ನಟ ಸುಶಾಂತ್ ಕುಟುಂಬದಲ್ಲಿ ಮತ್ತೊಬ್ಬರು ನಿಧನ

ಪಾಟ್ನಾ: ಕೆಲ ದಿನಗಳ ಹಿಂದಷ್ಟೇ ಇಹಲೋಕ ತ್ಯಜಿಸಿರುವ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬದಲ್ಲಿ ಮತ್ತೊಬ್ಬರು ವಿಧಿವಶರಾಗಿದ್ದಾರೆ. ನಟ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಸುದ್ದಿಯಿಂದ ಆಘಾತಗೊಂಡ ಸುಶಾಂತ್ ಅತ್ತಿಗೆ ನಿಧನರಾಗಿದ್ದಾರೆ. ನಟ ಸುಶಾಂತ್ ಸಿಂಗ್ ನಿಧನದ ಸುದ್ದಿ ಕೇಳಿದ ಅತ್ತಿಗೆ ಅನ್ನ ಆಹಾರ ತ್ಯಜಿಸಿದ್ದರು ಎಂದು ಹೇಳಲಾಗಿದೆ. ಬಿಹಾರದ ಪೂರ್ನಿಯಾ ಎಂಬಲ್ಲಿ ವಾಸವಿದ್ದ ಅತ್ತಿಗೆ ನಿಧನರಾಗಿದ್ದಾರೆ ಎಂದು ಸುಶಾಂತ್ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಮದುವೆ ಸಡಗರದಲ್ಲಿ ನಟಿ ಶುಭ ಪೂಂಜಾ; ವರ ಯಾರು ಗೊತ್ತಾ?

ಬೆಂಗಳೂರು: ಕನ್ನಡ ಸಿನಿಮಾ ನಟಿ ಶುಭಪೂಂಜ ಮದುವೆಯ ಸಡಗರದಲ್ಲಿದ್ದಾರೆ. ಅವರ ವಿವಾಹಕ್ಕೆ ತಯಾರಿ ನಡೆದಿದ್ದು ಅಭಿಮಾನಿ ಬಳಗದಲ್ಲಿ ಸಂತಸ ಮನೆಮಾಡಿದೆ. ಡಿಸೆಂಬರ್‌ನಲ್ಲಿ ಶುಭಪೂಂಜ ಮದುವೆ ಆಗುತ್ತಿದ್ದಾರೆ. ಸುಮಂತ್‌ ಬಿಲ್ಲವ ಎಂಬ ಕರಾವಳಿ ಮೂಲದ ಹುಡುಗ ಶುಭಪೂಂಜ ಅವರ ಕೈ ಹಿಡಿಯಲಿದ್ದಾರೆ. ಕುಂದಾಪುರ ಮೂಲದ ಸುಮಂತ್‌, ಗ್ಯಾಸ್‌ ಏಜೆನ್ಸಿಯೊಂದನ್ನು ನಡೆಸುತ್ತಿದ್ದು, ಜೊತೆಗೆ ಜಯ ಕರ್ನಾಟಕ ಸಂಘಟನೆಯ ಮುಖಂಡರೂ ಆಗಿದ್ದಾರೆ. ಮುಂದಿನ ತಿಂಗಳು ನಿಶ್ಚಿತಾರ್ಥ ನಡೆಯಲಿದ್ದು, ಡಿಸೆಂಬರ್‌ ವೇಳೆಗೆ ವಿವಾಹ ಸಮಾರಂಭ ನಡೆಸಲು ಮನೆಯವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ.. ಸಿನಿಮಾ ಚಿತ್ರೀಕರಣಕ್ಕೆ ಅನುಮತಿ  

