲಿದ್ದಾರೆ. ಇತ್ತೀಚೆಗೆ ಸಿಜೆಐ ಪೀಠವನ್ನು ಖಾಲಿ ಮಾಡಿರುವ ಭೂಷಣ್ ಆರ್. ಗವಾಯಿ ಅವರು ಅಕ್ಟೋಬರ್ 30ರಂದು ತಮ್ಮ ಉತ್ತರಾಧಿಕಾರಿಯಾಗಿ ಸೂರ್ಯಕಾಂತ್ ಅವರನ್ನು ಶಿಫಾರಸು…

ಅಮಿತ್ ಶಾ ಭೇಟಿಯಾದ ಬಿ.ವೈ.ವಿಜಯೇಂದ್ರ;

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ NDA ಪ್ರಚಂಡ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಬಿಜೆಪಿಯನ್ನು ಪಕ್ಷದ ಕರ್ನಾಟಕ ಪ್ರದೇಶ ಘಟಕ ಅಭಿನಂಧಿಸಿದೆ. ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಷಾ ಅವರನ್ನು ಅವರನ್ನು ಭೇಟಿ ಮಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿನಂಧಿಸಿದರು. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ವಿಜಯೇಂದ್ರ, ರಾಷ್ಟ್ರ ರಾಜಕಾರಣಕ್ಕೆ ಸ್ಪಷ್ಟ ದಿಕ್ಸೂಚಿ ಎಂದು ವಿಶ್ಲೇಷಿಸಲಾಗಿದ್ದ ಬಿಹಾರ ಚುನಾವಣೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿ, NDA ಮಿತ್ರಕೂಟ ಐತಿಹಾಸಿಕ ದಿಗ್ವಿಜಯ ಸಾಧಿಸುವಲ್ಲಿ ಮಹತ್ವದ ಪಾತ್ರವಹಿಸಿ ಚುನಾವಣಾ ನೈಪುಣ್ಯತೆ ಮೆರೆದ ಮಾನ್ಯ ಅಮಿತ್ ಶಾ ಜಿ ಅವರು ಬಿಜೆಪಿಗೆ ಕಾರ್ಯಕರ್ತರಿಗೆ ಪ್ರೇರಣಾಶೀಲ ನಾಯಕರಾಗಿದ್ದಾರೆ ಎಂದು ಬಣ್ಣಿಸಿದ್ದಾರೆ. ಇಂದಿನ ಅವರ ಭೇಟಿಯ ಸಂದರ್ಭದಲ್ಲಿ ಕರ್ನಾಟಕದ ರಾಜಕಾರಣದ ಪ್ರಸ್ತುತ ವಿದ್ಯಮಾನಗಳ ಮಾಹಿತಿ ನೀಡಲಾಯಿತು.ಪಕ್ಷ ಸಂಘಟನೆ ಇನ್ನಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಅಗತ್ಯ ಮಾರ್ಗದರ್ಶನ ಪಡೆಯಲಾಯಿತು ಎಂದವರು ತಿಳಿಸಿದ್ದಾರೆ.

