ವಿಶ್ವಕಪ್ ಕ್ರಿಕೆಟ್: 6ನೇ ಬಾರಿಗೆ ಸರಣಿ ಗೆದ್ದ ಆಸ್ಟ್ರೇಲಿಯಾ

ಅಹ್ಮದಾಬಾದ್: ಈ ಬಾರಿಯ ವಿಶ್ವಕಪ್ ಸರಣಿಯುದ್ದಕ್ಕೂ ಸೋಲಿಲ್ಲದ ಸರದಾರನಂತೆ ಮುನ್ನುಗ್ಗಿದ್ದ ಟೀಂ ಇಂಡಿಯಾ ಫೈನಲ್‌ನಲ್ಲಿ ಮುಗ್ಗರಿಸಿದೆ. ಅಂತಿಮ ಹಣಾಹಣಿಯಲ್ಲಿ ಆಸ್ಟ್ರೇಲಿಯಾ ಮುಂದೆ ಶರಣಾದ ಭಾರತ ಈ ಬಾರಿಯೂ ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾಯಿತು. ಭಾನುವಾರ ಅಹಮಾದಾಬಾದ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ 7ವಿಕೆಟ್‌ಗಳ ಸೋಲು ಅನುಭವಿಸಿತಿ. ಟಾಸ್ ಗೆದ್ದ ಆಸ್ಟ್ರೇಲಿಯಾ ಭಾರತಕ್ಕೆ ಬ್ಯಾಟಿಂಗ್ ಅವಕಾಶವನ್ನು ಬಿಟ್ಟುಕೊಟ್ಟಿತು. ನಿಗದಿತ 50 ಓವರುಗಳಲ್ಲಿ 240 ರನ್‌ಗಳಿಗೆ ಸರ್ವತನ ಕಂಡ ಟೀಂ ಇಂಡಿಯಾ ಆಸಿಸ್‌ಗೆ 432ರ ಸರಳ ಮೊತ್ತದ ಗುರಿಯನ್ನು ಒಡ್ಡಿತು. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ, ಇನ್ನೂ 40 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ಗುರಿ ಸಾಧಿಸಿತು. ಆಸ್ಚ್ರೇಲಿಯಾ ತಂಡ ಟ್ರಾವಿಸ್ ಹೆಡ್ ಶತಕ ಮತ್ತು ಲಬುಶೇನ್‌ರ ಅರ್ಧಶತಕದ ನೆರವಿನಿಂದ ಗುರಿ ತಲುಪಿ ಜಯಭೇರಿ ಭಾರಿಸಿತು. 7 ವಿಕೆಟ್‌ಗಳ ಭರ್ಜರಿ ಗೆಲುವು…

