ವಿಧಾನಸಭೆಯ ಜಂಟಿ ಅಧಿವೇಶನ; ರಾಜ್ಯಪಾಲರ ಭಾಷಣವೇಳೆ ಕಾಂಗ್ರೆಸ್ ಶಾಸಕರಿಂದ ಪ್ರತಿಭಟನೆ

ಬೆಂಗಳೂರು: ಕಳೆದೆ ಒಂದೂವರೆ ವಷ೯ದಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆದಿಲ್ಲ. ಸರ್ಕಾರದ ಧೋರಣೆ ವಿರೋಧಿಸಿ ಕಾಂಗ್ರೆಸ್ ಸದಸ್ಯರು ರಾಜ್ಯಪಾಲರ ಭಾಷಣದ ವೇಳೆ ಪ್ರತಿಭಟಿಸಿದರು. ಉತ್ತರ ಕನಾ೯ಟಕ‌ ಭಾಗವಾದ ಹುಬಳ್ಳಿ-ಧಾರವಾಡ, ಬೆಳಗಾವಿ, ಬಿಜಾಪುರ, ಬಾಗಲಕೋಟೆ,‌ ಬೀದರ್, ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಬರ ಪರಿಸ್ಥಿತಿಯಿಂದ ರೈತರು ಕಂಗಾಲಾಗಿದ್ದಾರೆ ಎಂದು ಭಿತ್ತಿಪತ್ರ ಪ್ರದರ್ಶಿಸಿದರು.

ಕನಾ೯ಟಕ ಸಕಾ೯ರ ಯಾವುದೇ ಅನುದಾನ ಪರಿಹಾರ ನೀಡಿಲ್ಲ. ಗಡಿವಿಚಾರದಲ್ಲಿ ಮಹಜನ ವರದಿಯೇ ಅಂತಿಮ ಹಾಗೂ ನಂಜುಂಡಪ್ಪ ವರದಿ ಸಂಪೂಣ೯ ಜಾರಿಗೆ ತರಬೇಕೆಂದು ಶಾಸಕರಾದ ಪ್ರಕಾಶ ಕೆ.ರಾಠೋಡ ಭಿತ್ತಿಪತ್ರ ಪ್ರದರ್ಶಿಸಿ ಅಸಮಾಧಾನ ಹೊರಹಾಕಿದರು.

Related posts