ಕದನ ವಿರಾಮ ಉಲ್ಲಂಘನೆಗೆ ಇಸ್ರೇಲ್ ಎದಿರೇಟು; ವೈಮಾನಿಕ ದಾಳಿ, 20ಕ್ಕೂ ಹೆಚ್ಚು ಮಂದಿ ಸಾವು

ಗಾಜಾ: ಕದನ ವಿರಾಮ ಉಲ್ಲಂಘನೆಯಿಂದಾಗಿ ಪಶಿಮ ದಂಡೆ ಮತ್ತೊಮ್ಮೆ ಪ್ರಕ್ಷುಬ್ಧಗೊಂಡಿದೆ. ಉತ್ತರ ಮತ್ತು ಮಧ್ಯ ಗಾಜಾದಾದ್ಯಂತ ಇಸ್ರೇಲ್ ನಡೆಸಿದ ಡ್ರೋನ್, ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 24 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿವೆ. ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಭಾರೀ ಮಾರಣಹೋಮವೇ ನಡೆದಿದ್ದು ಜೊತೆಗೆ ಮಕ್ಕಳು ಸೇರಿದಂತೆ 54 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ, ಅಕ್ಟೋಬರ್ ನಲ್ಲಿ ಅಮೆರಿಕ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಜಾರಿಗೆ ಬಂದಿತ್ತು. ಆದರೆ ಭಯೋತ್ಪಾದಕ” ದಾಳಿಯ ಪರಿಣಾಮವಾಗಿ ತಾನು ವೈಮಾನಿಕ ದಾಳಿ ಮಾಡಬೇಕಾಯಿತು ಎಂದು ಇಸ್ರೇಲ್​ ಮಿಲಿಟರಿ ಹೇಳಿದೆ.

ತೇಜಸ್ ಯುದ್ಧವಿಮಾನ ಪತನ; ದುಬೈ ಏರೋ ಶೋ ವೇಳೆ ದುರಂತ

ದುಬೈ: ವಿಶ್ವದ ಗಮನ ಸೆಳೆದಿರುವ ದುಬೈ ಏರೋ ಶೋ ಕಾರ್ಯಕ್ರಮದಲ್ಲಿ ಭಾರತೀಯ ತೇಜಸ್ ಯುದ್ಧ ವಿಮಾನ ದುರಂತಕ್ಕೆ ಗುರಿಯಾಗಿದೆ. ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಧ್ಯಾಹ್ನ ಪ್ರದರ್ಶನ ಹಾರಾಟ ನಡೆಸುತ್ತಿದ್ದ ತೇಜಸ್, ತಕ್ಷಣವೇ ಬೆಂಕಿಗಾಹುತಿಯಾಗಿ ನೆಲಕ್ಕೆ ಅಪ್ಪಳಿಸಿದೆ. ಸ್ಫೋಟದ ನಂತರ ಸ್ಥಳದೆಲ್ಲೆ ದಟ್ಟವಾದ ಕಪ್ಪು ಹೊಗೆ ಆವರಿಸಿತು. आज एक दर्दनाक क्षण हमारे बहादुर पायलट की शहादत के साथ हमारे सामने आया, जब दुबई एयर शो के दौरान हमारी अपनी तकनीक, हमारी उड़ान संभावना, यानी #Tejas विमान जो देश की शक्ति व समर्पण का प्रतीक है जो #DubaiAirShow में इस प्रकार धराशाही हो गया जैसे ये हकीकत नहीं किसी फ़िल्म का scene……

ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ಆಹಾರಧಾನ್ಯ ಉತ್ಪಾದನೆಯಲ್ಲಿ ಹೆಚ್ಚಳ

ನವದೆಹಲಿ: ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ಆಹಾರಧಾನ್ಯ ಉತ್ಪಾದನೆ ಗಣನೀಯವಾಗಿ ಹೆಚ್ಚಿದ್ದು, 2015–16ರ 251.54 ಮಿಲಿಯನ್ ಟನ್‌ನಿಂದ 2024–25ರಲ್ಲಿ 357.73 ಮಿಲಿಯನ್ ಟನ್‌ ಗಳನ್ನು ತಲುಪಲಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, ಅಕ್ಕಿ ಉತ್ಪಾದನೆ 1,501.84 ಲಕ್ಷ ಟನ್ ಆಗಿ ದಾಖಲೆ ಮಟ್ಟ ತಲುಪಿದೆ ಎಂದು ತಿಳಿಸಿದರು. ಇದು ಕಳೆದ ಸಾಲಿನ 1,378.25 ಲಕ್ಷ ಟನ್‌ಗಿಂತ 123.59 ಲಕ್ಷ ಟನ್ ಹೆಚ್ಚಳ. ಗೋಧಿ ಉತ್ಪಾದನೆಯು 46.53 ಲಕ್ಷ ಟನ್‌ಗಳ ಏರಿಕೆ ಕಾಣಿಸಿ, ಹೆಸರುಕಾಳು 42.44 ಲಕ್ಷ ಟನ್, ಸೋಯಾಬೀನ್ 152.68 ಲಕ್ಷ ಟನ್, ನೆಲಗಡಲೆ 119.42 ಲಕ್ಷ ಟನ್ ಮಟ್ಟ ತಲುಪಿದೆಯೆಂದು ಹೇಳಿದರು. ಮೆಕ್ಕೆಜೋಳ ಉತ್ಪಾದನೆ 434.09 ಲಕ್ಷ ಟನ್ ಮತ್ತು ‘ಶ್ರೀಅನ್ನ’ (ರಾಗಿ) 185.92 ಲಕ್ಷ ಟನ್ ಅಂದಾಜಿಸಲಾಗಿದೆ. ಇದು ಕಳೆದ ವರ್ಷಕ್ಕಿಂತ ಎರಡೂ ಹಬ್ಬಿನ…

