ರಾಜ್ಯಾದ್ಯಂತ ಮಾಸ್ಕ್ ದಿನಾಚರಣೆ; ಕೊರೋನಾ ನಿಯಂತ್ರಣಕ್ಕೆ ಜಾಗೃತಿ

ಬೆಂಗಳೂರು: ಜಗತ್ತಿನಾದ್ಯಂತ ಕೊರೋನಾ ಸಂಕಟದ ಪರಿಸ್ಥಿತಿಯನ್ನು ತಂದಿಟ್ಟಿದೆ. ಲಕ್ಷಾಂತರ ಜನರು ಈ ಅಗೋಚರ ವೈರಾಣುವಿಗೆ ಬಲಿಯಾಗಿದ್ದು ಸ್ವಯಂ ಜಾಗೃತಿಯೊಂದೇ ಇದಕ್ಕೆ ಪರಿಹಾರ ಎಂಬ ತೀರ್ಮಾನಕ್ಕೆ ಬರಲಾಗಿದೆ. ಕೊರೋನಾ ಸೋಂಕು ತಡೆಯಲು ಮಾಸ್ಕ್ ಧರಿಸುವ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ಎಲ್ಲೆಡೆ ನಡೆಯುತ್ತಿವೆ. ಇದೆ ಸಂದರ್ಭದಲ್ಲಿ ಮಾಸ್ಕ್ ದಿನಾಚರಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಕರೆ ನೀಡಿದ್ದಾರೆ.

ಸಿಎಂ ಕರೆಯಂತೆ ರಾಜ್ಯಾದ್ಯಂತ ಇಂದು ಮಾಸ್ಕ್ ದಿನಾಚರಣೆ ನಡೆದಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಕೂಡಾ ಭಾಗವಹಿಸಿದರು. ವಿಧಾನಸೌಧದ ಅಬೇಂಡ್ಕರ್ ಪ್ರತಿಮೆಯಿಂದ ಕೆಆರ್ ಸರ್ಕಲ್ ವರೆಗೆ ಪಾದಯಾತ್ರೆ ನಡೆಸಿದರು. ಕಾರ್ಯಕ್ರಮ ಸ್ಥಳದಲ್ಲಿ ಮುಖ್ಯಮಂತ್ರಿಯವರೇ ಅನೇಕರಿಗೆ ಮಾಸ್ಕ್ ವಿತರಿಸಿ ಗಮನಸೆಳೆದರು.

ಈ ನಡುವೆ, ಪೊಲೀಸ್ ಪಥ ಸಂಚಲನ ಮೂಲಕ ಮುಖ್ಯಮಂತ್ರಿಗೆ ಗೌರವ ನೀಡಲಾಯಿತು. ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಸೋಮಶೇಖರ್, ಆರ್ ಅಶೋಕ್, ಸಂಸದರಾದ ಪಿಸಿ ಮೋಹನ್, ತೇಜಸ್ವಿ ಸೂರ್ಯ, ಸಿಟಿ ರವಿ, ನಟಿ ರಾಗಿಣಿ, ನಟ ಪುನೀತ್ ರಾಜ್​ಕುಮಾರ್, ಭಾಗಿಯಾಗಿದ್ದಾರೆ.

Related posts