ಸೈನಿಕರನ್ನು ಬಿಜೆಪಿಯ ಮಾರ್ಕೆಟಿಂಗ್​​ ಏಜೆಂಟರನ್ನಾಗಿ ಪರಿವರ್ತಿಸಲಾಗಿದೆಯೇ? ‘ಕೈ’ಗೆ ನಡ್ಡಾ ಎದಿರೇಟು ಹೀಗಿದೆ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಅಧಿಕಾರಿಗಳು ಮತ್ತು ಸೈನಿಕರನ್ನು ಬಿಜೆಪಿ ಪಕ್ಷದ ಮಾರ್ಕೆಟಿಂಗ್​​ ಏಜೆಂಟರನ್ನಾಗಿ ಪರಿವರ್ತಿಸಿದೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಖರ್ಗೆ ಆರೋಪಗಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತಾಗಿ ಟ್ವೀಟ್​ ಮಾಡಿರುವ ಜೆ.ಪಿ ನಡ್ಡಾ, ಮೋದಿ ಸರ್ಕಾರವು ಎಲ್ಲಾ ಯೋಜನೆಗಳ ಪರಿಪೂರ್ಣತೆ ಮತ್ತು ಎಲ್ಲಾ ಫಲಾನುಭವಿಗಳನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತದೆ. ಇದು ಬಡವರ ಹಿತಾಸಕ್ತಿಯನ್ನು ಹೊಂದಿರುವ ಯಾರಿಗೂ ಸಮಸ್ಯೆ ಆಗುವುದಿಲ್ಲ. ಆದರೆ ಕಾಂಗ್ರೆಸ್ ಪಕ್ಷದ ನಾಯಕರು ಬಡವರನ್ನು ಬಡತನದಲ್ಲಿಡಲು ಮಾತ್ರ ಆಸಕ್ತಿ ಹೊಂದಿದ್ದು, ಹಾಗಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಎದಿರೇಟು ಕೊಟ್ಟಿದ್ದಾರೆ.

Related posts