ಪಕ್ಷಾಂತರಿಗಳಿಗೆ ಶಾಕ್.. 20 ವರ್ಷ ಬಿಜೆಪಿ ಬಾಗಿಲು ಬಂದ್..

ಬೆಂಗಳೂರು: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ವಂಚಿತ ಬಿಜೆಪಿ‌ ನಾಯಕರು ಹೈಕಮಾಂಡ್ ವಿರುದ್ದ ಸಿಡಿದೆದ್ದಿದ್ದಾರೆ. ಅನೇಕ ಶಾಸಕರು ಬಿಜೆಪಿಗೆ ಗುಡ್ ಬೈ ಹೇಳಿ ಬೇರೆ ಪಕ್ಷ ಸೇರುತ್ತಿದ್ದು ರಾಜ್ಯ ರಾಜಕಾರಣ ಹೈ ವೋಲ್ಟೇಜ್ ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತಿದೆ. ಇದೇ ವೇಳೆ‌, ಪಕ್ಷ ತ್ಯಜಿಸುವ ನಾಯಕರಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಚುನಾವಣೆಯ ಈ ಹೊತ್ತಿನಲ್ಲಿ ಬಿಜೆಪಿ ಬಿಟ್ಟು ಹೋಗುವವರಿಗೆ ಮುಂದಿನ 20 ವರ್ಷದ ತನಕ ಬಿಜೆಪಿ ಬಾಗಿಲು ಮುಚ್ಚಿರಲಿದೆ ಎಂದು ಅವರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ‌ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯೂ ಆದ ಅರುಣ್‌ ಸಿಂಗ್‌, ಟಿಕೆಟ್ ಸಿಗದೆ ಬೇಸತ್ತ ನಾಯಕರ ನಡೆ ಬಗ್ಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದರು. ಯಾರೋ ನಾಲ್ಕು ಜನ ಪಕ್ಷ ಬಿಟ್ಟು ಹೋದರೆ ಬಿಜೆಪಿಗೆ ನಷ್ಟವಿಲ್ಲ. ನಮ್ಮದು ಕಾರ್ಯಕರ್ತ ಆಧಾರಿತ ಪಕ್ಷ. ಹೊಸ ಪೀಳಿಗೆಗೆ…

ಏ‌19ರಂದು ಶಕ್ತಿಪ್ರದರ್ಶನದೊಂದಿಗೆ ಸಿಎಂ ಬೊಮ್ಮಾಯಿ ಕಣಕ್ಕೆ; ಇದು ಸಂಕೇತಿಕವಾಗಿ ಉಮೇದುವಾರಿಕೆ

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶನಿವಾರ ನಾಮಪತ್ರ ಸಲ್ಲಸಿದರು. ಸಿಎಂ ಬಸವರಾಜ ಬೊಮ್ಮಾಯಿ ಅವರು ಎಪ್ರಿಲ್ 19ರಂದು ಪಕ್ಷದ ಕಾರ್ಯಕರ್ತರು, ಬೆಂಬಲಿಗರೊಂದಿಗೆ ಶಕ್ತಿ ಪ್ರದರ್ಶನ ಮೂಲಕ ನಾಮಪತ್ರ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಆದರೆ, ಇಂದು ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಶಿಗ್ಗಾವಿ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಇಂದು ತಮ್ಮ ಉಮೇದುವಾರಿಗೆ ಸಲ್ಲಿಸಿದರು. ಸಚಿವ ಸಿ.ಸಿ.ಪಾಟೀಲ, ಸಂಸದ ಶಿವಕುಮಾರ ಉದಾಸಿ ಸಾಥ್ ಸಹಿತ ಬಿಜೆಪಿ ನಾಯಕರು ಸಿಎಂ ಬೊಮ್ಮಾಯಿ ಜೊತೆಗಿದ್ದರು. ನವ ಭಾರತಕ್ಕಾಗಿ ನವ ಕರ್ನಾಟಕವನ್ನು ನಿರ್ಮಿಸುವ ಮಹತ್ವದ ಸಂಕಲ್ಪದ ಹಿನ್ನೆಲೆಯಲ್ಲಿ, ಇಂದು ನನ್ನ ತವರು ಕ್ಷೇತ್ರ ಶಿಗ್ಗಾಂವಿ-ಸವಣೂರಿನಲ್ಲಿ ನಾಮಪತ್ರ ಸಲ್ಲಿಸುವ ಮುನ್ನ, ನನ್ನ ಆರಾಧ್ಯ ದೈವ ಶ್ರೀ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡೆನು. pic.twitter.com/fTgcr44VF4 — Basavaraj S Bommai (Modi Ka Parivar) (@BSBommai)…

