ಲಾಕ್’ಡೌನ್ ನಿಯಮಾವಳಿ ಸಡಿಲವಾಗುತ್ತಿದ್ದಂತೆಯೇ ಸಿನಿಮಾ ಚಿತ್ರೀಕರಣಕ್ಕೂ ಅನುಮತಿ ಸಿಕ್ಕಿದೆ. ಅಷ್ಟೇ ಅಲ್ಲ ಸಿನಿಮಾ ರಂಗದ ಚಟುವಟಿಕೆಗಳಿಗೂ ರಂಗು ಬಂದಿದೆ. ಅಪೂರ್ಣ ಸಿನಿಮಾಗಳ ಪ್ರಚಾರ ವೈಖರಿಯೂ ಗಮನಸೆಳೆದಿದೆ.
ಈ ನಡುವೆ ಟೀಸರ್, ಪೋಸ್ಟರ್’ಗಳೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಡ್ಡು ಮಾಡುತ್ತಿವೆ. ಇದೇ ವೇಳೆ, ತೆಲುಗಿನ ನಟ ನಂದಮೂರಿ ಬಾಲಕೃಷ್ಟ ಅಭಿನಯದ ಹೊಸ ಚಿತ್ರದ ಫಸ್ಟ್ ಲುಕ್ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ.