KSRTC ಬಸ್‌ಗೆ ಲಾರಿ ಡಿಕ್ಕಿ; ಮಹಿಳೆಯ ಬಲಗೈ ತುಂಡು..

ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯದ ‘ಶಕ್ತಿ’ ಯೋಜನೆ ಜನಪ್ರಿಯವಾಗುತ್ತಿರುವಂತೆಯೇ, ಕೆಲವೊಂದು ಕಹಿ ಸನ್ನಿವೇಶಗಳು ವ್ಯವಸ್ಥೆಗೆ ಸವಾಲೆಂಬಂತಾಗಿದೆ. ಈ ನಡುವೆ, ಮಂಡ್ಯ ಸಮೀಪ ನಡೆದಿರುವ ಅವಘಡ ಕುರಿತಂತೆ ಅಂತೆ-ಕಂತೆಗಳು ಹುಟ್ಟಿಕೊಂಡಿವೆ. ಮಂಡ್ಯ ಜಿಲ್ಲೆಯ ಹುಲ್ಲೇನಹಳ್ಳಿ ಬಳಿ ಬಸ್‌ನಲ್ಲಿ ಕಿಟಕಿ ಮೂಲಕ ಹತ್ತೋವಾಗ ಅವಘಡ ಸಂಭವಿಸಿ ಮಹಿಳೆಯೊಬ್ಬರು ಕೈ ಕಳೆದುಕೊಂಡಿದ್ದಾರೆ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡುತ್ತಿವೆ. ಗಾಯಾಳು ಮಹಿಳೆಯ ಪರದಾಟದ ವೀಡಿಯೋ ಮನಕಲುವಂತಿದೆ. ಈ ನಡುವೆ, ಈ ಘಟನೆ ಬಗ್ಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸ್ಪಷ್ಟನೆ ನೀಡಿದೆ. ಬಸ್‌ನಲ್ಲಿ ಕಿಟಕಿ ಮೂಲಕ ಹತ್ತುತ್ತಿದ್ದ ಮಹಿಳೆಗೆ ಗಾಯವಾಗಿದೆ ಎಂಬುದು ಸುಳ್ಳು ಸುದ್ದಿ ಎಂದಿರುವ KSRTC ಇದು ಅಪಘಾತದಿಂದಾದ ಘಟನೆ ಎಂದು ಸ್ಪಷ್ಟಪಡಿಸಿದೆ. ಏನಿದು ಘಟನೆ..? ಜೂನ್ 18ರಂದು ಕೆಎಸ್ಸಾರ್ಟಿಸಿ ಚಾಮರಾಜನಗರ ವಿಭಾಗದ ಬಸ್ಸು ನಂಜನಗೂಡಿನಿಂದ ಟಿ.ನರಸೀಪುರಕ್ಕೆ ಕಾರ್ಯಚರಣೆ ಮಾಡುತ್ತಿರುವಾಗ, ಮಧ್ಯಾಹ್ನ1.45ರ ಸುಮಾರಿಗೆ…