‘ಪೂವರಿ’ ಸಾರಥ್ಯದಲ್ಲಿ ‘ತುಡರ ಪರ್ಬೊದ ಪೊಲಬು’ ವಿಶಿಷ್ಠ ಕಾರ್ಯಕ್ರಮ

ತುಳು ಅಪ್ಪೆ ಕೂಟ ಮತ್ತು ಪೂವರಿ ಪತ್ರಿಕೆಯಿಂದ ತುಡರ ಪರ್ಬದ ಪೊಲಬು, ತುಳು ತಾಳಮದ್ದಳೆ ಕಾರ್ಯಕ್ರಮ.. ಕೃಷಿ ಸಂಸ್ಕೃತಿ ನಶಿಸುತ್ತಿದ್ದಂತೆ ಹಬ್ಬಗಳ ಸೊಗಡು ಮರೆಯಾಯಿತು ಎಂದ ಗಣ್ಯರು.. ಸಮಾರಂಭಕ್ಕೆ ಆಕರ್ಷಣೆ ತುಂಬಿದ ತಾಳಮದ್ದಳೆ ವೈಭವ.. ಮಂಗಳೂರು: ತುಳು ಪರಂಪರೆ, ಸಂಸ್ಕೃತಿ ವಿಚಾರದಲ್ಲಿ ನಿರಂತರ ಕಾರ್ಯಕ್ರಮಗಳ ಮೂಲಕ ತುಳುನಾಡಿನ ಸೊಗಡಿಗೆ ಶ್ರೀಮಂತಿಕೆ ತುಂಬುತ್ತಿರುವ ಏಕೈಕ ತುಳು ಮಾಸಿಕ ‘ಪೂವರಿ’ ಆಯೋಜಿಸಿದ ‘ತುಳು ಪರ್ಬೋ’ (ತುಳು ಹಬ್ಬ) ಗಮನಸೆಳೆಯಿತು. ಕಾರ್ಯಕ್ರಮದಲ್ಲಿ ಭಾಗಿಯಾದ ಗಣ್ಯರು ನಾಡು-ನುಡಿ-ವೈಭವ ಕುರಿತು ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸಿ ಕುತೂಹಲದ ಕೇಂದ್ರಬಿಂದುವಾದರು. ತುಳುನಾಡಿನಲ್ಲಿ ಕೃಷಿ ಸಂಸ್ಕೃತಿಯ ಪ್ರತಿಫಲನ ಹಬ್ಬಗಳ ಆಚರಣೆಯಲ್ಲಿ ಪ್ರತಿಫಲಿಸುತ್ತಿತ್ತು. ಆದರೆ ಇಂದು ಕೃಷಿ ನಾಶವಾಗಿ ಸಿಮೆಂಟ್ ನೆಲದಲ್ಲಿ ಹಣತೆ ಹಚ್ಚುವ ಅನಿವಾರ್ಯತೆ ನಮ್ಮದಾಗಿದೆ. ಆದರೂ ಮುಂದಿನ ತಲೆಮಾರಿಗೆ ನಮ್ಮ ಆಚರಣೆಗಳನ್ನು ತಿಳಿಸಲು ಇದು ಅನಿವಾರ್ಯ ಎಂದು ವಕೀಲ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ…

ಕುಮಾರಣ್ಣ ಬುದ್ದಿ ಸ್ಥಿಮಿತತೆ ಕಳೆದುಕೊಂಡಿದ್ದಾರೆ: ಡಿಕೆಶಿ ಎದಿರೇಟು

ಬೆಂಗಳೂರು : ನಾನು ನೀಲಿ ಚಿತ್ರಗಳನ್ನು ಪ್ರದರ್ಶನ ಮಾಡುತ್ತಿದ್ದೆ ಎಂದು ಆರೋಪ ಮಾಡಿರುವ ಕುಮಾರಣ್ಣ ಬುದ್ದಿ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದ ಅವರು, ನಾನು ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಟೂರಿಂಗ್ ಟಾಕೀಸ್‌ ಗಳನ್ನು ಇಟ್ಟಿದ್ದೇ. ಒಂದಲ್ಲ ಮೂರ್ನಾಲ್ಕು ಕಡೆ ಟೆಂಟ್‌ಗಳನ್ನು ಇಟ್ಟಿದ್ದೆ. ದೊಡ್ಡಆಲಹಳ್ಳಿ, ಹಾರೋಬೆಲೆ, ಕೋಡಿಹಳ್ಳಿಗಳಲ್ಲಿ ನಡೆಸುತ್ತಿದ್ದೆ. ಹುಣಸೇಹಳ್ಳಿಯಲ್ಲಿ ಈಗಲೂ ಟೆಂಟ್ ಇದೆ. ಈ ಊರುಗಳಿಗೆ ಹೋಗಿ ಮಾದ್ಯಮದವರೇ ಸಮೀಕ್ಷೆ ನಡೆಸಿ, ನಾನು ಯಾವ ಚಿತ್ರಗಳ ಪ್ರದರ್ಶನ ಮಾಡಿಸುತ್ತಿದ್ದೆ ಎಂದು ಜನರ ಬಳಿ ಕೇಳಿ. ಕುಮಾರಸ್ವಾಮಿ ಅವರಿಗೆ ನೀವೆ ಉತ್ತರಿಸಿ ಎಂದರು. ಕುಮಾರಸ್ವಾಮಿ ಪದೇ, ಪದೇ ನಿಮ್ಮ ಮೇಲೆ ಸರಣಿ ಆರೋಪಗಳನ್ನು ಮಾಡುತ್ತಿರುವುದರ ಹಿಂದಿನ ಕಾರಣವೇನು ಎಂದು ಕೇಳಿದಾಗ “ಅವರು ದೊಡ್ಡವರು, ಏನೇ ಹೇಳಿದರು ನಾವು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ. ಅವರು…