ಸಿನಿಮಾ ಚಿತ್ರೀಕರಣಕ್ಕೆ ಅನುಮತಿ

ಬೆಂಗಳೂರು: ಕೊರೋನಾ ಹಾವಳಿಯಿಂದಾಗಿ ಚಿತ್ರೋದ್ಯಮ ಕೂಡಾ ನಲುಗಿದೆ. ಅನೇಕ ಸಿನಿಮಾಗಳು ಅರ್ಧದಲ್ಲೇ ನಿಂತಿದ್ದು ಬಂಡವಾಳ ಹಾಕಿರುವ ನಿರ್ಮಾಪಕರು ದಿಕ್ಕು ತೋಚದಂತಾಗಿದ್ದಾರೆ. ಇದೀಗ ಲಾಕ್’ಡೌನ್ ನಿಯಮಾವಳಿಗಳಲ್ಲಿ ಮಾರ್ಪಾಡು ಮಾಡಲಾಗುತ್ತಿದ್ದು ಸಿನಿಮಾ ಚಟುವಟಿಕೆಗಳಿಗೂ ಅವಕಾಶ ನೀಡಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ಈ ನಡುವೆ, ಅರ್ಧದಲ್ಲಿಯೇ ಸ್ಥಗಿತಗೊಂಡಿರುವ ಚಲನಚಿತ್ರ ಹಾಗೂ ಕಿರುತೆರೆ ಧಾರಾವಾಹಿಗಳ ಚಿತ್ರೀಕರಣ ಮುಂದುವರಿಸಲು ಸರ್ಕಾರ ಷರತ್ತಿನ ಅನುಮತಿ ನೀಡಿದೆ. ಈ ಕುರಿತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್‌ ಸೋಮವಾರ ಆದೇಶ ಹೊರಡಿಸಿದ್ದು, ಚಲನಚಿತ್ರ, ಧಾರಾವಾಹಿ ಚಿತ್ರೀಕರಣ ಅವಕಾಶವನ್ನು ಎದುರು ನೋಡುತ್ತಿರುವ ಸಿನಿಮಾ ಅವಲಂಬಿತರಲ್ಲಿ ಸಂತಸ ಮೂಡಿಸಿದೆ. ಇದನ್ನೂ ಓದಿ.. ಮದುವೆ ಸಡಗರದಲ್ಲಿ ನಟಿ ಶುಭ ಪೂಂಜಾ; ವರ ಯಾರು ಗೊತ್ತಾ?   

ಮೇಲ್ಮನೆಗೆ ರಾಜ್ಯ ಬಿಜೆಪಿಯ 12 ಮಂದಿಯ ಪಟ್ಟಿ ಸಿದ್ದ

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಭರ್ಜರಿ ವಿದ್ಯಮಾನಗಳು ಗರಿಗೆದರಿವೆ. ಕೆಲ ದಿನಗಳ ಹಿಂದಷ್ಟೇ ರಾಜ್ಯಸಭಾ ಚುನಾವಣೆಯಲ್ಲಿ ರಾಜ್ಯದ ನಾಯಕರ ಪಟ್ಟಿ ಕಡೆಗಣಿಸಿ ತಳಮಟ್ಟದ ಕಾರ್ಯಕರ್ತರನ್ನು ಹೈಕಮಾಂಡ್ ಆಯ್ಕೆ ಮಾಡಿರುವುದರಿಂದಾಗಿ ಈ ಬಾರಿ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವೇಳೆ ಮುಖಂಡರು ಎಚ್ಚರಿಕೆಯ ನಡೆ ಅನುಸರಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದವರಿಗೆ ಈ ಬಾರಿ ಮೇಲ್ಮನೆ ಚುನಾವಣೆಯಲ್ಲಿ ಅವಕಾಶ ನೀಡಲು ಪಕ್ಷ ತೀರ್ಮಾನಿಸಿದೆ. ಹಾಗಾಗಿ ಹೆಚ್.ವಿಶ್ವನಾಥ್, ಆರ್.ಶಂಕರ್, ಮತ್ತು ಎಂ.ಟಿ.ಬಿ.ನಾಗರಾಜ್’ಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ. ಈ ನಡುವೆ ಸೋಮವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ೧೨ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಈ ಪಟ್ಟಿಗೆ ಹೈಕಮಾಂಡ್ ಅಂಕಿತ ಹಾಕುತ್ತೋ ಅಥವಾ ಬೇರೆ ಇನ್ಯಾರನ್ನೋ ಆಯ್ಕೆ ಮಾಡುತ್ತೋ ಎಂಬ ಕುತೂಹಲ ಕಾಡಿದೆ. ರಾಜ್ಯದ ಪಟ್ಟಿ ಹೀಗಿದೆ: ಹೆಚ್.ವಿಶ್ವನಾಥ್, ಆರ್.ಶಂಕರ್, ಮತ್ತು ಎಂ.ಟಿ.ಬಿ.ನಾಗರಾಜ್, ಭಾರತಿ…