‘ಜನಸೇವಕನಿಗಾಗಿ ಜನಸಾಗರ..!’ ಅಭೂತಪೂರ್ವ ಶಕ್ತಿಪ್ರದರ್ಶನ.. ಬಂಟ್ವಾಳ ಬಿಜೆಪಿಗೆ ಅಭ್ಯರ್ಥಿ ರಾಜೇಶ ‘ನಾಯಕ’

ಮಂಗಳೂರು: ಬಿಜೆಪಿಯ ಭದ್ರಕೋಟೆ ಬಂಟ್ವಾಳದಲ್ಲಿ ಕೇಸರಿ ಸೈನ್ಯ ಮತ್ತೊಮ್ಮೆ ವಿಜಯಪತಾಕೆ ಹಾರಿಸುವ ರಣೋತ್ಸಾಹದಲ್ಲಿದೆ. ಶಾಸಕ ರಾಜೇಶ್ ನಾಯ್ಕ್ ಅವರು ಮತ್ತೊಮ್ಮೆ ಅಖಾಡಕ್ಕೆ ಧುಮುಕಿದ್ದು ಅವರು ಇಂದು ಉಮೇದುವಾರಿಕೆ ಸಲ್ಲಿಸಿದ್ದಾರೆ. ಬಂಟ್ವಾಳ ಇಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಬಿಜೆಪಿಯ ನೆಲೆಯಾಗಿರುವ ಬಂಟ್ವಾಳದಲ್ಲಿ ರಾಜೇಶ್ ನಾಯ್ಕ್ ಬೆಂಬಲಿಗರು ಪ್ರವಾಹದ ಹರಿದಂತೆ ಭಾಸವಾದರು. ‘ಜನಸೇವಕನಿಗಾಗಿ ಜನಸಾಗರ’ ಎಂಬ ಘೋಷಣೆ ಮಾರ್ಧನಿಸಿತು. ಉಮೇದುವಾರಿಕೆಗೆ ಮುನ್ನ ಶಕ್ತಿಪ್ರದರ್ಶನ.. ರಾಜೇಶ್ ನಾಯ್ಕ್ ಅವರು ಬಿಜೆಪಿ ಹುರಿಯಾಳಾಗಿ ಉಮೇದುವಾರಿಕೆ ಸಲ್ಲಿಸಲೆಂದು ಬಂಟ್ವಾಳ ಪಟ್ಟಣಕ್ಕೆ ಪಾದಯಾತ್ರೆ ಮೂಲಕ ತೆರಳಿದರು. ಬೆಳಿಗ್ಗೆ 8 ಗಂಟೆ ಸುಮಾರಿಗೆ ಕರಾವಳಿಯ ಪ್ರಸಿದ್ದ ಪುಣ್ಯಕ್ಷೇತ್ರ ಪೊಳಲಿಯಿಂದ ಶಾಸಕ ರಾಜೇಶ್ ನಾಯ್ಕ್ ಅವರು ಕಾರ್ಯಕರ್ತರ ಜೊತೆ ಪಾದಯಾತ್ರೆ ಆರಂಭಿಸಿದರು. ಮಧ್ಯಾಹ್ನದ ಹೊತ್ತಿಗೆ ಬಿ.ಸಿ.ರೋಡ್ ಕೈಕಂಬ ದ್ವಾರ ಬಳಿ ತಲುಪಿದ ರಾಜೇಶ್ ನಾಯ್ಜ್ ಅವರನ್ನು ಸಾವಿರಾರು ಕಾರ್ಯಕರ್ತರು ಹಾಗೂ ಬೆಂಬಲಿಗರು ಬ್ರಹತ್ ಮೆರವಣಿಗೆ ಮೂಲಕ ತಾಲೂಕು ಕಚೇರಿಯತ್ತ…

ಕರಾವಳಿಯಲ್ಲಿ ಬಿಜೆಪಿಗೆ ಬಿಗ್ ಶಾಕ್.. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಅರುಣ್ ಕುಮಾರ್ ಪುತ್ತಿಲ ಘೋಷಣೆ