ಗ್ಯಾರಂಟಿ’ ಯೋಜನೆಗಳನ್ನು ಕದ್ದು ಮೋದಿ ಚುನಾವಣೆ ಎದುರಿಸುತ್ತಿದ್ದಾರೆ: ಕಾಂಗ್ರೆಸ್ ಆರೋಪ

ಬೆಂಗಳೂರು: ಪ್ರಧಾನಿ ಮೋದಿಯವರು ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಕದ್ದು ಪಂಚರಾಜ್ಯಗಳ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಲೇವಡಿ ಮಾಡಿದ್ದಾರೆ. ಕೆಪಿಸಿಸಿ ಕಚೇರಿಯ ಭಾರತ್‌ ಜೋಡೋ ಸಭಾಂಗಣದಲ್ಲಿ ನಡೆದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮದಿನಾಚರಣೆ ಮತ್ತು ಬೆಂಗಳೂರು ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ- ದಳಕ್ಕೆ ಮತ ಹಾಕಿದರೆ ಅವರು ಗ್ಯಾರಂಟಿ ಯೋಜನೆಗಳನ್ನು ವಾಪಸ್‌ ತೆಗದುಕೊಳ್ಳುವಂತಹ ಕಾನೂನು ತರುತ್ತಾರೆ. ಈ ವಿಚಾರಗಳನ್ನು ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ನಾಯಕರು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು. ಬಿಜೆಪಿ ಮತ್ತು ದಳದವರು ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದವರು. ಅವರ ಈ ಜನವಿರೋಧಿ ಬುದ್ದಿಯನ್ನು ಮತದಾರರಿಗೆ ತಿಳಿಸುವ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲುಸುವುದಾಗಲಿ, ಕಡಿಮೆ ಮಾಡುವುದಾಗಲಿ ಯಾವುದನ್ನೂ ಸಹ ಕಾಂಗ್ರೆಸ್‌ ಸರ್ಕಾರ ಮಾಡುವುದಿಲ್ಲ ಎಂದರು. ಬಿಜೆಪಿಯವರು ಅಧ್ಯಕ್ಷರನ್ನಾಗಿ, ವಿರೋಧ ಪಕ್ಷದ…

ಭೀಕರ ಅಪಘಾತ: ಮೋದಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ 6 ಪೊಲೀಸರು ದುರ್ಮರಣ

ನಾಗೌರ್: ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಪೊಲೀಸ್ ಸಿಬ್ಬಙದಿ ಸಾವನ್ನಪ್ಪಿದ್ದಾರೆ. ಭಾನುವಾರ ಬೆಳಗ್ಗೆ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಜುಂಜುನುವಿನಲ್ಲಿ ಪ್ರಧಾನಿ ಸಮಾವೇಶಕ್ಕೆಂದು ಈ ಪೊಲೀಸರು ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ ಎನ್ನಲಾಗಿದೆ. ನಗೌರ್ ಜಿಲ್ಲೆಯ ಕಣುತ ಗ್ರಾಮದ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು ಟ್ರಕ್ ಅಪ್ಪಳಿಸಿದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು ಮೂವರು ಪೊಲೀಸರಿಗೆ ಗಂಭೀರ ಗಾಯಗಳಾಗಿವೆ. ಅಪಘಾತದಲ್ಲಿ ಪೊಲೀಸರು ಸಾವನ್ನಪ್ಪಿರುವ ಬಗ್ಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಲಯಾಳಂ ನಟ ವಿನೋದ್ ಥಾಮಸ್ ಶವವಾಗಿ ಪತ್ತೆ