ಪರಿಷತ್ ಅಖಾಡದಲ್ಲಿ ಮುಸ್ಲಿಂ ನಾಯಕರಿಗೂ ಪಾಲು ಕೊಡಿ; ನಾಯಕರ ಒತ್ತಡ

ಬೆಂಗಳೂರು: ರಾಜ್ಯ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನಾಯಕರ ನಡುವೆ ಭರ್ಜರಿ ರೆಸ್ ಏರ್ಪಟ್ಟಿದೆ. ಆಡಳಿತಾರೂಢ ಬಿಜೆಪಿಯಲ್ಲಷ್ಟೇ ಅಲ್ಲ, ಕಾಂಗ್ರೆಸ್’ನಲ್ಲೂ ಟಿಕೆಟ್’ಗಾಗಿ ಭರ್ಜರಿ ಲಾಬಿ ನಡೆದಿದೆ. ಜೂನ್ 29ರಂದು ನಡೆಯಲಿರುವ ಮೇಲ್ಮನೆ ಚುನಾವಣೆಗೆ ಮುಸ್ಲಿಂ ಅಭ್ಯರ್ಥಿಯನ್ನು ಪರಿಗಣಿಸಬೇಕೆಂದು ಅಲ್ಪಸಂಖ್ಯಾತ ಮುಖಂಡರು ಹೈಕಮಾಂಡ್ ಮೇಲೆ ಒತ್ತಡ ಹೇರಲಾರಂಭಿಸಿದೆ. ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವ, ಶಾಕೀರ್ ಸನದಿ, ಸಲೀಂ ಅಹಮದ್, ನಾಸೀರ್ ಅಹಮದ್, ಅಬ್ದುಲ್ ಜಬ್ಬಾರ್, ಆಕಾಂಕ್ಷಿಗಳಾಗಿದ್ದು, ಇವರ ಬೆಂಬಲಿಗರು ಲಾಬಿಯಲ್ಲಿ ನಿರತರಾಗಿದ್ದಾರೆ. ಈ ನಡುವೆ, ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್ ಖಾನ್ ನೇತೃತ್ವದ ಮುಸ್ಲಿಂ ಮುಖಂಡರ ನಿಯೋಗ ಗುರುವಾರ ರಾತ್ರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಈ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಏಳು ಸ್ಥಾನಗಳ ಪೈಕಿ ಎರಡು ಸ್ಥಾನಗಳು ಕಾಂಗ್ರೆಸ್ ಪಾಲಾಗಲಿದ್ದು ಈ ಪೈಕಿ ಒಂದನ್ನು ಮುಸ್ಲಿಂ ಅಭ್ಯರ್ಥಿಗೆ ನೀಡಬೇಕೆಂದು ನಿಯೋಗ ಮನವಿ ಸಲ್ಲಿಸಿದೆ. ಇದನ್ನೂ ಓದಿ..…

