ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಮರಣ ಮೃದಂಗ ಭಾರಿಸುತ್ತಿದ್ದು ಈ ಬೆಳವಣಿಗೆ ಆರೋಗ್ಯ ಇಲಾಖೆಗೆ ಸವಾಲಾಗಿದೆ. ಈ ಸಂಕಷ್ಟ ಕಾಲದಲ್ಲಿ ಅಸಹಾಯಕರಿಗೆ ನೆರವಾಗುವಂತೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಜೂನ್ 19 ರಂದು ಎಐಸಿಸಿ ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿಯವರ ಜನ್ಮದಿನ. ಈ ದಿನವನ್ನ ಬಡವರ ಕಲ್ಯಾಣಕ್ಕಾಗಿ, ಜನತೆಯ ಸೇವೆಗಾಗಿ ಸಮರ್ಪಿಸೋಣ ಎಂದು ಡಿಕೆಶಿ ಕಾಂಗ್ರೆಸ್ ಸೇನಾನಿಗಳಿಗೆ ಕರೆ ಕೊಟ್ಟಿದ್ದಾರೆ. ಪಕ್ಷದ ಎಲ್ಲಾ ಕಾರ್ಯಕರ್ತರು, ಮುಖಂಡರು ತಮ್ಮ ಜಿಲ್ಲೆ, ಕ್ಷೇತ್ರ, ಬ್ಲಾಕ್ ನಲ್ಲಿ ಕೋವಿಡ್ ನಿಂದಾಗಿ ಸಂಕಷ್ಟದಲ್ಲಿ ಇರುವವರಿಗೆ ನೆರವಾಗಬೇಕು ಎಂದವರು ಸಲಹೆ ಮಾಡಿದ್ದಾರೆ. ಜೂನ್ 19 ರಂದು ಎಐಸಿಸಿ ಮಾಜಿ ಅಧ್ಯಕ್ಷರಾದ @RahulGandhi ಅವರ ಜನ್ಮದಿನ. ಈ ದಿನವನ್ನ ಬಡವರ ಕಲ್ಯಾಣಕ್ಕಾಗಿ, ಜನತೆಯ ಸೇವೆಗಾಗಿ ಸಮರ್ಪಿಸೋಣ. ಪಕ್ಷದ ಎಲ್ಲಾ ಕಾರ್ಯಕರ್ತರು, ಮುಖಂಡರು ತಮ್ಮ ಜಿಲ್ಲೆ, ಕ್ಷೇತ್ರ, ಬ್ಲಾಕ್ ನಲ್ಲಿ…
Year: 2020
ಒಂದೇ ದಿನ 12 ಮಂದಿ ಸಾವು; ರಾಜ್ಯದಲ್ಲಿ ಹೆಚ್ಚಿದ ಕೊರೋನಾ ಆತಂಕ
ಬೆಂಗಳೂರು: ಕರುನಾಡಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು ಗುರುವಾರ ಒಂದೇ ದಿನ 12 ಮಂದಿ ಸೋಂಕಿಗೆ ಬಲಿಯಾಗಿರುವ ಬೆಳವಣಿಗೆ ರಾಜ್ಯದ ಜನರಲ್ಲಿ ಆತಂಕ ತಂದಿದೆ. ಕೋವಿಡ್-19 ವೈರಾಣು ಮರಣ ಮೃದಂಗ ಭಾರಿಸುತ್ತಿದ್ದು ಗುರುವಾರ ಸಂಜೆಯ ಹೊತ್ತಿಗೆ ಹೊಸದಾಗಿ 210 ಸೋಂಕಿನ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ವೈದ್ಯಕೀಯ ರಂಗವೂ ಸವಾಲನ್ನೇ ಸ್ವೀಕರಿಸುವಂತಾಯಿತು. ಬಳ್ಳಾರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ 48 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿದ್ದರೆ ದಕ್ಷಿಣ ಕನ್ನಡದಲ್ಲಿ 23, ರಾಮನಗರದಲ್ಲಿ 21 ಹೊಸ ಕೇಸ್’ಗಳು