ಬೆಲ್ಲ ಮತ್ತು ಪುದಿನಾ ಶರಬತ್

ಬೆಲ್ಲ ಮತ್ತು ಪುದಿನಾ ಶರಬತ್ ಆರೋಗ್ಯಕರ ಬೇಸಿಗೆ ಪಾನೀಯಗಳಲ್ಲಿ ಒಂದಾಗಿದೆ. ಇದು ಬೇಸಿಗೆಯಲ್ಲಿ ಅಥವಾ ಯಾವುದೇ ಸಮಯದಲ್ಲಿ ಪರಿಪೂರ್ಣವಾಗಿದೆ. ಬೆಲ್ಲದಿಂದ ತಯಾರಿಸಿದ ಈ ರಸವನ್ನು ಎಲ್ಲರೂ ಸಂತೋಷದಿಂದ ಕುಡಿಯುತ್ತಾರೆ. ಈ ಶರಬತ್ ಕಬ್ಬಿನ ರಸವನ್ನು ಹೋಲುತ್ತದೆ ಎಂದು ಹಲವರು ಹೇಳುತ್ತಾರೆ. ಇದು ಸಂಪೂರ್ಣವಾಗಿ ವಿಭಿನ್ನ ಶರಬತ್. ಇದು ವಿಭಿನ್ನ ಮತ್ತು ರುಚಿಕರವಾದ ಶರಬತ್. ಈ ಶರಬತ್ ರುಚಿ ಕಬ್ಬಿನ ರಸವನ್ನು ಹೋಲುತ್ತದೆ ಆದ್ದರಿಂದ ಹೆಚ್ಚಿನ ಜನರು ಈ ರಸದ ಬಗ್ಗೆ ತಪ್ಪು ಮಾಹಿತಿ ಮತ್ತು ಆಲೋಚನೆಗಳನ್ನು ನೀಡುತ್ತಿದ್ದಾರೆ. ಈ ಪಾನೀಯಕ್ಕೆ ಹೆಚ್ಚಿನ ಪದಾರ್ಥಗಳು ಅಗತ್ಯವಿಲ್ಲ. ಮನೆಗೆ ಇದ್ದಕ್ಕಿದ್ದಂತೆ ಅತಿಥಿಗಳು ಬಂದಾಗ, ಅವರಿಗೆ ಆ ಸಮಯದಲ್ಲಿ ಜ್ಯೂಸ್ ಬೇಕು, ನಿಂಬೆ ಇಲ್ಲ. ಈ ಜ್ಯೂಸ್ ಸುಲಭವಾಗಿ ಮಾಡಬಹುದು. ಪುದೀನಾ ಎಲೆಗಳು ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಇರುತ್ತವೆ. ಈ ಜ್ಯೂಸ್ ರೆಸಿಪಿಯನ್ನು ತಯಾರಿಸಲು ನಮಗೆ ಯಾವುದೇ ಕೃತಕ ಸುವಾಸನೆ ಅಥವಾ…

ಕ್ಯೂಆರ್ ಕೋಡ್ ಕೂಪನ್ ಅವಾಂತರ; ಬಿಜೆಪಿಯಿಂದ ಮತದಾರರ ಗೌಪ್ಯ ಮಾಹಿತಿ ಕಳವು? ಏನಿದು ಕಾಂಗ್ರೆಸ್ ಆರೋಪ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಪರ ಮತದಾರರಿಗೆ ಆಮಿಷ ಒಡ್ಡಲು ಕ್ಯೂಆರ್ ಕೋಡ್ ಕೂಪನ್ ವಿತರಣೆ ಆರೋಪದ ಹಿನ್ನೆಲೆಯಲ್ಲಿ, ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಕುರಿತು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಲಕ್ಷ್ಮೀಪತಿ ಈ ಕುರಿತಂತೆ ಗಂಭೀರ ಆರೋಪ ಮಾಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಕ್ಯೂಆರ್ ಕೋಡ್ ಕೂಪನ್ ವಿತರಿಸಲು ಬಿಜೆಪಿ ಅಭ್ಯರ್ಥಿ ಅನುಮತಿ ಪಡೆದಿಲ್ಲ, ಬಿಜೆಪಿ ಕಾರ್ಯಕರ್ತರೆನ್ನಲಾದ ಹೊರ ಜಿಲ್ಲೆಯ ಮೂರು ಮಂದಿ ಮತದಾರರಿಗೆ ಆಮಿಷ ಒಡ್ಡಲು ಕ್ಯೂಆರ್ ಕೋಡ್ ಕೂಪನ್ ವಿತರಣೆ ಮಾಡುತ್ತಿರುವ ಅನುಮಾನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಗುರುವಾರ ಮಧ್ಯಾಹ್ನ ಹಿಡಿದು ಚುನಾವಣೆ ಅಧಿಕಾರಿಗಳಿಗೆ ಒಪ್ಪಿಸಲಾಯಿತು. ಆದರೆ ಸಂಜೆ ನಾಲ್ಕು ಗಂಟೆ ಆದರೂ ಕ್ರಮ ಜರುಗಿಸಿರಲಿಲ್ಲ. ಸೂಕ್ತ ಸೆಕ್ಷನ್ ಅಡಿಯಲ್ಲಿ…