ಮಂಗಳೂರು: ಬಿಜೆಪಿ ಭದ್ರಕೋಟೆ ಕರಾವಳಿಯ ಕೇಸರಿ ಪಾಳಯಕ್ಕೆ ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಬಿಗ್ ಶಾಕ್ ನೀಡಿದ್ದಾರೆ. ಬಿಜೆಪಿ ಹೈಕಮಾಂಡ್ ಟಿಕೆಟ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಜಿಳಿಯುವುದಾಗಿ ಅವರು ಘೋಷಿಸಿದ್ದಾರೆ‌. ಏಪ್ರಿಲ್ 17ರಂದು ನಾಮಪತ್ರ ಸಲ್ಲಿಸುವುದಾಗಿ ಅವರು ಪ್ರಕಟಿಸಿದ್ದಾರೆ.

ಜೆಡಿಎಸ್ ಪ್ರಣಾಳಿಕೆ: ಭರವಸೆಗಳ ಪತ್ರ ಬಿಡುಗಡೆ 

ಬೆಂಗಳೂರು: ಪ್ರಸಕ್ತ ವಿಧಾನಸಭೆ ಚುನಾವಣೆಯ ಜಾತ್ಯತೀತ ಜನತಾದಳ ಪಕ್ಷದ *ಕರುನಾಡ ಜನತೆಗೆ ಜೆಡಿಎಸ್ ಭರವಸೆ* ಎಂಬ ಸಂಕ್ಷಿಪ್ತ ಭರವಸೆಗಳ ಪತ್ರವನ್ನು ಮಾಜಿ ಪ್ರಧಾನಮಂತ್ರಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೆಗೌಡರು ಶನಿವಾರ ಬಿಡುಗಡೆ ಮಾಡಿದರು. ಬೆಂಗಳೂರಿನ ತಮ್ಮ ನಿವಾಸದಲ್ಲಿ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ಭರಸೆಗಳನ್ನು ರಾಜ್ಯದ ಜನತೆಯ ಮುಂದಿಟ್ಟ ಮಾಜಿ ಪ್ರಧಾನಿಗಳು, ಜೆಡಿಎಸ್ ಅಧಿಕಾರಕ್ಕೆ ಬಂದರೆ ಈ ಎಲ್ಲಾ ಭರವಸೆಗಳನ್ನು ಈಡೇರಿಸುವುದಾಗಿ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಬಿ.ಎಂ.ಫಾರೂಕ್, ಸದಸ್ಯ ಕುಪೇಂದ್ರ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು. ಘೋಷಣೆಗಳ ವಿವರ ಹೀಗಿದೆ: ಮಾತೃಶ್ರೀ ಮತ್ತು ಮಹಿಳಾ ಸಬಲೀಕರಣ:  ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಾಲಮನ್ನಾ ವರ್ಷಕ್ಕೆ 5 ಅಡುಗೆ ಅನಿಲ ಸಿಲಿಂಡರ್ ಉಚಿತ ಗರ್ಭಿಣಿ ತಾಯಂದಿರ ಅಗತ್ಯತೆ ಪೂರೈಕೆಗೆ 6 ತಿಂಗಳ ಕಾಲ 6,000…

ಕಾಂಗ್ರೆಸ್ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆ..