ವರದಿಯಾಗಿವೆ. ಬೆಂಗಳೂರು ನಗರದಲ್ಲಿ 17, ಯಾದಗಿರಿಯಲ್ಲಿ 8, ಮಂಡ್ಯದಲ್ಲಿ 7, ಬೀದರ್ ನಲ್ಲಿ 6, ಗದಗದಲ್ಲಿ 5 ಹೊಸ ಕೇಸ್’ಗಳು ಈ ಪಟ್ಟಿಯನ್ನು ಸೇರಿವೆ. ರಾಯಚೂರು, ಹಾಸನ, ಧಾರವಾಡದಲ್ಲಿ ತಲಾ 4, ದಾವಣಗೆರೆ, ಚಿಕ್ಕಮಗಳೂರಿನಲ್ಲಿ ತಲಾ 3, ವಿಜಯಪುರ, ಉತ್ತರ ಕನ್ನಡ , ಮೈಸೂರಿನಲ್ಲಿ ತಲಾ 2, ಬಾಗಲಕೋಟೆ, ಕೊಪ್ಪಳ, ಶಿವಮೊಗ್ಗದಲ್ಲಿ ತಲಾ 1 ಪ್ರಕರಣ…
ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ; ಆಕ್ರೋಶಕ್ಕೆ ಗುರಿಯಾದ ಸರ್ಕಾರ
ಬೆಂಗಳೂರು: ರಾಜ್ಯಾದ್ಯಂತ ಇಂದು ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ನಡೆಯಿತು. ಗೊಂದಲ, ಆತಂಕದ ನಡುವೆ ನಡೆದ ಈ ಪರೀಕ್ಷೆ ವೇಳೆ ಸರ್ಕಾರ ಮತ್ತು ಅಧಿಕಾರಿಗಳು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಹಿಡಿಶಾಪಕ್ಕೂ ಗುರಿಯಾಗಬೇಕಾಯಿತು. ಕೊರಾನು ವೈರಾಣು ಸೋಂಕು ತಡೆಯಲು ಲಾಕ್’ಡೌನ್ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಮುಂದುಲ್ಪಟ್ಟಿದ್ದ ದ್ವಿತೀಯ ಪಿಯುಸಿ ಇಂಗ್ಲೀಷ್ ಭಾಷಾ ಪರೀಕ್ಷೆ ರಾಜ್ಯದಾದ್ಯಂತ ಒಟ್ಟು 1016 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಿತು. ಇಂಗ್ಲೀಷ್ ಭಾಷಾ ಪರೀಕ್ಷೆಗೆ ಒಚ್ಚು 95,997 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಪರೀಕ್ಷೆಗೆ ಬರುವ ಎಲ್ಲಾ ಬರೆಯುವ ವಿದ್ಯಾರ್ಥಿಗಳಿಗೆ ಮಾಸ್ಕ್ ಧರಿಸಬೇಕೆಂಬ ಕಡ್ಡಾಯ ನಿಯಮವನ್ನು ಸೂಚಿಸಲಾಗಿತ್ತು. ಆದರೆ ಹಲವೆಡೆ ವಿದ್ಯಾರ್ಥಿಗಳು ಮಾಸ್ಕ್ ಧರಿಸದೇ ಆಗಮಿಸಿದ್ದರು. ಅಂತಹಾ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡುತ್ತಿದ್ದ ದೃಶ್ಯ ಕಂಡುಬರುತ್ತಿತ್ತು. ಆದರೆ ಹಲವೆಡೆ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಆತಂಕದ ಸನ್ನಿವೇಶಕ್ಕೂ ಕಾರಣರಾದರು. ಈ ಸಂಬಂಧ , ಸೂಕ್ತ ಕ್ರಮ ಕೈಗೊಳ್ಳದ ಅಧಿಕಾರಿಗಳ ಹಾಗೂ ಶಿಕ್ಷಕರು ಆಕ್ರೋಶಕ್ಕೆ…