ಶಿಕ್ಷಣ, ಆರೋಗ್ಯ, ಮೂಲಸೌಕರ್ಯಕ್ಕೆ ಒತ್ತು: ಎಸ್.ಟಿ.ಸೋಮಶೇಖರ್

ಬೆಂಗಳೂರು: ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಹತ್ತಾರು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಜೊತೆಗೆ ಆರೋಗ್ಯ, ಶಿಕ್ಷಣಕ್ಕೂ ಒತ್ತು ನೀಡಲಾಗಿದೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಚನ್ನೇನಹಳ್ಳಿ, ತಾವರೆಕೆರೆ, ಚೋಳನಾಯಕನಹಳ್ಳಿ, ಅಜ್ಜನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಅಂಗನವಾಡಿ ಕೇಂದ್ರಗಳು, ಶಾಲಾ ಕಟ್ಟಡಗಳ ನಿರ್ಮಾಣ ಮಾಡುವ ಮೂಲಕ ಬಡಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸಲಾಗಿದೆ. ಕೆಂಗೇರಿ, ಕೆ.ಗೊಲ್ಲಹಳ್ಳಿಯಲ್ಲಿ ಪದವಿಪೂರ್ವ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ಆರಂಭಿಸಲಾಗುತ್ತಿದೆ. ಕ್ಷೇತ್ರದ ಶಾಲಾ ಕಟ್ಟಡಗಳನ್ನು ದುರಸ್ತಿ ಮಾಡಲಾಗಿದೆ. ಸರ್ವರಿಗೂ ಶಿಕ್ಷಣ, ಸರ್ವರಿಗೂ ಸೂರು ಎಂಬ ಘೋಷವಾಕ್ಯದೊಂದಿಗೆ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದೇನೆ ಎಂದರು. ಕ್ಷೇತ್ರದ ಜನತೆಯ ಆರೋಗ್ಯದ ಹಿತಕಾಪಾಡಲು ಪ್ರಾಥಮಿಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಡಯಾಲಿಸಿಸ್ ಸೆಂಟರ್, ಹೆರಿಗೆ ಆಸ್ಪತ್ರೆಗಳನ್ನು…

ಸೋಲಿನ ಭೀತಿಯಿಂದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ ಕ್ಯೂಆರ್ ಕೋಡ್ ಕೂಪನ್ ಅಪಪ್ರಚಾರ: ಬಿಜೆಪಿ ಆರೋಪ

ದೊಡ್ಡಬಳ್ಳಾಪುರ: ತಂತ್ರಜ್ಞಾನದ ಮೂಲಕ‌ ಮತದಾರರ ಮಾಹಿತಿ ಪಡೆದು ಪ್ರಚಾರ ಮಾಡಲಷ್ಟೇ ಕ್ಯೂಆರ್ ಕೋಡ್ ಕೂಪನ್ ವಿತರಿಸಲಾಗುತ್ತಿದೆಯೇ ವಿನಃ ಯಾವುದೇ ದುರುದ್ದೇಶದಿಂದಲ್ಲ ಎಂದು ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಸ್ಪಷ್ಟಪಡಿಸಿದ್ದಾರೆ. ದೊಡ್ಡಬಳ್ಳಾಪುರದ ಬಿಜೆಪಿ‌ ಚುನಾವಣಾ ಕಚೇರಿಯಲ್ಲಿ ಬಿಜೆಪಿ ನಾಯಕರ ಉಪಸ್ಥಿತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಅನ್ಯ ಜಿಲ್ಲೆಯ ಕಾರ್ಯಕರ್ತರಿಂದ ಥರ್ಡ್ ಪಾರ್ಟಿ‌ ಕ್ಯಾಂಪೇನ್ ನಡೆಯುತ್ತಿದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮತದಾರರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಮುಟ್ಟಲಾಗುತ್ತಿದೆ. ಕ್ಯೂಆರ್ ಕೋಡ್ ಕೂಪನ್ ಬಳಸಿ ಪ್ರಚಾರ ನಡೆಸುವುದು ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿದೆ ಎಂದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ತಂತ್ರಜ್ಞಾನದ ಅರಿವಿಲ್ಲ. ಸೋಲಿನ ಭೀತಿಯಿಂದ ಮತದಾರರನ್ನು ದಾರಿ ತಪ್ಪಿಸುವ ಕೆಲಸ‌ ಮಾಡುತ್ತಿವೆ. ಈಗಾಗಲೇ ಕಾಂಗ್ರೆಸ್ ಪಕ್ಷ, ಭಜರಂಗದಳ ನಿಷೇಧಿಸುವ ಪ್ರಸ್ತಾವದಿಂದಾಗಿ ಜನರ ವಿರೋಧ ಕಟ್ಟಿಕೊಂಡಿದೆ. ಅದರಿಂದ ಪಾರಾಗಲು ಕ್ಯೂಆರ್ ಕೋಡ್ ಕುರಿತು ಅಪಪ್ರಚಾರ ಮಾಡುವ ಕುತಂತ್ರ ಮಾಡುತ್ತಿದೆ. ಸಾಸಲು ಹೋಬಳಿಯಲ್ಲಿ ಮತದಾರರಲ್ಲಿ…