ಭಾರತದ ಹಲವೆಡೆ 200 ಸ್ಫೋಟಗಳ ಸಂಚು : ಜೆಇಎಂ ಸಂಚು ಬಹಿರಂಗ

ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ನವೆಂಬರ್‌ 10ರಂದು ನಡೆದ ಸ್ಫೋಟ ಪ್ರಕರಣವು ದೊಡ್ಡ ಉಗ್ರಸಂಚಿನ ಸುಳಿವನ್ನೂ ನೀಡಿದೆ. ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆ ನಂಟು ತನಿಖೆಯಿಂದ ದೃಢಪಟ್ಟಿದೆ. ಬಂಧಿತರಿಗೆ ಬಾಂಬ್ ತಯಾರಿಕೆ ಬಗ್ಗೆ ಮಾರ್ಗದರ್ಶನ ನೀಡಿದ್ದು, ಜೆಇಎಂ ಕಾರ್ಯಕರ್ತ ಹಂಜುಲ್ಲಾ ಎನ್ನುವುದು ತನಿಖಾಧಿಕಾರಿಗಳ ನಿರ್ಧಾರ. ತನಿಖೆಯಿಂದ ಹೊರಬಂದಿರುವ ಮತ್ತೊಂದು ಗಂಭೀರ ಮಾಹಿತಿ ಎಂದರೆ — ಆರೋಪಿಗಳು ದೆಹಲಿ, ಗುರುಗ್ರಾಮ್, ಫರಿದಾಬಾದ್ ಸೇರಿದಂತೆ ಉತ್ತರ ಭಾರತದ ಅನೇಕ ಪ್ರದೇಶಗಳಲ್ಲಿ ಏಕಕಾಲದಲ್ಲಿ 200 ಸ್ಫೋಟಗಳನ್ನು ನಡೆಸಲು ಸಂಚು ರೂಪಿಸಿದ್ದರು. ಈ ಉದ್ದೇಶಕ್ಕಾಗಿ, ಫರಿದಾಬಾದ್ ಉಗ್ರಮಾಡ್ಯೂಲ್‌ಗೆ ಪಾಕಿಸ್ತಾನ ಮೂಲದ ಐಎಸ್‌ಐ ಸಂಪರ್ಕ ಹೊಂದಿರುವ ಜೆಇಎಂ ಕಾರ್ಯಕರ್ತರಿಗೆ ತರಬೇತಿ ನೀಡುತ್ತಿದ್ದನೆಂದು ತಿಳಿದುಬಂದಿದೆ. ಮುಖ್ಯ ಆರೋಪಿ ಮೌಲ್ವಿ ಇರಾನ್ ಅಹ್ಮದ್ ಗೆ ಹಂಜುಲ್ಲಾ ನೇರ ಸಂಪರ್ಕ ಹೊಂದಿದ್ದನು. ಜಮ್ಮು-ಕಾಶ್ಮೀರದಲ್ಲಿ ಕಂಡುಬಂದಿದ್ದ ಜೆಇಎಂ ಪೋಸ್ಟರ್‌ಗಳಲ್ಲಿ “ಕಮಾಂಡರ್ ಹಂಜುಲ್ಲಾ ಭಾಯಿ” ಎಂಬ ಹೆಸರು ಗಮನಸೆಳೆದಿದ್ದು, ಅದರಿಂದಲೇ ತನಿಖೆ ವಿಸ್ತರಿಸಿ,…