ರಾಜ್ಯಾದ್ಯಂತ ಮಾಸ್ಕ್ ದಿನಾಚರಣೆ; ಕೊರೋನಾ ನಿಯಂತ್ರಣಕ್ಕೆ ಜಾಗೃತಿ
ಬೆಂಗಳೂರು: ಜಗತ್ತಿನಾದ್ಯಂತ ಕೊರೋನಾ ಸಂಕಟದ ಪರಿಸ್ಥಿತಿಯನ್ನು ತಂದಿಟ್ಟಿದೆ. ಲಕ್ಷಾಂತರ ಜನರು ಈ ಅಗೋಚರ ವೈರಾಣುವಿಗೆ ಬಲಿಯಾಗಿದ್ದು ಸ್ವಯಂ ಜಾಗೃತಿಯೊಂದೇ ಇದಕ್ಕೆ ಪರಿಹಾರ ಎಂಬ ತೀರ್ಮಾನಕ್ಕೆ ಬರಲಾಗಿದೆ. ಕೊರೋನಾ ಸೋಂಕು ತಡೆಯಲು ಮಾಸ್ಕ್ ಧರಿಸುವ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ಎಲ್ಲೆಡೆ ನಡೆಯುತ್ತಿವೆ. ಇದೆ ಸಂದರ್ಭದಲ್ಲಿ ಮಾಸ್ಕ್ ದಿನಾಚರಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಕರೆ ನೀಡಿದ್ದಾರೆ. ಸಿಎಂ ಕರೆಯಂತೆ ರಾಜ್ಯಾದ್ಯಂತ ಇಂದು ಮಾಸ್ಕ್ ದಿನಾಚರಣೆ ನಡೆದಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಕೂಡಾ ಭಾಗವಹಿಸಿದರು. ವಿಧಾನಸೌಧದ ಅಬೇಂಡ್ಕರ್ ಪ್ರತಿಮೆಯಿಂದ ಕೆಆರ್ ಸರ್ಕಲ್ ವರೆಗೆ ಪಾದಯಾತ್ರೆ ನಡೆಸಿದರು. ಕಾರ್ಯಕ್ರಮ ಸ್ಥಳದಲ್ಲಿ ಮುಖ್ಯಮಂತ್ರಿಯವರೇ ಅನೇಕರಿಗೆ ಮಾಸ್ಕ್ ವಿತರಿಸಿ ಗಮನಸೆಳೆದರು. ಈ ನಡುವೆ, ಪೊಲೀಸ್ ಪಥ ಸಂಚಲನ ಮೂಲಕ ಮುಖ್ಯಮಂತ್ರಿಗೆ ಗೌರವ ನೀಡಲಾಯಿತು. ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಸೋಮಶೇಖರ್, ಆರ್ ಅಶೋಕ್, ಸಂಸದರಾದ ಪಿಸಿ ಮೋಹನ್, ತೇಜಸ್ವಿ ಸೂರ್ಯ,…
ಸುಶ್ಮಿತಾ ಸೇನ್ ಅಭಿನಯದ ‘ಆರ್ಯ’ ಸಕತ್ ಸೌಂಡ್
ಕೊರೋನಾ ಕಾರಣಕ್ಕಾಗಿ ಲಾಕ್’ಡೌನ್ ಜಾರಿಯಲ್ಲಿದ್ದುದರಿಂದ ಸಿನಿಮಾ ಚಟುವಟಿಕೆಗಳು ನಿಂತಿದ್ದವು. ಆದರೆ ಸಿನಿ ರಸಿಕರ ಕುತೂಹಲ ತಣಿಸುವ ಸುದ್ದಿಗಳಿಗೇನೂ ಕಡಿಮೆಯಿಲ್ಲ. ಈ ಲಾಕ್’ಡೌನ್ ಸಂದರ್ಭದಲ್ಲೇ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಲೇಡಿ ಡಾನ್ ಅಭಿನಯದ ‘ಆರ್ಯ ವೆಬ್ ಸಿರೀಸ್’ ಟ್ರೈಲರ್ ಭಾರೀ ಸಡ್ಡು ಮಾಡಿದೆ. ಈ ಟ್ರೇಲರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸುಮಾರು ಎರಡೂವರೆ ಲಕ್ಷ ಜನರು ಇದನ್ನು ವೀಕ್ಷಿಸಿದ್ದಾರೆ.