ಲೋಕಸಭಾ ಚುನಾವಣೆ ಹೊತ್ತಿಗೆ ರಾಜ್ಯ ಬಿಜೆಪಿ ಮತ್ತಷ್ಟು ಹೀನಾಯ ಸ್ಥಿತಿಗೆ; ಶೆಟ್ಟರ್

ಹುಬ್ಬಳ್ಳಿ: ಬಿಜೆಪಿಯವರ ಹಣೆ ಬರಹಕ್ಕೆ ಎಂದಿಗೂ ವಿಧಾನಸಭೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗಿಲ್ಲ. ಅವರ ಸ್ಥಿತಿಯನ್ನು ನೋಡಿದರೆ ಅವರು ಯಾವ ಸ್ಥಿತಿಯಲ್ಲಿದ್ದಾರೆ ಎಂಬುದು ಗೋಚರಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಿಜೆಪಿ ನಾಯಕರ ನಡೆ ಬಗ್ಗೆ ಶೆಟ್ಟರ್ ಆಕ್ರೋಶ ಹೊರಹಾಕಿದರು. ಬಿಜೆಪಿಯ ಆಂತರಿಕ ಸಮಸ್ಯೆಗಳನ್ನು ಗಮನಿಸಿದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷ ಇನ್ನಷ್ಟು ದಯನೀಯ ಸ್ಥಿತಿಗೆ ತಲುಪಲಿದೆ ಎಂದು ವಿಶ್ಲೇಷಿಸಿದರು. ಬಿಜೆಪಿಯವರು ತಮ್ಮ ವಿರುದ್ಧ ಸಣ್ಣ ಮಟ್ಟದ ಟೀಕೆಗೆ ಮುಂದಾಗಿರುವುದಕ್ಕೆ ಅಸನಾಧಾನ ಹೊರಹಾಕಿದ ಅವರು, ನಾನು ಅಷ್ಟು ಸಣ್ಣ ಮಟ್ಟಕ್ಕೆ ಇಳಿದು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ ಈಗಾಗಲೇ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಬಿಜೆಪಿಯವರು ಮುಂದಿನ ದಿನಗಳಲ್ಲಿ ಇನ್ನೇನು ಆಗಲಿದ್ದಾರೆ ನೋಡುತ್ತಾ ಇರಿ ಎಂದರು. ಕಾಂಗ್ರೆಸ್ ಪಕ್ಷವು ಚುನಾವಣೆಗೆ ಮುನ್ನ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳನ್ನು…

ಕರೆಂಟ್ ಬಿಲ್ ವಿಚಾರ.. ಸರ್ಕಾರಕ್ಕೆ ಶಾಕ್ ಕೊಟ್ಟ ಕೋರ್ಟ್..

ದಾವಣಗೆರೆ: ಕರೆಂಟ್ ಬಿಲ್ ಕಟ್ಟಿಲ್ಲವೆಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕೆ ಬೆಸ್ಕಾಂ ಗೆ 25 ಸಾವಿರ ದಂಡ ವಿಧಿಸಿದ ಗ್ರಾಹಕರ ಪರಿಹಾರ ಆಯೋಗ.! ದಾವಣಗೆರೆ ಕರೆಂಟ್ ಬಿಲ್ ಕಟ್ಟಿಲ್ಲವೆಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಬೆಸ್ಕಾಂಗೆ 25 ಸಾವಿರ ದಂಡವನ್ನು ಗ್ರಾಹಕರ ಪರಿಹಾರ ಆಯೋಗ ವಿಧಿಸಿದೆ. ಬೆಸ್ಕಾಂ ಅಧಿಕಾರಿಗಳು ಕಾನೂನು ಬಾಹಿರವಾಗಿ ನಗರದ ಪವನ್ ಉಲ್ಲಾಸ್ ರೇವಣ್‍ಕರ್ ಮನೆಯ ವಿದ್ಯುತ್ ಸರಬರಾಜನ್ನು ತಡೆಹಿಡಿದಿದ್ದು, ಈ ಕೂರಿತು ಪವನ್ ಜಿಲ್ಲಾ ಗ್ರಾಹಕರ ಪರಿಹಾರ ಆಯೋಗಕ್ಕೆ ದೂರಿನ ಸಲ್ಲಿಸಿದ್ದರು, ದೂರ ಮೇರೆಗೆ ವಿಚಾರಣೆ ನಡೆಸಿ, ವಾದ ಪ್ರತಿವಾದವನ್ನು ಆಲಿಸಿದ ಆಯೋಗ, ಬೆಸ್ಕಾಂ ಕಂಪನಿ ಮೇಲೆ ರೂ.25000 ದಂಡ ವಿಧಿಸಿದೆ. ಮೂರು ತಿಂಗಳಿಂದ ಬಿಲ್ ಪಾವತಿಸಿರುವುದಿಲ್ಲ ಎಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಆದರೆ ಗ್ರಾಹಕರು ಬೆಸ್ಕಾಂ ತನ್ನ ಸೇವೆಯನ್ನು ನೀಡುವಾಗ ಕೆಇಆರ್‍‌‌ ಸಿ ಕೋಡ್ 2004 ರ ನಿಯಮ-9 ರ ಅಡಿಯಲ್ಲಿನ ಪ್ರಕ್ರಿಯೆಗಳನ್ನು ಪಾಲಿಸದೇ…