ಸಿಲಿಕಾನ್ ಸಿಟಿಯಲ್ಲಿ ತುಳುನಾಡ ಐಸಿರಿ.. ಹೊಸ ಚರಿತ್ರೆ ಬರೆದ ‘ಬೆಂಗಳೂರು ಕಂಬಳ’

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ತುಳುನಾಡ ವೈಭವ ಗರಿಗೆದರಿದೆ. ಇತಿಹಾಸದಲ್ಲೇ ಮೊದಲೆಂಬಂತೆ ಬೆಂಗಳೂರಿನಲ್ಲಿ ಕಂಬಳ ಆಯೋಜಿತವಾಗಿದ್ದು, ಅರಮನೆ ಮೈದಾನದಲ್ಲಿ ಈ ಮಹಾ ವೈಭವಕ್ಕೆ ಚಾಲನೆ ಸಿಕ್ಕಿದೆ. ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ‘ನಮ್ಮ ಕಂಬಳ, ಬೆಂಗಳೂರು ಕಂಬಳ’ ಎಂಬ ಹೆಸರಿನಲ್ಲಿ ಕಂಬಳ ಆಯೋಜಿತವಾಗಿದೆ. ‘ನಮ್ಮ ಕಂಬಳ, ಬೆಂಗಳೂರು ಕಂಬಳ’ದ ವೈಶಿಷ್ಟ್ಯ ಹೀಗಿದೆ.. ಕಂಬಳದ ವೇದಿಕೆಗೆ ದಿವಂಗತ ನಟ ಪುನಿತ್ ರಾಜಕುಮಾರ್ ಹೆಸರಿಡಲಾಗಿದೆ. ಕಂಬಳದ ಕರೆಗೆ ರಾಜ ಮಹಾರಾಜ ಎಂದು ಹೆಸರು ಇಡಲಾಗಿದೆ. ಸಾಂಸ್ಕೃತಿಕ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಲಾಗಿದೆ. ಸಾಮಾನ್ಯವಾಗಿ ಕಂಬಳ ಕೋಣಗಳು ಓಡುವ ಟ್ರ್ಯಾಕ್ 147 ಮೀಟರ್ ಉದ್ದ ಇರುತ್ತದೆ, ಆದರೆ ಬೆಂಗಳೂರು ಕಂಬಳದ ಟ್ರ್ಯಾಕ್ 155 ಮೀಟರ್ ಉದ್ದವಿದೆ. ಸುಮಾರು 200 ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ. ಬೆಂಗಳೂರು ಕಂಬಳವನ್ನು ಲಕ್ಷಾಂತರ ಜನರು ವೀಕ್ಷಿಸಲಿದ್ದು, ಸೂಕ್ತ ವ್ಯವಸ್ಥೆ ಮಾಡಲಾಗಿದೆ.…

ಚಾರಿತ್ರಿಕ ‘ನಮ್ಮ ಕಂಬಳ, ಬೆಂಗಳೂರು ಕಂಬಳ’ಕ್ಕೆ ಮುನ್ನುಡಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ತುಳುನಾಡ ವೈಭವ ಗರಿಗೆದರಿದೆ. ಇತಿಹಾಸದಲ್ಲೇ ಮೊದಲೆಂಬಂತೆ ಬೆಂಗಳೂರಿನಲ್ಲಿ ಕಂಬಳ ಆಯೋಜಿತವಾಗಿದ್ದು, ಅರಮನೆ ಮೈದಾನದಲ್ಲಿ ಈ ಮಹಾ ವೈಭವಕ್ಕೆ ಚಾಲನೆ ಸಿಕ್ಕಿದೆ. ಪುತ್ತೂರು ಶಾಸಕ ಅಶೋಕ್ ರೈ ಮುಂದಾಳುತ್ವದಲ್ಲಿ ಬೆಂಗಳೂರು ಅರಮನೆ ಮೈದಾನದಲ್ಲಿ ಎರಡು ದಿನಗಳ ಕಾಲ ‘ನಮ್ಮ ಕಂಬಳ, ಬೆಂಗಳೂರು ಕಂಬಳ’ ಎಂಬ ಹೆಸರಿನಲ್ಲಿ ಕಂಬಳ ಆಯೋಜಿತವಾಗಿದ್ದು, ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯಲಾಯಿತು. ರಾಜ ಮಹರಾಜ ಹೆಸರಿನ ಕಂಬಳ ಕೆರೆಗೆ ಅರ್ಚಕರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಬಳಿಕ ಕಂಬಳ ಕೆರೆಗೆ ಯುವರತ್ನ ಡಾ. ಪುನಿತ್​​ ರಾಜ್​​ಕುಮಾರ್​ ಪತ್ನಿ ಅಶ್ವಿನಿ ಪುನಿತ್​ ರಾಜ್​​ಕುಮಾರ್ ಅವರು ಇಂದು ದೀಪ ಬೆಳಗುವ ಮೂಲಕ ಕೋಣಗಳ ಓಟಕ್ಕೆ ಚಾಲನೆ ನೀಡಿದರು. ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಸದಾನಂದ ಗೌಡ, ಶಾಸಕರಾದ ಎಸ್.ಆರ್.ವಿಶ್ವನಾಥ್ ಹಾಗೂ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್…