ಕೊಟ್ಟಾಯಂ: ಕೇರಳದ ಜನಪ್ರಿಯ ನಟ ವಿನೋದ್ ಥಾಮಸ್ ಶವವಾಗಿ ಪತ್ತೆಯಾಗಿದ್ದಾರೆ. ಕೊಟ್ಟಾಯಂನ ಪಂಪಾಡಿ ಬಳಿಯ ಹೋಟೆಲ್‌ನಲ್ಲಿ ನಿಲ್ಲಿಸದ್ದ ಕಾರಿನೊಳಗೆ 45 ವರ್ಷದ ವಿನೋದ್ ಥಾಮಸ್ ಶವ ಶನಿವಾರ ಪತ್ತೆಯಾಗಿದೆ ಹೋಟೆಲ್‌ ಆವರಣದಲ್ಲಿ ಹಲವು ದಿನಗಳಿಂದ ನಿಂತಿದ್ದ ಕಾರಿನೊಳಗೆ ವ್ಯಕ್ತಿಯೊಬ್ಬ ಇರುವುದಾಗಿ ಹೋಟೆಲ್ ಸಿಬ್ಬಂದಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ನಟ ವಿನೋದ್ ಥಾಮಸ್ ಅವರು ಶವವಾಗಿ ಪತ್ತೆಯಾಗಿದ್ದಾರೆ. ‘ನಾಥೋಲಿ ಒರು ಚೆರಿಯ ಮೀನಲ್ಲಾ’, ‘ಅಯ್ಯಪ್ಪನುಮ್ ಕೊಶ್ಯುಮ್’, , ‘ಒರು ಮುರೈ ವಂತ್ ಪಾಠಯಾ’, ‘ಹ್ಯಾಪಿ ವೆಡ್ಡಿಂಗ್’ ಮತ್ತು ‘ಜೂನ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ವಿನೋದ್ ಥಾಮಸ್ ನಟಿಸಿದ್ದಾರೆ. ನಟ ವಿನೋದ್ ಥಾಮಸ್ ನಿಧಾನಕ್ಕೆ ಸಿನಿಮಾ ಕ್ಷೇತ್ರದ ಗಣ್ಯರನೇಕರು ಕಂಬನಿ ಮಿಡಿದಿದ್ದಾರೆ.

72ನೇ ಮಿಸ್‌ ಯೂನಿವರ್ಸ್‌ ಆಗಿ ನಿಕರಾಗುವಾದ ‘ಶೆಯ್ನಿಸ್ ಪಲಾಸಿಯೋಸ್’

ಎಲ್‌. ಸಾಲ್ವಡಾರ್‌ನಲ್ಲಿ ನಡೆದ 72ನೇ ಮಿಸ್‌ ಯೂನಿವರ್ಸ್‌ ಸ್ಪರ್ಧೆಯಲ್ಲಿ ನಿಕರಾಗುವಾದ ಸುಂದರಿ ಶೆಯ್ನಿಸ್ ಪಲಾಸಿಯೋಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 90 ಕ್ಕೂ ಹೆಚ್ಚು ದೇಶಗಳಿಂದ ಸ್ಪರ್ಧಿಗಳ ಪೈಕಿ  ವಿಶ್ವ ಸುಂದರಿ ಪಟ್ಟವನ್ನು ಶೆಯ್ನಿಸ್ ಪಲಾಸಿಯೋಸ್ ಪಡೆದುಕೊಂಡಿದ್ದಾರೆ‌  ಭಾರತೀಯ ಕಾಲಮಾನ ಭಾನುವಾರ ಬೆಳಿಗ್ಗೆ 6:30 ಕ್ಕೆ ಮಿಸ್ ಯೂನಿವರ್ಸ್ ವಿಜೇತರ ಹೆಸರನ್ನು ಘೋಷಿಸಲಾಯಿತು. 23 ವರ್ಷದ ಶೆಯ್ನಿಸ್ ಅಲೋಂಡ್ರಾ ಪಲಾಸಿಯೊಸ್ ಕಾರ್ನೆಜೊ ಅವರು ಕಳೆದ ವರ್ಷದ ವಿಜೇತ ಆರ್’ಬೊನಿ ಗೇಬ್ರಿಯಲ್ ಅವರಿಂದ 2023 ರ ವಿಶ್ವ ಸುಂದರಿ ಕಿರೀಟವನ್ನು ಹಸ್ತಾಂತರಿಸಿದರು. ಇದೇ ವೇಳೆ, ಥಾಯ್ಲೆಂಡ್‌ನ ಆಂಟೋನಿಯಾ ಪೋರ್ಸಿಲ್ಡ್ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡರು. ಆಸ್ಟ್ರೇಲಿಯಾದ ಮೊರಾಯಾ ವಿಲ್ಸನ್ ಎರಡನೇ ರನ್ನರ್ ಅಪ್ ಸ್ಥಾನಕ್ಕೆ ಗುರುತಾದರು. ಭಾರತದ ಸುಂದರಿ 23 ವರ್ಷದ ಶ್ವೇತಾ ಶಾರ್ದಾ ಅವರು ಸೆಮಿಫೈನಲ್‌‌ವರಗೆ ತಲುಪಿದ್ದರು. ಅಗ್ರ 20 ಫೈನಲಿಸ್ಟ್‌ಗಳಲ್ಲಿ ಅವರು ಸ್ಥಾನ ಪಡೆಕೊಂಡಿದ್ದಾರೆ. MISS UNIVERSE 2023…