ನಟ ಸುಶಾಂತ್ ಕುಟುಂಬದಲ್ಲಿ ಮತ್ತೊಬ್ಬರು ನಿಧನ

ಪಾಟ್ನಾ: ಕೆಲ ದಿನಗಳ ಹಿಂದಷ್ಟೇ ಇಹಲೋಕ ತ್ಯಜಿಸಿರುವ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬದಲ್ಲಿ ಮತ್ತೊಬ್ಬರು ವಿಧಿವಶರಾಗಿದ್ದಾರೆ. ನಟ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಸುದ್ದಿಯಿಂದ ಆಘಾತಗೊಂಡ ಸುಶಾಂತ್ ಅತ್ತಿಗೆ ನಿಧನರಾಗಿದ್ದಾರೆ.

ನಟ ಸುಶಾಂತ್ ಸಿಂಗ್ ನಿಧನದ ಸುದ್ದಿ ಕೇಳಿದ ಅತ್ತಿಗೆ ಅನ್ನ ಆಹಾರ ತ್ಯಜಿಸಿದ್ದರು ಎಂದು ಹೇಳಲಾಗಿದೆ. ಬಿಹಾರದ ಪೂರ್ನಿಯಾ ಎಂಬಲ್ಲಿ ವಾಸವಿದ್ದ ಅತ್ತಿಗೆ ನಿಧನರಾಗಿದ್ದಾರೆ ಎಂದು ಸುಶಾಂತ್ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

Related posts