ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೊರೋನಾ ಕೇಸ್; ಸೋಂಕಿತರ ಸಂಖ್ಯೆ 7213ಕ್ಕೆ ಏರಿಕೆ

ಬೆಂಗಳೂರು: ಕೊರೋನಾ ಆಘಾತಕಾರಿ ಸುದ್ದಿ ಮತ್ತೆ ಮತ್ತೆ ಮಾರ್ದನಿಸುತ್ತಲೇ ಇದೆ. ರಾಜ್ಯದಲ್ಲಿ ಕೊರೋನಾ ವೈರಾಣು ಸವಾರಿ ಮುಂದುವರಿಯುತ್ತಲೇ ಇದ್ದು, ಹೆಲ್ತ್ ಬುಲೆಟಿನ್ ಕೂಡಾ ಆತಂಕಕಾರಿ ಮಾಹಿತಿಗಳನ್ನು ಬಹಿರಂಗ ಪಡಿಸುತ್ತಿದೆ. ಭಾನುವಾರ ಸಂಜೆ ನಂತರದ ಬೆಳವಣಿಗೆಗಳನ್ನಾಧರಿಸಿ ಕೊರೋನಾ ವಿಚಾರಧಾರೆಯನ್ನು ಸೋಮವಾರ ಸಂಜೆ ಹರಿಯಬಿಟ್ಟಿರುವ ಈ ಹೆಲ್ತ್ ಬುಲೆಟಿನ್ ಬೆಂಗಳೂರು ನಗರ, ಕಲಬುರಗಿ, ಧಾರವಾಡ, ದಕ್ಷಿಣ ಕನ್ನಡ ಜಿಲ್ಲೆಗಳ ಚಿತ್ರಣಗಳತ್ತ ಬೊಟ್ಟು ಮಾಡಿವೆ.

ರಾಜ್ಯದಲ್ಲಿ 213 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ 7213ಕ್ಕೆ ಏರಿಕೆಯಾಗಿದೆ. ಹೊಸ ಪಾಸಿಟಿವ್ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 35 ಮಂದಿಗೆ ಸೋಂಕು ತಗುಲಿದ್ದು, ಕಲಬುರಗಿ 48, ಧಾರವಾಡ 34, ದಕ್ಷಿಣ ಕನ್ನಡ 23, ರಾಯಚೂರು 18, ಯಾದಗಿರಿ 13, ಬೀದರ್ 11, ಬಳ್ಳಾರಿ 10, ಕೊಪ್ಪಳ 4, ವಿಜಯಪುರ 3, ಬಾಗಲಕೋಟೆ 3, ಶಿವಮೊಗ್ಗ 3, ಉಡುಪಿ 2, ಹಾವೇರಿ 2, ರಾಮನಗರ ಜಿಲ್ಲೆಯಲ್ಲಿ ಹೊಸ ಸೋಂಕಿನ 2 ಪ್ರ ಕರಣಗಳು ಬೆಳಕಿಗೆ ಬಂದಿವೆ. ಹಾಸನ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ತಲಾ 1 ಪಾಸಿಟಿವ್ ಪ್ರಕರಣ ದಾಖಲಾಗಿದೆ.

Related posts