ಇಸ್ರೇಲ್-ಪ್ಯಾಲೆಸ್ತೀನ್ ಕದನ; ಹಮಾಸ್’ನಿಂದ 24 ಒತ್ತೆಯಾಳುಗಳ ಬಿಡುಗಡೆ

ಗಾಜಾ: ಮಧ್ಯ ಪ್ರಾಚ್ಯಾದಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಯುದ್ಧ ವಿವಿಧ ರಾಷ್ಟ್ರಗಳ ಪಾಲಿಗೂ ಕಹಿ ಅನುಭವ. ಈ ನಡುವೆ ಹಮಾಸ್ ಕಪಿ ಮುಷ್ಟಿಯಲ್ಲಿ ಒತ್ತೆಯಾಳುಗಳಾಗಿದ್ದ 24 ಮಂದಿಯನ್ನು ಬಂಡುಕೋರ ಪಡೆ ಬಿಡುಗಡೆ ಮಾಡಿದೆ. 13 ಇಸ್ರೇಲಿಗಳು ಸೇರಿದಂತೆ ಗಾಜಾದಲ್ಲಿ ವಾರಗಳ ಕಾಲ ಒತ್ತೆಯಾಳುಗಳಾಗಿದ್ದ ಜನರ ಗುಂಪನ್ನು ಹಮಾಸ್ ಶುಕ್ರವಾರ ಬಿಡುಗಡೆ ಮಾಡಿದೆ. ನಾಲ್ಕು ದಿನಗಳ ಕದನ ವಿರಾಮ ಒಪ್ಪಂದದಡಿ ಇಸ್ರೇಲ್ ಜೊತೆ ಪ್ಯಾಲೆಸ್ತೀನ್ ಕೈದಿಗಳ ವಿನಿಮಯದ ಮೊದಲ ಹಂತ ಇದಾಗಿದೆ ಎಂದು ಹೇಳಲಾಗುತ್ತಿದೆ. ಯುದ್ಧದ ಸಂದರ್ಭದಲ್ಲಿ ಅಪಹರಣಕ್ಕೊಳಗಾಗಿದ್ದ 12 ಥಾಯ್ ಪ್ರಜೆಗಳನ್ನೂ ಬಿಡುಗಡೆ ಮಾಡಲಾಗಿದೆ ಎಂದು ಸೇನಾ ಮೂಲಗಳು ಖಚಿತಪಡಿಸಿವೆ.