ಡ್ರಾಗನ್ ಕುತಂತ್ರಿಗಳನ್ನು ಮೆಟ್ಟಿನಿಲ್ಲಲು ಭಾರತೀಯ ಮೂರೂ ಸೇನಾಪಡೆ ಸರ್ವಸನ್ನದ್ಧ
ದೆಹಲಿ: ಲಡಾಖ್ ಗಡಿಯಲ್ಲಿನ ಚೀನಾ ರಗಳೆ ಭಾರತವನ್ನು ಕೆರಳಿಸುವಂತೆ ಮಾಡಿದೆ. ಅದರಲ್ಲೂ 20 ಯೋಧರನ್ನು ಬಲಿತೆಗೆದುಕೊಂಡಿರುವ ಡ್ರಾಗನ್ ಕುತಂತ್ರಿಗಳನ್ನು ಮೆಟ್ಟಿನಿಲ್ಲಲು ಭಾರತೀಯ ಸೈನಿಕರು ಗಾಡಿಯಲ್ಲಿ ಸರ್ವಸನ್ನದ್ಧರಾಗಿದ್ದಾರೆ. ಚೀನಾ ಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶದ ಸೂಕ್ಷ್ಮ ಪ್ರದೇಶಗಳಲ್ಲಿ ಭಾರತ ತನ್ನ ಮೂರೂ ಸೇನಾ ಪಡೆಗಳನ್ನು ಸಜ್ಜುಗೊಳಿಸಿದೆ. ಭೂಸೇನೆ, ವಾಯುಪಡೆ, ನೌಕಾಪಡೆಗಳು ಯೋಧರು ಸೂಕ್ಷ್ಮ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದು ಚೀನಾದ ಸಮಾರಾ ತಂತ್ರಕ್ಕೆ ಎದಿರೇಟು ಕೊಡಲು ಸಜ್ಜಾಗಿವೆ. ಮೂರು ಸೇನಾಪಡೆಗಳ ಮುಖ್ಯಸ್ಥರ ರಕ್ಷಣಾ ಸಚಿವ ರಾಜನಾಥ್ ಜೊತೆ ನಡೆಸಿದ ಉನ್ನತ ಮಟ್ಟದ ಸಭೆಯ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನದ ಸೇನಾಪಡೆಗಳೊಂದಿಗಿನ ಕಾದಾಟದಲ್ಲಿ ಭಾರತದ 20 ಯೋಧರು ಹುತಾತ್ಮರಾದ ಬೆಳವಣಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ಗಂಭೀರವಾಗಿ ಪರಿಗಣಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್.ಜೈಶಂಕರ್, ವಿತ್ತ ಸಚಿವೆ ನಿರ್ಮಲಾ…
ಕುತೂಹಲದ ಕೇಂದ್ರಬಿಂದುವಾದ ನಂದಮೂರಿ ಬಾಲಕೃಷ್ಟ ‘ಫಸ್ಟ್ ಲುಕ್’
ಲಾಕ್’ಡೌನ್ ನಿಯಮಾವಳಿ ಸಡಿಲವಾಗುತ್ತಿದ್ದಂತೆಯೇ ಸಿನಿಮಾ ಚಿತ್ರೀಕರಣಕ್ಕೂ ಅನುಮತಿ ಸಿಕ್ಕಿದೆ. ಅಷ್ಟೇ ಅಲ್ಲ ಸಿನಿಮಾ ರಂಗದ ಚಟುವಟಿಕೆಗಳಿಗೂ ರಂಗು ಬಂದಿದೆ. ಅಪೂರ್ಣ ಸಿನಿಮಾಗಳ ಪ್ರಚಾರ ವೈಖರಿಯೂ ಗಮನಸೆಳೆದಿದೆ. ಈ ನಡುವೆ ಟೀಸರ್, ಪೋಸ್ಟರ್’ಗಳೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಡ್ಡು ಮಾಡುತ್ತಿವೆ. ಇದೇ ವೇಳೆ, ತೆಲುಗಿನ ನಟ ನಂದಮೂರಿ ಬಾಲಕೃಷ್ಟ ಅಭಿನಯದ ಹೊಸ ಚಿತ್ರದ ಫಸ್ಟ್ ಲುಕ್ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ.