ಬಿಹಾರ: 10ನೇ ಬಾರಿಗೆ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣವಚನ

ಪಾಟ್ನಾ: ಬಿಹಾರದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ನಿತೀಶ್ ಕುಮಾರ್ ಅವರು 10ನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. #Bihar:জেডি (ইউ) প্রধান নীতীশ কুমার আজ পাটনার গান্ধী ময়দানে দশমবারের মতো বিহারের মুখ্যমন্ত্রী হিসেবে শপথ নিলেন; অনুষ্ঠানে উপস্থিত ছিলেন প্রধানমন্ত্রী @narendramodiসহ এনডিএ নেতারা। #BiharElections2025 @DDNewslive pic.twitter.com/ZVGtLNoECS — DD News Tripura (@ddnewsagartala) November 20, 2025 ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಭರ್ಜರಿ ಗೆಲುವಿನ ನಂತರ, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ಗುರುವಾರ ದಾಖಲೆಯ 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಗುರುವಾರ ಬೆಳಗ್ಗೆ 11.30ಕ್ಕೆ ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಅವರು ಪ್ರಮಾಣವಚನ ಸ್ವೀಕರಿಸಿದರು. ಇದೇ ವೇಳೆ, ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಅವರು ಉಪ…

10ನೇ ಬಾರಿ ಬಿಹಾರ ಸಿಎಂ ಆಗಿ ನಿತೀಶ್ ಕುಮಾರ್ ನಾಳೆ ಪ್ರಮಾಣ ವಚನ

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ, ಜೆಡಿಯು ಶಾಸಕಾಂಗ ಪಕ್ಷ ಹೊಸ ನಾಯಕತ್ವವನ್ನು ಆಯ್ಕೆ ಮಾಡಿದೆ. ಬುಧವಾರ ಪಾಟ್ನಾದಲ್ಲಿ ನಡೆದ ಜೆಡಿಯು ಶಾಸಕಾಂಗ ಸಭೆಯಲ್ಲಿ, ಪಕ್ಷದ ರಾಷ್ಟ್ರಾಧ್ಯಕ್ಷ ನಿತೀಶ್ ಕುಮಾರ್ ಅವರನ್ನು ಏಕಮತದಿಂದ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಗುರುವಾರ ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ನಿತೀಶ್ ಕುಮಾರ್ ಅವರು 10ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗಿದ್ದಾರೆ. ಪ್ರಮಾಣ ವಚನಕ್ಕೂ ಮುನ್ನ ಶಾಸಕಾಂಗ ನಾಯಕನಾಗಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಎನ್‌ಡಿಎ ಸಭೆಗೂ ಮುಂಚೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ನಂತರ ನಿತೀಶ್ ಕುಮಾರ್ ಅವರನ್ನು ಎನ್‌ಡಿಎ ಶಾಸಕಾಂಗ ಪಕ್ಷದ ನಾಯಕರಾಗಿಯೂ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಸಚಿವ ಶ್ರಾವಣ್ ಕುಮಾರ್ ಮಾಹಿತಿ ನೀಡಿದರು.