ಅಮರ ಯೋಧ ಕ್ಯಾಪ್ಟನ್ ಪ್ರಾಂಜಲ್’ಗೆ ನಾಡಿನ ನಮನ.. ಗಣ್ಯರಿಂದ ಗೌರವ

ಬೆಂಗಳೂರು: ಕಾಶ್ಮೀರದಲ್ಲಿ ಉಗ್ರರ ವಿರುದ್ದದ ಹೋರಾಟದ ವೇಳೆ ಹುತಾತ್ಮರಾದ ರಾಜ್ಯದ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರಕ್ಕೆ ನಾಡಿನ ಗಣ್ಯರು ಶ್ರದ್ದಾಂಜಲಿ ಸಮರ್ಪಿಸಿದರು. ಜಮ್ಮು- ಕಾಶ್ಮೀರದ ರಜೌರಿ ಜಿಲ್ಲೆಯ ಬಾಜಿ ಮಾಲ್‌ ಅರಣ್ಯ ಪ್ರದೇಶದಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಬುಧವಾರ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಕರ್ನಾಟಕ ಮೂಲ ಯೋಧ 29 ವರ್ಷದ ಕ್ಯಾಪ್ಟನ್‌ ಎಂ.ವಿ. ಪ್ರಾಂಜಲ್‌ (Captain Pranjal)​ ಹುತಾತ್ಮರಾಗಿದ್ದಾರೆ. ಬೆಂಗಳೂರು ಹೊರವಲಯದ ಜಿಗಣಿ ಬಳಿ ಇಂದು ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ , ಕೆ.ಜೆ ಜಾರ್ಜ್​, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಹಿತ ಗಣ್ಯರನೇಕರು ವೀರ ಯೋಧನ ಅಂತಿಮ ದರ್ಶನ ಪಡೆದರು. ಗೌರವ ನಮನ ಸಲ್ಲಿಸಿದ ಮುಖ್ಯಮಂತ್ರಿ ಹುತಾತ್ಮ ಯೋಧನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ರಾಷ್ಟ್ರರಕ್ಷಣೆಯಲ್ಲಿ ಪ್ರಾಂಜಲ್…

ಡಿಕೆಶಿ ಪ್ರಕರಣ ಹಿಂತೆಗೆತದ ಪ್ರತಿಧ್ವನಿ; ಜನಸಾಮಾನ್ಯರ ಬಗ್ಗೆ ‘ಹೈ’ ತೀರ್ಪು ಒಪ್ಪದ ಸರ್ಕಾರಕ್ಕೆ ‘ಲೀಗಲ್-ಐ’ ಚಾಟಿ

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ದದ ಸಿಬಿಐ ತನಿಖೆ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ಕೈಗೊಂಡ ತೀರ್ಮಾನದ ಬಳಿಕ ಇತರ ಪ್ರಕರಣಗಳ ವಿಚಾರದಲ್ಲೂ ಜನಹಿತ ಕ್ರಮ ಕೈಗೊಳ್ಳಿ ಎಂಬ ಆಗ್ರಹ ಪ್ರತಿಧ್ವನಿಸಿದೆ. ಇದೀಗ ರೌಡಿ ಪಟ್ಟಿ ವಿಚಾರ ರಾಜ್ಯ ಸರ್ಕಾರಕ್ಕೆ ಸವಾಲು ಎಂಬಂತಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ದದ ಸಿಬಿಐ ತನಿಖೆಯ ಆದೇಶ ಹಿಂಪಡೆಯುವ ಸಂಪುಟ ಸಭೆ ತೀರ್ಮಾನದಂತೆಯೇ ಇತರ ಪ್ರಕರಣಗಳಲ್ಲೂ ಜನಹಿತ ಕ್ರಮ ಕೈಗೊಳ್ಳಲು ಕೋರಿ ವಕೀಲರ ಸಮೂಹದ ಸಂಸ್ಥೆ “ಲೀಗಲ್-ಐ’ ಮುಖ್ಯಸ್ಥ ಶಾಜಿ ಟಿ ವರ್ಗೀಸ್ (Shaji T Verghese) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರ ಕುತೂಹಲದ ಕೇಂದ್ರಬಿಂದುವಾಗಿದೆ. ಅದರಲ್ಲೂ ಅಮಾಯಕರು ರೌಡಿ ಶೀಟರ್ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದು ಅವರಿಗೆ ನ್ಯಾಯ ಸಿಗಬೇಕೆಂಬ ಪ್ರತಿಪಾದನೆ ಕುತೂಹಲಕಾರಿ ಬೆಳವಣಿಗೆಯಾಗಿದೆ. ರಾಜ್ಯ ಸರ್ಕಾರವು ರೌಡಿ ಶೀಟರ್ ವಿಚಾರದಲ್ಲಿ ಹೈಕೋರ್ಟ್ ಆದೇಶವನ್ನೇ ಅನುಷ್ಠಾನಗೊಳಿಸಿಲ್ಲ. ನ್ಯಾಯಬದ್ಧ ಕ್ರಮಕ್ಕ್ಕಾಗಿ ಹೈಕೋರ್ಟ್ ನೀಡಿರುವ ನಿರ್ದೇಶನವನ್ನು…