ಬೆಂಗಳೂರು ಕಾಂಗ್ರೆಸ್ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆಯಾಗಿದೆ. ಬಿಜೆಪಿ ಭದ್ರಕೋಟೆಗೆ ಲಗ್ಗೆ ಹಾಕಲು ರಣವ್ಯೂಹ ರೂಪಿಸಿರುವ ಕಾಂಗ್ರೆಸ್ ಅಥಣಿ ಕ್ಷೇತ್ರದಲ್ಲಿ ಲಕ್ಷ್ಮಣ್ ಸವದಿ ಅವರಿಗೆ ಟಿಕೆಟ್ ಘೋಷಿಸಿದೆ. ಪುತ್ತೂರು ಕ್ಷೇತ್ರಕ್ಕೆ ಅಶೋಕ್ ಕುಮಾರ್ ರೈ ಹಾಗೂ ಮಂಗಳೂರು ದಕ್ಷಿಣಕ್ಕೆ ಜೆ.ಆರ್.ಲೋಬೋ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಘೋಷಿಸಿದೆ. ಕಾರ್ಕಳದಲ್ಲಿ ಉದಯ್ ಶೆಟ್ಟಿ ಅವರಿಗೆ ಟಿಕೆಟ್ ನೀಡಲಾಗಿದೆ. ಸಿದ್ದರಾಮಯ್ಯ ಅವರು ಸ್ಪರ್ಧಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದ್ದ ಕೋಲಾರದಲ್ಲಿ ಕೊತ್ತೂರು ಮಂಜುನಾಥ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ: ಅಥಣಿ: ಲಕ್ಷ್ಮಣ್ ಸವದಿ ರಾಯಬಾಗ: ಮಹಾವೀರ ಮೋಹಿತ್ ಅರಭಾವಿ: ಅರವಿಂದ ದಳವಾಯಿ ಬೆಳಗಾವಿ  ಉತ್ತರ: ಆಸೀಫ್ ಸೇಠ್ ಬೆಳಗಾವಿ ದಕ್ಷಿಣ: ಪ್ರಭಾವತಿ ತೇರದಾಳ: ಸಿದ್ದಪ್ಪ ಕೊಣ್ಣರು ದೇವರ ಹಿಪ್ಪರಗಿ: ಶರಣಪ್ಪ ಸುನಗಾರ್ ಸಿಂದಗಿ: ಅಶೋಕ್ ಮನಗೂಳಿ ಗುಲ್ಬರ್ಗಾ ಗ್ರಾಮೀಣ: ರೇವು ನಾಯಕ್ ಬೆಳಮಗಿ ಔರಾದ್: ಶಿಂಧೆ ಭೀಮಸೇನ್ ರಾವ್ ಮಾನ್ವಿ:…

ಸಿ.ಟಿ.ರವಿ ಬಗ್ಗೆ ಸುಳ್ಳು ಸುದ್ದಿ ವೈರಲ್ ಆರೋಪ.. ‘ಕೈ’ ಕಾರ್ಯಕರ್ತನ ಬಂಧನ..

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಲಿಂಗಾಯತರಿಗೆ ಪ್ರಾಮುಖ್ಯತೆ ಕೊಡಬೇಕಿಲ್ಲ ಎಂದು ಹೇಳಿದ್ದಾರೆಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿರುವ ಪ್ರಕರಣದಲ್ಲಿ ಪೊಲೀಸರು ಕಾಂಗ್ರೆಸ್​ ಕಾರ್ಯಕರ್ತನನ್ನು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಬಸವನಹಳ್ಳಿ ಠಾಣೆಯ ಪೊಲೀಸರು ದಾವಣಗೆರೆ ಮೂಲದ ಹರೀಶ್ ಎಂಬವರನ್ನು ಬಂಧಿಸಿದ್ದಾರೆ. ಸಿ.ಟಿ.ರವಿ ಬಗ್ಗೆ ನಕಲಿ ಪೋಸ್ಟ್ ವೈರಲ್ ಹಿನ್ನೆಲೆ ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಅವರು ಪೊಲೀಸರಿಗೆ ದೂರು ನೀಡಿದ್ದು ಹರೀಶ್ ಸೇರಿದಂತೆ ಮೂವರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿತ್ತು. <img class=”alignnone size-full wp-image-39549″ src=”https://www.udayanews.com/wp-content/uploads/2023/04/post-against-CT-Ravi-Cong-leader-arrest1.jpg” alt=”” width=”1280″ height=”720″ />ಆರೋಪಿಗಳ ಬಂಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದರು. ಬಂಧಿತ ಆರೋಪಿ ಕ್ಷಮೆ ಯಾಚಿಸಬೇಕೆಂದು ಸಾರ್ವಜನಿಕರು ಪಟ್ಟು ಹಿಡಿದರು. ಠಾಣೆಯ ಬಳಿ ಘೋಷಣೆ ಕೂಗಿದರು. https://twitter.com/alvinviews/status/1647081851478241280?t=y3q1FDj2UhMxZE46mqLRDQ&s=19 ಈ ನಡುವೆ,…

ಹಾಸನದಲ್ಲಿ‌ ಬಿಜೆಪಿ ಶಕ್ತಿ ಪ್ರದರ್ಶನ.. ಪ್ರೀತಂಗೌಡ ನಾಮಪತ್ರ ಸಲ್ಲಿಕೆ ವೇಳೆ ಜನಸಾಗರ

ಹಾಸನ: ವಿಧಾನಸಭಾ ಚುನಾವಣಾ ಅಖಾಡ ರಂಗೇರಿದೆ. ನಾಮಪತ್ರಗಳ ಸಲ್ಲಿಕೆ ಭರಾಟೆ ಆರಂಭವಾಗಿದೆ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹುರಿಯಾಳಾಗಿ ಪ್ರೀತಂ ಗೌಡ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ. ಪುನರಾಯ್ಕೆ ಬಯಸಿ ಅವರು ನಾಮಪತ್ರ ಸಲ್ಲಿಸಿದ ಸನ್ನಿವೇಶ ಬಿಜೆಪಿಯ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ದಿಗ್ವಿಜಯದ ಮುನ್ನುಡಿ… ಹಾಸನ ವಿಧಾನ ಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಶ್ರೀ @nimmapreetham ಅವರು ನಾಮಪತ್ರ ಸಲ್ಲಿಸಿದ ಸಂದರ್ಭ…#BJPYeBharavase pic.twitter.com/4hWj60Urs9 — BJP Karnataka (@BJP4Karnataka) April 14, 2023 ಹಾಸನದಲ್ಲಿ ಭಾರೀ ಜನಸಾಗರದ ನಡುವೆ, ಮೆರವಣಿಯಲ್ಲಿ ತೆರಳಿದ ಪ್ರೀತಂ ಗೌಡ ಬಿಜೆಪಿ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಹಾಸನ ಜಿಲ್ಲೆಯ ಅನೇಕ ಮುಖಂಡರು, ರಾಜ್ಯ ಬಿಜೆಪಿಯ ಪದಾಧಿಕಾರಿಗಳೂ ಈ‌ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವೋಟರ್ ಲಿಸ್ಟ್ ಕರ್ಮಕಾಂಡ; ತುಷಾರ್ ಗಿರಿನಾಥ್ ವರ್ಗಾವಣೆಗೆ ಕಾಂಗ್ರೆಸ್ ಬಿಗಿಪಟ್ಟು

ಬೆಂಗಳೂರು: ಮತದಾರರ ಪಟ್ಟಿ ಅಕ್ರಮ ವಿಚಾರದಲ್ಲಿ‌ ಕಾಂಗ್ರೆಸ್ ತನ್ನ ಹೋರಾಟವನ್ನು ಬಿರುಸುಗಿಳಿಸಿದೆ. ಈ ಭಾರೀ ಅಕ್ರಮ ವರ್ಷದ ಚಾರದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮುಖ್ಯ ಆಯುಕ್ತರು ಮತ್ತು ಜಿಲ್ಲಾ ಚುನಾವಣಾ ಅಧಿಕಾರಿ ತುಷಾರ್ ಗಿರಿನಾಥ್ ಅವರೂ ಆರೋಪಿ ಎನ್ನುತ್ತಿರುವ ಕಾಂಗ್ರೆಸ್, ಅವರನ್ನು ಸೇವೆಯಿಂದ ಬಿಡುಗಡೆ ಕೋರಿ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರಿದೆ. ತುಷಾರ್ ಗಿರಿನಾಥ್ ಇವರ ವಿರುದ್ಧ ಸೆಕ್ಷನ್ 32 ಆರ್ ಪಿ ಆಕ್ಟ್ 1950 ಅನ್ವಯ 22-12-2022ರಂದು ಕಾಂಗ್ರೆಸ್ ನಾಯಕ ರಮೇಶ್ ಬಾಬು ದೂರು ನೀಡಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರು ಮತ್ತು ಜಿಲ್ಲಾ ಚುನಾವಣಾ ಅಧಿಕಾರಿ ತುಷಾರ್ ಗಿರಿನಾಥ್ ಅವರು ಪ್ರಜಾ ಪ್ರತಿನಿಧಿ ಕಾಯಿದೆ 1950 ಕಲಂ 32ರ ಅನ್ವಯ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದು, ಬೆಂಗಳೂರಿನಲ್ಲಿ ಬೂತ್ ಲೆವೆಲ್ ಅಧಿಕಾರಿಗಳ ನೇಮಕ,…