ಮಣಿಪುರ ಹಿಂಸಾಚಾರದ ಪ್ರತಿಧ್ವನಿ; 9 ಮೈತೇಯಿ ಸಂಘಟನೆಗಳ ನಿಷೇಧ

ದೆಹಲಿ: ಮಣಿಪುರ ಹಿಂಸಾಚಾರ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರದಲ್ಲಿ ರಾಷ್ಟ್ರವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಆರೋಪದಲ್ಲಿ ಹಲವು ಸಂಘಟನೆಗಳ ಮೇಲೆ ಕೇಂದ್ರ ಸರ್ಕಾರ ಕಾನೂನು ಪ್ರಹಾರ ಮಾಡಿದೆ. ಭದ್ರತಾ ಪಡೆಗಳ ಮೇಲೆ ಮಾರಣಾಂತಿಕ ದಾಳಿ ನಡೆಸುತ್ತಿರುವ 9 ಮೈತೇಯಿ ಉಗ್ರಗಾಮಿ ಸಂಘಟನೆಗಳನ್ನು ಹಾಗೂ ಅವುಗಳ ಸಹ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಸೋಮವಾರ ಅಧಿಸೂಚನೆ ಹೊರಡಿಸಿದೆ.
ಪೀಪಲ್ಸ್ ಲಿಬರೇಶನ್ ಆರ್ಮ, ಅದರ ರಾಜಕೀಯ ವಿಭಾಗವಾದ ಕ್ರಾಂತಿಕಾರಿ ಪೀಪಲ್ಸ್ ಫ್ರಂಟ್ (RPF), ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್, ಮಣಿಪುರ ಪೀಪಲ್ಸ್ ಆರ್ಮಿ ಸಹಿತ ಪ್ರಮುಖ ಸಂಘಟನೆಗಳನ್ನು ಐದು ವರ್ಷಗಳ ಕಾಲ ಸರ್ಕಾರ ನಿಷೇಧಿಸಿದೆ.

Related posts