ಮದುವೆ ಸಡಗರದಲ್ಲಿ ನಟಿ ಶುಭ ಪೂಂಜಾ; ವರ ಯಾರು ಗೊತ್ತಾ?

ಬೆಂಗಳೂರು: ಕನ್ನಡ ಸಿನಿಮಾ ನಟಿ ಶುಭಪೂಂಜ ಮದುವೆಯ ಸಡಗರದಲ್ಲಿದ್ದಾರೆ. ಅವರ ವಿವಾಹಕ್ಕೆ ತಯಾರಿ ನಡೆದಿದ್ದು ಅಭಿಮಾನಿ ಬಳಗದಲ್ಲಿ ಸಂತಸ ಮನೆಮಾಡಿದೆ.

ಡಿಸೆಂಬರ್‌ನಲ್ಲಿ ಶುಭಪೂಂಜ ಮದುವೆ ಆಗುತ್ತಿದ್ದಾರೆ. ಸುಮಂತ್‌ ಬಿಲ್ಲವ ಎಂಬ ಕರಾವಳಿ ಮೂಲದ ಹುಡುಗ ಶುಭಪೂಂಜ ಅವರ ಕೈ ಹಿಡಿಯಲಿದ್ದಾರೆ.

ಕುಂದಾಪುರ ಮೂಲದ ಸುಮಂತ್‌, ಗ್ಯಾಸ್‌ ಏಜೆನ್ಸಿಯೊಂದನ್ನು ನಡೆಸುತ್ತಿದ್ದು, ಜೊತೆಗೆ ಜಯ ಕರ್ನಾಟಕ ಸಂಘಟನೆಯ ಮುಖಂಡರೂ ಆಗಿದ್ದಾರೆ. ಮುಂದಿನ ತಿಂಗಳು ನಿಶ್ಚಿತಾರ್ಥ ನಡೆಯಲಿದ್ದು, ಡಿಸೆಂಬರ್‌ ವೇಳೆಗೆ ವಿವಾಹ ಸಮಾರಂಭ ನಡೆಸಲು ಮನೆಯವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ.. ಸಿನಿಮಾ ಚಿತ್ರೀಕರಣಕ್ಕೆ ಅನುಮತಿ

 

Related posts