‘ಬಾಳೆ ಹಣ್ಣಿನ ದೋಸೆ’.. ಶಕ್ತಿ-ಚೈತನ್ಯಕ್ಕೆ ಸೂಕ್ತ ಈ ಖಾದ್ಯ

ಬಾಳೆ ಹಣ್ಣಿನ ಪ್ರಯೋಜನ ನಿಮಗೆ ಗೊತ್ತಾ? ಈ ಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳು ಇವೆ. ಈ ಹಣ್ಣಿನ ಸೇವನೆಯಿಂದ ದೇಹಕ್ಕೆ ಮತ್ತಷ್ಟು ಬಲ, ಚೈತನ್ಯ ಹೆಚ್ಚುವುದು. ಹಾಗಾಗಿ ಯಾವುದಾದರೊಂದು ಖಾದ್ಯದ ರೂಪದಲ್ಲಿ ಬಾಳೆಹಣ್ಣನ್ನು ಸೇವಿಸುವವರು ಹಲವಾರು. ಈ ಪೈಕಿ ‘ಬಾಳೆ ಹಣ್ಣಿನ ದೋಸೆ’ ಕೂಡಾ ಒಂದು. ಆದರೆ ಇದನ್ನು ಮಾಡುವ ವಿಧಾನ ಬಹಳಷ್ಟು ಮಂದಿಗೆ ತಿಳಿದಿರಲ್ಲ. ಇದರ ತಯಾರಿ ಬಲು ಸುಲಭ. ಇಲ್ಲಿದೆ ನೋಡಿ ‘ಬಾಳೆ ಹಣ್ಣಿನ ದೋಸೆ’ ಮಾಡುವ ವಿಧಾನ.. ಇದನ್ನೂ ಮಾಡಿ ನೋಡಿ.. ಕಾಫಿ-ಟೀಗಿಂತ ಹಿತವಾದ ಅನುಭವ; ಶೀತ-ಕೆಮ್ಮು ಕಾಯಿಲೆಗೂ ರಾಮಬಾಣ ಈ ‘ಶುಂಠಿ ಜೀರಿಗೆ ಕಶಾಯ’  

ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೊರೋನಾ ಕೇಸ್; ಸೋಂಕಿತರ ಸಂಖ್ಯೆ 7213ಕ್ಕೆ ಏರಿಕೆ

ಬೆಂಗಳೂರು: ಕೊರೋನಾ ಆಘಾತಕಾರಿ ಸುದ್ದಿ ಮತ್ತೆ ಮತ್ತೆ ಮಾರ್ದನಿಸುತ್ತಲೇ ಇದೆ. ರಾಜ್ಯದಲ್ಲಿ ಕೊರೋನಾ ವೈರಾಣು ಸವಾರಿ ಮುಂದುವರಿಯುತ್ತಲೇ ಇದ್ದು, ಹೆಲ್ತ್ ಬುಲೆಟಿನ್ ಕೂಡಾ ಆತಂಕಕಾರಿ ಮಾಹಿತಿಗಳನ್ನು ಬಹಿರಂಗ ಪಡಿಸುತ್ತಿದೆ. ಭಾನುವಾರ ಸಂಜೆ ನಂತರದ ಬೆಳವಣಿಗೆಗಳನ್ನಾಧರಿಸಿ ಕೊರೋನಾ ವಿಚಾರಧಾರೆಯನ್ನು ಸೋಮವಾರ ಸಂಜೆ ಹರಿಯಬಿಟ್ಟಿರುವ ಈ ಹೆಲ್ತ್ ಬುಲೆಟಿನ್ ಬೆಂಗಳೂರು ನಗರ, ಕಲಬುರಗಿ, ಧಾರವಾಡ, ದಕ್ಷಿಣ ಕನ್ನಡ ಜಿಲ್ಲೆಗಳ ಚಿತ್ರಣಗಳತ್ತ ಬೊಟ್ಟು ಮಾಡಿವೆ. ರಾಜ್ಯದಲ್ಲಿ 213 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ 7213ಕ್ಕೆ ಏರಿಕೆಯಾಗಿದೆ. ಹೊಸ ಪಾಸಿಟಿವ್ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 35 ಮಂದಿಗೆ ಸೋಂಕು ತಗುಲಿದ್ದು, ಕಲಬುರಗಿ 48, ಧಾರವಾಡ 34, ದಕ್ಷಿಣ ಕನ್ನಡ 23, ರಾಯಚೂರು 18, ಯಾದಗಿರಿ 13, ಬೀದರ್ 11, ಬಳ್ಳಾರಿ 10, ಕೊಪ್ಪಳ 4, ವಿಜಯಪುರ 3, ಬಾಗಲಕೋಟೆ 3, ಶಿವಮೊಗ್ಗ 3, ಉಡುಪಿ 2, ಹಾವೇರಿ 2,…

