ಬೆಂಗಳೂರು: ಬೆಂಗಳೂರು ಜನತೆಯ ಹೋರಾಟದ ಗಂಭೀರತೆಯನ್ನು ಅರಿತು ಕಾವೇರಿ ನೀರು ನಿರ್ವಹಣಾ ಮಂಡಳಿ ಮಂಗಳವಾರದ ಸಭೆಯಲ್ಲಿ ತಮಿಳುನಾಡಿನ 12500 ಕಿಸೆಸ್ ನೀರು ಬಿಡಬೇಕೆಂಬ ಅರ್ಜಿಯನ್ನು ವಜಾ ಮಾಡಿ 5000 ಕೂಸಸ್ ಬಿಡುತ್ತಿದ್ದ ನೀರನ್ನು 3,000 ಕೆ ಇಳಿಸಿದೆ. ಇದು ಜನತೆಯ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಬೆಂಗಳೂರು ಬಂದ್‌ಗೆ ಕರೆ ನೀಡಿದ್ದ ಹಾಗೂ ಬಂದ್ ಬೆಂಬಲಿಸಿದ್ದ ವಿವಿಧ ಸಂಘಟನೆಗಳ ಮುಖಂಡರಾದ ಮುಖ್ಯಮಂತ್ರಿ ಚಂದ್ರು, ಕನ್ನಡ ಚಳುವಳಿ ಮುಖಂಡ ಗುರುದೇವ ನಾರಾಯಣ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕೃಷ್ಣೇಗೌಡ, ಕರ್ನಾಟಕ ಚಾಲಕರ ಒಕ್ಕೂಟ ನಾರಾಯಣಸ್ವಾಮಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಪೋಷಕರ ಒಕ್ಕೂಟದ ಯೋಗಾನಂದ, ಪಿಸ್ ಆಟೋ ಒಕ್ಕೂಟದ ಅಧ್ಯಕ್ಷ ರಘು, ಜಯಕರ್ನಾಟಕ ರಕ್ಷಣಾ ಸೇನೆ ಅಧ್ಯಕ್ಷ ರಾಜಪ್ಪ ಹತ್ತಳ್ಳಿ ದೇವರಾಜ್ ಮೊದಲಾದ ಪ್ರಮುಖರ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕುರುಬೂರು ಶಾಂತಕುಮಾರ್, ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕರೆ ನೀಡಿದ ಬೆಂಗಳೂರು ಬಂದ್ ಸಂಪೂರ್ಣ ಶಾಂತಿಯುತ ಬಂದ್ ಯಶಸ್ವಿಯಾಗಿದೆ ಇದು ಜನರ ಆಕ್ರೋಸದ ಎಚ್ಚರಿಕೆಯಾಗಿದೆ. ಯಾವುದೇ ಬಲವಂತವಿಲ್ಲದೆ ಜನರೇ ಪ್ರೀತಿಯಿಂದ ಬಂದ್ ಮಾಡಿ ಸಹಕಾರ ನೀಡಿದ್ದಾರೆ ಇದು ಜನತಂತ್ರದ ಜಯ ಎಂದರು.
ಶಾಂತಿಯುತ ಬಂದ ನಡೆಯಲು ಸಹಕರಿಸಿದ 200 ಹೆಚ್ಚು ಸಂಘಟನೆಗಳ ಮುಖಂಡರಿಗೆ ಬೆಂಗಳೂರು ನಗರದ ಜನತೆಗೆ ಬಂದ್ ಬೆಂಬಲಿಸಿದ ಬಿಜೆಪಿ ,ಜನತಾದಳ, ಅಮ್ ಆದ್ಮಿ ಪಕ್ಷಗಳಿಗೆ ಮಾಧ್ಯಗಳಿಗೆ ಕರ್ನಾಟಕ ಜಲ ಸಂರಕ್ಷಣ ಸಮಿತಿ ಪರವಾಗಿ ಕೃತಜ್ಞತೆ ಸಮರ್ಪಿಸಿದ ಅವರು, ತಕ್ಷಣವೇ ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸಬೇಕು. ವಿಧಾನಮಂಡಲ ಅಧಿವೇಶನ ಕರೆದು ಸಂಕಷ್ಟ ಸೂತ್ರ ರಚಿಸಲು ಒತ್ತಾಯಿಸುವ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜಕೀಯ ಒತ್ತಡದಿಂದ ಕಾರ್ಯನಿರ್ವಹಿಸುವ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ರದ್ದುಗೊಳಿಸಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಮಂಡಳಿ ರಚಿಸಬೇಕೆಂದು ಒತ್ತಾಯಿಸುವ ನಿರ್ಣಯವನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕು. ಕೂಡಲೇ ಮೇಕೆದಾಟು ಯೋಜನೆ ಕಾಮಗಾರಿ ಆರಂಭಿಸಬೇಕು ಎಂಬ ಒತ್ತಾಯಗಳ ಬಗ್ಗೆ ಮುಖ್ಯಮಂತ್ರಿಗಳ ನಿರ್ಧಾರವನ್ನು ಮೂರು ದಿವಸಗಳು ಕಾದು ನೋಡುತ್ತೇವೆ. ಸರ್ಕಾರ ಈಗಲೂ ನಿರ್ಲಕ್ಷತನ ತೂರಿದರೆ ಇಡೀ ರಾಜ್ಯವೇ ಬೀದಿಗಿಳಿಯಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರೂ ಆದ ಕುರುಬುರ್ ಶಾಂತಕುಮಾರ್ ತಿಳಿಸಿದರು ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದರು.
ಮುಖ್ಯಮಂತ್ರಿ ಚಂದ್ರುರವರು ಮಾತನಾಡಿ ಸರ್ಕಾರ ಜನರ ಹಿತಕ್ಕಾಗಿ ಕಾರ್ಯ ನಿರ್ವಹಿಸಬೇಕು ಗಂಭೀರ ಸಮಸ್ಯೆಯನ್ನು ಅರಿತು ವಿಧಾನ ಮಂಡಲ ಅಧಿವೇಶನ ಕರೆಯಬೇಕು ದ್ವಂದ್ವ ನೀತಿಯನ್ನು ಅನುಸರಿಸಬಾರದು, ಬೆಂಗಳೂರು ನಗರದ ಜನತೆಯ ಒತ್ತಾಯಕ್ಕೆ ಮಣಿಯಬೇಕು ಎಂದರು.