ಅಮೆರಿಕದಲ್ಲಿ ವಿಮಾನ ಹೈಜಾಕ್ ಯತ್ನ; ಪ್ರಯಾಣಿಕನ ಗುಂಡಿಗೆ ಆಗಂತುಕ ಬಲಿ

ಬೆಲ್ಮೋಪನ್: ಅಮೆರಿಕದಲ್ಲಿ ವಿಮಾನ ಹೈಜಾಕ್ ಯತ್ನದ ಮತ್ತೊಂದು ಹೈಡ್ರಾಮಾ ನಡೆದಿದೆ. ಅಮೆರಿಕದ ಬೆಲೀಜ್‌ನಲ್ಲಿ ಗುರುವಾರ ಈ ಘಟನೆ ನಡೆದಿದೆ.

ಬೆಲೀಜ್‌ನಲ್ಲಿ ಅಮೆರಿಕದ ವ್ಯಕ್ತಿಯೊಬ್ಬ ಚಾಕು ತೋರಿಸಿ, ಕೆಲವರ ಮೇಲೆ ಹಲ್ಲೆ ನಡೆಸಿ ಸಣ್ಣ ಟ್ರಾಫಿಕ್ ಏರ್ ವಿಮಾನವನ್ನು ಅಪಹರಿಸಲು ಯತ್ನಿಸಿದ್ದಾನೆ. ಆ ವೇಳೆ, ವಿಮಾನದಲ್ಲಿದ್ದ ಪ್ರಯಾಣಿಕನೊಬ್ಬ ಆ ಕಿಡಿಗೇಡಿಯ ಮೇಲೆ ಗುಂಡು ಹಾರಿಸಿದ್ದಾನೆ. ಆಗಂತುಕನನ್ನು ಸುಮಾರು 49 ವರ್ಷ ವಯಸ್ಸಿನ ಅಕಿನ್ಯೆಲಾ ಸಾವಾ ಟೇಲರ್ ಎಂದು ಗುರುತಿಸಲಾಗಿದೆ.

Related posts