ರೈತರಿಗೆ ಆಸರೆ, ಯುವಕರಿಗೆ ಉದ್ಯೋಗ; ಮಾವು ವ್ಯಾಪಾರಿ ಸಹೋದರರ ಸಾಧನೆ

(ವರದಿ: ಸೋಮಶೇಖರ್ ಶಾಂತಿಪುರ) ಬೆಂಗಳೂರು: ಕೊರೋನಾ ಕಾರಣದಿಂದಾಗಿ ದೇಶವ್ಯಾಪಿ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಲಾಕ್’ಡೌನ್ ಜಾರಿಯಾದ ನಂತರ, ಮಾರ್ಚ್ ತಿಂಗಳ ಬಳಿಕ ಅನೇಕ ಕಂಪೆನಿಗಳು ಆರ್ಥಿಕ ಸುಳಿಯಲ್ಲಿದ್ದರೆ ಲಕ್ಷಾಂತರ ಜನರು ಕೆಲಸವಿಲ್ಲದೇ ಸಂದಿಗ್ಧತೆಯಲ್ಲಿ ಸಿಲುಕಿದ್ದಾರೆ. ಆದರೆ ಶಾಂತಿಪುರದ ಜಾನಕಿರಾಮನ್ ಹಾಗೂ ರಾಮಲಿಂಗಂ ಎಂಬ ಯುವಕರಿಬ್ಬರು ಪರಿಸ್ಥಿತಿಯ ಹೊಡೆತವನ್ನೂ ಮೆಟ್ಟಿ ನಿಂತು ಸಂಕಷ್ಟವನ್ನೇ ಗೆದ್ದಿದ್ದಾರೆ. ಅಷ್ಟೇ ಅಲ್ಲ ಸಾವಿರಾರು ಮಂದಿಯ ಬದುಕಿಗೂ ಬೆಳಕಾಗಿದ್ದಾರೆ. ಹಣ್ಣಿನ ವ್ಯಾಪಾರ ಮಾಡುತ್ತಿರುವ ತಮಿಳುನಾಡು ಮೂಲದ ಕನ್ನಡಿಗರಾದ ಇವರು ಲಾಕ್’ಡೌನ್ ಸಂದರ್ಭದಲ್ಲಿ ಉದ್ಯೋಗವಿಲ್ಲ ಎಂದು ಬಂದವರಿಗೆ ಕೆಲಸ ಕೊಟ್ಟಿದ್ದಾರೆ. ನೂರಾರು ಮಂದಿಗೆ ಉದ್ಯಮ ನಡೆಸಲು ದಾರಿ ಮಾಡಿಕೊಟ್ಟಿದ್ದಾರೆ. ತಾನು ನಡೆಸುತ್ತಿರುವ ಹಣ್ಣುಗಳ ವ್ಯಾಪಾರವನ್ನು ಯುವ ಜನರ ಜೊತೆ ಹಂಚಿಕೊಂಡು ಸಾಕಷ್ಟು ಮಂದಿ ಆರ್ಥಿಕವಾಗಿ ಸಬಲರಾಗುವಂತೆ ಮಾಡಿದ್ದಾರೆ. ತಮಿಳುನಾಡು ಮೂಲದವರಾಗಿದ್ದರೂ ಜಾನಕಿರಾಮನ್ ತನ್ನ ಅಣ್ಣ ರಾಮಲಿಂಗ ಅವರೊಂದಿದೆ ಸೇರಿಕೊಂಡು ಬೆಂಗಳೂರು ಹೊರವಲಯದ ಉಸ್ಕೂರಿನ ಎಪಿಎಂಸಿ…