ರಾಜ್ಯಪಾಲರನ್ನು ಭೇಟಿ ಮಾಡಿದ ನಿತೀಶ್; ನ.20 ರಂದು ನೂತನ ಸಿಎಂ ಆಗಿ ಪ್ರಮಾಣವಚನ

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ರಾಜಭವನದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್‌ಡಿಎ) ಹೊಸ ಸರ್ಕಾರ ರಚಿಸುವ ಒಂದು ದಿನ ಮೊದಲು, ಅಂದರೆ ನವೆಂಬರ್ 19 ರಂದು ಪ್ರಸ್ತುತ ವಿಧಾನಸಭೆಯನ್ನು ವಿಸರ್ಜಿಸುವಂತೆ ಮನವಿ ಮಾಡಿದ್ದಾರೆ. 2005 ರಿಂದ ದಾಖಲೆಯ 10ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. 2005ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೇರಿದ ಬಳಿಕ, ನಿತೀಶ್ ಕುಮಾರ್ ಅವರು ಈಗ ದಾಖಲೆಯ 10ನೇ ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ನವೆಂಬರ್ 20ರಂದು ಪಾಟ್ನಾದ ಗಾಂಧಿ ಮೈದಾನದಲ್ಲಿ ಅದ್ದೂರಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು ಹಾಗೂ ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮಕ್ಕೆ ಹಾಜರಾಗುವ ಸಾಧ್ಯತೆ ಇದೆ. ಬೆಳಿಗ್ಗೆ…

ಮೆಕ್ಕಾದಿಂದ ಮದೀನಾಗೆ ತೆರಳುತ್ತಿದ್ದ ಬಸ್ ಅಪಘಾತ; 45 ಭಾರತೀಯರು ದುರ್ಮರಣ

ಸೌದಿ: ಮೆಕ್ಕಾ–ಮದೀನಾ ಮಾರ್ಗದಲ್ಲಿ ಭಾರತೀಯ ಭಕ್ತರನ್ನು ಕರೆದೊಯ್ಯುತ್ತಿದ್ದ ಬಸ್‌ಗೆ ಡೀಸೆಲ್‌ ಟ್ಯಾಂಕರ್‌ ಡಿಕ್ಕಿ ಹೊಡೆದು ಭಾರೀ ದುರಂತ ಸಂಭವಿಸಿದೆ. ಮುಫ್ರಿಹತ್ ಪ್ರದೇಶದಲ್ಲಿ ಭಾರತೀಯ ಕಾಲಮಾನ ಸೋಮವಾರ ಬೆಳಗಿನ ಜಾವ 1.30ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಬಸ್ ಬೆಂಕಿಗೆ ಆಹುತಿಯಾಗಿದೆ. ಮೆಕ್ಕಾದಿಂದ ಮದೀನಾಗೆ ತೆರಳುತ್ತಿದ್ದ ಬಸ್ಸಿನಲ್ಲಿ ಸುಮಾರು 20 ಮಹಿಳೆಯರು, 11 ಮಕ್ಕಳು ಸೇರಿದಂತೆ ಒಟ್ಟು 45 ಉಮ್ರಾ ಯಾತ್ರಿಕರು ಪ್ರಯಾಣಿಸುತ್ತಿದ್ದರು. ಡೀಸೆಲ್‌ ಟ್ಯಾಂಕರ್‌ಗೆ ಬಸ್ ಡಿಕ್ಕಿ ಹೊಡೆದ ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಜ್ವಾಲೆಗಳು ಬಸ್‌ನ್ನು ಆವರಿಸಿದ್ದು, ಒಳಗಿದ್ದವರು ತಪ್ಪಿಸಿಕೊಳ್ಳುವ ಅವಕಾಶವೇ ದೊರೆತಿಲ್ಲ. ಎಲ್ಲಾ 45 ಯಾತ್ರಿಕರೂ ಸಜೀವದಹನವಾದರೆಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಮೃತರೆಲ್ಲರೂ ಹೈದರಾಬಾದ್ ಮೂಲದವರಾಗಿರುವ ಮಾಹಿತಿ ಲಭ್ಯವಾಗಿದೆ. ಈ ಭೀಕರ ದುರಂತದಲ್ಲಿ ಒಬ್ಬ ಯುವಕ ಮಾತ್ರ ಬದುಕುಳಿದಿದ್ದಾನೆ ಎನ್ನಲಾಗಿದೆ.