52 ಚೀನೀ ಆ್ಯಪ್’ಗಳ ಅಪಾಯ; ಜನರೇ ಬಳಕೆ ನಿಲ್ಲಿಸುವುದು ಸೂಕ್ತ?
ದೆಹಲಿ: ಕೊರೋನಾ ವೈರಾಣು ಪ್ರಸರಣ ವಿಚಾರದಲ್ಲಿ ಚೀನಾ ವಿರುದ್ಧ ವಿವಿಧ ದೇಶಗಳು ಮುಗಿಬಿದ್ದಿವೆ. ಭಾರತವೂ ಚೀನಾ ವಿರುದ್ಧ ಮುನಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ಲಡಾಖ್ ಗಡಿಭಾಗದಲ್ಲಿ ಚೀನೀ ಸೈನಿಕರು ಉದ್ದತನ ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚೀನೀ ತಂತ್ರಜ್ಞಾನಗಳ ಬಗ್ಗೆ ಆತಂಕವೂ ಸೃಷ್ಟಿಯಾಗಿದ್ದು, ಪ್ರಸ್ತುತ ಭಾರತೀಯರು ಬಳಸುತ್ತಿರುವ 52 ಚೀನೀ ಅಪ್ಲಿಕೇಷನ್‌ಗಳ ಅಪಾಯದ ಬಗ್ಗೆ ಗುಪ್ತಚರ ಇಲಾಖೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ. ಝೂಮ್, ತುಣುಕು ವಿಡಿಯೊ ಆ್ಯಪ್ ಟಿಕ್‌ಟಾಕ್ ಹಾಗೂ ಕಂಟೆಂಟ್ ಆ್ಯಪ್ ಎಂದೇ ಕರೆಯಲ್ಪಡುವ ಯುಸಿ ಬ್ರೌಸರ್, ಶೇರ್‌ಇಟ್, ಕ್ಲೀನ್ ಮಾಸ್ಟರ್ ಮುಂತಾದ ಆ್ಯಪ್‌ಗಳ ಬಳಕೆಯಿಂದ ಭಾರತದ ಭದ್ರತೆಗೆ ಆಪತ್ತು ಎದುರಾಗಬಹುದು’ ಎಂದು ಸೂಚಿಸಿತ್ತು. ಈ ನಡುವೆ ಈ ಅಪ್ಲಿಕೇಷನ್‌ಗಳನ್ನು ಬಳಕೆ ಮಾಡುವುದನ್ನು ಜನರೇ ನಿಲ್ಲಿಸುವುದು ಸೂಕ್ತ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.
‘ಪೇರಳೆ ಚಿಗುರು ತಂಬುಳಿ’ ರುಚಿ ಮಾತ್ರವಲ್ಲ ಆರೋಗ್ಯಪೂರ್ಣವೂ ಹೌದು
ಪೇರಳೆ ರುಚಿ ಮಾತ್ರ ಅಲ್ಲ ಆರೋಗ್ಯ ವೃದ್ಧಿ ಕೂಡಾ ಹೌದು. ಔಷಧಿ ಮಾದರಿಯ ವಸ್ತುಗಳ ತಯಾರಿಯಲ್ಲೂ ಈ ಸೀಬೆಹಣ್ಣು ಮಹತ್ವದ ಪಾತ್ರ ವಹಿಸುತ್ತದೆ. ಎಲ್ಲಾ ಕಾಲದಲ್ಲೂ ಸಿಗುವ ಸೀಬೆಯ ಬೇರೆ ಭಾಗಗಳು ಕೂಡ ತುಂಬಾ ಉಪಯುಕ್ತ. ಅದರ ಚಿಗುರೆಲೆಯ ‘ತಂಬುಳಿ’ ಹಳ್ಳಿ ಸೊಗಡಿನ ಖಾದ್ಯಗಳಲ್ಲೊಂದು. ಅದನ್ನು ತಯಾರಿಸುವ ವಿಧಾನವೂ ಸುಲಭ. ಬೇಕಾದ ಸಾಮಾಗ್ರಿ: ತೆಂಗಿನತುರಿ 1 ಕಪ್ ಜೀರ 1 ಚಮಚ ಕಾಯಿಮೆಣಸು 1 ಪೇರಳೆ ಚಿಗುರು 2 ಕಪ್ ಮಜ್ಜಿಗೆ ಅಥವಾ ಮೊಸರು 1 ಕಪ್ ಎಣ್ಣೆ 2 ಚಮಚ ಬೆಳ್ಳುಳ್ಳಿ 4 ( ಬೇಕಾದಲ್ಲಿ) ಕೆಂಪು ಮೆಣಸು 1 ಸಾಸಿವೆ 1 s ಕರಿಬೇವು ಉಪ್ಪು ರುಚಿಗೆ ತಕ್ಕಷ್ಟು ಮಾಡುವ ವಿಧಾನ: ಮೊದಲಿಗೆ ಪೇರಳೆ ಚಿಗುರನ್ನು ಚೆನ್ನಾಗಿ ಶುಚಿ ಮಾಡಿ, ತೊಳೆದು, ಅದನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪ ನೀರು ಹಾಕಿ ಬೇಯಿಸಿ, ತಣ್ಣಗಾಗಲು…
ಕುತೂಹಲಕಾರಿ ವಿದ್ಯಮಾನಕ್ಕೆ ಸಾಕ್ಷಿಯಾದ ಪರಿಷತ್ ಬಿಜೆಪಿ ಟಿಕೆಟ್
ಬೆಂಗಳೂರು: ರಾಜ್ಯದ ಆಡಳಿತಾರೂಢ ಬಿಜೆಪಿ ಕುತೂಹಲಕಾರಿ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಅಚ್ಚರಿಯ ತೀರ್ಮಾನವೊಂದರಲ್ಲಿ ಜೆಡಿಎಸ್ ತೊರೆದು ಬಿಜೆಪಿಗೆ ಪಕ್ಷಾಂತರಗೊಂಡಿದ್ದ ಎಚ್.ವಿಶ್ವನಾಥ್ ಅವರ ಎಂಎಲ್ ಸಿ ಕನಸು ಭಗ್ನಗೊಂಡಿದೆ. ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಬಿಜೆಪಿ ಹೈಕಮಾಂಡ್ ಎಚ್ ವಿಶ್ವನಾಥ್ ಅವರ ಹೆಸರನ್ನು ಕೈಬಿಟ್ಟಿದೆ. ವಿಧಾನ ಪರಿಷತ್ ನಲ್ಲಿ ತೆರವಾಗಿರುವ ಸ್ಥಾನಗಳ ಪೈಕಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಸಹಕರಿಸಿದವರಿಗೆ ಟಿಕೆಟ್ ನೀಡಲು ರಾಜ್ಯದ ನಾಯಕರು ನಿರ್ಧರಿಸಿದ್ದರು. ಹಾಗಾಗಿ ಎಂಟಿಬಿ ನಾಗರಾಜ್, ಆರ್.ಶಂಕರ್ ಹಾಗೂ ಎಚ್ ವಿಶ್ವನಾಥ್ ಹೆಸರಿಗೆ ಆದ್ಯತೆ ನೀಡಲಾಗಿತ್ತು. ರಾಜ್ಯ ಬಿಜೆಪಿ ಕೋರ್ ಕಮಿಟಿ ಕೂಡಾ ಈ ಮೂವರ ಹೆಸರನ್ನು ಸೇರಿಸಿ 10 ಮಂದಿಯ ಹೆಸರನ್ನು ಹೈಕಮಾಂಡ್’ಗೆ ಕಳುಹಿಸಿತ್ತು. ಬಿಜೆಪಿ ಹೈಕಮಾಂಡ್ ಬುಧವಾರ ರಾತ್ರಿ ಪಟ್ಟಿ ಬಿಡುಗಡೆ ಮಾಡಿದ್ದು, ಎಂಟಿಬಿ ನಾಗರಾಜ್, ಆರ್.ಶಂಕರ್, ಸುನೀಲ್ ವಲ್ಯಾಪುರೆ…
