ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಇತಿಹಾಸದಲ್ಲೇ ಮೊದಲ ಬಾರಿಗೆ ಯಶಸ್ವೀ ಪ್ರಯೋಗ ಮಾಡಿ ಗಮನಸೆಳೆದಿದೆ; ಪ್ರಪ್ರಥಮ ಬಾರಿಗೆ ಕೌನ್ಸಿಲಿಂಗ್ ಮೂಲಕ ನೌಕರರ ಹಂಚಿಕೆ ಮಾಡುವ ಮೂಲಕ ನೌಕರರ ಬಳಗದಲ್ಲೂ ಸಂತಸದ ಕ್ರಮಕ್ಕೆ ಮುನ್ನುಡಿ ಬರೆದಿದೆ.
ಶಾಶ್ವತವಾಗಿ ದರ್ಜೆ -3 ಮೇಲ್ವಿಚಾರಕ ದರ್ಜೆ – 2, ದರ್ಜೆ -1 ಕಿರಿಯ ಅಧಿಕಾರಿಗಳನ್ನು ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಶಾಶ್ವತ ಹಂಚಿಕೆ ಮಾಡಲಾಗಿದೆ.
KSRTC ನಿಗಮದ ದರ್ಜೆ-3 ಮೇಲ್ವಿಚರಕ, ದರ್ಜೆ-2 ಅಧಿಕಾರಿ ಹಾಗೂ ದರ್ಜೆ-1 (ಕಿರಿಯ) ಅಧಿಕಾರಿಗಳನ್ನು ನಾಲ್ಕೂ ಸಾರಿಗೆ ನಿಗಮಗಳ ಒಟ್ಟು 2525 ರ ಪೈಕಿ 2380 ಅಧಿಕಾರಿಗಳನ್ನು ಅವರ ಇಚ್ಛೆ ಮೇರೆಗೆ ಹಂಚಿಕೆ ಮಾಡಲಾಗಿದೆ. ಉಳಿದ 145 ಅಧಿಕಾರಿ/ಸಿಬ್ಬಂದಿಗಳಿಗೆ ನೇರ ಕೌನ್ಸಲಿಂಗ್ ಮೂಲಕ ದಿನಾಂಕ 05-08-2023 ರಂದು ಯಾವುದೇ ಬಾಹ್ಯ ಒತ್ತಡಕ್ಕೆ ಅಸ್ಪದ ಇರದಂತೆ ಪಾರದರ್ಶಕವಾಗಿ ಹಂಚಿಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಸಾರಿಗೆ ಹಾಗೂ ಮುಜರಾಯಿ ಸಚಿವರು ಸಾಂಕೇತಿಕವಾಗಿ ತಾಂತ್ರಿಕ ಇಲಾಖೆಯ ಮೇಲ್ವಿಚಾರಕ ಸಿಬ್ಬಂದಿ ಎಂ.ಜಿ. ಮೋಗಣ್ಣಗೌಡ, ಪ್ರದೀಪ್ ಕುಮಾರ್, ಆರ್.ಎ. ಕುಪ್ಪೇಲೂರ್ ಹಾಗೂ ನಳಿನಾಕ್ಷಿ ಎಂಬವರಿಗೆ ಹಂಚಿಕೆ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಸದರಿ ಪ್ರಕ್ರಿಯೆಯ ಅಧಿಕಾರಯುತ ಸಮಿತಿ ಅಧ್ಯಕ್ಷರಾದ ಕೆಎಸ್ಸಾರ್ಟಿಸಿ ಎಂಡಿ ವಿ.ಅನ್ಬುಕುಮಾರ್ ಉಪಸ್ಥಿತರಿದ್ದರು.