ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆ ಹದೆಗೆಟ್ಟಿದೆಯೇ? ಏನಿದು ವೀಡಿಯೋ..?

ತುಮಕೂರು: ರಾಜ್ಯದ ಆರೋಗ್ಯ ಇಲಾಖೆಯ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಹಲವು ಸಾವು ಪ್ರಕರಣಗಳು ಸಾಕ್ಷಿಯಾಗಿದ್ದರೆ, ಇದೀಗ ಅದೇ ಇಲಾಖೆಯ ಅವ್ಯವಸ್ಥೆಯನ್ನು ವೀಡಿಯೋವೊಂದು ತೆರೆದಿಟ್ಟಿದೆ.

ತಿಪಟೂರು ತಾಲ್ಲೂಕು ಆಸ್ಪತ್ರೆಯ ಅವ್ಯವಸ್ಥೆಯನ್ನು ಜನತೆ ತೆರೆದಿಟ್ಟಿದ್ದಾರೆ, ಒಂದೇ ಬೆಡ್ ಮೇಲೆ ಎರಡ್ಮೂರು ರೋಗಿಗಳನ್ನು ಮಲಗಿಸಲಾಗುತ್ತಿದೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಈ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ಅಸಮಾಧಾನ ಹೊರಹಾಕಿದೆ.

ಕೋವಿಡ್ ಸಂದರ್ಭದಲ್ಲಿನ ಬೆಡ್ ಕೊರತೆಯಿಂದಲೂ ಸರ್ಕಾರ ಪಾಠ ಕಲಿಯಲಿಲ್ಲವೇ? ಆರೋಗ್ಯ ವ್ಯವಸ್ಥೆಯನ್ನು ಸದೃಢಗೊಳಿಸಲಿಲ್ಲ ಏಕೆ? ಆರೋಗ್ಯ ವ್ಯವಸ್ಥೆಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದೇಕೆ? ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿ ಪ್ರಶ್ನಿಸಿದೆ.

Related posts