ಭಾರತದಲ್ಲಿ ಕೊರೋನಾ ಸೋಂಕು ಸಮುದಾಯ ಪ್ರಸರಣ ಹಂತದಲ್ಲಿಲ್ಲ; ಕೇಂದ್ರ ಸ್ಪಷ್ಟನೆ

ದೆಹಲಿ: ದೆಹಲಿಯಲ್ಲಿ ಕೊರೋನಾ ಸೋಂಕು ಸಮುದಾಯ ಪ್ರಸರಣ ಹಂತಕ್ಕೆ ತಲುಪಿದೆ ಎಂಬ ಆಮ್ ಆದ್ಮಿ ನಾಯಕರ ಹೇಳಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಭಾರತದಲ್ಲಿ ಕೊರೋನಾ ವೈರಸ್ ಸಮುದಾಯ ಪ್ರಸರಣ ಹಂತಕ್ಕೆ ತಲುಪಿಲ್ಲ ಎಂದು ಕೇಂದ್ರ ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ದೆಹಲಿ ಮತ್ತು ಮುಂಬೈನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ. ಇದನ್ನೇ ಉಲ್ಲೇಖಿಸಿ ದೇಶದಲ್ಲಿ ಕೊರೋನಾ ಸೋಂಕು ಸಮುದಾಯ ಹಂತಕ್ಕೆ ತಲುಪಿದೆ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಪ್ರಧಾನ ನಿರ್ದೇಶಕ ಬಲರಾಮ್‌ ಭಾರ್ಗವ್ ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ಕೊರೋನಾ ವೈರಸ್ ಸಮುದಾಯ ಪ್ರಸರಣ ಹಂತಕ್ಕೆ ತಲುಪಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಪರಿಗಣಿಸಿಲ್ಲ. ಇತರ ದೇಶಗಳಿಗೆ ಹೋಲಿಸಿದಲ್ಲಿ ಸೋಂಕು ಹರಡುವಿಕೆ ಭಾರತದಲ್ಲಿ ಶೇಕಡಾ 1ಕ್ಕಿಂತ ಕಡಿಮೆ ಇದೆ ಎಂದು ಅವರು ತಮ್ಮ ಅಭಿಪ್ರಾಯಕ್ಕೆ ತಕ್ಕಂತೆ ಅಂಕಿ-ಅಂಶಗಳನ್ನು ಒದಗಿಸಿದ್ದಾರೆ.

Uncategorized

ಮಂಗಳೂರಿನಲ್ಲಿ ಕಾಶಿ ಮಠಾಧೀಶರ ಚಾತುರ್ಮಾಸ ವ್ರತ

ಮಂಗಳೂರು : ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಶಾರ್ವರಿ ನಾಮ ಸಂವತ್ಸರದ ಚಾತುರ್ಮಾಸ ವ್ರತವು ಈ ಬಾರಿ ಮಂಗಳೂರು ನಗರದ ಕೊಂಚಾಡಿ ಕ್ಷೇತ್ರದಲ್ಲಿ ನೆರವೇರಲಿದೆ. ಶ್ರೀ ಸಂಸ್ಥಾನದ ಶಾಖಾ ಮಠದಲ್ಲಿ ನೂತನವಾಗಿ ನಿರ್ಮಿಸಲಾದ ವನಿತಾ ಅಚ್ಚುತ್ ಪೈ ಸಂಭಾಗಣದ ಮೇಲಿನ ಅಂತಸ್ಥಿನಲ್ಲಿರುವ ಶ್ರೀ ಸಂಯಮಿಂದ್ರ ಸಭಾ ಭವನದಲ್ಲಿ ಈ ಕೈಂಕರ್ಯ ನೆರವೇರಲಿದ್ದು, ಚಾತುರ್ಮಾಸ ವ್ರತದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಗಿದೆ. ಕೋಟ ಕಾಶಿ ಮಠದಲ್ಲಿ ಶ್ರೀಗಳು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಕೊಂಚಾಡಿ ಕಾಶಿ ಮಠದ ವ್ಯವಸ್ಥಾಪಕ ಸಮಿತಿಯ ಶ್ರೀ ವೆಂಕಟರಮಣ ದೇವಳದ ಅಧ್ಯಕ್ಷ ಡಿ.ವಾಸುದೇವ ಕಾಮತ್, ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಕಸ್ತುರಿ ಸದಾಶಿವ ಪೈ , ಜಿ.ರತ್ನಾಕರ್ ಕಾಮತ್, ಶಶಿಧರ್ ಪೈ ಮಾರೂರ್ , ಪ್ರಶಾಂತ್ ಪೈ , ದೀಪಕ್ ಕುಡ್ವ ಮೊದಲಾದ…