ಕೊರೋನಾ ಗೆದ್ದ ಸಿಎಂಗೆ ಮಾಜಿ ಪ್ರಧಾನಿ ಅಭಿನಂದನೆ

ಬೆಂಗಳೂರು: ಕೊರೋನಾ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿನವರು ಚಿಕಿತ್ಸೆ ಪಡೆದಿರುವ ಅವರು ಮಂಗಳವಾರ ಬಿಡುಗಡೆಯಾಗಿದ್ದಾರೆ.

ಕೊರೋನಾ ಗೆದ್ದು ಮನೆಗೆ ಮರಳಿರುವ ಮುಖ್ಯಮಂತ್ರಿಯವರನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅಭಿನಂದಿಸಿದ್ದಾರೆ. ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ಕೋವಿಡ್ ನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಸುದ್ದಿ ಕೇಳಿ ಸಂತೋಷವಾಯಿತು , ಮುಖ್ಯಮಂತ್ರಿಗಳು ಎಂದಿನಂತೆ ಕಾರ್ಯಪ್ರವೃತ್ತರಾಗಲಿ ಎಂದು ಆಶಿಸುವೆ ಎಂದಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಮತ್ತು ಅತಿವೃಷ್ಠಿ ಎರಡನ್ನು ನಾವೆಲ್ಲ ಎದುರಿಸಬೇಕಾಗಿದೆ. ಇದರ ಬಗ್ಗೆ ಹೆಚ್ಚಿನ ಗಮನ ಹರಿಸಲಿ. ಸರ್ಕಾರ ಕೈಗೊಳ್ಳುವ ಪರಿಹಾರ ಕಾರ್ಯಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಜೊತೆಗೆ ಭೂ ಕಾಯ್ದೆ , ಎಪಿಎಂಸಿ ಕಾಯ್ದೆ , ಮತ್ತು ಕೈಗಾರಿಕಾ ನೀತಿ ತಿದ್ದುಪಡಿಗಳನ್ನು ಮರು ಪರಿಶೀಲಿಸಲಿ ಎಂದು ದೇವೇಗೌಡರು ಇದೇ ವೇಳೆ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.

Related posts