ಗ್ಯಾರೆಂಟಿ ‘ಶಕ್ತಿ’ಯ ಶತಕೋಟಿ ಸಂಭ್ರಮ; ಸಿಬ್ಬಂದಿ ಸಮೂಹಕ್ಕೆ ಚಿನ್ನದ ಪದಕದ ಸಂತಸ

ಬೆಂಗಳೂರು: ರಾಜ್ಯ ಸರ್ಕಾರದ ಮ್ಹವಾಕಾಂಕ್ಷಿ ‘ಗ್ಯಾರೆಂಟಿ’ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ’ಯ ಶತಕೋಟಿ ಸಂಭ್ರಮ ಸಮಾರಂಭ ಗಮನಸೆಳೆಯಿತು. ‘ಶಕ್ತಿ’ ಯೋಜನೆಯ ಪರಿಪೂರ್ಣ ಜಾರಿಯ ಜೊತೆಯಲ್ಲೇ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿದ KSRTC ಚಾಲಕರನ್ನು ಅಭಿನಂಧಿಸಿ ಗೌರವಿಸಿದ ಸನ್ನಿವೇಶವೂ ಈ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿತು. ರಾಜ್ಯದ ಆಡಳಿತದ ‘ಶಕ್ತಿ’ಕೇಂದ್ರ ವಿಧಾನಸೌಧದಲ್ಲಿ ಶುಕ್ರವಾರ ‘ಶಕ್ತಿ’ ಗ್ಯಾರೆಂಟಿಯ ಶತಮಾನ ಸಂಭ್ರಮ ನೆರವೇರಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ್, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸಹಿತ ಮಂತ್ರಿಗಳು, ಶಾಸಕರು, ಅಧಿಕಾರಿಗಳು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲಿ ಸಾರಿಗೆ ಸಂಸ್ಥೆಗಳ (KSRTC ಸಮೂಹ) ಅಪಘಾತ ರಹಿತ ಚಾಲಕರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಅಪಘಾತ ರಹಿತ ಚಾಲಕರಿಗೆ ಚಿನ್ನದ ಪದಕ ಪ್ರದಾನ ಮಾಡಿ ಗೌರವಿಸಲಾಯಿತು. ಏನಿದು ಚಿನ್ನದ ಪದಕದ ಪುರಸ್ಕಾರ? ಗ್ರಾಮಾಂತರ ಸಾರಿಗೆಗಳಲ್ಲಿ 15 ವರ್ಷಗಳ ಅಪಘಾತ…

ಡಿಕೆಶಿ ಕೇಸ್; ಅಧಿವೇಶನದಲ್ಲಿ ಚರ್ಚೆಗೆ ಸಿದ್ದ ಎಂದ ಕಾಂಗ್ರೆಸ್

ಬೆಂಗಳೂರು: ಡಿ,ಕೆ.ಶಿವಕುಮಾರ್ ವಿರುದ್ಧ ಹಿಂದಿನ ಸರ್ಕಾರ ಹೊರಡಿಸಿದ್ದ ಸಿಬಿಐ ತನಿಖೆ ಆದೇಶವನ್ನು ಕಾಂಗ್ರೆಸ್ ಪಕ್ಷ ಸಮರ್ಥಿಸಿಕೊಂಡಿದೆ. ಈ ಕುರಿತ ಸಂಪುಟ ನಿರ್ಧಾರಬಗ್ಗೆ ಪ್ರತಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕರು ಈ ವಿಚಾರದಲ್ಲಿ ಅಧಿವೇಶನದಲ್ಲಿ ಚರ್ಚೆಗೆ ಸಿದ್ದ ಎಂದು ಹೇಳಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ (ಡಿಎ) ಪ್ರಕರಣವನ್ನು ಹಿಂಪಡೆಯುವ ಸಂಪುಟ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ, ಬಿಜೆಪಿ ನಾಯಕರ ಟೀಕೆ ಕುರಿತಂತೆ ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಈ ವಿಚಾರವಾಗಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಚರ್ಚೆ ನಡೆಸಿ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಕುರಿತಂತೆ ಬಿಜೆಪಿ ನಾಯಕರು ಅನಗತ್ಯ ಟೀಕೆ ಮಾಡುತ್ತಿದ್ದಾರೆ ಎಂದರು. ಕರ್ನಾಟಕದ ಇತಿಹಾಸದಲ್ಲಿ ಯಡಿಯೂರಪ್ಪ ಅವರ ಪ್ರಕರಣ ಸೇರಿದಂತೆ ಯಾವುದೇ…